"Agriculture is our CULTURE"

PM Kisan Samman Nidhi Yojane::ಪಿಎಂ ಕಿಸಾನ್ 19 ನೇ ಕಂತಿನ ಹಣ ಯಾವಾಗ ಬರುತ್ತೆ? ಸ್ಟೇಟಸ್ ಚೆಕ್ ಮಾಡೋದು ಹೇಗೆ?

ದೇಶದ ಎಲ್ಲಾ ರೈತರ ಆರ್ಥಿಕ ಸಂಕಷ್ಟಕ್ಕೆ ಸಹಾಯಕವಾಗುವಂತೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 6,000ಗಳನ್ನು ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿಗಳಂತೆ ಕೊಡಲಾಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ ಈಗಾಗಲೇ ರೈತರಿಗೆ 18 ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದ್ದು ಪ್ರಸ್ತುತ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಈ ಯೋಜನೆ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಉತ್ತಮ ದಾರಿ ಒದಗಿಸಿದ್ದು, ಸರ್ಕಾರ ಜಾರಿಗೆ ತಂದಿರುವ ನೇರ ನಗದು ವರ್ಗಾವಣೆಯಿಂದಾಗಿ ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವುದರಿಂದ

ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರದ ಅನುದಾನ ನೇರವಾಗಿ ರೈತರ ಖಾತೆ ಸೇರುತ್ತಿದೆ.

ಈಗಾಗಲೇ ರೈತರು ಯಶಸ್ವಿಯಾಗಿ 18 ಕಂತಿನ ಹಣವನ್ನು ಪಡೆದಿದ್ದು, ಇದೀಗ 19ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ಸಿದ್ದವಾಗಿದೆ.

ನೀವು ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ಆಗಿದ್ದಲ್ಲಿ ನಿಮಗೂ ಕೂಡ 19ನೇ ಕಂತಿನ ಹಣ ಸದ್ಯದಲ್ಲಿಯೇ ಬರಬಹುದು.

ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಕೂಡಲೇ ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ

ಪಿಎಂ ಕಿಸಾನ್ (PM kisan) ಹಣ ಬಂದಿರುವದನ್ನು ಚೆಕ್ ಮಾಡುವುದು ಹೇಗೆ?

*ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/BeneficiaryStatus_New.aspx

*ಅಲ್ಲಿ ನಿಮ್ಮ ಅರ್ಜಿ ಸಂಖ್ಯೆ ಹಾಕಿ ಕೊಟ್ಟಿರುವ ಕ್ಯಾಪ್ಚಾ ಎಂಟರ್ ಮಾಡಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ

Pic 1: application id

* ನಂತರ ಓಟಿಪಿ ಹಾಕಿ ಸಬ್ಮಿಟ್ ಮಾಡಿದರೆ ನಿಮ್ಮ ಅಜಿ೯ಯ ಸ್ಥಿತಿ ಹಾಗೂ ನಿಮಗೆ ಬಂದಿರುವ ಕಂತುಗಳ ಹಣದ ಸ್ಥಿತಿ ನಿಮಗೆ ಗೊತ್ತಾಗುತ್ತದೆ.

ಇನ್ನು ಕೆಲವು ರೈತರಿಗೆ ವಿವಿಧ ಕಾರಣಗಳಿಂದ 19ನೇ ಕಂತಿನ ಹಣ ಬಂದಿರ್ಲಿಕ್ಕಿಲ್ಲ ಅಥವಾ 18ನೇ ಕಂತಿನ ಹಣವು ಕೂಡ ಬಂದಿಲ್ಲವಾದರೆ ಅದಕ್ಕೆ ಕೆಲವೊಂದು ಕ್ರಮಗಳನ್ನು ನೀವು ಅನುಸರಿಸದಿರುವುದೇ ಕಾರಣವಾಗಿರುತ್ತದೆ. ಅವುಗಳೇನೆಂದರೆ,

1. ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ ಕಾಡ್೯ ನೊಂದಿಗೆ ಲಿಂಕ್ ಮಾಡಿಸಬೇಕು

2. ಬ್ಯಾಂಕ್ ನಲ್ಲಿ ಇ- ಕೆವೈಸಿ ಮಾಡಿಸಬೇಕು

3. ರೈತ ಕೇಂದ್ರದಲ್ಲಿ ಭೂ ಪರಿಶೀಲನೆ ಮಾಡಿಸಬೇಕು

4.ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ವೆಬ್ಸೈಟ್ ನಲ್ಲಿಯೂ ಕೂಡ ಇ- ಕೆವೈಸಿ ಮಾಡಿಸಬೇಕು

ಹೀಗೆ ಮಾಡಿಸಿದಲ್ಲಿ ಯಾವುದೇ ತೊಂದರೆಯಿಲ್ಲದೇ ಹಾಗೂ ಮಧ್ಯವತಿ೯ಗಳ ಕಾಟವಿಲ್ಲದೇ ನಿಮ್ಮ ಹಣ ನಿಮಗೆ ನೇರವಾಗಿ ನಿಮ್ಮ ಖಾತೆಗೆ ಬಂದು ಸೇರುತ್ತದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"