"Agriculture is our CULTURE"

BPL Ration Reapply :: ಬಿಪಿಎಲ್ ಮರುತಿದ್ದುಪಡಿ ಪ್ರಕ್ರಿಯೆ ಆರಂಭ! ಹೊಸ ರೇಷನ್ ಕಾಡ್೯ ಅಜಿ೯ ಸಧ್ಯಕ್ಕೆ ಇಲ್ಲ!

ರಾಜ್ಯದಲ್ಲಿ ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದು ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ಕೊನೆಗೂ ಅಂತ್ಯಕಂಡಿದ್ದು, ಬಡ ಜನರ ಆಕ್ರೋಶಕ್ಕೆ ತುತ್ತಾದ ಸರ್ಕಾರವು ತನ್ನ ಆದೇಶವನ್ನು ಹಿಂಪಡೆದುಕೊಂಡು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವುದನ್ನು ಎರಡು ದಿನಗಳ ಮುಂಚೆಯೇ ನಿಲ್ಲಿಸಿತ್ತು.

ಅಲ್ಲದೇ ಈಗಾಗಲೇ ರದ್ದುಗೊಂಡಿರುವ ಅರ್ಹ ಬಿಪಿಎಲ್ ಕಾರ್ಡ್ದಾರರ ಕಾಡು೯ಗಳನ್ನು ಮತ್ತೇ ಬಿಪಿಎಲ್ ಕಾರ್ಡ್ಗಳಾಗಿ ಮಾರ್ಪಡಿಸಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹಾಗೂ ಆಹಾರ ಇಲಾಖೆ ಸಚಿವರು ಹೇಳಿಕೆ ನೀಡಿದ್ದಾರೆ.

ಈ ಕಛೇರಿಗೆ ಭೇಟಿ ನೀಡಿ ರೇಷನ್ ಕಾಡ್೯(Ration card) ಪಡೆಯಿರಿ!

ಬಿಪಿಎಲ್ ಕಾಡ್೯ ಗಳಾಗಿ ಮರು ತಿದ್ದುಪಡಿ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ನೀವು ಅರ್ಹ ಬಿಪಿಎಲ್ ಕಾರ್ಡ್ ದಾರದಲ್ಲಿ

ಆದರೂ ಕೂಡ ನಿಮ್ಮ ಕಾರ್ಡ್ ರದ್ದಾಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆ ಕಛೇರಿ ಅಥವಾ ತಹಸಿಲ್ದಾರರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನಿಮ್ಮ ಬಿಪಿಎಲ್ ಕಾರ್ಡನ್ನು ಮರಳಿ ಪಡೆಯಬಹುದು.

ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಬದಲಾಯಿಸುವಾಗ ಅಥವಾ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವಾಗ ಕೆಲವೊಬ್ಬರ ಮಾಹಿತಿಯು ತಪ್ಪಾಗಿ ಜಿಎಸ್‌ಟಿ ಪಾವತಿದಾರರು ಅಥವಾ ಆದಾಯ ತೆರಿಗೆ ಪಾವತಿದಾರರು ಎಂದು ನಮೂದಾಗಿದ್ದು

ಅಂತಹ ಅವರ ಕಾರ್ಡುಗಳನ್ನು ರದ್ದು ಮಾಡಲಾಗಿದೆ ಆದರೆ ಇದೀಗ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಅವುಗಳನ್ನು ಮತ್ತೆ ಬಿಪಿಎಲ್ ಕಾರ್ಡ್ದಾರರಾಗಿ ಮರುತಿದ್ದುಪಡಿ ಮಾಡಲಾಗುತ್ತಿದೆ.

ಸಧ್ಯಕ್ಕೆ ಹೊಸ ರೇಷನ್ ಕಾಡ್೯(Ration card) ಗೆ ಅಜಿ೯ ತಗೋಳಲ್ಲ!

ಇನ್ನು ಹೊಸ ಕಾರ್ಡ್ಗಳನ್ನು ವಿತರಿಸುವುದು ಯಾವಾಗ ಎಂದು ಜನರು ಕೇಳುತ್ತಿದ್ದು, ಸದ್ಯಕ್ಕೆ ಸರ್ಕಾರದ ಮುಂದೆ ಈಗಿರುವ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಯೋಚನೆ ಮಾಡುತ್ತಿದ್ದು,

ಹಾಗಾಗಿ ಈಗ ತಿದ್ದುಪಡಿ ಆದ ಬಿಪಿಎಲ್ ಕಾಡುಗಳನ್ನು ಮರು ತಿದ್ದುಪಡಿ ಮಾಡಲಾಗುತ್ತದೆ. ನಂತರದಲ್ಲಿ ಎರಡು ವರ್ಷದಿಂದ ಅರ್ಜಿ ಸಲ್ಲಿಸಿರುವ ಹೊಸ ಕಾರ್ಡ್ಗಳನ್ನು ಪರಿಶೀಲಿಸಿ ಅರ್ಹ ಕುಟುಂಬದವರಿಗೆ ಬಿಪಿಎಲ್ ಕಾರ್ಡ್ಗಳನ್ನು ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಆದರೆ ಹೊಸದಾಗಿ ಈಗ ಯಾವುದೇ ಹೊಸ ಕಾಡು೯ಗಳಿಗೆ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ ಹಾಗೂ ತಿದ್ದುಪಡಿ ಅಜಿ೯ಗಳನ್ನು ಕೂಡ ಈಗ ತೆಗೆದುಕೊಳ್ಳುತ್ತಿಲ್ಲ. ಈ ಮರು ತಿದ್ದುಪಡಿ ಪ್ರಕ್ರಿಯ ಮುಗಿದ ನಂತರದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬಹುದು ಎಂದು ಹೇಳಲಾಗುತ್ತಿದೆ.

6 ತಿಂಗಳಿಂದ ರೇಷನ್ ತಗೊಂಡಿಲ್ವಾ? ಹಾಗಾದ್ರೆ ನಿಮ್ಮ ಕಾಡ್೯(Ration card) ಕ್ಯಾನ್ಸಲ್!

ಇನ್ನು ಕೆಲವರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದರೂ ಕೂಡ ಆರು ತಿಂಗಳಿಂದ ರೇಷನ್ ಪಡೆದಿರುವುದಿಲ್ಲ. ಹೀಗಿರುವ ಸಂದರ್ಭದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿರುವ ಸಾಧ್ಯತೆ ಇರುತ್ತದೆ.

ಈ ಕಾರಣದಿಂದ ರದ್ದಾಗಿರುವ ರೇಷನ್ ಕಾರ್ಡನ್ನು ಮತ್ತೆ ಪಡೆಯುವ ಬಗ್ಗೆ ಸರ್ಕಾರ ಯಾವುದೇ ರೀತಿಯ ಸೂಚನೆ ನೀಡಿಲ್ಲ. ಹಾಗಾಗಿ ನೀವು ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ

ನಿಮ್ಮ ರೇಷನ್ ಕಾರ್ಡ್ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ಗಳನ್ನು ನೀಡಿ ಯಾವ ಕಾರಣಕ್ಕೆ ಆರು ತಿಂಗಳಿಂದ ರೇಷನ್ ಅನ್ನು ಪಡೆದಿಲ್ಲ ಎಂಬ ಬಗ್ಗೆ ಮಾಹಿತಿಯನ್ನು ನೀಡಿದರೆ

ಬಹುಶಃ ಅವರು ನಿಮ್ಮ ರೇಷನ್ ಕಾರ್ಡನ್ನು ಮತ್ತೆ ಆಕ್ಟಿವೇಟ್ ಮಾಡಬಹುದು ಈ ಬಗ್ಗೆ ನೀವು ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಿರಿ.

ರೇಷನ್ ಕಾರ್ಡ್ ಹೆಸರು ಚೆಕ್ ಮಾಡಿಕೊಳ್ಳೋದು ಹೇಗೆ?

*ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

* ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ

Pic 1: Click on three lines

*ಅದರಲ್ಲಿ ಇ-ರೇಷನ್ ಕಾಡ್೯ ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ

Pic 2: E-Ration caed

* ನಂತರ ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ

Pic 3: Show village list

*ನಂತರ ಓಪನ್  ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ

Pic 4: To select district

* ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ರೇಷನ್ ಕಾಡ್೯ ಹೊಂದಿದ್ದಾರೋ ಅವರ ಹೆಸರು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ. ಅದರ ಮುಂದೆಯೇ ಬಿಪಿಎಲ್ ಕಾಡ್೯ ಮಾಹಿತಿ ಸಿಗುತ್ತದೆ.

Pic5: RC Card type

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚


"Agriculture is our CULTURE"