Arecanut per Quintal :: ಒಂದು ಕ್ವಿಂಟಲ್ ಹಸಿ ಅಡಿಕೆಗೆ ಎಷ್ಟು ಒಣ ಅಡಿಕೆ ಬರುತ್ತೆ!!! ಯಾವ ವಾತಾವರಣಕ್ಕೆ ಹೆಚ್ಚು ಒಣ ಅಡಿಕೆ ಬರುತ್ತೆ??
Arecanut plantation is one of the most important commercial agricultural activities in Karnataka.
The state is the “largest producer of arecanut in India”. Major growing regions include Dakshina Kannada, Uttara Kannada, Shivamogga, Chikkamagaluru, and Udupi. In recent years, cultivation has also expanded to Chitradurga, Davangere, and Tumkur with irrigation support.
Arecanut is processed and sold in many forms, including “dried, boiled, and peeled varieties”. The crop plays a crucial role in the rural economy, providing stable income and employment to thousands of farmers in Karnataka.
ಭಾರತದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯವೆಂದರೆ ಅದು ಕರ್ನಾಟಕ. ಅಲ್ಲದೆ ಅಡಿಕೆ ಬೆಳೆಯುವ ಬಗ್ಗೆ ರೈತರಿಗೆ ಜ್ಞಾನ ಮತ್ತು ಮಾಹಿತಿ ಹೆಚ್ಚು ಹಾಗೂ ಇಲ್ಲಿನ “ಹವಾಮಾನ”ವು ಅಡಿಕೆ ಬೆಳೆಗೆ ಪೂರಕವಾಗಿದೆ.
ಮೊದಲೆಲ್ಲಾ ಮಲೆನಾಡಿನ ಭಾಗಗಳಲ್ಲಿ ಬೆಳೆಯುತ್ತಿದ್ದ ಅಡಿಕೆಯು, ಈಗ “ನೀರಾವರಿ ಪದ್ಧತಿಯ ಮೂಲಕ ಚಿತ್ರದುರ್ಗ ದಾವಣಗೆರೆ” ಹಾಗೂ ಒಳನಾಡಿನ ಭಾಗಕ್ಕೂ ಪ್ರವೇಶಿಸಿದೆ. ಇದರಿಂದ ಅಡಿಕೆ ಬೆಳೆಯು ರಾಜ್ಯದಾದ್ಯಂತ ವಿಸ್ತರವಾಗುತ್ತಿರುವುದನ್ನು ಗಮನಿಸಬಹುದು.
ಹೀಗಾಗಿ ಅಡಿಕೆ ಬೆಳೆಯು ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳು ಅಡಿಕೆ ಬೆಳೆಯನ್ನು ಒಂದು ಪ್ರಮುಖ ವಾಣಿಜ್ಯ ಕೃಷಿಯನ್ನಾಗಿ ಅಳವಡಿಸಿಕೊಂಡಿವೆ.
ಅಡಿಕೆ ಬೆಳೆಗೆ ಸೂಕ್ತವಾದ ಹವಮಾನ ಮತ್ತು ಮಣ್ಣು:-
Suitable climate and soil for arecanut plantation:-
ಹವಾಮಾನ:- 14°C – 36°C ನಡುವಿನ ಉಷ್ಣಾಂಶ ಮತ್ತು ಸಮರ್ಪಕ ಮಳೆ ಅಗತ್ಯ.
ಮಣ್ಣು :- ಕೆಂಪು ಮಣ್ಣು, ಅಲ್ಯೂವಿಯಲ್ ಮಣ್ಣು, ಉತ್ತಮ ನೀರು ಹರಿವು ಇರುವ ಮಣ್ಣು ಸೂಕ್ತ.
“ನೀರು ನಿಲ್ಲುವ ಮಣ್ಣು ಅಡಿಕೆ ಬೆಳೆಗೆ ಹಾನಿಕಾರಕ”.
ಯಾವ ಅಡಿಕೆ ಬೆಳೆಯ ತಳಿ ಸೂಕ್ತವಾಗಿರುತ್ತದೆ?
Which type of clone is good for arecanut plantation?
ಸದ್ಯ ಕರ್ನಾಟಕದಲ್ಲಿ ತುಂಬಾ ಪ್ರಸಿದ್ಧವಾದ ತಳಿಗಳೆಂದರೆ “ಮಂಗಳ, ಸುಮಂಗಳ, ಶ್ರೀಮಂಗಳ, ಮೋಹಿತನಗರ, ವಿಟ್ಟಳ”.
ಈ ತಳಿಗಳನ್ನು ಅಡಿಕೆ ಬೆಳೆಗಾರರು ತಮ್ಮ ಪ್ರದೇಶಕ್ಕೆ ತಕ್ಕ ತಳಿಯನ್ನು ಆಯ್ಕೆ ಮಾಡುವುದು ಮುಖ್ಯ.
ಅಡಿಕೆ ಸಸಿಗಳ ನಾಟಿ ವಿಧಾನ ಹೇಗೆ?
How to plant arecanut plantation?
ಸಾಮಾನ್ಯವಾಗಿ 2.7 × 2.7 ಮೀ ಅಥವಾ 3 × 3 ಮೀ ಅಂತರದಲ್ಲಿ ನಾಟಿ ಮಾಡಬೇಕು.
ಈ ನಾಟಿ ಪ್ರಕ್ರಿಯೆಯು “ಮಳೆಗಾಲದ ಆರಂಭ”ದಲ್ಲಿ ಮಾಡಿದರೆ ಉತ್ತಮ ಬೆಳವಣಿಗೆಯಾಗುತ್ತದೆ.
ಅಡಿಕೆ ಬೆಳೆಯ ನೀರಾವರಿ ಮತ್ತು ಗೊಬ್ಬರದ ವ್ಯವಸ್ಥೆ ಹೇಗೆ?
How to irrigate and fertilize arecanut plants?
ನೀರಾವರಿಯು ಅಡಿಕೆ ಬೆಳೆಯಲ್ಲಿ ಬಹು ಮುಖ್ಯವಾಗಿದ್ದು, ಅಡಿಕೆಯ ಪ್ರತಿ ಸಸ್ಯವೂ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಹೀರಿಕೊಂಡರೆ ಸರಿ ಸುಮಾರು ಅಷ್ಟೇ ಪ್ರಮಾಣದ ನೀರು ಗಿಡದ ಸುತ್ತಲೂ ತೇವಾಂಶವನ್ನು ಕಾಯ್ದಿರಿಸಿಕೊಳ್ಳಲು ಅಗತ್ಯವಾಗಿರುತ್ತದೆ. ಹಾಗಾಗಿ “ಮಳೆಗಾಲ ಮಾತ್ರವಲ್ಲದೆ ಬೇಸಿಗೆಯಲ್ಲಿ ನಿಯಮಿತ ನೀರಾವರಿ ಅಗತ್ಯ”.
ಸಾವಯವ ಗೊಬ್ಬರ (ಗೋಮಳ ಗೊಬ್ಬರ), ಜೊತೆಗೆ NPK ರಾಸಾಯನಿಕ ಗೊಬ್ಬರ
ವರ್ಷಕ್ಕೆ 2–3 ಹಂತಗಳಲ್ಲಿ ಗೊಬ್ಬರ ನೀಡುವುದು ಉತ್ತಮ.
ಅಡಿಕೆ ಬೆಳೆಯ ಇಳುವರಿಯನ್ನು ಎಷ್ಟು ವರ್ಷದಲ್ಲಿ ನಿರೀಕ್ಷಿಸಬಹುದು?
When will farmer can expect yielding of arecanut?
ಅಡಿಕೆ ಸಸಿಯನ್ನು ನಾಟಿ ಮಾಡಿದ “5-7 ವರ್ಷ”ಗಳಲ್ಲಿ ಇಳುವರಿ ಆರಂಭವಾಗುತ್ತದೆ.
ಗೊಬ್ಬರ ಹಾಗೂ ನೀರಾವರಿ ಈ ಎಲ್ಲಾ ಅಂಶಗಳನ್ನು ನೀಡಿ, “ಉತ್ತಮವಾಗಿ ನಿರ್ವಹಣೆ” ಮಾಡಿದ್ದಲ್ಲಿ, ಪ್ರತಿ ಅಡಿಗೆ ಗಿಡಕ್ಕೆ “2-4 kg ಯಷ್ಟು ಒಣ ಅಡಿಕೆ”ಯನ್ನು ಪಡೆಯಬಹುದು.
ಅಡಿಕೆ ಗಿಡಕ್ಕೆ ಬರಬಹುದಾದಂತಹ ಸಾಮಾನ್ಯ ರೋಗಗಳು?
Common pest diseases to arecanut plantation?
ಕೋಳಲು ರೋಗ (Fruit rot)
ಬೇರು ಕೊಳೆ ರೋಗ
ಎಲೆ ಚುಕ್ಕಿ ರೋಗ
ಅಡಿಕೆ ಗಿಡಗಳು “ರೋಗಕ್ಕೆ ತುತ್ತಾದರೆ” ಸಹಜವಾಗಿಯೇ ಅವುಗಳ “ಇಳುವರಿ ಮೇಲೆ ಪರಿಣಾಮ” ಬೀರಿ ಇಳುವರಿಯನ್ನು ಕುಂಠಿತಗೊಳಿಸುತ್ತದೆ ಹಾಗಾಗಿ ರೈತರು ನಿಯಮಿತವಾಗಿ ಅಡಿಕೆ ಗಿಡಗಳ ಪರಿಶೀಲನೆ ಮಾಡಿ ಮುಂಜಾಗ್ರತೆ ಕೈಗೊಳ್ಳುವುದು ಅಗತ್ಯ.
ಅಡಿಕೆ ಕಟಾವಿನಿಂದ ರೈತರಿಗೆ ಆಗುವ ಉಪಯೋಗ?
Benifit to farmers from arecanut yeild?
ಅಡಿಗೆ ಕಟಾವಿನ ಹಣ್ಣುಗಳು ಪಕ್ವವಾದಾಗ ಕಟಾವು ಮಾಡಲಾಗುತ್ತದೆ.
ಹಸಿ ಅಡಿಕೆ ಮತ್ತು ಒಣ ಅಡಿಕೆ ಎರಡೂ ವ್ಯಾಪಾರಕ್ಕೆ ಉಪಯುಕ್ತ.
ಧಾರ್ಮಿಕ, ಔಷಧಿ ಮತ್ತು ವಾಣಿಜ್ಯ ಬಳಕೆ.
ಒಂದು ಕ್ವಿಂಟಲ್ ಹಸಿ ಅಡಿಕೆಗೆ ಎಷ್ಟು ಕೆಜಿ ಒಣ ಅಡಿಕೆ ಬರುತ್ತದೆ?
How much dry arecanut will get for one Kwintal Unhusky arecanut?
“ಒಂದು ಕ್ವಿಂಟಲ್ ಹಸಿ ಅಡಿಕೆಗೆ 15 ರಿಂದ 16 ಕೆಜಿ ಯಷ್ಟು ಒಣ ಅಡಿಕೆ”ಯನ್ನು ಪಡೆಯಬಹುದು.
ಅಲ್ಲದೆ ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಗಿಂತ ಒಣ ಅಡಿಕೆಯ ಬೆಲೆ ಹೆಚ್ಚಾಗಿದ್ದು ಒಣ ಅಡಿಕೆಯನ್ನು ಮಾರಿದಾಗ ಸಿಗುವ ಲಾಭ ಅಧಿಕವಾಗಿದೆ.
ಹಾಗಾಗಿ ರೈತರು ಹಸಿ ಅಡಿಕೆಯನ್ನು ಸಿಪ್ಪೆ ತೆಗೆದು ಬೇಯಿಸಿ ನಂತರ ಒಣಗಿಸಿ ಮಾರುಕಟ್ಟೆಯಲ್ಲಿ ಮಾರಿ ಉತ್ತಮ ಲಾಭವನ್ನು ಕಂಡುಕೊಳ್ಳುತ್ತಾರೆ ಅಲ್ಲದೆ ಇದರಲ್ಲಿ ರೈತರಿಗೆ “ಪುಡಿ ಚೂರು ಅಡಿಕೆಯು ಕಸ”ವಾಗಿ ಸ್ವಲ್ಪ ವ್ಯರ್ಥವಾಗುತ್ತದೆ. ಆದಾಗಿಯೂ ರೈತರು ಅನಾಡಿಕೆಯನ್ನು ಮಾರುಕಟ್ಟೆಯಲ್ಲಿ ಮಾರಿದಾಗ ಉತ್ತಮ ಲಾಭವನ್ನು ಪಡೆಯುತ್ತಾರೆ ಎಂದು ಹೇಳಬಹುದು.
Hense, Arecanut plantation is one of the most important commercial agricultural activities in Karnataka.
The state is the largest producer of arecanut in India. But farmers getting more profit from dry Arecanut than Unhusky arecanuts, and unhusky Arecanut selling is not very famous trading method in karnataka dye to its less profit.
anyway finally a farmer can get “15-16 kg of dry Arecanut for one qwintal unhusky Arecanut”.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply