Budget 2026 :: ಶೀ-ಮಾರ್ಟ್’ ಮಹಿಳೆಯರಿಗೆ ಬಂಪರ್ ಕೊಡುಗೆ!!! ತೆಂಗು ಬೆಳೆಗಾರರಿಗೆ ಆದ್ಯತೆ!!! ಕೃಷಿ ಮತ್ತು ಮಹಿಳಾ ಕ್ಷೇತ್ರಕ್ಕೆ ಏನೆಲ್ಲ ಕೊಡುಗೆ??
ಕೇಂದ್ರದ 2026ರ ಬಜೆಟ್ ನಲ್ಲಿ ಪ್ರಕಟಿಸಲಾದ ಮಹಿಳಾ ಮತ್ತು ರೈತರ ಕಲ್ಯಾಣಕ್ಕಾಗಿ ಯೋಜನೆಯ ಕುರಿತು ಮಾಹಿತಿ:
Central bedget 2026 schemes announced and there mottos::
೧. ಮಹಿಳಾ ಸಬಲೀಕರಣ – ‘ಶೀ-ಮಾರ್ಟ್’ (She-Mart) ಯೋಜನೆ
ಮಾದರಿ ಸ್ವರೂಪ ಈ ಯೋಜನೆಯು ಛತ್ತೀಸ್‌ಗಢದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡ ‘ಸಿ-ಮಾರ್ಟ್’ (C -Mart) ಮಾದರಿಯಿಂದ ಪ್ರೇರಣೆ ಪಡೆದಿದೆ.
• ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳ (Self Help Groups – SHG) ಉತ್ಪಾದನೆಗಳನ್ನು (ಉದಾಹರಣೆಗೆ: ಕರಕುಶಲ ವಸ್ತುಗಳು, ಸಾವಯವ ಉತ್ಪನ್ನಗಳು) ನಗರ ಪ್ರದೇಶದ ಮಾರುಕಟ್ಟೆಗಳಿಗೆ ಪರಿಚಯಿಸುವುದು ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಇದರ ಮುಖ್ಯ ಗುರಿ.
ಟಿಯರ್-2 ಮತ್ತು ಟಿಯರ್-3 ನಗರಗಳಲ್ಲಿ ಮಳಿಗೆಗಳನ್ನು ಸ್ಥಾಪಿಸುವ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
• ತರಬೇತಿ ಕಾರ್ಯಕ್ರಮಗಳು ಮುಖಾಂತರ ಮಹಿಳೆಯರಿಗೆ ಪ್ಯಾಕಿಂಗ್, ಮಾರುಕಟ್ಟೆ ತಂತ್ರಗಳು ಮತ್ತು ಆನ್‌ಲೈನ್ ವ್ಯಾಪಾರದ ಕುರಿತು ವೃತ್ತಿಪರ ತರಬೇತಿಯನ್ನು ನೀಡಲಾಗುವುದು.
ಈ ಯೋಜನೆಯು ‘ಲಖಪತಿ ದೀದಿ’ ಯೋಜನೆಗೆ ಮತ್ತಷ್ಟು ಬಲ ನೀಡುತ್ತದೆ ಮತ್ತು ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗುತ್ತದೆ.
೨. ಕೃಷಿ ಮತ್ತು ತಂತ್ರಜ್ಞಾನ: ‘ಭಾರತ್ ವಿಸ್ತಾರ್’
• ಕೃತಕ ಬುದ್ಧಿಮತ್ತೆ (AI) ಬಳಕೆ, ಕೃಷಿ ಕ್ಷೇತ್ರದಲ್ಲಿ ‘ಭಾರತ್ ವಿಸ್ತಾರ್’ ಎಂಬ ಹೆಸರಿನ ಕೃತಕ ಬುದ್ಧಿಮತ್ತೆ (Artificial Intelligence – AI) ಆಧಾರಿತ ಬಹುಭಾಷಾ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು.
ಈ ತಂತ್ರಜ್ಞಾನದ ಮೂಲಕ ಹವಾಮಾನ ವರದಿಗಳು, ಮಾರುಕಟ್ಟೆ ದರಗಳು ಮತ್ತು ಬೆಳೆಗಳಿಗೆ ತಗಲುವ ರೋಗಗಳ ಬಗ್ಗೆ ರೈತರಿಗೆ ಸುಲಭವಾಗಿ ಮಾಹಿತಿ ದೊರೆಯುತ್ತದೆ.
ಬೆಳೆಗಳಿಗೆ ಪ್ರೋತ್ಸಾಹ::
* ವಾಣಿಜ್ಯ ಬೆಳೆಗಳು: ತೆಂಗು, ಗೋಡಂಬಿ ಮತ್ತು ಕೋಕೋ ಬೆಳೆಗಳನ್ನು 2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಆಗಿ ಗುರುತಿಸುವ ಗುರಿಯನ್ನು ಹೊಂದಲಾಗಿದೆ.
ಭಾರತೀಯ ಶ್ರೀಗಂಧ ಮರದ ಪರಂಪರೆಯನ್ನು ಉಳಿಸಿ ಬೆಳೆಸಲು ಮತ್ತು ಅದರ ಸಂಸ್ಕರಣೆಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು.
• ತೋಟಗಾರಿಕೆ ಬೆಳೆಗಗಳಾದ ಬಾದಾಮಿ, ವಾಲ್ನಟ್ ಮತ್ತು ಪೈನ್ ಬೀಜಗಳ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
೩. ಕೈಗಾರಿಕೆ ಮತ್ತು ಮೂಲಸೌಕರ್ಯ
ತಾಂತ್ರಿಕ ಸ್ವಾವಲಂಬನೆ ಸಾಧಿಸಲು ಸರ್ಕಾರವು ₹40,000 ಕೋಟಿಗಳನ್ನು ಸೆಮಿಕಂಡಕ್ಟರ್ ಮಿಷನ್ ಮೀಸಲಿಟ್ಟಿದೆ.
• MSME ಆತ್ಮನಿರ್ಭರ ಭಾರತದ ಅಡಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (Micro, Small and Medium Enterprises – MSME) ₹2,000 ಕೋಟಿಗಳನ್ನು ಮೀಸಲಿಡಲಾಗಿದೆ.
‘ನ್ಯಾಷನಲ್ ಫೈಬರ್ ಸ್ಕೀಮ್’ ಮತ್ತು ‘ಸಮರ್ಥ 2.0’ ಕಾರ್ಯಕ್ರಮಗಳ ಮೂಲಕ ಜವಳಿ ಉದ್ಯಮವನ್ನು ಜಾಗತಿಕ ಸ್ಪರ್ಧೆಗೆ ಸಿದ್ಧಗೊಳಿಸಲಾಗುವುದು.
೪. ಆರೋಗ್ಯ ಮತ್ತು ಶಿಕ್ಷಣ
• ಕ್ಯಾನ್ಸರ್ ಮತ್ತು ಮಧುಮೇಹದ 17 ಪ್ರಮುಖ ಔಷಧಿಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲಾಗಿದೆ.
• ಬಯೋಫಾರ್ಮಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ₹10,000 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ:
*ದೇಶದಲ್ಲಿ 3 ಹೊಸ ಏಮ್ಸ್ (All India Institute of Medical Sciences – AIIMS) ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.
ಪ್ರತಿ ಜಿಲ್ಲೆಯಲ್ಲಿಯೂ ಬಾಲಕಿಯರ ವಸತಿ ನಿಲಯಗಳನ್ನು (Hostels) ನಿರ್ಮಿಸಲಾಗುವುದು.
2026ರ ಕೇಂದ್ರ ಬಜೆಟ್‌ನ ಈ ಪ್ರಮುಖಾಂಶಗಳನ್ನು ವಿಶ್ಲೇಷಿಸಿದಾಗ, ಭಾರತವು ‘ವಿಕಸಿತ ಭಾರತ 2047’ ಗುರಿಯತ್ತ ದೃಢ ಹೆಜ್ಜೆ ಇಡುತ್ತಿರುವುದು ಸ್ಪಷ್ಟವಾಗುತ್ತದೆ. ಸಾವ್ರತೋಮುಖ ಬೆಳೆವನಿಗೆ ಎಲ್ಲ ವಲಯಗಳ ಮೇಲೆ ಗಮನಹರಿಸಿದು ಅಂತರ್ಗತ ಬೆಳವಣಿಗೆ ಭಾರತ ಸಾಕ್ಷಿ ಆಗಲಿದೆ.
From technical shift to women empowerment through she-mark with aiming to enhance the social capital investment in hospitals, education and special emphasis on the feeder of the nation with larger exposure will transform & reform the Indian’s vikasit Bharat by 2047.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply