PM Kisan ::ಪಿಎಂ ಕಿಸಾನ್ ಅನಹ೯ರಿಗೆ ಸಿಗಲ್ಲ ಹಣ! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಾಂತರ ರೈತರು ಸರ್ಕಾರದಿಂದ ವಾರ್ಷಿಕವಾಗಿ 6,000 ರೂ. ಗಳನ್ನು 3 ಕಂತುಗಳಲ್ಲಿ 2000 ರೂ ಗಳಂತೆ ಪಡೆಯುತ್ತಿದ್ದಾರೆ. ಇದುವರೆಗೂ ಒಟ್ಟು 18 ಕಂತುಗಳಲ್ಲಿ ಕೇಂದ್ರ ಸಕಾ೯ರ ರೈತರಿಗೆ ಹಣ ಹಾಕಿದೆ.
ಆದರೆ ಈ ಯೋಜನೆಯು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ವಗ೯ದ ರೈತರಿಗೆ ಸಹಾಯಕವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸಕಾ೯ರ ಜಾರಿಗೆ ತಂದಿದೆ. ಆದರೆ ಕೆಲವು ರೈತರು ಈ ಯೋಜನೆಗೆ ಅಹ೯ರಾಗಿಲ್ಲದಿದ್ದರೂ ಕೂಡ ನಕಲಿ ದಾಖಲೆ ಬಳಸಿ ಅಥವಾ ವಾಮ ಮಾಗ೯ದ ಮೂಲಕ ಸಕಾ೯ರದ ಕಣ್ಣಿಗೆ ಮಣ್ಣೆರೆಚಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದರಿಂದ ಸಕಾ೯ರಕ್ಕೆ ಆಥಿ೯ಕವಾಗಿ ತುಂಬಾ ನಷ್ಟವಾಗುತ್ತಿದ್ದು, ಇದನ್ನು ತಡೆಯಲು ಸಕಾ೯ರ ಹಲವು ಕ್ರಮಗಳನ್ನು ಕೈಗೊಂಡಿದೆ.
ನಕಲಿ ರೈತರಿಗೆ ಸಿಗಲ್ಲ ಹಣ!
ಇತ್ತೀಚೆಗೆ ರಾಜ್ಯ ಸಕಾ೯ರ ನಕಲಿ ಬಿಪಿಎಲ್ ಕಾಡ್೯ಗಳನ್ನು ರದ್ದು ಮಾಡಲು ಮುಂದಾಗಿರುವಂತೆ ಕೇಂದ್ರ ಸಕಾ೯ರವು ಕೂಡ ನಕಲಿ ಪಿಎಂ ಕಿಸಾನ್ ಫಲಾನುಭವಿಗಳನ್ನು ಗುರುತಿಸಿ ಯೋಜನೆಯಿಂದ ಕೈಬಿಡಲಾಗುತ್ತಿದೆ. ಹಾಗಾಗಿ ನಿಮ್ಮ ಹೆಸರು ಯೋಜನೆಯಲ್ಲಿದೆಯೇ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳುವುದು ತುಂಬಾ ಮುಖ್ಯ
step 1.ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಲಿಸ್ಟ್ ಚೆಕ್ ಮಾಡಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/Rpt_BeneficiaryStatus_pub.aspx
step 2. ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಸೆಲೆಕ್ಟ್ ಮಾಡಿ ನಂತರ ಗೆಟ್ ರಿಪೋಟ್೯ ಮೇಲೆ ಕ್ಲಿಕ್ ಮಾಡಿ ಆಗ ಲಿಸ್ಟ್ ಕಾಣಿಸಿಕೊಳ್ಳುತ್ತೆ. ಅಲ್ಲಿ ನಿಮ್ಮ ಹೆಸರನ್ನು ಹುಡುಕಬಹುದು
ಈ ಲಿಸ್ಟ್ ನಲ್ಲಿ ಹೆಸರಿರುವವರಿಗೆ ಮಾತ್ರ ಮುಂದಿನ ಕಂತಿನ ಹಣ ಬರುತ್ತದೆ. ಇಲ್ಲವಾದಲ್ಲಿ ಮುಂದಿನ ಕಂತಿನ ಹಣ ಸಿಗುವುದಿಲ್ಲ. ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ, ಕೆವೈಸಿಯಿಂದ ಅಥವಾ ಇನ್ನಾವುದೋ ಕಾರಣದಿಂದ ನಿಮ್ಮ ಹೆಸರು ಕೈಬಿಟ್ಟು ಹೋಗಿರಬಹುದು. ಹಾಗಾದಾಗ ನೀವು ಮಾಹಿತಿಯನ್ನು ಕೃಷಿ ಇಲಾಖೆಗೆ ಸಲ್ಲಿಸಿದಲ್ಲಿ ಅವರು ಪರಿಹಾರ ಏನೆಂಬುದನ್ನು ತಿಳಿಸುತ್ತಾರೆ.
ಈ ಕೆಲಸ ಮಾಡದಿದ್ದರೆ ಪಿಎಂ ಕಿಸಾನ್ ಹಣ ಬರಲ್ಲ!
ಆ ಲಿಸ್ಟ್ ನಲ್ಲಿ ಯಾರ ಹೆಸರಿಲ್ಲವೋ ಕೂಡಲೇ ನೀವು ಬ್ಯಾಂಕ್ ಗೆ ಹೋಗಿ ಇ-ಕೆವೈಸಿ ಮಾಡಿಸಿ ಆಧಾರ್ ಸೀಡಿಂಗ್ ಮಾಡಿಸಿ. ನಂತರದಲ್ಲಿ ನಿಮಗೆ ಪಿಎಂ ಕಿಸಾನ್ ನ ಮುಂದಿನ 19 ನೇ ಕಂತಿನ ಹಣ ಜಮೆಯಾಗುವುದು
18 ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡುವುದು ಹೇಗೆ?
step 1: ಅದಕ್ಕಾಗಿ ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/BeneficiaryStatus_New.aspx
step 2: ನಂತರ ಓಪನ್ ಆಗುವ ಪೇಜ್ ನಲ್ಲಿ ನೀವು ಈ ಯೋಜನೆಗೆ ರಿಜಿಸ್ಟರ್ ಮಾಡಿದಾಗ ಕೊಟ್ಟಿರುವ ರಿಜಿಸ್ಟರ್ ನಂಬರ್ ನ್ನು ಹಾಕಬೇಕು.
*ನಿಮಗೆ ರಿಜಿಸ್ಟರ್ ನಂಬರ್ ಗೊತ್ತಿಲ್ಲದಿದ್ದರೆ ಅಲ್ಲಿಯೇ ಮೇಲೆ ಕಾಣುವ ನೋ ಯುವರ್ ರಿಜಿಸ್ಚರ್ ನಂಬರ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಿ ನಂತರ ಬರುವ ಓಟಿಪಿ ಎಂಟರ್ ಮಾಡಿ ಸಬ್ಮಿಟ್ ಮಾಡಿದರೆ ನಿಮ್ಮ ರಿಜಿಸ್ಟರ್ ನಂಬರ್ ಸಿಗುತ್ತದೆ
step 3: ಅದನ್ನು ಇಲ್ಲಿ ಹಾಕಿ ಕೊಟ್ಟಿರುವ ಕ್ಯಾಪ್ಚಾ ಎಂಟರ್ ಮಾಡಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ ಬಂದಿರುವ ಓಟಿಪಿ ಎಂಟರ್ ಮಾಡಿದಾಗ ನಿಮ್ಮ 18 ನೇ ಕಂತಿನ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ