Arecanut farming:: ಒಂದೇ ಅಡಿಕೆ ಮರದಲ್ಲಿ 8 ಗೊನೆ! 20%ಇಳುವರಿ ಹೆಚ್ಚು! ಮಲೆನಾಡಿನ ರೈತನ ಯಶಸ್ವಿ ಕೃಷಿ ಗುಟ್ಟು!
ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರದೇಶದಲ್ಲಿ ಹರಡಿಕೊಂಡಿರುವ ಅಡಿಕೆ ಕೃಷಿ(Arecanut farming)ಯ ಬಗ್ಗೆ ಸಾಕಷ್ಟು ರೈತರು ತಮ್ಮ ಅನುಭವದೊಂದಿಗೆ ಹೆಚ್ಚಿನ ಆದಾಯ ಹಾಗೂ
ಉತ್ತಮ ಕೃಷಿ ಮಾಡಲು ಅವಶ್ಯವಿರುವ ಟೆಕ್ನಿಕ್ ಗಳನ್ನು ಅಳವಡಿಸಿಕೊಳ್ಳಲು ಬೇರೆಲ್ಲಾ ರೈತರಿಗೆ ತಿಳಿಸಿಕೊಡುವುದರ ಮೂಲಕ ಇತರ ರೈತರ ಉನ್ನತಿಗೆ ಸಹಾಯಕವಾಗುತ್ತಿದ್ದಾರೆ.
ಅಂತಹ ರೈತರಲ್ಲಿ ಒಬ್ಬರಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಳೂರು ಗ್ರಾಮದ ಸುಬ್ಬಣ್ಣ ಎಂಬ ರೈತರು ತಮ್ಮ ಅಡಿಕೆ ತೋಟದಲ್ಲಿ ಮಾದರಿ ಕೃಷಿ ತಂತ್ರಗಳನ್ನು ಮಾಡಿ ಅದರಲ್ಲಿ ಯಶಸ್ವಿಯಾಗಿದ್ದು,
ಆ ಟೆಕ್ನಿಕ್ ಗಳ ಬಗ್ಗೆ ಇತರ ರೈತರೊಂದಿಗೆ ಈ ಲೇಖನದ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಮಾಹಿತಿಗೆ ಹೊಸದಾಗಿ ಅಡಿಕೆ ಬೆಳೆಯುವ ರೈತರಿಗೆ ಹಾಗೂ ಅಡಿಕೆಯಲ್ಲಿ ಕೃಷಿಯಲ್ಲಿ ಕಡಿಮೆ ಇಳುವರಿ ಪಡೆಯುತ್ತಿರುವ ರೈತರಿಗೆ ಸಹಾಯಕ ವಾಗಿದೆ ಆದ್ದರಿಂದ ಸಂಪೂರ್ಣ ಲೇಖನವನ್ನು ಓದಿ.
ಒಂದೇ ಅಡಿಕೆ ಗಿಡ(Arecanut)ದಲ್ಲಿ ಏಳರಿಂದ ಎಂಟು ಗೊಣೆ ಬಿಡುವ ರೀತಿಯಲ್ಲಿ ಅಡಿಕೆ ಮರಗಳ ಉತ್ತಮ ನಿರ್ವಹಣೆಯನ್ನು ಮಾಡುತ್ತಿರುವ ಸುಬ್ಬಣ್ಣರವರು ತಮ್ಮ ತೋಟದಲ್ಲಿ 12 ನೂರಕ್ಕೆ ಹೆಚ್ಚಿನ ಮರಗಳನ್ನು ನೆಟ್ಟಿದ್ದಾರೆ.
9X9 ಅಡಿಯಲ್ಲಿ ಅಡಿಕೆ ಮರಗಳನ್ನು ನೆಟ್ಟಿರುವ ಇವರು ಮರದ ಸುತ್ತಲಿನ ಎರಡು ಅಡಿ ಜಾಗದಲ್ಲಿ ತೆಗ್ಗು ತಗೆದು ಮರ ನೆಟ್ಟಿದ್ದಾರೆ. ಆದರೆ 1 ಅಡಿಯಷ್ಟು ಮಾತ್ರ ಮುಚ್ಚಿದ್ದಾರೆ.
ಇದರಿಂದ ಇನ್ನುಳಿದ 1 ಅಡಿಯಷ್ಟು ತೆಗ್ಗು ಮರಗಳ ಉಸಿರಾಟಕ್ಕೆ ಹೆಚ್ಚು ಸಹಕಾರಿಯಾಗಿ ಮರಗಳ ಉತ್ತಮ ಬೆಳವಣಿಗೆ ಆಗುತ್ತದೆ.
ಕಾಂಪೋಸ್ಟ್ (compost fertilizer)ಗೊಬ್ಬರವೇ ಉತ್ತಮ!
ಅಡಿಕೆ ಮರಗಳು ಬೆಳೆಯಲು ಗೊಬ್ಬರದ ಅವಶ್ಯಕತೆ ತುಂಬಾ ಇದೆ. ಆದರೆ ಅಡಿಕೆ ಬೆಳೆಗಾರರು ಎರೆಹುಳು ಗೊಬ್ಬರ ರಾಸಾಯನಿಕ ಗೊಬ್ಬರ ಗಳ ಮೊರೆ ಹೋಗದೆ
ಕಾಂಪೋಸ್ಟ್ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಬೇಕು ಕಾಂಪೋಸ್ಟ್ ಗೊಬ್ಬರವೇ ಅಡಿಕೆ ಮರಗಳ ಉತ್ತಮ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ಸುಬ್ಬಣ್ಣ ರವರು ಹೇಳುತ್ತಾರೆ
ಅಲ್ಲದೆ ಇವರು ದನಕರುಗಳನ್ನು ಸಾಕಿದ್ದು ಅವುಗಳನ್ನು ಹಾಲಿಗಾಗಿ ಅಲ್ಲದೇ ಕಾಂಪೋಸ್ಟ್ ಗೊಬ್ಬರಕ್ಕಾಗಿಯೇ ಸಾಕಿದ್ದಾರೆ ಎಂದಿದ್ದಾರೆ.
ತೋಟದಲ್ಲಿ ಸಿಗುವ ತ್ಯಾಜ್ಯ ವಸ್ತುಗಳಾದ ಗರಿಗಳು, ಅಡ್ಕೆ ಮರದ ತಟ್ಟೆಗಳು, ಕಳೆ ಹೀಗೆ ತೋಟದ ತ್ಯಾಜ್ಯಗಳು ಯಾವತ್ತೂ ಅನುಪಯುಕ್ತವಲ್ಲ.
ಅವುಗಳನ್ನು ಚಿಲ್ಲರೆ ಕಾಸಿಗೆ ಮಾರಾಟ ಮಾಡುವ ಬದಲು ಅವುಗಳನ್ನು ಮರದಡಿಯಲ್ಲಿಯೇ ಚಿಕ್ಕದಾಗಿ ತುಂಡು ಮಾಡಿ ಅಲ್ಲಿಯೇ ಕೊಳೆಯಲು ಬಿಡಬೇಕು.
ಅದೇ ಮರಗಳಿಗೆ ಅತ್ಯುತ್ತಮ ಗೊಬ್ಬರವಾಗುತ್ತದೆ ಹಾಗೂ ಒಂದು ವಷ೯ಕ್ಕೆ ಒಂದು ಮರಕ್ಕೆ 40 ಕೆ. ಜಿ ಗೊಬ್ಬರ ಕೊಡಬೇಕು ಎಂದಿದ್ದಾರೆ.
ಹಸಿಹುಲ್ಲಿನ ಗೊಬ್ಬರ ಇತ್ತೀಚೆಗೆ ಸಿಗುತ್ತಿಲ್ಲ ಆದ್ದರಿಂದ ಇವರು ಕಾಡಿನಿಂದ ಎಲೆ ತ್ಯಾಜ್ಯ ತಂದು, ಹಸುಗಳ ಸಗಣಿ ಮತ್ತು ಯೂರಿಯಾದೊಂದಿಗೆ ಅದನ್ನು ಕೊಳೆಯಿಸಿ ಉತ್ತಮ ಗೊಬ್ಬರವಾಗಿ ಮಾಪ೯ಡಿಸುತ್ತಿದ್ದಾರೆ.
ಇದು ವೆಚ್ಚದಾಯಕವಾಗಿದ್ದರೂ ಕೂಡ ಉತ್ತಮವಾಗಿದೆ. ಇದನ್ನು ಮಾಡಲು ಸಾಧ್ಯವಿಲ್ಲದವರು ತಮ್ಮ ತೋಟದ ತಾಜ್ಯದಿಂದಲೇ ಕಾಂಪೋಸ್ಟ್ ಗೊಬ್ಬರ ಮಾಡಿಕೊಳ್ಳಬಹುದು ಎನ್ನುತ್ತಾರೆ ಸುಬ್ಬಣ್ಣನವರು.
ರೋಗಗಳಿಗೆ ರಾಮಬಾಣ ಮದ್ದು!
ಮಲೆನಾಡಿನಲ್ಲಿ ಜೂನ್ ನಿಂದ ಜನವರಿ ವರೆಗೂ ಮಳೆಯ ಪ್ರಭಾವ ನಿಲ್ಲುವುದಿಲ್ಲ. ಇದರಿಂದ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ, ಕೀಟ ಬಾಧೆ ಹೀಗೆ ನಾನಾ ತೊಂದರೆಗಳು ಬರುತ್ತದೆ.
ಇದಕ್ಕೆ ಪರಿಹಾರವಾಗಿ 200 ಲೀಟರ್ ನೀರಿನ ಬ್ಯಾರಲ್ ಗೆ ಎರಡು ಕೆಜಿ ತುತ್ತ 2 ಕೆಜಿ ಸುಣ್ಣ, ಅಧ೯ ಕೆ. ಜಿ ರಾಳ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮರಕ್ಕೆ ಸಿಂಪಡಿಸಿ. ಇದರೊಂದಿಗೆ ಯಾವುದೇ ಕೀಟನಾಶಕ ಸೇರಿಸಬೇಡಿ.
ಹೊಸ ಮಣ್ಣಿನ ನಿವ೯ಹಣೆ ಅಗತ್ಯ!
ತೋಟವನ್ನು ಚೆನ್ನಾಗಿ ನಿವ೯ಹಣೆ ಮಾಡಬೇಕು ಹೆಚ್ಚಿನ ಇಳುವರಿಯೊಂದಿಗೆ ಭೂಮಿಯ ಫಲವತ್ತತೆಯೂ ಚೆನ್ನಾಗಿರಬೇಕು ಎಂದರೆ ಹೊಸ ಮಣ್ಣು ಹಾಕಿಸಿ.
10ವಷ೯ಕೊಮ್ಮೆಯಾದರೂ ಉತ್ತಮ ಫಲವತ್ತಾದ ಮಣ್ಣು ಹಾಕಿಸುವುದರಿಂದ ಅಡಿಕೆ ಮರಗಳು ಹುಲುಸಾಗಿ ಬೆಳೆಯುತ್ತವೆ. & ಭೂಮಿಯ ಫಲವತ್ತತೆಯು ಉತ್ತಮವಾಗಿರುತ್ತದೆ.
ನೀರಿನ ಪೂರೈಕೆ ಕ್ರಮವೂ ವಿಭಿನ್ನ!
ಡ್ರಿಪ್ ಇರಿಗೇಷನ್ ಮೂಲಕ ನೀರು ಬಿಡುವುದರಿಂದ ಕೇವಲ ಮರದ ಬುಡಕ್ಕೆ ಮಾತ್ರ ನಾರು ಸಿಗುತ್ತದೆ.
ಆದರೆ ನೀವು ಮರದ ಸುತ್ತಲೂ 2 ಅಡಿ ನೀರು ಬಿಡುವಂತೆ ಪಿ. ವಿ. ಸಿ ಪೈಪ್ ಗಳ ಮೂಲಕ ನೀರು ಹಾಯಿಸಿದರೆ ದೂರದವರೆಗೆ ಹಬ್ಬಿರುವ ಮರಗಳ ಬೇರುಗಳಿಗೂ ನೀರು ಸಿಗುತ್ತದೆ. ಹಾಗೂ ಮರಗಳ ಉಸಿರಾಟಕ್ಕೆ ಅನುಕೂಲವಾಗುತ್ತದೆ ಎಂದಿದ್ದಾರೆ.
ಮರಗಳ ನಡುವೆ ಕಪ್ಪುಗಳನ್ನು ( ಚಿಕ್ಕ ಕಾಲುವೆ ರೀತಿಯಲ್ಲಿ) ಮಾಡಿ ಇದರಿಂದ ಮರಗಳಿಗೆ ಸಾಕಷ್ಟು ನೀರು ಸಿಗುತ್ತದೆ.
ಹಾಗೂ ಮಳೆಯ ನೀರು ಇಂಗಲು ಸಹಾಯಕವಾಗುತ್ತದೆ ಅಲ್ಲದೇ ಮರಗಳ ಉಸಿರಾಟಕ್ಕೂ ಸಹಾಯಕವಾಗುತ್ತದೆ.
20% ಇಳುವರಿ ಹೆಚ್ಚು!
ಹೀಗೆ ಸುಬ್ಬಣ್ಣನವರು ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೇವಲ 7 ವಷ೯ದ ಅಡಿಕೆ ಮರಗಳಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಅಲ್ಲದೇ ಒಂದೇ ಮರದಲ್ಲಿ 6 ರಿಂದ 8 ಗೊನೆ ಹೊಂದುವ ಮೂಲಕ ಇತರ ತೋಟಗಳಿಗಿಂತ 20% ಹೆಚ್ಚಿವರಿ ಇಳುವರಿ ಪಡೆದು ಉತ್ತಮ
ಅಡಿಕೆ ಕೃಷಿಕರಾಗಿದ್ದು, ತಮ್ಮಂತೆಯೇ ಇತರ ರೈತರು ಇಂತಹ ಕ್ರಮಗಳನ್ನು ಪಾಲಿಸಿ ಉತ್ತಮ ಇಳುವರಿ ಪಡೆಯಲೆಂದು ಮಾಹಿತಿ ಒದಗಿಸಿದ್ದಾರೆ.
ರೈತರ ವಿವರ
ಸುಬ್ಬಣ್ಣ, ಮಳೂರು ಗ್ರಾಮ,
ಹೊಸನಗರ ತಾ., ಶಿವಮೊಗ್ಗ ಜಿಲ್ಲೆ .
ಮೊಬೈಲ್ ನಂ: 9901067405
ಸೂಚನೆ: ಅವಶ್ಯಕತೆ ಇದ್ದಲ್ಲಿ ಮಾತ್ರ ರೈತರಿಗೆ ಕಾಲ್ ಮಾಡಿ ಮಾಹಿತಿ ಪಡೆಯಿರಿ ಸುಮ್ಮನೆ ಕಾಲ್ ಮಾಡಿ ತೊಂದರೆ ಕೊಡಬೇಡಿ.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಗರಿಷ್ಠ ದರವನ್ನು ನೋಡಬಹುದು.ಯಲ್ಲಾ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ