Ambulance for Animal’s :: ಪಶುಗಳಿಗೂ ಲಭ್ಯವಿದೆ ಆ್ಯಂಬುಲೆನ್ಸ್, 1962 ನಂಬರ್ಗೆ ಕರೆ ಮಾಡಿ!! ಪಶು ಸಂಜೀವಿನಿ ತುತು೯ಸೇವೆ 1962 ಸಹಾಯವಾಣಿ!!!
ಸಾಮಾನ್ಯವಾಗಿ ಮನುಷ್ಯರಿಗೆ ಹುಷಾರಿಲ್ಲವೆಂದರೆ ಅಥವಾ ಏನಾದರೂ ಕಾಯಿಲೆ ಇದ್ದಲ್ಲಿ ಸಾಕಷ್ಟು ಆಸ್ಪತ್ರೆಗಳು ಹತ್ತಿರದಲ್ಲಿ ಲಭ್ಯವಿರುತ್ತವೆ. ಆದರೆ ಜಾನುವಾರುಗಳಿಗೆ ಹುಷಾರಿಲ್ಲವೆಂದರೆ ಅಥವಾ ಏನಾದರೂ ಅನಿರೀಕ್ಷಿತ ತೊಂದರೆಗಳಾದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದರೆ ಆಸ್ಪತ್ರೆಗಳು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಲಭ್ಯವಿರುತ್ತವೆ. ಹೀಗಿದ್ದಾಗ ದೂರದ ಊರುಗಳಿಂದ ಜಿಲ್ಲಾ ಕೇಂದ್ರಕ್ಕೆ ಜಾನುವಾರುಗಳನ್ನು ಕರೆ ತರುವಲ್ಲಿ ಸ್ವಲ್ಪ ತಡವಾದರೂ ಕೂಡ ಜಾನುವಾರುಗಳ ಪ್ರಾಣ ಹೊರಟು ಹೋಗಬಹುದು.
ಜೇನುಹುಳ ಕಚ್ಚಿದ ಹಸುವಿಗೆ ಚಿಕಿತ್ಸೆ!
ಅಂತಹುದೇ ಒಂದು ಉದಾಹರಣೆಯನ್ನು ಇಲ್ಲಿ ಕೊಡಲಾಗಿದೆ. ಚಿಕ್ಕಮಗಳೂರಿನ ಒಂದು ಹಳ್ಳಿಯಲ್ಲಿ ಒಂದು ಹಸುವಿಗೆ ಜೇನುಹುಳುಗಳು ಕಚ್ಚಿದ್ದವು. ಹಸುವನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದರೆ ಹತ್ತಿರದಲ್ಲಿ ಆಸ್ಪತ್ರೆ ಇರಲಿಲ್ಲ. ಚಿಕ್ಕಮಗಳೂರು ನಗರದಲ್ಲಿನ ಆಸ್ಪತ್ರೆಗೆ ಬರಬೇಕಿತ್ತು. ಅದು 4-5 ಕಿಮೀ ಗಳ ದೂರವಿತ್ತು. ಮನುಷ್ಯರಾದರೆ ಬೇಗ ಹೋಗಿಬರಬಹುದು. ಆದರೆ ಹಸುವನ್ನು ಸಾಗಿಸಲು ಕಷ್ಟ ಹಾಗೂ ಸಮಯ ಹಿಡಿಯುತ್ತದೆ.
ಪಶು ಸಂಜೀವಿನಿ ತುತು೯ಸೇವೆ ಸಹಾಯವಾಣಿ 1962 ಸೌಲಭ್ಯ ಪಡೆದುಕೊಳ್ಳಿ!
ಆದರೆ ಸಕಾ೯ರದಿಂದ ಇಂತಹ ಸಮಸ್ಯೆಗಳಿಂದ ಪಾರಾಗಲು ಒಂದು ಪರಿಹಾರ ಕೊಟ್ಟಿದ್ದು, ಪಶು ಆ್ಯಂಬುಲೆನ್ಸ್ ಏಪ೯ಡಿಸಿದ್ದಾರೆ. ಈ ರೀತಿಯ ಅನಿರೀಕ್ಷಿತ ತೊಂದರೆಗಳಾಗಿ ಪಶುಗಳ ಆರೋಗ್ಯದಲ್ಲಿ ತೊಂದರೆಯಾದಾಗ ಪಶು ಸಂಜೀವಿನಿ ತುತು೯ಸೇವೆ ಸಹಾಯವಾಣಿ ಸಂಖ್ಯೆ: 1962 ಗೆ ಕರೆ ಮಾಡಿ ಆ್ಯಂಬುಲೆನ್ಸ್ ನೊಂದಿಗೆ ಡಾಕ್ಟರ್ ಕೂಡ ನೀವಿದ್ದಲ್ಲಿಗೆ ಬಂದು ಪಸುಗಳಿಗೆ ಚಿಕಿತ್ಸೆ ನೀಡುತ್ತಾರೆ.
ಕರೆ ಮಾಡಿದ 15 ನಿಮಿಷಕ್ಕೆ ಅವರು ತಿಳಿಸಿದರು. ಹಾಗೂ ಪ್ರಥಮ ಚಿಕಿತ್ಸೆಯನ್ನು ಸಹ ತಿಳಿಸಿದರು. ನೀನಲ್ಲಿ ಅಡುಗೆ ಸೋಡಾ ಬೆರೆಸಿ ಜೇನುಹುಳು ಕಚ್ಚಿರುವ ಜಾಗಕ್ಕೆ ಹಾಕಿ ಎಂದು ಹೇಳಿದ್ದರು. ಪಸು ಮಾಲೀಕರು ಹಾಗೆ ಮಾಡಿದ್ದಾರೆ. ನಂತರ 15 ನಿಮಿಷದಲ್ಲಿ ಅವರು ಬಂದು ಚಿಕಿತ್ಸೆ ನೀಡಿದ್ದಾರೆ. ಒಂದು ವೇಳೆ ಈ ಸೌಲಭ್ಯ ಇಲ್ಲದಿದ್ದಲ್ಲಿ ಹಸುವಿನ ಪ್ರಾಣವೇ ಹೋಗುತ್ತಿತ್ತು ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ.
ಆದ್ದರಿಂದ ಎಲ್ಲ ಪಶು ಸಾಕಾಣಿಕೆ ಮಾಡುವವರು ಈ ಸೌಲಭ್ಯದ ಬಗಿಗೆ ಮಾಹಿತಿ ತಿಳಿದುಕೊಳ್ಳಿ. ದನಕರು, ಆಡು, ಮೇಕೆ, ನಾಯಿ ಯಾವುದೇ ಪ್ರಾಣಿಗಳಿಗಾಗಲಿ ಹೀಗೆ ತೊಂದರೆಯಾದಾಗ ಪಶು ಸಂಜೀವಿನಿ ತುತು೯ಸೇವೆ ಸಹಾಯವಾಣಿ 1962 ಗೆ ಕರೆ ಮಾಡಿ ಅವರು ನಿಮ್ಮಲ್ಲಿಗೆ ಬಂದು ಚಿಕಿತ್ಸೆ ನೀಡುತ್ತಾರೆ. ಇದರಿಂದ ಸಾಕಷ್ಟು ರೈತರಿಗೆ ತುಂಬಾ ಸಹಾಯಕವಾಗುತ್ತದೆ.
ಜೇನುಹುಳು ಕಡಿತಕ್ಕೆ ಪ್ರಥಮ ಚಿಕಿತ್ಸೆ!
ಹಾಗೇಯೇ ಜೇನುಹುಳು ಕಚ್ಚಿದಾಗ ಹೆದರದೇ ನೀರಿನಲ್ಲಿ ಅಡುಗೆ ಸೋಡಾ ಬೆರೆಸಿ ಕಚ್ಚಿದ ಜಾಗಕ್ಕೆ ಹಾಕಿ ಇದರಿಂದ ಜೇನುಹುಳುಗಳ ಮುಳ್ಳುಗಳು ಆಚೆ ಬರುತ್ತವೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚