Flood Relief Fund:: 3 ನೇ ಬೆಳೆಹಾನಿ ಪರಿಹಾರ ಜಮೆ! ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಈ ಬಾರಿಯ ಮುಂಗಾರು ಹಂಗಾಮು ರಾಜ್ಯದ ರೈತರಿಗೆ ಮತ್ತೆ ಶಾಕ್ ನೀಡಿದ್ದು, ರೈತರು ಮತ್ತೆ ಬೆಳೆ ಹಾನಿಗೆ ತುತ್ತಾಗಿದ್ದಾರೆ.
ಕಳೆದ ವರ್ಷ ದಶಕಗಳಲ್ಲಿಯೇ ಅತಿ ಹೆಚ್ಚು ಬರಗಾಲ ಅನುಭವಿಸಿ ಸೋತಿದ್ದ ರೈತರಿಗೆ ಈ ಬಾರಿಯಾದರೂ ವರುಣ ಕೃಪೆ ತೋರಿ ಉತ್ತಮ ಬೆಳೆ ಉತ್ಪನ್ನ ನೀಡಿ ಆಸರೆಯಾಗುತ್ತಾನೆ ಎಂದುಕೊಂಡರೆ ವರುಣನ ಅವಕೃಪೆ ತೋರಿದ್ದಾನೆ.
70 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿ(crop loss) !
ಹೌದು, ಕಳೆದ ವಷ೯ ಬರಗಾಲ ಉಂಟುಮಾಡಿದ್ದ ವರುಣದೇವ ಈ ಬಾರಿ ವಾಡಿಕೆ ಗಿಂತ ಅತಿ ಹೆಚ್ಚು ಮಳೆ ನೀಡಿ ನೆರೆಹಾವಳಿ ತಂದೊಡ್ಡಿದ್ದಾನೆ.
ಇದರಿಂದಾಗಿ ರೈತರು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು, ಮಳೆ ಹೆಚ್ಚಾಗಿ ಅನವಶ್ಯಕ ನೀರು ತೋಟದಲ್ಲಿ ನಿಂತಿದ್ದರಿಂದ ಸುಮಾರು 70 ಸಾವಿರ ಹೆಕ್ಟರ್ ಪ್ರದೇಶದಲ್ಲಿನ ಬೆಳೆ ಹಾನಿಗೊಳಗಾಗಿದೆ.
ಬೆಳೆಹಾನಿಗೆ ಸಿಕ್ಕ ಪರಿಹಾರ (relief fund) ಎಷ್ಟು?
ಬೆಳೆಹಾನಿ ಪರಿಹಾರ ಒದಗಿಸಲು ರಾಜ್ಯ ಸಕಾ೯ರವು ರಾಜ್ಯ ವಿಪತ್ತು ನಿಧಿಯಿಂದ ಹಣ ಬಳಕೆ ಮಾಡಿಕೊಳ್ಳುತ್ತಿದ್ದು, ಮಳೆಯಾಜಿ೯ತ ಬೆಳೆಗೆ ಎನ್ ಡಿಆರ್ ಎಫ್ ಮಾಗ೯ಸೂಚಿಯನ್ವಯ ಹಾಗೂ
ರಾಜ್ಯ ಸಕಾ೯ರದ ಹೆಚ್ಚುವರಿ ಪರಿಹಾರ ಸೇರಿ ಒಟ್ಟು 25000 ರೂ. ಗಳ ಪರಿಹಾರ ನೀಡಲಾಗುತ್ತಿದೆ.
ಇನ್ನು ಬಹುವಾಷಿ೯ಕ ಬೆಳೆಗೆ ಪರಿಹಾರ ಮೊತ್ತ ಹಾಗೂ ರಾಜ್ಯ ಸಕಾ೯ರದಿಂದ ಹೆಚ್ಚಿನ ಪರಿಹಾರ ಸೇರಿ ಒಟ್ಟು 28000 ರೂಗಳ ಪರಿಹಾರ ನೀಡಲಾಗುತ್ತಿದೆ.
ಬೆಳೆಹಾನಿ ಪರಿಹಾರ(relief fund) ದ ಸ್ಟೇಟಸ್ ನೋಡುವುದು ಹೇಗೆ?
*ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/PariharaPayment/
* ನಂತರ ಓಪನ್ ಆಗುವ ಪೇಜ್ ನಲ್ಲಿ ಎರಡು ಆಯ್ಕೆಗಳಿದ್ದು ಅದರಲ್ಲಿ ಆಧಾರ್ ಕಾರ್ಡ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ನಂತರ ಕ್ಯಾಲಾಮಿಟಿ ಟೈಪನಲ್ಲಿ ಫ್ಲಡ್ ಎಂದು ಆಯ್ಕೆ ಮಾಡಬೇಕು
*ನಂತರ ವಷ೯ವನ್ನು 2024-25 ಎಂದು ಆಯ್ಕೆ ಮಾಡಬೇಕು
*ನಂತರ ನಿಮ್ಮ ಆಧಾರ ಕಾಡ್೯ ನಂಬರ್ ಹಾಕಬೇಕು
*ನಂತರ ಕೊಟ್ಟಿರುವ ಕ್ಯಾಪ್ಚಾ ಎಂಟರ್ ಮಾಡಬೇಕು
*ನಂತರ ವಿವರಗಳನ್ನು ಪಡೆಯಲು ಫೆಚ್ ಡಿಟೇಲ್ಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು
*ಆಗ ನಿಮಗೆ ಯಾವ ಬ್ಯಾಂಕಿಗೆ ಎಷ್ಟು ಮೊತ್ತ ಜಮೆ ಆಗಿದೆ ಎಂದು ತೋರಿಸುತ್ತದೆ.
ಇದಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರವು ಬೆಳೆ ನಷ್ಟ ಪರಿಹಾರ ಸೇರಿದಂತೆ ನೆರೆಯಿಂದಾಗಿ ಹಾಳಾಗಿರುವ ರಸ್ತೆ, ಕುಸಿದ ಸೇತುವೆ ಮತ್ತು ಶಾಲಾ ಕಟ್ಟಡಗಳ ಮರು ನಿರ್ಮಾಣಕ್ಕಾಗಿ ಆಯಾ ಜಿಲ್ಲೆಗಳ ಡಿಸಿಗಳ ಖಾತೆಯಲ್ಲಿರುವ ಒಟ್ಟು 767 ಕೋಟಿ ರೂ. ಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು,
ಇದರೊಂದಿಗೆ ರಾಜ್ಯ ವಿಪತ್ತು ನಿಧಿಯಿಂದ 300 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸಕಾ೯ರದಿಂದಲೂ ಈಗಾಗಲೇ ಅನುದಾನ ಬಂದಿದ್ದು, ರೈತರಿಗೆ ಈಗಾಗಲೇ ಬೆಳೆಹಾನಿ ಪರಿಹಾರವನ್ನು ಜಮೆಗೊಳಿಸಲಾಗಿದೆ.
ನೀವು ಕೂಡ ನೆರೆಯಿಂದಾಗಿ ಬೆಳೆ ಹಾನಿ ಅನುಭವಿಸಿದ್ದಲ್ಲಿ ಅದನ್ನು ಸಕಾ೯ರದ ಗಮನಕ್ಕೆ ತಂದು ಅಜಿ೯ ಹಾಕಿದ್ದಲ್ಲಿ,
ಸಕಾ೯ರವು ಸಮೀಕ್ಷೆ ಕೈಗೊಂಡಾಗ ನಿಮ್ಮ ಜಮೀನು ಕೂಡ ಸಮೀಕ್ಷೆಗೊಳಪಟ್ಟಿದ್ದಲ್ಲಿ ನಿಮಗೂ ಕೂಡ ಬೆಳೆಹಾನಿ ಪರಿಹಾರ ಬಂದಿರುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ