Arecanut scientis :: ಅಡಿಕೆಯಲ್ಲಿ ನುಸಿ ಬಾದೆ, ಕೀಟ ಬಾದೆ, ವೈಜ್ಞಾನಿಕವಾಗಿ ನಿವಾರಣೆ ಮಾಡುವುದು ಹೇಗೆ?
ಅಡಿಕೆಯಲ್ಲಿ ನುಸಿ ಬಾದೆ, ಕೀಟ ಬಾದೆ :: ರೈತರು ಆತಂಕ ಪಡುವ ಅಗತ್ಯವಿಲ್ಲ ನುಸಿ ಬಾದೆ ಮತ್ತು ಕೀಟಬಾಧೆಗೆ ಇಲ್ಲಿದೆ ಸರಳ ಪರಿಹಾರ!!!
Arecanut is one of the important commercial crop of inland karnataka districts like shimoga, Davangere Chitradurga and other coastal districts and arecanut crop management is one of the biggest challenge for farmers because, it is very sensitive to mite and pests.
hence mite and pest management is likely to be skill for farmers should include in their cultivation of arecanut to maximize their profit and reduce the loss.
ಕರ್ನಾಟಕದ ಹಲವು ಭಾಗಗಳಲ್ಲಿ ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ, ಅಡಿಕೆ ಒಂದು ಲಾಭ ತಂದು ಕೊಡುವ ಬೆಳೆ ಮಾತ್ರವಲ್ಲದೆ, ಇದೊಂದು ಸಾಂಪ್ರದಾಯಿಕ ಬೆಳೆಯಾಗಿಯೂ ಕರ್ನಾಟಕದ ಶಿವಮೊಗ್ಗ ದಾವಣಗೆರೆ ಹಾಗೂ ಇತರ ಜಿಲ್ಲೆಗಳಲ್ಲಿ ಸಾಕಷ್ಟು ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆ ಎಂದು ಹೇಳಬಹುದು.
ಇಂಥ ಅಡಿಕೆ ಬೆಳೆಯ ಬೆಳೆಯನ್ನು ಬೆಳೆಯುವಾಗ ರೈತರು ಸಾಕಷ್ಟು ಎಚ್ಚರ ವಹಿಸಬೇಕಾಗಿರುತ್ತದೆ. ಏಕೆಂದರೆ ಅಡಿಕೆ ಸಾಮಾನ್ಯವಾಗಿ, ಸುಲಭವಾಗಿ ನುಸಿ ಮತ್ತು ಕೀಟಗಳಿಂದ ಬಾಧಿತವಾಗುತ್ತದೆ.
ನುಸಿ ಮತ್ತು ಕೀಟಗಳ ಹಾವಳಿ ಎಲ್ಲಾ ಪ್ರಮುಖ ಬೆಳೆಗಳಲ್ಲೂ ಕಂಡು ಬಂದರೂ ಸಹ, ಈ ನುಸಿ ಮತ್ತು ಕೀಟಗಳ ಬಾಧೆ ಅಡಿಕೆ ಬೆಳೆಯಲ್ಲಿ ತುಂಬಾ ದೊಡ್ಡ ಪ್ರಮಾಣದ ನಷ್ಟವನ್ನುಂಟು ಮಾಡಬಲ್ಲ ರೀತಿಯಲ್ಲಿ ಹಾನಿ ಮಾಡುತ್ತವೆ ಎಂದರೆ ತಪ್ಪಾಗಲಾರದು.
ಹಾಗಾಗಿ ರೈತರು ಚಾಚು ತಪ್ಪದೆ ತಮ್ಮ ಕೃಷಿ ಪದ್ಧತಿಯಲ್ಲಿ ನುಸಿ ಬಾದೆ ಮತ್ತು ಕೀಟ ಬಾಧೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ.
ನುಸಿ ಬಾಧೆ ಎಂದರೇನು?
What is mite infection?
“ನುಸಿ ಬಾಧೆ ಎಂದರೆ ಸಾಮಾನ್ಯವಾಗಿ ಕಣ್ಣಿಗೆ ಸುಲಭವಾಗಿ ಕಾಣಿಸದ ಕೀಟಗಳು ಎಲೆ ಹಾಗೂ ಇತರೆ ಕೋಮಲ ಭಾಗಗಳಿಂದ ರಸ ಹೀರಿ ಅಡಿಕೆ ಬೆಳೆಯ ಇರುವ ಇಳುವರಿಯನ್ನು ಕಡಿಮೆಗೊಳಿಸುತ್ತವೆ” ಇದನ್ನು ನುಸಿ ಬಾದೆ ಎಂದು ಎನ್ನಬಹುದು.
ಅಡಿಕೆ ಬೆಳೆಗಳಲ್ಲಿ ಈ ನುಸಿ ಬಾಧೆ ಉಂಟಾಗಲು ಕಾರಣಗಳೇನು?
What is the reasons for mite infection in arecanut crops? ಸಾಮಾನ್ಯವಾಗಿ ನುಸಿ ಬಾದೆಯೂ “ಹವಮಾನ ಬದಲಾವಣೆ“ಯ ಸಮಯದಲ್ಲಿ ಕಾಣಿಸುತ್ತದೆ ಅಂದರೆ “ಮಳೆಗಾಲದಿಂದ ಬೇಸಿಗೆ ಕಾಲ” ವಾಗುವ ಹಂತದಲ್ಲಿ ಹಾಗೂ “ಚಳಿಗಾಲದಿಂದ ಬೇಸಿಗೆ ಕಾಲ“ಕ್ಕೆ ಬದಲಾಗುವ ಹಂತದಲ್ಲಿ ನುಸಿ ಬಾದೆಯನ್ನು ಅಡಿಕೆ ಗಿಡಗಳಲ್ಲಿ ಗಮನಿಸಬಹುದು.
ಇದರ ಅರ್ಥ “ತಂಪು ಹವಮಾನದಿಂದ ಒಣ ಹವಮಾನ”ಕ್ಕೆ ಬದಲಾಗುವ ಸಮಯದಲ್ಲಿ ಸಾಮಾನ್ಯವಾಗಿ ಅಡಿಕೆ ಸಸಿಗಳು ನುಸಿ ಬಾದೆಗೆ ತುತ್ತಾಗುತ್ತವೆ.
ಮತ್ತೊಂದು ಸಾಮಾನ್ಯ ಕಾರಣವೆಂದರೆ ಅಡಿಕೆ ತೋಟದಲ್ಲಿರುವ “ಅಗಲ ಎಲೆಗಳ ಜಾತಿಯ ಕಳೆ”ಗಳನ್ನು ನಾಶ ಮಾಡಿದಾಗ, “ಅಗಲ ಎಲೆಯ ಕಳೆಗಳಲ್ಲಿರುವ ನುಸಿ”ಗಳು ಅಡಿಕೆ ಗಿಡಗಳನ್ನು “ಆಶ್ರಯಿಸುತ್ತವೆ“. ಇದು ಕೂಡ ಅಡಿಕೆ ಬೆಳೆಗೆ ನುಸಿ ಬಾದೆ ಉಂಟು ಮಾಡಲು ಒಂದು ಪ್ರಮುಖ ಕಾರಣ ಎನ್ನಬಹುದು.
ಅಡಕೆ ಬೆಳೆ ಇರುವಂತಹ ಪ್ರದೇಶದಲ್ಲಿ “ಶುಷ್ಕ ಗಾಳಿ“ಯೊಂದಿಗೆ ಧೂಳು ಹಾಗೂ ಇತರೆ ಕಸ ಕಡ್ಡಿ ಗಾಳಿಯೊಂದಿಗೆ ಸೇರಿ, ಆ ಗಾಳಿ ಅಡಿಕೆ ಸಸ್ಯವನ್ನು ತಲುಪಿದಾಗ ಅದರ ಮುಖಾಂತರ ನುಸಿ ಅಡಿಕೆ ಸಸಿಗೆ ದಾಳಿ ಇಡುತ್ತವೆ.
ಈ ಎಲ್ಲಾ ಕಾರಣಗಳು ಅಡಿಕೆ ಗಿಡಗಳಲ್ಲಿ ನುಸಿ ಬಾದೆಯನ್ನುಂಟು ಮಾಡಲು ಪ್ರಮುಖ ಕಾರಣಗಳಾಗಿವೆ.
ಹಾಗಾದರೆ ನುಸಿ ದಾಳಿಗೆ ಒಳಗಾದ ಬೆಳೆಯ ಲಕ್ಷಣಗಳೇನು?
What is the symptoms of mite infected crop?
ನುಸಿದಾಳಿಗೆ ಒಳಗಾದ ಬೆಳೆಯ ಎಲೆಗಳಲ್ಲಿ, “ಹಳದಿ – ಕಂದು ಬಣ್ಣದ ಕಲೆ”ಗಳನ್ನು ಕಾಣಬಹುದು.
ನುಸಿದಾಳಿಗೆ ಒಳಗಾದ ಬೆಳೆಯ ಎಲೆಗಳು ಒಳಮುಖವಾಗಿ “ಮಡಚಿಕೊಳ್ಳುತ್ತವೆ“.
ಅಲ್ಲದೆ ದಾಳಿಗೆ ಒಳಗಾದ ಬೆಳೆಯು ಕ್ರಮೇಣವಾಗಿ “ಒಣಗಲು” ಪ್ರಾರಂಭಿಸುತ್ತದೆ.
ಈ ರೀತಿಯಾಗಿ “ಹೊಸ ಮೊಗ್ಗುಗಳು ಬೆಳೆಯಲು ಅಡ್ಡಿ” ಉಂಟು ಮಾಡುವುದಲ್ಲದೆ ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಒಟ್ಟಾರೆಯಾಗಿ, ನುಸಿದಾಳಿಗೆ ಒಳಗಾದ ಬೆಳೆಯ “ಇಳುವರಿಯು ನಿಗದಿತ ಪ್ರಮಾಣಕ್ಕಿಂತ ಅತಿ ಕಡಿಮೆ ಮಟ್ಟ” ದಲ್ಲಿ ಆಗುತ್ತದೆ.
ನುಸಿದಾಳಿಯನ್ನು ತಡೆಗಟ್ಟುವ ಮಾರ್ಗ ಯಾವುದು?
How to control mite infection?
ನುಸಿ ಬಾಧೆಯನ್ನು ರೈತರು ಸರಳವಾಗಿ ಸಾವಯವದ ಮುಖಾಂತರ ತಡೆಗಟ್ಟಬಹುದು,
ಹೇಗೆಂದರೆ,
ಒಂದು ಡ್ರಮ್ ನಲ್ಲಿ “ಗೋವಿನ ಸಗಣಿ ಮತ್ತು ಗಂಜಲ” ವನ್ನು ಶುದ್ಧವಾಗಿ ಬೆರೆಸಿ, ಈ ಬೆರಸಿರುವ ಮಿಶ್ರಣವನ್ನು ನುಸಿ ಇರುವ ಅಡಿಕೆ ಸಸ್ಯದ ಎಲೆಗಳಲ್ಲಿ ಕೆಳಭಾಗಕ್ಕೆ ಲೇಪಿಸಬೇಕು,
ಈ ರೀತಿಯಾಗಿ ಲೇಪಿಸಿ ನಾಲ್ಕರಿಂದ ಐದು ದಿನಗಳವರೆಗೂ ಹಾಗೆಯೇ ಬಿಡಬೇಕು, ನಾಲ್ಕು ದಿನಗಳ ನಂತರ ಸಗಣಿಯು ಗಟ್ಟಿಯಾಗಿ ಲೇಪಿಸಿದ ಜಾಗದಿಂದ ಭೂಮಿಗೆ ಬೀಳುತ್ತದೆ.
“ಸಗಣಿ ಭೂಮಿಗೆ ಬೀಳುವ ಸಮಯದಲ್ಲಿ ಸಗಣಿಯೊಂದಿಗೆ ನುಸಿಯ ಮೊಟ್ಟೆಗಳು ಸಹ ಭೂಮಿಗೆ ಬೀಳುವುದರಿಂದ” ನುಸಿ ಹರಡುವಿಕೆಯನ್ನು ಸುಲಭವಾಗಿ ತಪ್ಪಿಸಬಹುದು, ಈ ಒಂದು ರೀತಿಯಲ್ಲಿ ನುಸಿ ಬಾದೆಯನ್ನು ತಕ್ಕಮಟ್ಟಿಗೆ ಸುಧಾರಿಸಬಹುದು.
ಮತ್ತೊಂದು ರೀತಿಯಲ್ಲಿ ನುಸಿ ಬಾದೆಯನ್ನು ಸುಧಾರಿಸುವ ಮಾರ್ಗವೆಂದರೆ, ಅಡಿಕೆ ಸಸ್ಯದ “ಎಲೆಗಳ ಕೆಳಭಾಗದಲ್ಲಿ ಹೆಚ್ಚು ಒತ್ತಡದ ನೀರನ್ನು ಬಿಡುವುದರ” ಮುಖಾಂತರವೂ ಸಹ ನುಸಿಗಳನ್ನು ಕೊಲ್ಲಬಹುದು.
“200 ಲೀಟರ್ ನೀರಿಗೆ ಅರ್ಧ ಕೆಜಿ ಎಷ್ಟು ಸಲ್ಫರ್ ಅಥವಾ ಗಂಧಕವನ್ನು ಮಿಶ್ರಣ ಮಾಡಿ ನುಸಿಗಳಿಗೆ ಸ್ಪ್ರೇ” ಮಾಡುವುದರ ಮುಖಾಂತರವೂ ಸಹ ನುಸಿಯನ್ನು ಸುಧಾರಿಸಬಹುದು ಅಥವಾ ತಡೆಗಟ್ಟಬಹುದು.
“ಜೇಡನಾಶಕ ಮತ್ತು ಮೊಟ್ಟೆ ನಾಶಕ”ಗಳಂತಹ ಕೀಟನಾಶಕಗಳನ್ನು ಉಪಯೋಗಿಸಿ ಈ ನಸಿಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ಮತ್ತೊಂದು ಪ್ರಮುಖ ವಿಷಯವೆಂದರೆ ಯಾವ ಅಡಿಕೆ ತೋಟದಲ್ಲಿ ಅಂತರ್ಮುಖಿ ತಾಪಮಾನ ಹೆಚ್ಚಿರುತ್ತದೆಯೋ ಅಲ್ಲಿ ನುಸಿಗಳ ಬಾಧೆ ಹೆಚ್ಚಾಗಿರುತ್ತದೆ.
ಆದ್ದರಿಂದ ರೈತರು ಪ್ರಮುಖವಾಗಿ ಆದಷ್ಟು ಮಟ್ಟಿಗೆ “ಭೂಮಿಯನ್ನು ಬರಡು ಬಿಡದೆ ಹಸುವಿನ ಗೊಬ್ಬರವನ್ನು ಹಾಕುವ ಮೂಲಕ ಅಂತರ್ಮುಖಿ ತಾಪಮಾನವನ್ನು ತಗ್ಗಿಸಬಹುದು”.
ಅಂತರ್ಮುಖ ತಾಪಮಾನವನ್ನು ತಗ್ಗಿದಿಸಿದಾಗ ಸಾಮಾನ್ಯವಾಗಿ ಆರ್ದ್ರ ರೀತಿಯ ವಾತಾವರಣ ಸೃಷ್ಟಿಯಾಗುತ್ತದೆ, ಈ “ಆರ್ದ್ರ ರೀತಿಯ ತಾಪಮಾನವು ನುಸಿಗಳ ಬೆಳೆ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದಿಲ್ಲ”.
ಅಡಿಕೆ ಬೆಳೆಯನ್ನು ಬೆಳೆಯುವಾಗ “ಪೋಷಕಾಂಶ ಮತ್ತು ನೀರಿನ ನಿರ್ವಹಣೆ” ಅತಿ ಪ್ರಮುಖ ಪಾತ್ರ ವಹಿಸುತ್ತದೆ. ರೈತರು ಪೋಷಕಾಂಶ ಮತ್ತು ನೀರಿನ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದೆ ಇದ್ದಲ್ಲಿ ಅಡಿಕೆ ಗಿಡಗಳು ಸುಲಭವಾಗಿ ನುಸಿಬಾದೆಗೆ ತುತ್ತಾಗುತ್ತವೆ, ಹಾಗಾಗಿ ನುಸಿ ಬಾದೆಯನ್ನು ತಡೆಗಟ್ಟಲು ಅಗತ್ಯ.
ಸೂಕ್ಷ್ಮ ಪೋಷಕಾಂಶಗಳು ಹಾಗೂ ಸಸ್ಯಕ್ಕೆ ಬೇಕಾದ ನೀರಿನ ಪ್ರಮಾಣದ ಅವಶ್ಯಕತೆ ನಿರ್ವಹಣೆಯೂ ಅತ್ಯಂತ ಪ್ರಮುಖ ವಾಗಿರುತ್ತದೆ “ಸೂಕ್ಷ್ಮ ಪೋಷಕಾಂಶಗಳು ಮತ್ತು ನೀರಿನ ನಿರ್ವಹಣೆ” ಉತ್ತಮವಾದರೆ ನುಸಿಗಳಿಂದ ಮುಕ್ತಿ ಪಡೆಯಬಹುದು.
ಅಡಿಕೆ ಬೆಳೆಯಲ್ಲಿ ನೀರಿನ ನಿರ್ವಹಣೆ ತುಂಬಾ ಅಗತ್ಯ, ಅಂತೆಯೇ “ನೀರನ್ನು ಕೊಡುವ ಸಮಯ”ವೂ ಕೂಡ ಮುಖ್ಯವಾಗುತ್ತದೆ. ನುಸಿ ಬಾದೆಯನ್ನು ಕಡಿಮೆಗೊಳಿಸಲು ನೀರನ್ನು ರೈತರು “ರಾತ್ರಿ ಸಮಯದಲ್ಲಿ ನೀಡುವುದರಿಂದ ಆರ್ದ್ರ ವಾತಾವರಣ ಸೃಷ್ಟಿ”ಯಾಗಿ, ನುಸಿ ಬೆಳವಣಿಗೆಯನ್ನು ತಡೆಗಟ್ಟುತ್ತದೆ.
“ಹೆಚ್ಚು ಸಾರಜನಕ ಮತ್ತು ಮೆಗ್ನೀಷಿಯಂ ಯುಕ್ತ” ಗೊಬ್ಬರಗಳನ್ನು ಗಿಡಕ್ಕೆ ನೀಡುವುದರಿಂದ ನುಸಿ ಬಾದೆಯನ್ನು ತಡೆಗಟ್ಟುವಂತಹ ಶಕ್ತಿ ಸಸ್ಯಗಳಿಗೆ ಬರುವುದಲ್ಲದೆ “ಹಸಿರಿನ ಅಂಶವು ಕೂಡ ಹೆಚ್ಚಾಗುತ್ತದೆ”.
ಈ ಎಲ್ಲಾ ಸರಳ ಮಾರ್ಗ ಮತ್ತು ಉಪಾಯಗಳ ಮೂಲಕವಾಗಿ ನುಸಿಬಾದೆಯನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು.
ನುಸಿ ಬಾಧೆಯನ್ನು ತಡೆಯಲು ಉಪಯೋಗಿಸಬಹುದಾದ ಮೈಟಿಸೈಡ್ ಯಾವ್ಯಾವು?
Which miticides can use to control mites?
- xmite
- abacin
- Ceasemite
- Nagata
- Omite
- Floramite
ಈ ಎಲ್ಲಾ ಮೈಟಿಸೈಡ್ ಗಳಲ್ಲಿ ಯಾವುದಾದರೂ “ಒಂದು ಉತ್ತಮ ಮೈಟಿಸೈಡ್” ಅನ್ನು ಅಗತ್ಯ ಪ್ರಮಾಣದಲ್ಲಿ ನೀರಿಗೆ ಬೆರೆಸಿ ಸ್ಪ್ರೇ ಮಾಡುವುದರ ಮೂಲಕ ಉಪಯೋಗಿಸಬಹುದು.
ಆದರೆ ರೈತರು ಮುಖ್ಯವಾಗಿ ಗಮನಿಸಬೇಕಾದುದೇನೆಂದರೆ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಪರಿಣಾಮಕಾರಿ ಅಂದಿರುವಂತಹ ಮೈಟಿಸೈಡ್ ಅನ್ನು ಆಯ್ಕೆ ಮಾಡಿ ಬಳಸಬೇಕಾಗುತ್ತದೆ.
ಜೇಡಗಳನ್ನು ನಾಶಪಡಿಸಲು ಬಳಸಬಹುದಾದ ಜೇಡನಾಶಕಗಳು ಯಾವ್ಯಾವು?
Which spidercides can use for spider reduction?
- ನುಸಿಗಳು ಸೃಷ್ಟಿಸಿರುವ ಜೇಡಗಳನ್ನು ನಾಶಪಡಿಸಲು ನುಶಿನಾಶಕದ ಜೊತೆಗೆ,
- ಸಲ್ಫರ್
- ಸಿಲಿಕನ್ ಸ್ಪೈಡರ್
- ಬ್ಲೀಚಿಂಗ್ ಪೌಡರ್
- ವೆಜಿಟೇಬಲ್ ಆಯಿಲ್
- ಶಾಂಪು
ಈ ಮೇಲಿನ ಪದಾರ್ಥಗಳನ್ನು “200 ಲೀಟರ್ ನೀರಿನೊಂದಿಗೆ 1/2 ಕೆಜಿ ಯಷ್ಟು ಸಲ್ಫರ್” ಅನ್ನು “ನುಸಿ ನಾಶಕದೊಂದಿಗೆ ಮಿಶ್ರಣ ಮಾಡಿ ಸ್ಪ್ರೇ” ಮಾಡುವುದರಿಂದ, ಜೇಡ ಸಮೇತ ನುಸಿಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ಈ ಮೇಲೆ ತಿಳಿಸಿರುವ ಎಲ್ಲಾ ಮಾರ್ಗಗಳು ಅಡಿಕೆ ಬೆಳೆಯಲ್ಲಿನ ನುಸಿ ಬಾಧೆಯನ್ನು ಕಡಿಮೆಗೊಳಿಸಿ ಇಳುವರಿಯನ್ನು ಹೆಚ್ಚಿಸಲು ಉಪಯೋಗಕಾರಿಯಾಗಿವೆ.
ನುಸಿ ಬಾದೆ ಎನ್ನುವುದು ಸಾಮಾನ್ಯವಾಗಿ ಎಲ್ಲ ರೈತರಿಗೂ ಕಾಡುವಂತಹ ಒಂದು ಸವಾಲಿನ ಸಮಸ್ಯೆಯಾಗಿದೆ ಆದರೆ ಮೇಲೆ ತಿಳಿಸಿರುವ ಸುಲಭ ಹಾಗೂ ಸರಳ ಮಾರ್ಗಗಳ ಮುಖಾಂತರ ತೀವ್ರ ನುಸಿ ಬಾದೆ ಅಥವಾ ಸರಳ ನುಸಿ ಬಾದೆ ಇದ್ದರೂ ಸಹ ಸುಲಭವಾಗಿ ಜಯಿಸಬಹುದು.
ನುಸಿ ಬಾಧೆಯಿಂದ ಆಗುವ ಅನಾಹುತ ಹಾಗೂ ನಷ್ಟವನ್ನು ತಪ್ಪಿಸಿ ವಾಣಿಜ್ಯ ಬೆಳೆಯಲ್ಲಿ ಬರುವಂತಹ ಅಧಿಕ ಲಾಭವನ್ನು ಎಲ್ಲಾ ರೈತರು ಪಡೆಯಬಹುದು,
ಇದಕ್ಕಾಗಿ ಅಗತ್ಯ ಪ್ರಮಾಣದ ಪೋಷಕಾಂಶ ನಿರ್ವಹಣೆ ಹಾಗೂ ನೀರಿನಲ್ಲಿ ನಿರ್ವಹಣೆ ಮಾಡಿದಾಗ ನುಸಿವಾದೆಯ ಹಾವಳಿಯೂ ಕಡಿಮೆಯಾಗುತ್ತದೆ ನುಸಿ ಬಾದೆಯ ಹಾವಳಿ ಕಡಿಮೆಯಾದಾಗ ಯಥಾಪ್ರಕಾರ ಇಳುವರಿ ಹೆಚ್ಚಾಗುತ್ತದೆ ಲಾಭ ಸಹ ಹೆಚ್ಚಾಗುತ್ತದೆ.
Mite infection control is one the biggest challenge to farmers but by following above mentioned methods to control mites in easy way is the best solution for farmers to increase their crop production with profit.
Type of mite or level of mite infection doesn’t matter when farmers know the management of mites in organic method and most importantly management of nutrients and water is the key factor for reduce mite infection in arecanut cultivation.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply