Crop Insurance:: 65000 ರೈತರಿಗೆ 48 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ! ವಿಮೆ ಮಾಡಿಸಲು ಕೊನೆಯ ದಿನಾಂಕ!
ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕಗಳನ್ನು ಚೆಕ್ ಮಾಡಿ ಕೂಡಲೇ ಬೆಳೆ ವಿಮೆ ಮಾಡಿಸಿ ಏಕೆಂದರೆ ಬಹಳಷ್ಟು ಬೆಳೆಗಳಿಗೆ ಡಿಸೆಂಬರ್ 31ರವರೆಗೆ ಮಾತ್ರ ನೊಂದಣಿ ಮಾಡಿಸಲು ಸಾಧ್ಯವಿದ್ದು
ಆದ್ದರಿಂದ ನೀವು ಬೆಳೆದ ಬೆಳೆ ವಿಮೆಯ ಕೊನೆಯ ದಿನಾಂಕವನ್ನು ಚೆಕ್ ಮಾಡಿ ಕೂಡಲೇ ವಿಮೆ ಮಾಡಿಸಿ ಕಡಲೆ ಬೆಳೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದ್ದು ಯಾರೆಲ್ಲ ರೈತರು ಕಡಲೆಯನ್ನು ಬೆಳೆದಿದ್ದೀರೋ ಅವರು 31ರೊಳಗಾಗಿ ಬೆಳೆ ವಿಮೆ ಮಾಡಿಸಬೇಕು.
65000 ರೈತರಿಗೆ 48 ಕೋಟಿ ರೂ. ಪರಿಹಾರ ಬಿಡುಗಡೆ!
2023-24 ನೇ ಸಾಲಿನ ಮುಂಗಾರಿನಲ್ಲಿ ಬರಗಾಲದಿಂದ ಬೆಳೆಹಾನಿಗೊಳಗಾಗಿದ್ದ ಹಾವೇರಿ ಜಿಲ್ಲೆಯ 65000 ರೈತರಿಗೆ 48 ಕೋಟಿ ರೂ. ಗಳ ಬೆಳೆ ವಿಮೆ ಈಗ ಬಿಡುಗಡೆಯಾಗಿದೆ. ಕನಾ೯ಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು ವಿಮೆ ಮಾಡಿಸಿದ್ದರು.
ಆದರೆ ಖಾಸಗಿ ವಿಮೆ ಕಂಪನಿಯು ರಾಜ್ಯ ಸಕಾ೯ರ ನಡೆಸಿದ್ದ ಬೆಳೆಹಾನಿ ಸಮೀಕ್ಷೆಗೆ ಆಕ್ಷೇಪಣೆ ಒಡ್ಡಿ ರಾಜ್ಯ ಸಕಾ೯ರ ಸಮಿತಿಯ ವಿರುದ್ದ ಕೇಂದ್ರದ ತಾಂತ್ರಿಕ ಸಲಹಾ ಸಮಿತಿಗೆ ಮೇಲ್ಮನವಿ ಸಲ್ಲಿಸಿತ್ತು.
ಆದರೆ ರಾಜ್ಯದಿಂದ ಪ್ರಬಲ ವಾದ ಮಂಡನೆಯಾಗಿದ್ದರಿಂದ ಇದೀಗ ಬೆಳೆಹಾನಿ ಅನುಭವಿಸಿದ್ದ 65000 ರೈತರಿಗೆ ಈಗ 48 ಕೋಟಿ ರೂ. ಗಳ ಬೆಳೆ ವಿಮೆ ಪರಿಹಾರ ನೀಡುವಂತೆ ಕೇಂದ್ರ ತಾಂತ್ರಿಕ ಸಲಹಾ ಸಮಿತಿಯು ಆದೇಶಿಸಿದೆ ಎಂದು ಕೃಷಿ ಸಚಿವರಾದ ಚಲುವರಾಯಸ್ವಾಮಿ ರವರು ಹೇಳಿದ್ದಾರೆ.
ಈಗ ಹಾವೇರಿ ಜಿಲ್ಲೆಯ 65000 ರೈತರು ಕೂಡ 48 ಕೋಟಿ ಪರಿಹಾರವನ್ನು ಪಡೆಯಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪರಿಹಾರ ಹಣ ಜಮೆಯಾಗಲಿದೆ. ಹಾಗಾದರೆ ಪರಿಹಾರ ಹಣ ಜಮೆಯಾದ ಬಗ್ಗೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೆಳೆ ಹಾನಿ ಪರಿಹಾರ (crop insurance) ಅರ್ಜಿ ಸ್ಥಿತಿ ಪರಿಶೀಲಿಸುವುದು ಹೇಗೆ?
Step 1: ನೀವು ಮೊದಲಿಗೆ ಸಂರಕ್ಷಣೆ ಎಂಬ ವೆಬ್ಸೈಟಿಗೆ ಭೇಟಿ ನೀಡಬೇಕು ಅದಕ್ಕಾಗಿ ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ
https://www.samrakshane.karnataka.gov.in/
Step 2: ನಂತರ ಅಲ್ಲಿ ವರ್ಷ ಹಾಗೂ ಋತು ಸೆಲೆಕ್ಟ್ ಮಾಡಿ ಗೋ(Go) ಬಟನ್ ಕ್ಲಿಕ್ ಮಾಡಿ
Step 3: ನಂತರ ಓಪನ್ ಆಗುವ ಪೇಜ್ ನಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಫಾಮ೯ರ್ಸ್(Farmers) ಆಯ್ಕೆಯಲ್ಲಿರುವ ಚೆಕ್ ಸ್ಟೇಟಸ್ (check status) ಎಂಬ ಆಪ್ಷನ್ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಓಪನ್ ಆಗೋ ಪೇಜ್ ನಲ್ಲಿ ನಿಮ್ಮ ವಿಮೆ ಪಾವತಿಸಿದ ಅರ್ಜಿಯ ಸಂಖ್ಯೆ ಇದ್ದರೆ ಅದನ್ನು ಅಥವಾ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬರ್ ಹಾಕಿ ಹಾಗೂ ಕೊಟ್ಟಿರುವ ಕ್ಯಾಪ್ಚಾ ಎಂಟರ್ ಮಾಡಿ ಸರ್ಚ್ ಬಟನ್(Search) ಮೇಲೆ ಕ್ಲಿಕ್ ಮಾಡಿ
*ಆಗ ನಿಮಗೆ ನಿಮ್ಮ ಅರ್ಜಿಯ ಬಗ್ಗೆ ಮಾಹಿತಿ ಸಿಗುತ್ತದೆ. ಅದರಲ್ಲಿ ನಿಮ್ಮ ಅರ್ಜಿ ಸ್ವೀಕೃತವಾಗಿದ್ದರೆ ಕಂಪನಿಯಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದು ತೋರಿಸಿರುತ್ತಾರೆ. ನಿಮ್ಮ ಹೆಸರಿನ ಮುಂದಿನ ಕೊನೆಯ ಕಾಲಂ ನಲ್ಲಿ ಸೆಲೆಕ್ಟ್ ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ ಆಗ ಇನ್ನಷ್ಟು ವಿವರ ತೋರಿಸುತ್ತದೆ.
*ಆಗ ಓಪನ್ ಆಗುವ ಪೇಜ್ ನಲ್ಲಿ ವೀವ್ ಡಿಟೇಲ್ಸ್(View details) ಎಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಬಗ್ಗೆ ಹೆಚ್ಚಿನ ಸಂಪೂರ್ಣ ಮಾಹಿತಿ ಸಿಗುತ್ತದೆ.
*ಅದರಲ್ಲಿ ಯಾವ ಸರ್ವೆ ನಂಬರ್ ಗೆ ವಿಮೆ ಕಟ್ಟಿದ್ದೀರಿ, ಯಾವ ಬೆಳೆ ಎಷ್ಟು ವಿಮೆ ಕಟ್ಟಿದ್ದೀರಿ ಎಂಬೆಲ್ಲಾ ಮಾಹಿತಿ ತೋರಿಸುತ್ತದೆ.
ಹೀಗೆ ನೀವು ನಿಮ್ಮ ಬೆಳೆ ಹಾನಿ ಪರಿಹಾರ(crop insurance) ಅರ್ಜಿಯ ಸ್ಥಿತಿ ಏನು? ಇನ್ನೂ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ