"Agriculture is our CULTURE"

Nusi Roga : ತೆಂಗಿನಲ್ಲಿ  ಈ ರೀತಿ ರೋಗ ಬರಲು ಕಾರಣ!! ನುಸಿ ರೋಗ ನಿರ್ವಹಣಾ ಕ್ರಮಗಳು!!!!

ತೆಂಗು ಕರ್ನಾಟಕದ ಪ್ರಸಿದ್ಧವಾದ ಬೆಳೆ ಕರ್ನಾಟಕದ   ಹೆಚ್ಚಿನ ಭಾಗದಲ್ಲಿ ತೆಂಗು ಬೆಳೆಯಲಾಗುತ್ತದೆ.  ಅದಕ್ಕಾಗಿ ನಾವು ತೆಂಗಿನ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ ಅದರಲ್ಲೂ ತೆಂಗಿನ ಮರಗಳಿಗೆ ಕಾಡುವ ರೋಗಭಾದೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

ಅಂತಹುದೇ ಒಂದು ಮುಖ್ಯ  ಕೀಟಭಾದೆ ಎಂದರೆ ತೆಂಗಿನಲ್ಲಿ ನುಸಿಪೀಡೆ.  ಬಹಳಷ್ಟು ರೈತರು ಇದನ್ನು ರೋಗವೆಂದು ತಿಳಿದುದ್ದಾರೆ ಆದರೆ ಇದು ರೋಗವಲ್ಲ  ಇದು ಕೀಟ ಬಾದೆ.

ಈ ನಸೀಪಿಡೆಯಿಂದಾಗಿ  ಒಳ್ಳೆಯ ತೆಂಗಿನಕಾಯಿಗಳು ಮಾರುಕಟ್ಟೆಗೆ ಬರುತ್ತಿಲ್ಲ  ಏಕೆಂದರೆ ಈ ನುಸಿ ಪೀಡೆಯಿಂದಾಗಿ ಕಾಯಿಯ ಗುಣಮಟ್ಟ ಕಡಿಮೆಯಾಗಿ ಕೊಬ್ಬರಿಯೂ ಚೆನ್ನಾಗಿ ಬೆಳವಣಿಗೆ ಆಗುವುದಿಲ್ಲ , ಹಾಗಾಗಿ ಒಳ್ಳೆಯ ಗುಣಮಟ್ಟದ ತೆಂಗಿನಕಾಯಿಗಳು ಸಿಗುವುದೇ ಕಷ್ಟವಾಗಿದೆ.

ಈ ನುಸಿಯು ಒಂದು  ಸಣ್ಣ ಜೀವಿಯಾಗಿದ್ದು ಬರಿಗಣ್ಣಿಗೆ ಕಾಣುವುದಿಲ್ಲ ಸೂಕ್ಷ್ಮದರ್ಶಕ ಯಂತ್ರದಿಂದ ಮಾತ್ರ ನೋಡಲು ಸಾಧ್ಯವಿದ್ದು,  ಇದು ತೆಂಗಿನ ಮರಗಳಿಗೆ ಮಾಡುವ ಹಾನಿಯಿಂದ ರೈತರು ಬಹಳಷ್ಟು ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ಈ ನುಸಿಯು ತೆಂಗಿನಕಾಯಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ತೆಂಗಿನಕಾಯಿ ಹಾಗೂ ಅದರ ಪುಷ್ಪಪಾತ್ರೆಯ( ತೆಂಗಿನಕಾಯಿಯ ಮೇಲಿನ ಭಾಗ ) ನಡುವೆ ಬಿರುಕುಂಟಾದಾಗ  ಅದರ ಮಧ್ಯ  ಈ ನಸಿಯ ಮೊಟ್ಟೆ ಇಡುತ್ತದೆ ನಂತರ ಅದು ಬೆಳವಣಿಗೆಯಾಗಲು ಹತ್ತು ದಿನ ಬೇಕಾಗುತ್ತದೆ.

ಈ ಅವಧಿಯು ಕಡಿಮೆಯಿರುವುದರಿಂದ  ಈ ನುಸಿಯು ಬೇಗ ಬೇಗನೆ ಹರಡಿ ಎಲ್ಲ ತೆಂಗಿನಕಾಯಿಗಳನ್ನು ಕೀಟಭಾದೆಗೆ ಒಳಪಡಿಸುತ್ತದೆ.  ಅಲ್ಲದೆ ಪುಷ್ಪ ಪಾತ್ರೆಯ ಮೃದುವಾದ ಭಾಗದಲ್ಲಿ ರಸ ಹೀರುತ್ತಾ ಬರುತ್ತದೆ ಇದರಿಂದ ರಸ ಹೀರಿದ ಭಾಗವೆಲ್ಲ ಒರಟಾಗುತ್ತಾ ಹೋಗುತ್ತದೆ.

ಹಾಗಾದರೆ ಈ ನುಸಿ ಕೀಟಭಾದೆಯನ್ನು  ನಿಯಂತ್ರಿಸುವುದು ಹೇಗೆ?

* ತೆಂಗಿನಕಾಯಿ ಹಾಗೂ ಪುಷ್ಪಪಾತ್ರೆ ನಡುವೆ ಅಂತರವಿರದೆ ಹಾಗೆ ನೋಡಿಕೊಳ್ಳಬೇಕು.    ಸಮಗ್ರ ಪೋಷಕಾಂಶಗಳ  ನಿರ್ವಹಣೆಯಿಂದ ಈ ರೀತಿ ಅಂತರವನ್ನು ತಡೆಯಬಹುದು.

ಯಾವುದೇ ಕೀಟನಾಶಕದಿಂದ ಈ ಕೀಟಭಾದೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ

* ಸಮಗ್ರ ಪೋಷಕಾಂಶ ನಿರ್ವಹಣೆಯಿಂದ ತೆಂಗಿನ ಮರಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಆದ್ದರಿಂದ ವರ್ಷಕ್ಕೆ ಎರಡು ಬಾರಿ ಅಂತೆ

ಅಂದ್ರೆ ಜೂನ್ ಮತ್ತು ನವೆಂಬರ್ ನಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆಯನ್ನು  ಮಾಡುವುದು ಅತ್ಯವಶ್ಯಕ ವಾಗಿದ್ದು,  ತೆಂಗಿನ ಮರಕ್ಕೆ ಬೇಕಾದ ಮುಖ್ಯ ಪೋಷಕಾಂಶಗಳನ್ನು ಹಾಗೂ ಲಘು ಪೋಷಕಾಂಶಗಳನ್ನು  ಒದಗಿಸಬೇಕು.

ಉತ್ತಮ ಪೌಷ್ಟಿಕಾಂಶ ಕೊಡುವುದರಿಂದ, ತೆಂಗಿನಕಾಯಿಯ ಬೆಳವಣಿಗೆ ಚೆನ್ನಾಗಿ ಆಗಿ ಹೊರಗಿನ ಮೃದು ಸಿಪ್ಪೆಯು ತೆಳ್ಳಗೆ ಬೆಳವಣಿಗೆ ಆಗುತ್ತದೆ ಆದ್ದರಿಂದ ಕಿಟಕ್ಕೆ ರಸ ಇರಲು ಕಷ್ಟವಾಗುತ್ತದೆ ಅದರಿಂದ ನಾವು ಉತ್ತಮ ಪೌಷ್ಟಿಕಾಂಶವನ್ನು ಕೊಡಬೇಕು .

* 10 ವರ್ಷಕ್ಕೂ ಮೇಲುಕೋಟೆ ತೆಂಗಿನ ಮರಗಳಿದ್ದರೆ ಪ್ರತಿ ಬಾರಿ ನಾವು ರಾಸಾಯನಿಕ ಗೊಬ್ಬರ ವಾದಂತಹ 10:26:26- 1 ಕೆಜಿ

MOP-2 ಕೆಜಿ

AMN mix-250 ಗ್ರಾಂ,

ಉಪ್ಪು -1 ಕೆಜಿ  ಹಾಗೂ ಸಾವಯವ ಗೊಬ್ಬರವಾದ

ಬೇವಿನ ಹಿಂಡಿ -5 ಕೆಜಿ ಎಂತೆ ಪ್ರತಿ ಗಿಡಕ್ಕೂ ಕೊಡಬೇಕು.  ಇದರಿಂದ ಮರಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

* ಅಲ್ಲದೆ ತೋಟದಲ್ಲಿ ಖಾಲಿ ಜಾಗವನ್ನು ಬಿಡುವುದಕ್ಕಿಂತ  ಹಸಿರುಲೆಯ ಗೊಬ್ಬರ ನೀಡುವ ಗಿಡಗಳನ್ನು ಬೆಳೆಸಬೇಕು ಅಂದರೆ ಸೆಣಬು, ಡಯಾಂಚ, ಅಲಸಂದೆ ಬೆಳೆಗಳನ್ನು ಬೆಳೆದು ಮರಗಳಿಗೆ ಸಾಮಾನ್ಯವಾಗಿ ಗೊಬ್ಬರವನ್ನು ಒದಗಿಸಬಹುದು.

ಹೀಗೆ ಮಾಡಿದ್ದಲ್ಲಿ ನುಸಿ ಕೀಟಬಾಧೆಯಿಂದ ತಪ್ಪಿಸಿಕೊಳ್ಳಬಹುದು.  ಧನ್ಯವಾದಗಳು

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….

ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.

<<< ಅಡಿಕೆ ಮಾರುಕಟ್ಟೆ     : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ   : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿ.ಕೆ

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"