"Agriculture is our CULTURE"

Arecanut :: ಅಡಿಕೆ ರೈತರಿಗೆ ಮತ್ತೆ ಎದುರಾದ ಸಂಕಷ್ಟ!!! ಈ ಅಂತರಾಷ್ಟ್ರೀಯ ವರದಿಯಿಂದ ಅಡಿಕೆ ಮಾರುಕಟ್ಟೆಗೆ ಪೆಟ್ಟು!!!

ಅಡಿಕೆ ಬೆಳೆಗಾರರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಬರಗಾಲ, ಅಡಿಕೆ ಮರಗಳಿಗೆ ರೋಗಗಳ ಬಾಧೆ ಇವುಗಳಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಬೆಳೆಗಾರರಿಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದ್ದು,

ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಅಂಡ್ ಕ್ಯಾನ್ಸರ್ (International Agency for Research and Cancer) ಸಂಸ್ಥೆಯು

ಇತ್ತೀಚಿಗೆ ಅಡಿಕೆಗೆ ಸಂಬಂಧಿಸಿದಂತೆ ಒಂದು ವರದಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಎಂದು ಉಲ್ಲೇಖ ಮಾಡಿದೆ.

ಈ ಸಂಸ್ಥೆಯ ವರದಿಯಿಂದಾಗಿ ದೇಶದ ಅಡಿಕೆ ಬೆಳೆಗಾರರು ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯುತ್ತಿರುವ ಕರ್ನಾಟಕ ಕೇರಳ ತಮಿಳುನಾಡು

ರಾಜ್ಯದ ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ. ಈ ರೀತಿಯ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಯಿಂದಾಗಿ ಅಡಿಕೆ ಮಾರಾಟದ ಮೇಲೆ ಹೊಡೆತ ಬೀಳಲಿದೆ ಎಂದು ಅಡಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.

ತಂಬಾಕು ರಹಿತ ಅಡಿಕೆ ಕ್ಯಾನ್ಸರ್ ಕಾರಕವಲ್ಲ!

ಆದರೆ ಈ ರೀತಿ ವರದಿ ಬರುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯು ಸಾಕಷ್ಟು ಬಾರಿ ಬೇರೆ ಬೇರೆ ಸಂಸ್ಥೆಗಳು

ಈ ರೀತಿ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಗಳನ್ನು ನೀಡಿದವು ಆದರೆ ಕ್ಯಾಂಪ್ಕೋ ಹಾಗೂ ಕರ್ನಾಟಕದ ನಿಟ್ಟೆ ಯೂನಿವರ್ಸಿಟಿ ಸೇರಿದಂತೆ ಭಾರತದ ಹಲವು ವಿಶ್ವವಿದ್ಯಾಲಯಗಳು

ಈ ಬಗ್ಗೆ ಅಧ್ಯಯನ ನಡೆಸಿದ್ದು ತಂಬಾಕು ರಹಿತ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಅಲ್ಲದೆ ವೈಜ್ಞಾನಿಕವಾಗಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಬಗ್ಗೆ ವರದಿಯನ್ನು ಸಲ್ಲಿಸಿವೆ.

ಹಾಗಾಗಿ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಈ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾವೇರಿ ಅವರು ತಿಳಿಸಿದ್ದಾರೆ.

ಅಡಿಕೆ ಕ್ಯಾನ್ಸರ್ ಕಾರಕ ವರದಿ ಒಪ್ಪುವುದಿಲ್ಲ!

ರಾಜ್ಯದ ಕ್ಯಾಂಪ್ಕೋ ತುಮ್ಕೋಸ್ ರಾಜ್ಯದ ಅಡಿಕೆ ಮಹಾಮಂಡಲ ಸೇರಿದಂತೆ ಇತರ ಯಾವುದೇ ಸಹಕಾರಿ ಸಂಘಗಳು ಈ ವರದಿಯನ್ನು ಒಪ್ಪುವುದಿಲ್ಲ. ಐಎಆರ್ ಸಿ ಯು ತಂಬಾಕು ಮಿಶ್ರಿತ ಅಡಿಕೆಯನ್ನು ಸಂಶೋಧಿಸಿ ವರದಿ ನೀಡುತ್ತದೆ.

ಆದರೆ ತಂಬಾಕು ರಹಿತ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಅದು ಔಷಧೀಯ ಗುಣ ಹೊಂದಿದೆ. ಈ ಬಗ್ಗೆ ನಮ್ಮ ವಿವಿಗಳು ನೀಡಿರುವ ವರದಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುವ ಬಗ್ಗೆ ಗಮನ ಹರಿಸಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೇರೆ ದೇಶಗಳಿಂದಲೂ ಕ್ಯಾನ್ಸರ್ ಕಾರಕವಲ್ಲ ಎಂದು ವರದಿಯಾಗಿದೆ!

ತೈವಾನ್ ಹಾಗೂ ಚೀನಾ ದೇಶಗಳಲ್ಲೂ ಕೂಡ ಅಡಿಕೆಯ ಬಗ್ಗೆ ಸಂಶೋಧನೆಗಳ ನಡೆದಿದ್ದು, ಅಲ್ಲೂ ಕೂಡ ಅಡಿಕೆ ಕ್ಯಾನ್ಸರ್ ಕಾರಕ ಎಂದು ವರದಿಯಾಗಿಲ್ಲ.

ನಮ್ಮ ದೇಶದ ಹಾಗೂ ಇತರೆ ದೇಶಗಳ ವರದಿಗಳನ್ನು ಅಂತರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಗಮನಕ್ಕೆ ತರಬೇಕೆಂದು ಕೂಡ ಕ್ಯಾಂಪ್ಕೋ ಅಧ್ಯಕ್ಷರು ಆಗ್ರಹಿಸಿದ್ದಾರೆ.

ಈ ರೀತಿಯ ವರದಿಗಳು ಹೊಸದೇನಲ್ಲ!

ಈ ರೀತಿಯ ವರದಿಗಳು ಹಿಂದೆ ಕೂಡ ಬಂದಿದ್ದು, ತಂಬಾಕು ಮಿಶ್ರಿತ ಅಡಿಕೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಆದರೆ ತಂಬಾಕು ರಹಿತ ಅಡಿಕೆ ಕ್ಯಾನ್ಸರ್ ಕಾರಕವಲ್ಲ

ಅದು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಬಗ್ಗೆ ಅನೇಕ ವರದಿಗಳಲ್ಲಿ ಸಾಬೀತಾಗಿದ್ದು,

ರಾಜ್ಯದ ಅಡಿಕೆ ಬೆಳೆಗಾರರು ಯಾವುದೇ ರೀತಿಯ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಎಂದು ತುಮ್ಕೋಸ್ ಅಧ್ಯಕ್ಷರಾದ ಆರ್ ಎಂ ರವಿ ಅವರು ಹೇಳಿಕೆ ನೀಡಿದ್ದಾರೆ.

ಧನ್ಯವಾದಗಳು

*********ಅಂತ್ಯ************

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರು ಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು 

ಕಬ್ಬರಿ ಮತ್ತು ತೆಂಗಿನಕಾಯಿ ಮಾರು ಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ – ( ಕ್ಲಿಕ್ ಮಾಡಿ / ಇಲ್ಲಿ ಕ್ಲಿಕ್ ಮಾಡಿ)

 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

   ಪರಿಸರ ಪರಿಸರದೊಂದಿಗೆ  ವಿಕೆ
   ಆರ್ಥಿಕತೆ


"Agriculture is our CULTURE"