Congress Guarantees:: ರಾಜ್ಯದ ಬೊಕ್ಕಸೆ ದುಡ್ಡು ನೋಡಿ, ಗ್ಯಾರಂಟಿಗಳನ್ನು ಅನುಮೋದಿಸಿ!! ರಾಜ್ಯವನ್ನ ದಿವಾಳಿ ಮಾಡಬೇಡಿ!!
ಕಳೆದ ವಾರ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ, ಇದೀಗ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ರವರು ರಾಜ್ಯ ಸರ್ಕಾರದ ಗ್ಯಾರಂಟಿಗಳ ವಿರುದ್ಧ ಗುಡುಗಿದ್ದಾರೆ.
ಮೋದಿ ವಿರುದ್ದ ಮಾತು ಪ್ರಾರಂಭ, ಗ್ಯಾರಂಟಿ(Guarantees) ವಿರುದ್ಧ ಅಂತ್ಯ!
ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಾಯಿ ಪಟೇಲ್ ರವರ ಜಯಂತಿ ಹಾಗೂ ಇಂದಿರಾಗಾಂಧಿ ರವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು
ಕಾಂಗ್ರೆಸ್ ಏರ್ಪಡಿಸಿತ್ತು ಇದರಲ್ಲಿ ಭಾಗವಹಿಸಿದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ವಿರುದ್ಧ ಗುಡುಗಿ ಭರಾಟೆಯ ಭಾಷಣ ಮಾಡಿದರು.
ಭಾಷಣದ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ ರವರು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ಬಗ್ಗೆ ಕೂಡ ಮಾತನಾಡಿದ್ದು,
ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರಿಗೆ ಗ್ಯಾರಂಟಿಗಳನ್ನು ರದ್ದು ಮಾಡುವ ಬಗ್ಗೆ ಯಾವುದೋ ಹೇಳಿಕೆ ನೀಡಿದ್ದೀರಾ ಎಂದು ಕೇಳಿದರು
ಅದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ರದ್ದು ಮಾಡುವ ಬಗ್ಗೆ ಅಲ್ಲ ಶಕ್ತಿ ಯೋಜನೆಯನ್ನು ಮರುಪರಿಶೀಲಿಸುವ ಬಗ್ಗೆ ಹೇಳಿಕೆ ನೀಡಿರುವುದಾಗಿ ಖರ್ಗೆ ಅವರಿಗೆ ತಿಳಿಸಿದರು.
ಬಜೆಟ್ ಗಾತ್ರ ನೋಡಿ ಗ್ಯಾರಂಟಿ ಕೊಡಿ!
ಆಗ ಖರ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರವರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿ, ಪಕ್ಷವು ಚುನಾವಣಾ ಸಮಯದಲ್ಲಿ ನೀಡುವ ಗ್ಯಾರಂಟಿಗಳನ್ನು ರಾಜ್ಯದ ಬಜೆಟ್ ಗಾತ್ರ ನೋಡಿ ನೀಡಬೇಕು.
ಪುಂಖಾನು ಪುಂಖವಾಗಿ ಗ್ಯಾರಂಟಿ ಘೋಷಿಸಿ ರಾಜ್ಯದ ಬೊಕ್ಕಸವನ್ನು ಬರಿದು ಮಾಡಬಾರದು ಎಂದಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೊಡೆತ!
ಸದ್ಯದಲ್ಲಿಯೇ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳನ್ನು ಘೋಷಿಸಲು ತಯಾರಿ ನಡೆಸುತ್ತಿದೆ.
ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯನ್ನು ಮರುಪ ಪರಿಶೀಲಿಸುವ ಬಗ್ಗೆ ಉಪಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು ಇದರಿಂದ ಮಹಾರಾಷ್ಟ್ರದ ಮತದಾರರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ಇದರಿಂದ ಮಹಾರಾಷ್ಟ್ರ ಕಾಂಗ್ರೆಸ್ ಗೆ ಹಿಂದೇಟು ಆಗಬಹುದು ಎಂದು ಅವರು ತಿಳಿಸಿದ್ದು, ಸುಖಾಸುಮ್ಮನೆ ಗ್ಯಾರಂಟಿ ಘೋಷಿಸಿ ಕ್ಷೇತ್ರದ ಜನತೆಗೆ
ಒಂದು ಹಿಡಿ ಮಣ್ಣು ನೀಡಲು ಸಾಧ್ಯವಾಗದೇ ಇರುವ ಹಾಗೆ ಮಾಡುವ ಬದಲು ಬಜೆಟ್ ಗಾತ್ರ ನೋಡಿ ಗ್ಯಾರಂಟಿ ಘೋಷಿಸಬೇಕು. ಆಗ ಇಂತಹ ಮರುಪರಿಶೀಲಿಸುವ ಪ್ರಮೇಯ ಬರುವುದಿಲ್ಲ ಎಂದಿದ್ದಾರೆ.
ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈಗ ಹೀಗೆ ಹೇಳುತ್ತಿರುವ ಖರ್ಗೆರವರು ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ರವರು ಘೋಷಿಸಿರುವ ಹಲವು ಗ್ಯಾರಂಟಿಗಳ ಬಗ್ಗೆ ಮಾತನಾಡಿರಲಿಲ್ಲ
ಆಗ ಆ ಗ್ಯಾರೆಂಟಿಗಳಿಗೆ ಅವರೇ ಸಪೋರ್ಟ್ ಮಾಡಿದ್ದರು. ಆಗ ದೇಶದ ಬಜೆಟ್ ಗಾತ್ರದ ಬಗ್ಗೆ ಕಾಂಗ್ರೆಸ್ನ ಮುಖ್ಯಸ್ಥರು ಯೋಚಿಸಿರಲಿಲ್ಲವೆಂಬುದು ಇಲ್ಲಿ ಕಂಡುಬರುವ ಸಾಮಾನ್ಯ ವಿಷಯ.
ಗ್ಯಾರಂಟಿ(Guarantees)ಗಳಿಂದ ಹಿಮಾಚಲ ಪ್ರದೇಶದ ಸಕಾ೯ರದ ಬೊಕ್ಕಸ ಖಾಲಿ!
ಇದೇ ಕಾಂಗ್ರೆಸ್ ಪಕ್ಷವು ಹಿಮಾಚಲ ಪ್ರದೇಶದಲ್ಲೂ ಅಧಿಕಾರದಲ್ಲಿದ್ದು, ಅಲ್ಲಿಯೂ ಕೂಡ ಬಜೆಟ್ ಗಾತ್ರ ಮೀರಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವುದರಿಂದ ಬಡಜನರಿಗೆ ಸಾಕಷ್ಟು ಕಷ್ಟವಾಗುತ್ತಿರುವುದಲ್ಲದೆ
ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲ ಅಷ್ಟು ಮಾತ್ರವಲ್ಲದೆ ಶಾಸಕರಿಗೆ ವೇತನ ಕೊಡಲು ಕೂಡ ಹಿಮಾಚಲ ಪ್ರದೇಶ ಸರ್ಕಾರದ ಬಳಿ ಹಣವಿಲ್ಲ.
ಪ್ರಸ್ತುತ ಕರ್ನಾಟಕದ ಪರಿಸ್ಥಿತಿಯು ಕೂಡ ಹಿಮಾಚಲ ಪ್ರದೇಶದಂತೆಯೇ ಆಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲ.
ಸ್ವತಃ ಕಾಂಗ್ರೆಸ್ ಶಾಸಕರೇ ಗ್ಯಾರಂಟಿಗಳ ವಿರುದ್ಧ ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ನ ಗ್ಯಾರಂಟಿಗಳ ಸಾದಕ ಬಾಧಕಗಳು ಈಗ ಕಾಂಗ್ರೆಸ್ನ ಮುಖ್ಯಸ್ಥರಿಗೆ ಅರ್ಥವಾಗುತ್ತಿದೆ ಆದ್ದರಿಂದ ರಾಜ್ಯದ ಪರಿಸ್ಥಿತಿಯು ತೀರಾ ಹದಗಿಡುವುದಕ್ಕೂ ಮುನ್ನ ಕೂಡಲೆ ಗ್ಯಾರಂಟಿ ಯೋಜನೆಗಳನ್ನು ಮರುಪರಿಶೀಲಿಸಿ
ರಾಜ್ಯದ ಬಜೆಟ್ ಗೆ ಅನುಗುಣವಾಗಿ ಗ್ಯಾರಂಟಿ ಯೋಜನೆಗಳನ್ನು ಮುನ್ನಡೆಸಬೇಕು.
ಗ್ಯಾರಂಟಿ (Guarantees)ಯೋಜನೆ ವಾಪಸ್ ತಗೋಳಲ್ಲ!
ಆದರೆ ಮಲ್ಲಿಕಾರ್ಜುನ ಖರ್ಗೆ ರವರು ನೀಡಿದ ಹೇಳಿಕೆಯನ್ನು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ತೆಪೆ ಹಚ್ಚುವ ಕೆಲಸ ಮಾಡಿದ್ದು ಯಾವುದೇ ಗ್ಯಾರಂಟಿ ಯೋಜನೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಜನರ ಟ್ಯಾಕ್ಸ್ ನ್ನು ರಾಜ್ಯದ ಜನತೆಗೆ ಗ್ಯಾರಂಟಿ ರೂಪದಲ್ಲಿ ಕೊಟ್ಟು ರಾಜವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿರುವ
ಕಾಂಗ್ರೆಸ್ ಪಕ್ಷವು ತಾನು ಮಾತ್ರ ಅಧಿಕಾರವನ್ನು ಅನುಭವಿಸಬೇಕು ಎಂಬ ಯೋಜನೆಯಲ್ಲಿದೆ. ಈ ಬಗ್ಗೆ ರಾಜ್ಯದ ಜನತೆ ಎಚ್ಚೆತ್ತು ಸಕಾ೯ರವನ್ನು ಎಚ್ಚೆತ್ತುಗೊಳಿಸಬೇಕಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ