Flood relief Fund:: ಬೆಳೆ ಹಾನಿ ತಾತ್ಕಾಲಿಕ ಪರಿಹಾರ ಜಮೆ! ಈ ಕೆಲಸ ಮಾಡಿಲ್ಲ ಅಂದ್ರೆ ನಿಮಗೆ ಹಣ ಬರಲ್ಲ! ಈ ಲಿಸ್ಟ್ ಹೆಸರಿದೆಯಾ ಕೂಡಲೇ ಚೆಕ್ ಮಾಡಿ!
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ವಾಡಿಕೆ ಗಿಂತ ಹೆಚ್ಚಾಗಿ ಮಳೆಯಾದ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಬಂದು ಜಮೀನುಗಳಲ್ಲಿ ನೀರು ನಿಂತು ಸಾಕಷ್ಟು ರೈತರ ಜಮೀನುಗಳಲ್ಲಿನ ಬೆಳೆ ಹಾನಿಯಾಗಿತ್ತು.
ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರವು ಬೆಳೆ ಹಾನಿ ಪರಿಹಾರವನ್ನು ಘೋಷಿಸಿತ್ತು ಕೂಡಲೇ ಸಮೀಕ್ಷೆ ನಡೆಸಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಕೊಡುವ ಬಗ್ಗೆ ಕ್ರಮ ಕೈಗೊಂಡಿತ್ತು.
ತಾತ್ಕಾಲಿಕ ಬೆಳೆ ಹಾನಿ ಪರಿಹಾರ( flood relief fund) 2000/- ಜಮೆ!
ಇದೀಗ ರೈತರಿಗೆ ಬೆಳೆ ಹಾನಿಯ ತಾತ್ಕಾಲಿಕ ಪರಿಹಾರವಾಗಿ ರೂ.2000ಗಳನ್ನು ರೈತರ ಖಾತೆಗಳಿಗೆ ಜಮೆಗೊಳಿಸಲಾಗಿದ್ದು,
ಇನ್ನು ಕೆಲವು ರೈತರಿಗೆ ಈ ಪರಿಹಾರ ಮತ್ತು ಸಿಕ್ಕಿಲ್ಲ ಏಕೆಂದರೆ ಕೆಲವು ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಲ್ಲ.
ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳ ಸಾವಿರಾರು ರೈತರಿಗೆ ಇನ್ನು ಬೆಳೆ ಹಾನಿ ಪರಿಹಾರ ಮೊತ್ತ ಜಮೆಯಾಗಿಲ್ಲ.
ಕೂಡಲೇ ರೈತರು ನಿಮ್ಮ ಬ್ಯಾಂಕಿಗೆ ಹೋಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿದಲ್ಲಿ
ನಿಮಗೆ ಬರಬೇಕಿರುವ ಬೆಳೆ ಹಾನಿ ಪರಿಹಾರ ಮೊತ್ತವಾದ 2000ಗಳನ್ನು ಜಮೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಹಣ ಜಮೆಯಾಗದಿರುವ ರೈತರ ಲಿಸ್ಟ್ ಪ್ರಕಟ! ಕೂಡಲೇ ಆಧಾರ್ ಲಿಂಕ್ ಮಾಡಿಸಿ!
ಆದರೆ ಮೊದಲಿಗೆ ಆಧಾರ ಕಾಡ್೯ ಲಿಂಕ್ ಆಗದಿರುವ ರೈತರ ಲಿಸ್ಟ್ ನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕೃಷಿ ಇಲಾಖೆ ಪ್ರಕಟಿಸಿದ್ದು, ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ.
ಅದರಲ್ಲಿ ಹೆಸರು ಇದ್ದರೆ ಕೂಡಲೇ ಬ್ಯಾಂಕಿಗೆ ಹೋಗಿ ನಿಮ್ಮ ಬ್ಯಾಂಕ್ ಖಾತೆ ನಿಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿ. ಅದಾದ ನಂತರ ನಿಮಗೆ ಬೆಳೆ ಪರಿಹಾರವನ್ನು ಜಮೆಗೊಳಿಸಲಾಗುತ್ತದೆ.
ರೈತರ ಲಿಸ್ಟ್ ಚೆಕ್ ಮಾಡುವುದು ಹೇಗೆ?
ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruitspmk.karnataka.gov.in/MISReport/AadharNotSeededReport.aspx
*ಆಗ ಜಿಲ್ಲೆಗಳ ಲಿಸ್ಟ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ

Pic 1: Select district
*ನಂತರ ನಿಮ್ಮ ತಾಲ್ಲೂಕಿನ ಮೇಲೆ ಕ್ಲಿಕ್ ಮಾಡಿ

Pic 2: Select taluk
*ನಂತರ ನಿಮ್ಮ ಹೋಬಳಿ ಮೇಲೆ ಕ್ಲಿಕ್ ಮಾಡಿ

Pic 3: Select hobli
*ನಂತರ ನಿಮ್ಮ ಗ್ರಾಮದ ಮೇಲೆ ಕ್ಲಿಕ್ ಮಾಡಿ

Pic 4: Select village
ಆಗ ನಿಮ್ಮ ಗ್ರಾಮದ ಲಿಸ್ಟ್ ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ಕೂಡಲೇ ಬ್ಯಾಂಕ್ ಗೆ ಹೋಗಿ ಆಧಾರ್ ಕಾಡ್೯ ಲಿಂಕ್ ಮಾಡಿ ಬನ್ನಿ
ಈ ರೈತರ ಲಿಸ್ಟ್ ಎಲ್ಲಾ ಜಿಲ್ಲೆಯ ಕೃಷಿ ಇಲಾಖೆಯ ಕಛೇರಿಗಳಲ್ಲಿ ಲಭ್ಯವಿದ್ದು, ನೀವು ಅಲ್ಲಿ ಹೋಗಿಯೂ ಕೂಡ ವಿಚಾರಿಸಬಹುದು.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ