RTC/pahani check::ನಿಮ್ಮ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಕುಳಿತಲ್ಲಿಯೇ ಚೆಕ್ ಮಾಡಿ! ವಕ್ಫ್ ಮಂಡಳಿಯ ಪಾಲಾಗಿದೆ ಸಾವಿರಾರು ಎಕರೆ ಭೂಮಿ!
ಇತ್ತಿಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ನೀವೆಲ್ಲ ನೋಡಿರುವಂತೆ ರೈತರ ಹೆಸರಿನಲ್ಲಿದ್ದ ಹಾಗೂ ದೇವಸ್ಥಾನ,
ಮಠಗಳ ಹೆಸರಿನಲ್ಲಿದ್ದ ಅದೆಷ್ಟೋ ಸಾವಿರಾರು ಎಕರೆ ಭೂಮಿ ಇದ್ದಕ್ಕಿದ್ದಂತೆ ವಕ್ಪ್ ಮಂಡಳಿ ಹೆಸರಿಗೆ ಬದಲಾಗುತ್ತಿದೆ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಂಡ್ಯ ಜಿಲ್ಲೆಯ ಮಹಾದೇವಪೂರ ಗ್ರಾಮದಲ್ಲಿ ಚಿಕ್ಕಮ್ಮ ಚಿಕ್ಕದೇವಿ ಎಂಬ ದೇವಸ್ಥಾನವು ಹಲವಾರು ವಷ೯ಗಳಿಂದ ಇದೆ.
ಸುತ್ತಮುತ್ತಲೂ ಯಾವುದೇ ಮುಸ್ಲಿಂಮರ ಭೂಮಿ ಇಲ್ಲ. ಮುಂಚೆ ಇದು ದೇವಸ್ಥಾನದ ಹೆಸರಿನ ಪಹಣಿಯನ್ನೇ ಹೊಂದಿತ್ತು. ಆದರೆ ಈಗ ವಕ್ಫ್ ಮಂಡಳಿ ಹೆಸರಿನಲ್ಲಿ ಪಹಣಿ ತೋರಿಸುತ್ತಿದೆ.
ವಿಜಯಪೂರದಲ್ಲೂ ಇಂತಹ ಘಟನೆಗಳು ನಡೆದಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂತಹ ಘಟನೆಗಳು ನಡೆದಿದ್ದು, ಒಂದೊಂದಾಗಿ ಹೊರಬರುತ್ತಿವೆ.
ಅಲ್ಲದೇ ಮಾಧ್ಯಮದಲ್ಲಿನ ಈ ಸುದ್ದಿಗಳನ್ನು ನೋಡಿ ತಮ್ಮ ಪಹಣಿ ತಮ್ಮ ಹೆಸರಿನಲ್ಲಿಯೇ ಇದೆಯೋ ಇಲ್ಲವೋ ಎಂದು ಸುಮ್ಮನೆ ಚೆಕ್ ಮಾಡಿಕೊಂಡ ಹಲವರಿಗೂ ಕೂಡ ಶಾಕ್ ಆಗಿದ್ದು,
ಹಿಂದೂ ಮುಸ್ಲಿಂ ಎನ್ನದೇ ಅವರ ಭೂಮಿಯು ಸಹ ವಕ್ಫ್ ಮಂಡಳಿಯ ಪಾಲಾಗಿರುವುದು ಗೊತ್ತಾಗಿದೆ. ಇದರಿಂದಾಗ್ ಜನ ರೊಚ್ಚಿಗೇಳುತ್ತಿದ್ದಾರೆ.
ಸಧ್ಯದಲ್ಲಿಯೇ 84000 ಎಕರೆ ವಕ್ಫ್ ವಶಕ್ಕೆ!
ಇನ್ನೂ ವಕ್ಫ್ ನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚಿವ ಜಮೀರ್ ಅಹ್ಮದ್ ರವರು ರಾಜ್ಯದಲ್ಲಿ ವಕ್ಫ್ ಒಟ್ಟು 1.12 ಲಕ್ಷ ಎಕರೆ ಆಸ್ತಿ ಹೊಂದಿದ್ದು,
ಸಧ್ಯ ಮಂಡಳಿ ಬಳಿ ಕೇವಲ 23000 ಎಕರೆ ಆಸ್ತಿ ಇದೆ. ಉಳಿದ ಆಸ್ತಿಯನ್ನು ಒತ್ತುವರಿ ಮಾಡಲಾಗಿದ್ದು, ಇದೀಗ ಒತ್ತುವರಿ ತೆರವು ಮಾಡಲಾಗುತ್ತಿದ್ದು,
ಇನ್ನು 84000 ಎಕರೆ ಭೂಮಿಯನ್ನು ವಕ್ಫ್ ಮಂಡಳಿ ವಶಕ್ಕೆ ಪಡೆಯಲಾಗುವುದು ಎಂಬ ಹೇಳಿಕೆ ನೀಡಿದ್ದಾರೆ.
ಇದರಲ್ಲಿ ಸ್ವಲ್ಪ ಮಟ್ಟಿಗೆ ಮಂಡಳಿಯ ಭೂಮಿ ಒತ್ತುವರಿಯಾಗಿರಬಹುದು ಆದರೆ ಹಲವು ದಶಕಗಳಿಂದ ರೈತರ, ದೇವಸ್ಥಾನ, ಮಠಗಳ ಹೆಸರಿನಲ್ಲಿರುವ ಭೂಮಿ ಯಾವಾಗ ವಕ್ಫ್ ಆಸ್ತಿಯಾಗಿತ್ತು,
ಯಾವುದೇ ತನಿಖೆಯಿಲ್ಲದೇ ಹೇಗೆ ಮಂಡಳಿ ಅದನ್ನು ಕಿತ್ತುಕೊಳ್ಳಲು ಸಕಾ೯ರ ಅನುವು ಮಾಡಿಕೊಡುತ್ತಿದೆ ಎಂಬುದೇ ಚಿಂತೆಯ ವಿಷಯವಾಗಿದೆ.
ವಕ್ಫ್ ಅತಿಕ್ರಮಣ ತಪ್ಪಿಸಲು ಕೇಂದ್ರಕ್ಕೆ ಯತ್ನಾಳ ಸಲಹೆ!
ಇದಕ್ಕೆ ವಿರೋಧ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ರವರು ಕೇಂದ್ರ ಸಕಾ೯ರಕ್ಕೆ ಒಂದು ಸಲಹೆ ನೀಡಿದ್ದು,
ವಕ್ಪ್ ಮಂಡಳಿಯ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗ ನೀವು ಕೂಡ ನಿಮ್ಮ ಜಮೀನು, ಮನೆಗಳ ಪಹಣಿಯನ್ನು
ನಿಮ್ಮ ಹೆಸರಿನಲ್ಲೇ ಇದೆಯೇ ಎಂದು ಚೆಕ್ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದ್ದು,
ಅದಕ್ಕಾಗಿ ನಾವು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಭೂಮಿಯ ಪಹಣಿ ಮಾಹಿತಿ ಪಡೆಯಿರಿ.
ಅದಕ್ಕಾಗಿ ನೀವು ಮೊದಲು ಭೂಮಿ ಪೋಟ೯ಲ್ ಗೆ ಭೇಟಿ ನೀಡಬೇಕು. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://landrecords.karnataka.gov.in/Service2/
*ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ
*ನಂತರ ನಿಮ್ಮ ಜಮೀನು ಅಥವಾ ಮನೆಯ ಸವೇ೯ ನಂಬರ್ ಹಾಕಿ ನಂತರ ಗೋ ಮೇಲೆ ಕ್ಲಿಕ್ ಮಾಡಿ. ( ಒಂದೇ ಬಾರಿಗೆ ಬರದಿದ್ದರೆ 2-3 ಬಾರಿ ಕ್ಲಿಕ್ ಮಾಡಿ ನಂತರ ಮುಂದಿನ ಆಯ್ಕೆ ಓಪನ್ ಆಗುತ್ತದೆ)
*ನಂತರ surnoc ಎಂಬ ಆಯ್ಕೆಯಿದ್ದು, ಅದರಲ್ಲಿರುವ *(ಸ್ಟಾರ್) ಚಿನ್ಹೆಯನ್ನು ಸೆಲೆಕ್ಟ್ ಮಾಡಿ
*ನಂತರ ಹಿಸ್ಸಾ ನಂಬರ್ ಹಾಕಿ ಅಥವಾ ಅಲ್ಲಿಯೂ ಕೂಡ *(ಸ್ಟಾರ್) ಚಿನ್ಹೆಯಿದ್ದರೆ ಅದನ್ನೇ ಸೆಲೆಕ್ಟ್ ಮಾಡಿ
*ನಂತರ ಪಿರಿಯಡ್( ಅವಧಿ) ಯನ್ನು ಸೆಲೆಕ್ಟ್ ಮಾಡಿ ಹೆಚ್ಚಾಗಿ ಪ್ರಸ್ತುತ ವಷ೯ವನ್ನೇ ಆಯ್ಕೆಯಲ್ಲಿ ಕೊಟ್ಟಿರುತ್ತಾರೆ. ಅದನ್ನು ಸೆಲೆಕ್ಟ್ ಮಾಡಿ
*ನಂತರ ಫೆಚ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿ ಆಗ ನೀವು ಹಾಕಿರುವ ಸವೇ೯ ನಂಬರ್ ನ ಭೂಮಿ ಯಾರ ಹೆಸರಿನಲ್ಲಿದೆ ಎಂಬ ಸಂಪೂರ್ಣ ವಿವರ ನಿಮಗೆ ತೋರಿಸುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ