Dam:: ಜಲಾಶಯಕ್ಕೆ ಜನವರಿ ವರೆಗೂ ನೀರು ಹರಿಸಲು ಸಕಾ೯ರ ಆದೇಶ!!!12.50 ಟಿಎಂಸಿ ನೀರಿನ್ನು ಹಂಚಿಕೆ!!
ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ ಟಿಎಂಸ ನೀರು ತುಂಬಿಕೊಂಡು ರಮಣೀಯ ದೃಶ್ಯದಿಂದ ಕಣ್ಮನ ಸೆಳೆಯುತ್ತಿದೆ.
2025 ಜನವರಿವರೆಗೂ ನೀರು ಹರಿವಿಗೆ ಆದೇಶ!
ಈಗಾಗಲೇ ಜಲಾಶಯಕ್ಕೆ 462 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.40 ಅಡಿ ತಲುಪಿದೆ. ಜಲಾಶಯ ಇಷ್ಟೊಂದು ಟಿಎಂಸಿ ತುಂಬಿಕೊಂಡಿದ್ದರೂ ಕೂಡ ಸಕಾ೯ರ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ
ಜಲಾಶಯದಿಂದ ವಿವಿ ಸಾಗರ ಜಲಾಶಯಕ್ಕೆ 2025ರ ಜನವರಿವರೆಗೂ ನೀರು ನಿರ್ದಿಷ್ಟ ಟಿಎಂಸಿ ಹರಿಸುವುದನ್ನು ಮುಂದುವರಿಸುವಂತೆ ಆದೇಶ ಹೊರಡಿಸಿದೆ.
ಸಕಾ೯ರದ ಆದೇಶದಂತೆ ಭದ್ರಾ ಮೇಲ್ದಂಡೆ ಯೋಜನೆ ಕೈಗೊಳ್ಳಲು ಭದಿರಾ ಜಲಾಶಯದಿಂದ 12.50 ಟಿಎಂಸಿ ನೀರಿನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆಯಾಗಿರುವ ಒಟ್ಟು ನೀರಿನಲ್ಲಿ 1.47 ಟಿಎಂಸಿ ನೀರು ತರೀಕೆರೆ ನೀರಾವರಿ ಯೋಜನೆಗೆ ಹಾಗೂ 2 ಟಿಎಂಸಿ ನೀರು ವಾಣಿ ವಿಲಾಸ ಸಾಗರಕ್ಕೆ ಬಿಡುಗಡೆ ಮಾಡಲು ಸಕಾ೯ರ ಅನುಮತಿ ನೀಡಿದ್ದು, ಹೀಗೆ ಭದ್ರಾ ಜಲಾಶಯದಿಂದ ಈ ಎರಡು ಯೋಜನೆಗೆ ಒಟ್ಟು 3.47 ಟಿಎಂಸಿ ನೀರನ್ನು ಎತ್ತಲಾಗುತ್ತಿತ್ತು.
ಪ್ರತಿದಿನ 700 ಕ್ಯೂಸೆಕ್ ನೀರು ಒಳಹರಿವು!
ಆದರೆ ಇದೀಗ ತರೀಕೆರೆ ಏತ ನೀರಾವರಿ ಯೋಜನೆಗೆ ಸಹಕಾರಿಯಾಗುವಂತೆ ಸೌಲಭ್ಯ ಒದಗಿಸಲು ಯೋಜನೆಗೆ ಮೀಸಲಿಟ್ಟಿದ್ದ ನೀರಿನ ಪ್ರಮಾಣದ ಹೊರತು ಹೆಚ್ಚಾಗಿ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರು ಸಂಗ್ರಹಿಸಲು ಸಕಾ೯ರ ಮುಂದಾಗಿದ್ದು, ಭದ್ರಾ ಜಲಾಶಯದಲ್ಲಿ ಉಳಿಕೆಯಾಗಿರುವ 9.03 ಟಿಎಂಸಿ ನೀರಿನಲ್ಲಿ ಪ್ರತಿದಿನ 700 ಕ್ಯೂಸೆಕ್ ನೀರನ್ನು ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಜನವರಿ 2025ರ ವರೆಗೆ ಹರಿಸಲು ಅನುಮತಿ ನೀಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3 ನೇ ಬಾರಿಕೆ ಕೋಡಿ ಬೀಳುವುದು ಖಂಡಿತ!
ಪ್ರಸ್ತುತ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ 128.40 ಅಡಿಯಾಗಿದ್ದು, ಇನ್ನು ಕೇವಲ 1.60 ಅಡಿ ನೀರನ್ನು ಜಲಾಶಯಕ್ಕೆ ಹರಿಸಿದರೆ ತುಂಬಿಕೊಂಡಿರುವ ಡ್ಯಾಂ ಕೋಡಿ ಬೀಳುತ್ತದೆ.ಇದುವರೆಗೂ ಜಲಾಶಯವು 2 ಬಾರಿ ಕೋಡಿ ಬಿದ್ದಿದ್ದು, ಈಗ ಮತ್ತೆ ಇಷ್ಟೊಂದು ನೀರು ಹರಿಸಿದರೆ ವಾಣಿವಿಲಾಸ ಸಾಗದ ಜಲಾಶಯ ಮೂರನೇ ಬಾರಿಗೆ ಕೋಡಿ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರವಾಸಿಗರ ಮನಸೆಳೆಯುತ್ತಿರುವ ವಾಣಿವಿಲಾಸ ಸಾಗರ!
1907ರಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದ್ದು, 135 ಅಡಿ ಎತ್ತರದ ಹೊಂದಿರುವ ಜಲಾಶಯ 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ. ಸಕಾ೯ರ ಕೋಡಿ ಬೀಳುವ ಬಗ್ಗೆ ಗೊತ್ತಿದ್ದರೂ ಕೂಡ ಹಲವು ಟಿಎಂಸಿ ನೀರನ್ನು ಹರಿಸುವ ಈ ರೀತಿ ಆದೇಶ ನೀಡಿರುವುದು ಸುತ್ತಮುತ್ತಲಿನ ರೈತರಿಗೆ ಹಷ೯ ತಂದಿದ್ದು, ಜಲಾಶಯ ಸಂಪೂಣ೯ ತುಂಬಿಕೊಂಡು ಪ್ರವಾಸಿಗರನ್ನು ಆಕಷಿ೯ಸುತ್ತಿದೆ. ವೇದಾವತಿ ನದಿಗೆ ನಿಮಿ೯ಸಿರುವ ಈ ಜಲಾಶಯ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣವಾಗಿದೆ. ಕೋಡಿ ಬೀಳುತ್ತಿರುವ ಈ ಸಮಯದಲ್ಲಿ ರೈತರು ಉತ್ಸುಕತೆಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಈ ಬಾರಿಯ ಉತ್ತಮ ಫಸಲಿನ ಆಶಯದಲ್ಲಿದ್ದಾರೆ.
ಧನ್ಯವಾದಗಳು
****** ಅಂತ್ಯ ******
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು
ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ
ರೈತರ ಸೇವೆಯಲ್ಲಿ ನಿಮ್ಮ
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ