ವಿಜ್ಞಾನಿಗಳ ಪ್ರಕಾರ :: ಅಡಿಕೆ ತೋಟಗಳಲ್ಲಿ ಉಳುಮೆ ಮಾಡಬೇಕೆ ಅಥವಾ ಬೇಡವೇ?
ತೋಟಗಳಲ್ಲಿ ಉಳುಮೆ ಮಾಡುವುದರಿಂದ ಆಗುವ ಉಪಯೋಗಗಳೇನು? ಉಳುಮೆ ಮಾಡದಿದ್ದರೆ ಆಗುವ ತೊಂದರೆ ಅಥವಾ ಉಪಯೋಗಗಳೇನು? ಹೀಗೆ ರೈತರಲ್ಲಿ ಹಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿದೆ…..
ಉಳುಮೆ ಮಾಡುವುದು ಜಮೀನಿನ ಬೇಸಾಯ ಕ್ರಮಗಳ ಮೇಲೆ ಹಾಗೂ ಮಣ್ಣಿನ ಗುಣ ಧರ್ಮಗಳ ಮೇಲೆ ನಿಂತಿರುತ್ತದೆ.
ಹಾಗೂ ಉಳುಮೆ ಮಾಡುವುದಕ್ಕಿಂತ ಮುಂಚೆ ಅಡಿಕೆ ಮರಗಳ ಬೇರುಗಳ ರಚನೆಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಅಡಿಕೆ ಮರವು ಏಕದಳ ಜಾತಿಗೆ ಸೇರಿರುವುದರಿಂದ ಸಣ್ಣ ವಯಸ್ಸಿನಲ್ಲಿ ಅಡಿಕೆ ಮರದ ಬೇರುಗಳು ಗಿಡದ ಬುಡದಲ್ಲಿಯೇ ಇರುತ್ತವೆ.
ನಂತರ ಗಿಡವು ಬೆಳೆದು ದೊಡ್ಡದಾದಂತೆ ಬೇರುಗಳು ಬುಡದಿಂದ ದೂರಕ್ಕೆ ಬೆಳೆಯುತ್ತವೆ. 10 ವರ್ಷಕ್ಕಿಂತ ಮೇಲ್ಪಟ್ಟ ಆಹಾರ ಹೀರಿಕೊಳ್ಳುವಂತಹ ಅಡಿಕೆ ಮರಗಳ ಬೇರುಗಳು ಅಡಿಕೆ ಮರದಿಂದ ಎರಡು ಅಡಿ ದೂರದಲ್ಲಿರುತ್ತದೆ.
ಹಾಗಾದರೆ ಅಡಿಕೆ ಮರಗಳ ಬೇರುಗಳು ಆಳಕ್ಕೆ ಹೋಗುವುದಿಲ್ಲವೇ?
ಅಡಿಕೆ ಮರಗಳ ಬೇರುಗಳು ಅಡ್ಡಕ್ಕೆ ಬೆಳೆಯುತ್ತವೆ ಆಳಕ್ಕೆ ಬೆಳೆಯುವುದಿಲ್ಲ. ಆದ್ದರಿಂದ ಬೇರುಗಳು ಕೇವಲ ಒಂದುವರೆ ಇಂದ ಎರಡು ಅಡಿ ಮಾತ್ರ ಆಳಕ್ಕೆ ಬೆಳೆಯುತ್ತವೆ.
ಆದ್ದರಿಂದಲೇ ರೈತರು ಉಳುಮೆ ಮಾಡುವಾಗ ಬೇರು ತುಂಡಾಗಿ ಇಳುವರಿ ನಷ್ಟ ಆಗುತ್ತದೆ ಎಂದು ಯೋಚಿಸುತ್ತಾರೆ.
ಉಳುಮೆ ಮಾಡುವಾಗ ಸಾಮಾನ್ಯವಾಗಿ ರೈತರು ಟ್ರ್ಯಾಕ್ಟರ್ ಬಳಸಿ ಬಾಂಡ್ಲಿ (ರೋಟರಿ/ಡಿಸ್ಕಾರು) ಹೊಡೆಯುತ್ತಾರೆ,
ಕೆಲವರು ಬಲರಾಮ ನೇಗಿಲು ಹೊಡೆಯುತ್ತಾರೆ ಇನ್ನು ಕೆಲವರು ನೇಗಿಲು ಹೊಡೆಯುತ್ತಾರೆ ಹಾಗೂ ಇತ್ತೀಚಿಗೆ ಹೊಸದಾಗಿ ಸ್ಲ್ಯಾಶರ್ ಮೂಲಕ ಉಳುಮೆ ಮಾಡುತ್ತಿದ್ದಾರೆ.
ಆದರೆ ಬಹಳಷ್ಟು ರೈತರಿಗೆ ಬಾಂಡ್ಲಿ ಹೊಡೆಯುವುದರಿಂದ ಬೇರುಗಳು ಕತ್ತರಿಸಿ ಇಳುವರಿ ನಷ್ಟವಾಗುತ್ತದೆ ಎಂಬ ಭಯಯಿದೆ.
ಹಾಗಾದರೆ ಬಾಂಡ್ಲಿ ಹೊಡೆಯುವುದರಿಂದ ತೊಂದರೆ ಇದೆಯೇ?
*ಬಾಂಡ್ಲಿ ಹೊಡೆಯುವಾಗ ಯಂತ್ರವು ಕೇವಲ ನಾಲ್ಕು ಇಂಚು ಮಾತ್ರ ಆಳಕ್ಕೆ ಹೋಗುತ್ತದೆ.
ಆಹಾರದ ತಂತು ಬೇರುಗಳು ಎರಡು ಅಡಿ ಆಳದಲ್ಲಿರುವುದರಿಂದ ಬಾಂಡ್ಲಿ ಹೊಡೆಯುವುದರಿಂದ ಬೇರುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
* ಆದರೆ ಗಿಡದ ಹತ್ತಿರ ಬಾಂಡ್ಲಿ ಹೊಡೆಯುವಾಗ ಮೇಲೆ ಇರುವ ಬೇರುಗಳು ಹಾಗೂ ಆಧಾರ ಬೇರುಗಳು ತುಂಡಾಗುತ್ತವೆ ಇದರಿಂದ ಸೆಕೆಂಡರಿ ಇನ್ಫೆಕ್ಷನ್ ( ರೋಗಗಳು ) ಆಗುವ ಸಾಧ್ಯತೆ ಇರುತ್ತದೆ.
ಬಿದ್ದಂತಹ ಗರಿಗಳು ಹಾಗೂ ಇತರೆ ಗಿಡಗಳು ಉಳುಮೆ ಮಾಡುವಾಗ ಕೊಚ್ಚಿ ಹೋಗುವುದರಿಂದ ಮಲ್ಚಿಂಗ್ ಆಗಲು ಸಹಾಯಕವಾಗುತ್ತದೆ.
ಬಲರಾಮ ನೇಗಿಲು ಹೊಡೆಯುವುದು ಸೂಕ್ತವೇ?
* ಬಲರಾಮ ನೇಗಿಲು ಹೆಚ್ಚು ಆಳಕ್ಕೆ ಹೋಗಿ ಮಣ್ಣನ್ನು ತಿರುವಿ ಹಾಕುವುದರಿಂದ ಮಣ್ಣಿನಲ್ಲಿರುವ ಆಹಾರದ ಬೇರುಗಳಾದ ತಂತು ಬೇರುಗಳು ತುಂಡಾಗುತ್ತವೆ ಹಾಗೂ ಬಲರಾಮ ನೇಗಿಲು ಹೊಡೆಯುವುದರಿಂದ
ಮಣ್ಣಿನ ಕಣಗಳು ತೆರೆದುಕೊಂಡು ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ ಆಗ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಮುಂದಿನ ವರ್ಷದ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಲರಾಮ ನೇಗಿಲು ಹೊಡೆಯುವುದು ಸೂಕ್ತವಲ್ಲ.
ರೋಟರ್ ವೇಟರ್ಸ್ (rotter waiters) ಹೊಡೆಯುವುದು ಸೂಕ್ತವೇ?
ಇತ್ತೀಚೆಗೆ ಬಂದಿರುವ ರೋಟರ್ ವೇಟರ್ಸ್ (rotter waiters) ಗಳು ಉಳುಮೆ ಮಾಡುವುದಿಲ್ಲ ಬದಲಾಗಿ ಮೇಲಿನ ಹುಲ್ಲನ್ನು ಮಾತ್ರ ಕತ್ತರಿಸಿ ಮಣ್ಣನ್ನು ತಿರುವಿ ಹಾಕುತ್ತದೆ
ಇದರಿಂದ ಮಲ್ಚಿಂಗ್(Mulching) ಮಾಡಿದಂತೆ ಆಗುತ್ತದೆ. ಆದ್ದರಿಂದ ರೋಟರ್ ವೇಟರ್ಸ್ (rotter waiters) ಹೊಡೆಯುವುದು ಸೂಕ್ತವಾಗಿದೆ.
ಕಲ್ಟಿವೇಟರ್(cultivator) ಹೊಡೆಯುವುದು ಸೂಕ್ತವೇ?
ಕಲ್ಟಿವೇಟರ್ ತುಂಬಾ ಆಳಕ್ಕೆ ಹೋಗಿ ಉಳುಮೆ ಮಾಡುವುದರಿಂದ ತಂತು ಬೇರುಗಳು ತುಂಡಾಗುವ ಸಾಧ್ಯತೆ ಇರುತ್ತದೆ ಇದರಿಂದ ನೀರು ಹೆಚ್ಚಾಗಿ ಹೀರಿಕೊಂಡು ಇಳುವರಿಗೆ ತೊಂದರೆ ಆಗುತ್ತದೆ ಆದ್ದರಿಂದ ಇದು ಉಪಯೋಗಕಾರಿ ಅಲ್ಲ.
ಅಡಿಕೆ ತೋಟಗಳಲ್ಲಿ ಉಳುಮೆ ಮಾಡುವ ಅವಶ್ಯಕತೆ ಇದೆಯೇ?
* ಯಾವ ಮಣ್ಣಿನಲ್ಲಿ ಉಸಿರಾಡುವ ಕಣಗಳು ಜಾಸ್ತಿ ಇರುತ್ತವೆಯೋ ಅಂತಹ ಮಣ್ಣಿನಲ್ಲಿ ಹಾಗೂ
ಎರಿಯೇಶನ್( Ariation) ಚೆನ್ನಾಗಿರುವ ತೋಟಗಳಲ್ಲಿ ವರ್ಷಕೊಮ್ಮೆ ಉಳುಮೆ ಮಾಡಿದರೆ ಸಾಕಾಗುತ್ತದೆ ಆದರೆ ಎರೆ ಮಣ್ಣು ಅಥವಾ ಕಪ್ಪು ಮಣ್ಣಿನಲ್ಲಿ
ಅಡಿಕೆ ಬೆಳೆ ಮಾಡಿದಾಗ ನೀರು ಬಿಟ್ಟರೆ ಈ ಮಣ್ಣು ಬೇಗ ನೀರು ಕುಡಿಯುತ್ತದೆ ಹಾಗೂ ತೇವಾಂಶವನ್ನು ಬೇಗ ಬಿಟ್ಟುಕೊಳ್ಳುವುದಿಲ್ಲ.
ಆದರೆ ಅದೇ ತೇವಾಂಶ ಕಡಿಮೆಯಾದರೆ ಭೂಮಿ ಗಟ್ಟಿಯಾಗುತ್ತದೆ ಹಾಗೂ ಬಿರುಕು ಬಿಡುತ್ತದೆ. ಆಗ ಬೇರುಗಳಿಗೆ ಉಸಿರಾಡಲು ತೊಂದರೆಯಾಗುತ್ತದೆ.
ಆದ್ದರಿಂದ ಯಾರೂ ಕಪ್ಪು ಮಣ್ಣಿನಲ್ಲಿ ಹಾಗೂ ಗಟ್ಟಿ ಮಣ್ಣಿನಲ್ಲಿ(ಹೆವಿ ಸಾಯಿಲ್) (heavy soil) ಅಡಿಕೆ ಬೆಳೆದಿರುವವರು ಮೂರು ತಿಂಗಳಿಗೊಮ್ಮೆ ಮಣ್ಣನ್ನು ಸಡಿಲಗೊಳಿಸಬೇಕು,
ಇದರ ಜೊತೆಗೆ ತೋಟವನ್ನು ಉಳಿದೆ ಮಾಡುವ ಸಂದರ್ಭದಲ್ಲಿ ಸೆಣಬು ಮತ್ತು ಡಯಂಚವನ್ನು ಹಾಕಿದರೆ ಮಣ್ಣಿನ ಗುಣ ಧರ್ಮವು ಹೆಚ್ಚಾಗುತ್ತದೆ .
ಹಾಗೂ ಮುಖ್ಯವಾಗಿ ಸಹಜ ಕೃಷಿ ಮಾಡುವ ರೈತರು ಅಂದರೆ ತುಂಬಾ ವರ್ಷಗಳಿಂದ ಉಳಿಮೆ ಮಾಡದೆ ಹಾಗೆಯೇ ಅಡಿಕೆ ಮರ ಬೆಳೆಯುತ್ತಿರುವ ರೈತರು ಸಹಜ ಕೃಷಿಯನ್ನು ಮುಂದುವರಿಸಬಹುದು.
ಏಕೆಂದರೆ ಕಳೆಗಳನ್ನು ತೆಗೆದು ಮಲ್ಚಿಂಗ್ ಮಾಡುವುದರಿಂದ ಮರಗಳು ಉಸಿರಾಡುತ್ತವೆ ಆದ್ದರಿಂದ ಅಲ್ಲಿ ಉಳುಮೆ ಮಾಡುವ ಅವಶ್ಯಕತೆ ಇರುವುದಿಲ್ಲ.
ರೈತರಿಗೆ ಒಂದು ಕಿವಿಮಾತು :-
ನೀವು ತೋಟವನ್ನು ಉಳುಮೆ ಮಾಡುವ ಸಂದರ್ಭದಲ್ಲಿ, ಹಸಿರು ಎಲೆ ಗೊಬ್ಬರಗಳ ಬೀಜವನ್ನು ಚೆಲ್ಲಿ ಉಳುಮೆ ಮಾಡುವುದು ಉತ್ತಮ , ಇದರಿಂದ ನೀವು ತೋಟಕ್ಕೆ ಗೊಬ್ಬರವನ್ನು ಕೊಟ್ಟಾಗೆ ಆಗುತ್ತದೆ ಮತ್ತು ಮಣ್ಣಿನ ಗುಣ ಧರ್ಮವು ಹೆಚ್ಚಾಗುತ್ತದೆ .
ಉಳುಮೆ ಮಾಡುವುದರಿಂದಲೇ ತೋಟವನ್ನು ಸ್ವಚ್ಛವಾಗಿಡುವುದು ಸಾಧ್ಯವಿಲ್ಲ. ಮಲ್ಚಿಂಗ್ ಮಾಡುವುದರಿಂದ,
ಗರಿಗಳನ್ನು ಕತ್ತರಿಸಿ ತೋಟಗಳಲ್ಲಿ ಹಾಕುವುದರಿಂದ, ಪವರ್ ವೀಡರ್(power weeder) ನಿಂದ ಕತ್ತರಿಸುವುದರಿಂದ ಹೀಗೆ ನಾನಾ ವಿಧಗಳಲ್ಲಿ ತೋಟವನ್ನು ಸ್ವಚ್ಛವಾಗಿಡಬಹುದು.
ಆದ್ದರಿಂದ ಮೇಲಿನ ಕ್ರಮಗಳನ್ನು ಉಪಯೋಗಿಸಿ ರೈತರು ತಮ್ಮ ಜಮೀನಿನ ಮಣ್ಣಿನ ಗುಣ ಧರ್ಮಗಳ ಆಧಾರದ ಮೇಲೆ ಉಳುಮೆ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಿ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್ಸೈಟ್ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ