"Agriculture is our CULTURE"

Gruhalaxmi scheme:: 14 ಮತ್ತು 15 ನೇ ಕಂತಿನ ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ? ಗ್ಯಾರಂಟಿ ಯೋಜನೆ ಕ್ಯಾನ್ಸಲ್???

ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಅತ್ಯಂತ ಮುಖ್ಯ ಹಾಗೂ ತುಂಬಾ ಸುದ್ದಿಯಲ್ಲಿರುವ ಗ್ಯಾರಂಟಿ ಯೋಜನೆಯ ಎಂದರೆ ಅದು ಗೃಹಲಕ್ಷ್ಮಿ ಯೋಜನೆ.

ಈ ಯೋಜನೆ ಅಡಿಯಲ್ಲಿ ಮನೆಯ ಒಡತಿಯರಿಗೆ ಪ್ರತಿ ತಿಂಗಳ 2000 ರೂ. ಗಳನ್ನು ಜಮೆ ಮಾಡಲಾಗುತ್ತಿದ್ದು ಈಗಾಗಲೇ ಹದಿನಾಲ್ಕು ಕಂತುಗಳ ಹಣ ಮನೆ ಒಡತಿಯರ ಖಾತೆಗೆ ಜಮೆಯಾಗಿದೆ.

ಆದರೆ ಇತ್ತೀಚಿಗೆ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದರಿಂದ ಹಾಗೂ ಬಹಳಷ್ಟು ಜನರು ರೇಷನ್ ತೆಗೆದುಕೊಳ್ಳದೇ ಇರುವ ಕಾರಣ ರೇಷನ್ ಕಾಡ್೯ ಇನ್ಆ್ಯಕ್ಟಿವೇಟ್ ಆಗಿರಬಹುದು

ಇದರಿಂದ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಮುಂದೆ ಬರುವುದಿಲ್ಲ ಎಂಬ ಆತಂಕಕ್ಕೆ ಒಳಗಾಗಿದ್ದರು ಆದರೆ ಸರ್ಕಾರದ ಕಡೆಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು ಯಾರು ಕೂಡ ಚಿಂತೆಗೆ ಒಳಗಾಗಬೇಕಾಗಿಲ್ಲ

ಗೃಹಲಕ್ಷ್ಮಿಯ 14 ಮತ್ತು 15ನೇ ಕಂತಿನ ಹಣವನ್ನು ಜಮೆಗೊಳಿಸಲಾಗುವುದು ಎಂದು ರಾಜ್ಯ ಸಕಾ೯ರ ತಿಳಿಸಿದೆ.

14 ನೇ ಕಂತಿನ Gruhalaxmi ಹಣ ಯಾಕೆ ಬಂದಿಲ್ಲ?

ಈಗಾಗಲೇ ಬಹಳಷ್ಟು ಮಹಿಳೆಯರಿಗೆ 14ನೇ ಕಂತಿನ ಹಣ ಕೂಡ ಜಮೆಯಾಗಿದ್ದು ಇನ್ನು ಕೆಲವು ಮಹಿಳೆಯರಿಗೆ ತಾಂತ್ರಿಕ ಕಾರಣಗಳಿಂದಾಗಿ 14ನೇ ಕಂತಿನ ಹಣ ಜಮೆಯಾಗಿಲ್ಲ.

ಅಂಥಹವರು ಚಿಂತಿಸುವ ಅಗತ್ಯವಿಲ್ಲ. 14 ಮತ್ತು 15ನೇ ಕಂತಿನ ಹಣವನ್ನು ಒಟ್ಟಿಗೆ ಹಾಕಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

15 ನೇ ಕಂತಿನ Gruhalaxmi ಹಣ ಯಾವಾಗ ಬರುತ್ತೆ?

ಡಿಸೆಂಬರ್ ಮೊದಲ ವಾರದಲ್ಲಿ 15 ನೇ ಕಂತಿನ ಹಣ 2000 ರೂ. ಗಳನ್ನು ಜಮೆ ಮಾಡಲಾಗುವುದು. 14 ನೇ ಕಂತಿನ ಹಣ ಬರದೇ ಇರುವವರಿಗೆ ಒಟ್ಟಿಗೆ 14 ಮತ್ತು 15 ಸೇರಿ ಎರಡು ಕಂತುಗಳ 4000/- ಗಳನ್ನು ಹಾಕಲಾಗುವುದು ಎಂದು ಸಚಿವೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಮೊದಲ ಹಂತದಲ್ಲಿ ಈ ಜಿಲ್ಲೆಯವರಿಗೆ Gruhalaxmi ಹಣ ಜಮೆ!

ಡಿಸೆಂಬರ್ ಮೊದಲ ವಾರದಲ್ಲಿ 15 ನೇ ಕಂತಿನ ಹಣವನ್ನು ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ವಿಜಯಪೂರ, ಯಾದಗಿರಿ, ಹಾವೇರಿ,

ದಾವಣಗೆರೆ, ಶಿವಮೊಗ್ಗ, ಕೊಪ್ಪಳ, ಕಲ್ಬುರ್ಗಿ, ಬೆಳಗಾವಿ, ಕೊಡಗು, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಗೃಹಲಕ್ಷ್ಮೀ ಹಣ ಜಮೆ ಮಾಡಲಾಗುತ್ತದೆ.

ನಂತರದಲ್ಲಿ ಉಳಿದ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗುತ್ತದೆ ಎಂದು ಸಚಿವೆ ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆ ಕ್ಯಾನ್ಸಲ್ ಮಾಡ್ತಾರಾ?

ಸಕಾ೯ರದ ಬಳಿ ಹಣವಿಲ್ಲ, ಗ್ಯಾರಂಟಿ ಯೋಜನೆ ಕ್ಯಾನ್ಸಲ್ ಮಾಡುತ್ತಾರೆ, ಬಿಪಿಎಲ್ ಕಾಡ್೯ ರದ್ದಾಗಿರುವುದಕ್ಕೆ ಗೃಹ ಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂಬ ಹಲವಾರು ಊಹಾಪೋಹಗಳು ಓಡಾಡುತ್ತಿದ್ದು,

ಇದೆಲ್ಲಾ ಸುಳ್ಳು ಯಾವುದೇ ಗ್ಯಾರಂಟಿ ಯೋಜನೆಗಳನ್ನು ಸಕಾ೯ರ ನಿಲ್ಲಿಸುತ್ತಿಲ್ಲ. ಹಾಗಿದ್ದರೆ ಸಕಾ೯ರದ ಕಡೆಯಿಂದ ಅಧಿಕೃತ ಹೇಳಿಕೆ ನೀಡಲಾಗುತ್ತದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿಯೂ ಕೂಡ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಿರುವುದರಿಂದ

ಕಾಂಗ್ರೆಸ್ ಸಕಾ೯ರ ಕೊಟ್ಟಿರುವ ಗ್ಯಾರಂಟಿಗಳನ್ನು ಹಿಂತೆಗೆದುಕೊಳ್ಳಲು ಮುಂದಾಗುವುದಿಲ್ಲ. ಆದ್ದರಿಂದ ಯಾರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"