"Agriculture is our CULTURE"

Borewell Water Decrease :: ಅಂತರ್ಜಲ ಮಟ್ಟ ಕುಸಿತ!! ಅಡಿಕೆ ಪ್ರದೇಶ ವಿಸ್ತೀರ್ಣವು ಇದಕ್ಕೆ ಕಾರಣವಾ?3 ವಷ೯ದ ಬರಗಾಲದಲ್ಲಿ ಆಗದ್ದು, ಒಂದೇ ವಷ೯ದಲ್ಲಿ ಆಗಿದ್ದು ಯಾಕೆ?

ಕಳೆದ ವರ್ಷದ ಮಳೆಗಾಲದಲ್ಲಿ ಸರಿಯಾಗಿ ಮಳೆ ಯಾಗದೆ ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಉಂಟಾಗಿದ್ದು,  ಮಳೆಗಾಲ ಮುಗಿದ ಕೂಡಲೇ ನೀರಿನ ಕೊರತೆ ಎದ್ದು ಕಾಣುತ್ತಾ ಬರುತ್ತಿದೆ.   ಅದರಲ್ಲೂ ಚಳಿಗಾಲದ ಅಂತ್ಯದಲ್ಲಿ ಯಾವುದೇ ಡ್ಯಾಮ್ಗಳಲ್ಲಿ ನೀರಿಲ್ಲ.

ಇದೀಗ ಬಿಸಿಲಿನ ಬೇಗೆಗೆ  ಹೆಚ್ಚಿನ ನೀರಿನ ಅವಶ್ಯಕತೆ ಇದ್ದರೂ ಕೂಡ ಎಲ್ಲೂ ನೀರು ಸಿಗುತ್ತಿಲ್ಲ.   ಹೀಗಾಗಿ ನೀರಿಗೆ ಉಂಟಾಗಿರುವ ಹಾಹಾಕಾರದಿಂದ ರೈತರು ಹಾಗೂ ಸಾವ೯ಜನಿಕರು ಕಂಗಾಲಾಗಿದ್ದಾರೆ.

ರಾಜ್ಯವು ಹೆಚ್ಚಾಗಿ ಮಳೆಯಾಶ್ರಿತ ಕೃಷಿ ಪದ್ದತಿ ಹೊಂದಿದ್ದು, ಇಲ್ಲಿ ಮಳೆಯಾದಾಗಲೇ ಬೆಳೆ. ಆದರೆ ಇತ್ತೀಚೆಗೆ ಮಳೆ ಅನಿಶ್ಚಿತತೆ ಹೆಚ್ಚಾಗಿದ್ದರಿಂದ ರೈತರು ಹೆಚ್ಚಾಗಿ ಬೋರ್ವೆಲ್ ಕೊರೆಸಲು ಪ್ರಾರಂಭಿಸಿದರು. ಇದರಿಂದ ರೈತರಿಗೆ ಆದಾಯವು ಹೆಚ್ಚಿತು ಹಾಗೂ ರಾಜ್ಯದಲ್ಲಿ 1980 ರಲ್ಲಿ ಇದ್ದ ಕೊಳವೆಬಾವಿಗಳ ಸಂಖ್ಯೆ 10 ಪಟ್ಟು ಹೆಚ್ಚಾಯಿತು.

ಹೌದು,  ಹೀಗೆ ರಾಜ್ಯದಲ್ಲಿ ಕೊಳವೆಬಾವಿಗಳ ಸಂಖ್ಯೆ ಹೆಚ್ಚಾದಂತೆ ಅಂತರ್ಜಲದ ತೀವ್ರ ಬಳಕೆ ಹಾಗೂ ಗ್ಲೋಬಲ್ ವಾರ್ಮಿಂಗ್ನಿಂದ ರಾಜ್ಯದಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಾಣುತ್ತಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.

1980ರ ದಶಕದಲ್ಲಿ ತೋಟದಲ್ಲಿ 100 ಮೀಟರ್ ಕೊಳವೆಬಾವಿ ತೆಗೆಸಿದರೂ ಕೂಡ ಸಮೃದ್ಧ ನೀರು ಸಿಗುತ್ತಿತ್ತು. ಆದರೆ 2010 ರ ದಶಕದಲ್ಲಿ ಅದು 500 ಮೀಟರ್ ಗೆ ಏರಿಕೆಯಾಯಿತು.

ಅಂದರೆ ರೈತರು ನೀರು ಸಿಗಬೇಕಾದರೆ 500 ಮೀ ನಷ್ಟು ಬೋವೆ೯ಲ್ ತೆಗೆಸಬೇಕಾಯಿತು. ಇನ್ನು ಈಗಿನ ಪರಿಸ್ಥಿತಿ ತೀರಾ ಶೋಚನೀಯ. ಏಕೆಂದರೆ  ಇದೀಗ ತೋಟದಲ್ಲಿ ನೀರು ಸಿಗಬೇಕೆಂದರೆ ಸಾವಿರ ಆಡಿ ಆಳದವರೆಗೂ ಕೊಳವೆಬಾವಿ ತೆಗೆಸಬೇಕಾಗಿದೆ.  ಆದರೂ ಕೂಡ ನೀರು ಸಿಗುತ್ತದೆ ಎಂಬ ಖಾತ್ರಿ ಇಲ್ಲ.

ಅಂತಜ೯ಲ ಮಟ್ಟ ಇಷ್ಟೊಂದು ಕಡಿಮೆಯಾಗಲು ಕಾರಣವೇನು?

ಅಂತರ್ಜಲ ಇಷ್ಟೊಂದು ಕಡಿಮೆಯಾಗಲು ಕಾರಣ ಮುಖ್ಯವಾಗಿ ಹೆಚ್ಚಿದ ಬೋವೆ೯ಲ್ ಸಂಖ್ಯೆ ಹಾಗೂ ನೀರಿನ ಬಳಕೆ:- 2002-03 ರಲ್ಲಿ ರಾಜ್ಯದಲ್ಲಿ ಕೊಳವೆಬಾವಿಗಳ ಸಂಖ್ಯೆ ಕೇವಲ 4-5 ಲಕ್ಷ ಇತ್ತು.

ಆದರೆ 2024 ರ ವೇಳೆಗೆ ಬೋವೆ೯ಲ್ ಸಂಖ್ಯೆ 40 ಲಕ್ಷ.  1990ರ ದಶಕದಲ್ಲಿ ಕೇವಲ ಶ್ರೀಮಂತರು  ಹಾಗೂ ತುಂಬಾ ಅವಶ್ಯಕವಿರುವವರು ಮಾತ್ರ ಕೊಳವೆಬಾವಿ ತೆಗೆಸುತ್ತಿದ್ದರು.

ಆದರೆ ಇದೀಗ ಪ್ರತಿಯೊಂದು ಜಮೀನಿನಲ್ಲೂ ಒಂದು ಅಥವಾ ಎರಡು ಕೊಳವೆ ಬಾವಿಗಳು ಇದ್ದೇ ಇರುತ್ತದೆ ಅಲ್ಲದೆ  ಕೇವಲ ತೋಟಗಳ ಬಳಕೆಗಾಗಿ ಮಾತ್ರವಲ್ಲದೆ ಕುಡಿಯುವ ನೀರಿಗಾಗಿಯೂ ಕೂಡ ಕೊಳವೆಬಾವಿ ತೆಗೆಸುತ್ತಿದ್ದಾರೆ.

ಹೌದು ರಾಜ್ಯದಲ್ಲಿ 35 ಲಕ್ಷ ಕೊಳವೆಬಾವಿಗಳು ಜಮೀನುಗಳಲ್ಲಿದ್ದರೆ 5 ಲಕ್ಷ ಕೊಳವೆ ಬಾವಿಗಳನ್ನು ಕುಡಿಯುವ ನೀರಿಗಾಗಿ ತೆಗೆಸಲಾಗಿದೆ.

* ಅಡಿಕೆ ತೋಟಗಳ ವಿಸ್ತೀರ್ಣವು ಕಾರಣವೇ?

ಒಂದು ಕಡೆ ಮಳೆ ಇಲ್ಲ ಇನ್ನೊಂದು ಕಡೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ಆದರೆ ಅಡಿಕೆ ತೋಟಗಳು ಮಾತ್ರ ಬಯಲು ಸೀಮೆಗಳಲ್ಲೂ ಕೂಡ ಎದ್ದು ಕಾಣುತ್ತಿವೆ.   ಮೊದಲ ಅಡಿಕೆ ತೋಟಗಳು ಕೇವಲ ಮಲೆನಾಡು ಹಾಗೂ ಕರಾವಳಿ ಭಾಗಗಳಿಗೆ ಮಾತ್ರ ಸೀಮಿತವಾಗಿದ್ದವು.

ಏಕೆಂದರೆ ಅಡಿಕೆ ತೋಟಗಳಿಗೆ ಹೆಚ್ಚಿನ ನೀರು ಬೇಕು.ಹೀಗಾಗಿ ಬಯಲು ಸೀಮೆಗಳಲ್ಲಿ ಅಡಿಕೆ ತೋಟ ಮಾಡುವ ಸಾಹಸ ಮಾಡುತ್ತಿರಲಿಲ್ಲ ಆದರೆ   ಅಡಿಕೆ ತೋಟಗಳಿಂದ ಬರುವ ಆದಾಯ ಬಯಲುಸೀಮೆ ರೈತರನ್ನು  ಕೈ ಬೀಸಿ ಕರೆಯುತ್ತಿತ್ತು ಆಹಾರ ಬೆಳೆಗಳನ್ನು ಬೆಳೆದರೆ ರೋಗಗಳು,

ಬೆಳೆಹಾನಿ ಹೀಗೆ ನಾನಾ ಕಾರಣಗಳಿಂದ ಅಧ೯ದಷ್ಟು ಆದಾಯವು ಹಿಂದಿರುಗುತ್ತಿರಲಿಲ್ಲ.  ಹೀಗೆ ಸಂಕಷ್ಟದಲ್ಲಿದ್ದ ಬಯಲು ಸೀಮೆ ರೈತರಿಗೆ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳಿಂದಾಗಿ ಬಯಲು ಸೀಮೆಯಲ್ಲಿಯೂ ಸಹ

ಅಡಿಕೆ ತೋಟ ಮಾಡುವ ದುಸ್ಸಾಹಸಕ್ಕೆ ಕೈ ಹಾಕುವಂತೆ ಮಾಡಿತು.  ಇದರಿಂದಾಗಿ ಮಲೆನಾಡು ಹಾಗೂ ಕರಾವಳಿ ಭಾಗದ 11 ಜಿಲ್ಲೆಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಅಡಿಕೆ ಬೆಳೆ ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಣಿಸುತ್ತಿದೆ 1980 ದಶಕದಲ್ಲಿ  ಕೇವಲ 55,000 ಹೆಕ್ಟರ್ಗಳಲ್ಲಿ ವಿಸ್ತರಿಸಿದ್ದ ಅಡಿಕೆ ಬೆಳೆ ಇದೀಗ 7.80 ಲಕ್ಷ ಹೆಕ್ಟರ್ ಗೆ ವಿಸ್ತರಣೆಯಾಗಿದೆ.

ಮಲೆನಾಡು  ಹಾಗೂ ಕರಾವಳಿ ಭಾಗದಲ್ಲಿ  ಹೆಚ್ಚು ತಂಪಿನ ವಾತಾವರಣ ಇರುತ್ತದೆ ಹಾಗಾಗಿ ಅಡಿಕೆ ಬೆಳೆಗಳಿಗೆ ಸ್ವಲ್ಪ ಕಡಿಮೆ ನೀರು ಬಳಸಬಹುದು ಆದರೆ ಬಯಲು ಸೀಮೆಗಳಲ್ಲಿ ಬಿಸಿಲಿನ ವಾತಾವರಣವಿದ್ದು ಅಡಿಕೆ ತೋಟಗಳಿಗೆ ಹೆಚ್ಚಿನ ನೀರು ಬೇಕಾಗುತ್ತದೆ ಕನಿಷ್ಠ 15

ದಿನಗಳಿಗೊಮ್ಮೆಯಾದರೂ ನೀರು ಕೊಡಲೇಬೇಕು.   ಮಳೆಗಾಲದಲ್ಲಾದರೆ ಮಳೆ ಬಂದು ನೀರು ಪೂರೈಕೆ ಆಗಿರುತ್ತದೆ ಆದರೆ ಬೇಸಿಗೆಯಲ್ಲಿ ಕೊಳವೆಬಾವಿಗಳ ಮೂಲಕವೇ ನೀರು ಪೂರೈಸಬೇಕು.

ಹೀಗಿದ್ದಾಗ  ಒಂದು ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ನೀರು ಸಿಗದಿದ್ದರೆ ತೋಟದಲ್ಲಿ ಮತ್ತೊಂದು ಮಗದೊಂದು  ಕೊಳವೆಬಾವಿ ಕೊರಿಸಲು ರೈತರು ಮುಂದಾಗುತ್ತಿದ್ದಾರೆ. ಆದರೆ ನೀರು ಸಿಗುವ ಖಾತ್ರಿ ಇಲ್ಲ.

ಇಷ್ಟಾದರೂ ಕೂಡ ಮಕ್ಕಳಂತೆ ಸಾಕಿದ ಅಡಿಕೆ ಮರಗಳ ಉಳುವಿಗಾಗಿ ನೀರು ಕೊಡಲೇಬೇಕಿದ್ದು, ಹತ್ತಾರು ಕಿಲೋಮೀಟರ್ ಗಳಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ನೀರನ್ನು ತಂದು ತೋಟಗಳಿಗೆ ಕೊಡುತ್ತಿದ್ದಾರೆ.

ಹೀಗೆ ಅತಿಯಾದ ನೀರು ಬಳಕೆಯಾಗುತ್ತಿರುವುದರಿಂದ ಹಾಗೂ ಮನೆಗಳಲ್ಲೂ ಕೂಡ ಕೊಳವೆಬಾವಿ ತೆಗೆಸಿ ನೀರಿನ ಬಳಕೆ ಮಾಡುತ್ತಿರುವುದರಿಂದ ಅಂತಜ೯ಲ ಮಟ್ಟ ಕಡಿಮೆಯಾಗುತ್ತಿದೆ.

ರಾಜ್ಯ ಅಂತರ್ಜಲ ನಿರ್ದೇಶನಾಲಯ ಮತ್ತು ಅಂತರ್ಜಲ ಪ್ರಾಧಿಕಾರದ ಮಾಹಿತಿ ಪ್ರಕಾರ ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ವಿಜಯಪುರದ ಕೆಲ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ 30 ರಿಂದ 44 ಮೀಟರ್‌ವರೆಗೆ ಕುಸಿದಿದೆ.

ಅಂತಜ೯ಲ ಮಟ್ಟ ಕಡಿಮೆಯಾಗದಿರಲು ಕೈಗೊಳ್ಳಬೇಕಾದ ಕ್ರಮಗಳೇನು?

ಸಣ್ಣ ನೀರಾವರಿ ಇಲಾಖೆಯಿಂದ ಕಳೆದ 3 ವರ್ಷದಲ್ಲಿ 100.39 ಕೋಟಿ ರೂ. ವೆಚ್ಚದಲ್ಲಿ 43 ಇಂಗು ಮತ್ತು ಜಿನುಗು ಕೆರೆಗಳನ್ನು ನಿರ್ಮಿಸಲಾಗಿದೆ. 1934.02 ಕೋಟಿ ರೂ. ವೆಚ್ಚದಲ್ಲಿ 2,282 ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ.

ಅಟಲ್ ಭೂಜಲ್ ಯೋಜನೆಯಡಿ 165.05 ಕೋಟಿ ರೂ. ವೆಚ್ಚದಲ್ಲಿ 534 ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್‌. ಎಸ್‌. ಭೋಸರಾಜು ಹೇಳಿದ್ದು, ಇದರಿಂದಾಗಿ ನೀರು ಡ್ಯಾಂ ಗಳಲ್ಲಿ ಶೇಖರಣೆಯಾಗಿ ಭೂಮಿಯಲ್ಲಿ ನೀರು ಇಂಗುತ್ತದೆ. ಅಲ್ಲದೇ ಕೃಷಿಗೂ ಕೊಳವೆಬಾವಿ ಹೊರತುಪಡಿಸಿ ಡ್ಯಾಂ ನಲ್ಲಿ ಶೇಖರಿಸಲಾದ ನೀರನ್ನು ಬಳಕೆ ಮಾಡಿಕೊಳ್ಳಬಹುದು.

ಆದರೆ ಮುಖ್ಯವಾಗಿ ರಾಜ್ಯದ ಜನರು ಅಂತರ್ಜಲ ಮಟ್ಟ ಕಡಿಮೆ ಯಾಗುತ್ತಿರುವುದನ್ನು ಗಮನಿಸಿ ಅಂತರ್ಜಲ ಮರಪೂರಣಕ್ಕೆ ಪಣತೊಡಬೇಕು.  ಅಂತರ್ಜಲ ಮರಪೂರಣ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಕೊಳವೆಬಾವಿಗಳು ಬತ್ತಿ ನೀರಿಲ್ಲದೇ ಜನ ಸಾಯುವ ಪರಿಸ್ಥಿತಿ ಬರುತ್ತದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….

ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.

<<< ಅಡಿಕೆ ಮಾರುಕಟ್ಟೆ     : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ   : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿ.ಕೆ

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"