Integrated Farming :: ಕೃಷಿಯ ಜೊತೆಗೆ ಈ ಕೆಲಸ ಮಾಡಿ!! ಲಕ್ಷಾಂತರ ರೂಪಾಯಿ ಆದಾಯ!!
ಈಗಿನ ಕಾಲದಲ್ಲಿ ಯಾವುದೋ ಒಂದು ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ. ಅದರಲ್ಲೂ ನಮ್ಮ ದೇಶದಲ್ಲಿ ಕೃಷಿಯನ್ನು ನಂಬಿ ಜೀವನ ಸಾಗಿಸಲು ಸಾಧ್ಯವೇ ಇಲ್ಲ ಏಕೆಂದರೆ ಯಾವಾಗ ಬರಗಾಲ ಬರುತ್ತದೆ ಯಾವಾಗ ನೆರೆಹಾವಳಿ ಬರುತ್ತದೆ ಎಂದು ಹೇಳಲಾಗುವುದಿಲ್ಲ.
ಹಾಗೆಂದು ಕೃಷಿ ಮಾಡಲೇಬಾರದು ಎಂದಲ್ಲ ಕೃಷಿಯೊಂದಿಗೆ ಹೈನುಗಾರಿಕೆ ರೇಷ್ಮೆ ಸಾಕಾಣಿಕೆ ಇತ್ಯಾದಿ ಕೃಷಿಯೇತರ ಚಟುವಟಿಕೆಗಳನ್ನು ಕೂಡ ಮಾಡಬೇಕಾಗಿರುವುದು ಅನಿವಾರ್ಯ. ಈ ರೀತಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಒಟ್ಟಿಗೆ ನಡೆಸುವುದನ್ನು ಸಮಗ್ರ ಕೃಷಿ ಎನ್ನಬಹುದು.
ಸಮಗ್ರ ಕೃಷಿ ಎಂದರೆ ಕೃಷಿಯೊಂದಿಗೆ ಇತರೆ ಆಥಿ೯ಕವಾಗಿ ಸಹಕಾರಿಯಾಗುವಂತಹ ಚಟುವಟಿಕೆಗಳನ್ನು ಮಾಡುವುದು.
ಅದರಲ್ಲಿ ಹೈನುಗಾರಿಕೆ ಮುಖ್ಯವಾಗಿದ್ದರೂ ಕೂಡ ಅದನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳನ್ನು ಕೂಡ ಮಾಡಬಹುದು. ಆದರೆ ಈ ಬಗ್ಗೆ ಹೆಚ್ಚಿನ ರೈತರಿಗೆ ಮಾಹಿತಿ ಇಲ್ಲ.
ಆದ್ದರಿಂದಲೇ ನಾವಿಂದು ಸಮಗ್ರ ಕೃಷಿಯಲ್ಲಿ ಮಾಡಬಹುದಾದ ವಿಶೇಷ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದ್ದೇವೆ.
ರೈತರಿಗೆ ಕೇವಲ ಹೈನುಗಾರಿಕೆ ಮಾತ್ರವಲ್ಲ, ಇದು ಕೂಡ ಆಪ್ಷನ್ ಇದೆ!
ದನಕರು, ಆಡು, ಮೇಕೆ, ಕೋಳಿ ಸಾಕಾಣಿಕೆ ಮಾಡಿ ಕೃಷಿಯೇತರವಾಗಿ ಆದಾಯ ಪಡೆಯುವ ರೈತರು ಸಾಮಾನ್ಯವಾಗಿ ಸಿಗುತ್ತಾರೆ
ಆದರೆ ನಾಯಿಗಳನ್ನು ಸಾಕಾಣಿಕೆ ಮಾಡಿಯೂ ಕೂಡ ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು. ಈ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದೇವೆ.
ಹಾಸನ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬಲಾದರೆ ಗ್ರಾಮದ ಮಂಜೇಗೌಡ ಎಂಬುವರು ಈ ರೀತಿಯ ನಾಯಿ ಸಾಕಾಣಿಕೆ ಮಾಡವುದರೊಂದಿಗೆ ಸಮಗ್ರ ಕೃಷಿ ನಡೆಸುತ್ತಿದ್ದು, ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.
ಇವರ ಬಳಿ ಗ್ರೇಟ್ ಡೇನ್ ಹಾಗೂ ಡ್ಯಾಚ್ಶಂಡ್ ಡಾಗ್ ಬ್ರೀಡ್ ಗಳು ಲಭ್ಯವಿದ್ದು, ಈ ನಾಯಿಗಳ ಬ್ರೀಡಿಂಗ್ ಮಾಡಿ ಮಾರಾಟ ಮಾಡುತ್ತಾರೆ.
ಚರುಕು, ತುಂಬಾ ಸ್ಟ್ರಾಂಗ್ ಈ ನಾಯಿ ತಳಿ!
ಗ್ರೇಟ್ ಡೇನ್ ನಾಯಿಯು ತುಂಬಾ ಚುರುಕಾದ ಹಾಗೂ ಬಲಶಾಲಿಯಾಗಿದ್ದು, ಮನೆ ಕಾವಲು ಹಾಗೂ ತೋಟದ ಕಾವಲಿಗೆ ಹೇಳಿ ಮಾಡಿಸಿದ ನಾಯಿಯಾಗಿದ್ದು, 10 ಜನರನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ.
ಈ ನಾಯಿಯ ನಿವ೯ಹಣೆಯು ಸ್ವಲ್ಪ ವೆಚ್ಚದಾಯಕವಾಗಿದ್ದರೂ ಕೂಡ ಮನೆ ಊಟದೊಂದಿಗೆ ಪೆಡಿಗ್ರಿ ಹಾಗೂ ವಾರಕ್ಕೆರಡು ಬಾರಿ ಮಾಂಸ ಕೊಟ್ಟರೂ ಸಾಕಾಗುತ್ತದೆ.
ಈ ನಾಯಿಗೆ ವಷ೯ಕ್ಕೊಮ್ಮೆ ವ್ಯಾಕ್ಸಿನ್ ಹಾಕಿಸುವುದರೊಂದಿಗೆ ಅದರ ಆರೋಗ್ಯದ ಕಾಳಜಿ ಮಾಡಬೇಕಾಗುತ್ತದೆ. ಈ ನಾಯಿಯು ಒಂದು ಬಾರಿಗೆ 5 ರಿಂದ 10 ಮರಿಗಳನ್ನು ಹಾಕುತ್ತದೆ.
ಅಂದಾಜು 5 ಮರಿಗಳನ್ನು ಹಾಕಿದರೂ ಕೂಡ ಒಂದು ನಾಯಿ ಮರಿಯ ಬೆಲೆ ರೂ. 10000 ಆಗಿದ್ದು, ಒಂದು ಬಾರಿಗೆ 50000 ರೂಪಾಯಿಗಳ ಆದಾಯ ಬರುತ್ತದೆ.
ಮಕ್ಕಳ ಅಚ್ಚುಮೆಚ್ಚಿನ ಡ್ಯಾಚ್ಶಂಡ್ ಬ್ರೀಡ್!
ಇನ್ನು ಡ್ಯಾಚ್ಶಂಡ್ ಸಾಧು ನಾಯಿಯಾಗಿದ್ದು, ಕುಳ್ಳ ಜಾತಿಯದಾಗಿರುತ್ತದೆ. ಇದು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಅತೀ ಪ್ರೀತಿಯ ನಾಯಿಯಾಗುತ್ತದೆ. ಅಲ್ಲದೇ ಇದರ ನಿವ೯ಹಣೆ ಕೂಡ ತುಂಬಾ ಸುಲಭ.
ಯಾವುದೇ ರೀತಿಯ ವೆಚ್ಚದ ಚಿಂತೆಯಿರುವುದಿಲ್ಲ. ಈ ನಾಯಿಯು ಕೂಡ ಒಂದು ಬಾರಿಗೆ 5 ಕ್ಕಿಂತ ಹೆಚ್ಚು ಮರಿಗಳಿಗೆ ಜನ್ಮ ನೀಡುತ್ತದೆ.
ಅವುಗಳ ಬೆಲೆ ಕನಿಷ್ಟ 10000 ರೂ. ಗಳಾಗಿದ್ದು, ಸಾಕಾಣಿಕೆದಾರರಿಗೆ ಒಂದು ಬಾರಿಗೆ 50000 ರೂ. ಗಳ ಆದಾಯ ಸಿಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇವುಗಳು ಮಾತ್ರವಲ್ಲದೇ ಲ್ಯಾಬ್ರಡಾರ್, ಬಾಕ್ಸರ್, ಪಗ್ಸ್, ಪಮೋರಿಯನ್, ಡಾಬರ್ ಮ್ಯಾನ್ ಹೀಗೆ ಹತ್ತಾರು ತಳಿಯ ನಾಯಿಗಳು ಜನರಿಗೆ ತುಂಬಾ ಇಷ್ಟವಾಗುತ್ತವೆ.
ನಗರಗಳಲ್ಲಂತೂ ನಾಯಿ ಸಾಕಾಣಿಕೆ ಫ್ಯಾಶನ್ ಆಗಿದ್ದು, ಪ್ರತಿಯೊಂದು ಮನೆಯಲ್ಲಿಯೂ ನಾಯಿಗಳು ಇದ್ದೇ ಇರುತ್ತವೆ.
ಕೇವಲ ಕೃಷಿ ಮಾಡುವ ಬದಲು ಹೈನುಗಾರಿಕೆ, ನಾಯಿ ಸಾಕಾಣಿಕೆ ಹೀಗೆ ಸಮಗ್ರ ಕೃಷಿ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು.
ನಿಮಗೆ ನಾಯಿ ಬ್ರೀಡಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಕೆಳಗೆ ಮಂಜೇಗೌಡ ಅವರ ವಿಳಾಸ ಹಾಗೂ ಮೊಬೈಲ್ ನಂಬರ್ ಇದ್ದು, ಅವರನ್ನು ಸಂಪಕಿ೯ಸಬಹುದು. ಅವರು ನಾಯಿಗಳನ್ನು ಮಾರಾಟ ಕೂಡ ಮಾಡುತ್ತಾರೆ.
ರೈತರ ವಿವರ:
ಮಂಜೇಗೌಡ
ಸಾ:ಬಲಾದರೆ
ತಾ: ಚನ್ನರಾಯಪಟ್ಟಣ ಜಿ: ಹಾಸನ
ಮೊಬೈಲ್ ನಂಬರ್: 8553167958
ಧನ್ಯವಾದಗಳು
*********ಅಂತ್ಯ************
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರು ಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು
ಕಬ್ಬರಿ ಮತ್ತು ತೆಂಗಿನಕಾಯಿ ಮಾರು ಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ – ( ಕ್ಲಿಕ್ ಮಾಡಿ / ಇಲ್ಲಿ ಕ್ಲಿಕ್ ಮಾಡಿ)
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ