PM Matru Vandana Scheme:: ಈ ಯೋಜನೆ ಅಡಿ ಮಹಿಳೆಯರು ಅರ್ಜಿ ಹಾಕಿ 11000 ಪಡೆಯಿರಿ!!
ಹಣ ಪಡಿಯೋದು ಹೇಗೆ ಈಗಲೇ ಚೆಕ್ ಮಾಡಿ!
ಪಿಎಂ ಮಾತೃವಂದನ ಯೋಜನೆ (PMMVY) ಅಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮತ್ತು ಪ್ರಸುತಿಯ ನಂತರದ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ ಮಹಿಳೆಯರು ಮೊತ್ತವಾಗಿ ₹11,000/- ನೆರವು ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಸಲ್ಲಿಸಬಹುದು.
PM ಮಾತೃವಂದನ ಯೋಜನೆಗೆ ಅರ್ಜಿ ಹಾಕುವುದು ಹೇಗೆ?
ಆನ್‌ಲೈನ್ ಮೂಲಕ:
Step1: ವೆಬ್‌ಸೈಟ್ ಗೆ ಭೇಟಿ ನೀಡಲು ಈ ಕೆಳಗಿನ ಲಿಂಕ್ (Link) ಮೇಲೆ ಕ್ಲಿಕ್ ಮಾಡಿ
Step 2: ನಂತರ ಓಪನ್ ಆಗುವ ಪೇಜ್ ನಲ್ಲಿ ಸಿಟಿಜನ್ ಲಾಗಿನ್(Citizen login) ಎಂದು ಇದ್ದು ಅದರ ಮೇಲೆ ಕ್ಲಿಕ್ ಮಾಡಿ

Pic 1: Select on citizen login
Step 3: ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ವೆರಿಫೈ(Verify) ಮೇಲೆ ಕ್ಲಿಕ್ ಮಾಡಿ

Pic 2: Verify mobile number
Step4: ನಂತರ ನಿಮ್ಮ ಹೆಸರು ರಾಜ್ಯ ಜಿಲ್ಲೆ ಗ್ರಾಮೀಣ ಪ್ರದೇಶ ಅಥವಾ ನಗರ ಎಂಬುದನ್ನು ಸೆಲೆಕ್ಟ್ ಮಾಡಿ ನಂತರ ನಿಮ್ಮ ತಾಲೂಕು ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ
Step 5: ಫಲಾನುಭವಿಯೊಂದಿಗಿನ ನಿಮ್ಮ ಸಂಬಂಧ ಏನು ಎಂಬುದನ್ನು ಸೆಲೆಕ್ಟ್ ಮಾಡಿ ಕ್ರಿಯೇಟ್ ಅಕೌಂಟ್(Create account) ಮೇಲೆ ಕ್ಲಿಕ್ ಮಾಡಿ

Pic 3: Select area
Step 6: ಆಗ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಕೊಟ್ಟಿರುವ ಜಾಗದಲ್ಲಿ ಎಂಟರ್ ಮಾಡಿ ಅಲ್ಲಿ ಕೊಡಲಾಗಿರುವ ಕ್ಯಾಪ್ಚವನ್ನು ಹಾಕಿ ವ್ಯಾಲಿಡೇಟ್(Validate) ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಅಕೌಂಟ್ ಕ್ರಿಯೇಟ್(Account create) ಆಗುತ್ತದೆ

Pic 4: Validate your account
Step 7: ಹಾಗೂ ಮತ್ತೊಮ್ಮೆ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ವೆರಿಫೈ(Verify) ಮೇಲೆ ಕ್ಲಿಕ್ ಮಾಡಿ ಆಗ ಮತ್ತೊಮ್ಮೆ ಓಟಿಪಿ ಕೇಳುತ್ತದೆ ಓಟಿಪಿ ಹಾಕಿ ವ್ಯಾಲಿಡೆಟ್(Validate) ಮೇಲೆ ಕ್ಲಿಕ್ ಮಾಡಿ

Pic 5: Verify your mobile number
Step 8: ಆಗ ಒಂದು ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ ಅದರಲ್ಲಿ ಎಡ ಭಾಗದಲ್ಲಿ ಮುರುಗರೆಗಳಿದ್ದು ಅದರ ಮೇಲೆ ಕ್ಲಿಕ್ ಮಾಡಿ

Pic 6: Click on three lines
Step 9: ಅಲ್ಲಿ ಡಾಟಾ ಎಂಟ್ರಿ(Data entry) ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ ನಂತರ ಬೆನಿಫಿಶಿಯರಿ ರಿಜಿಸ್ಟ್ರೇಷನ್(Beneficiary registration) ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ

Pic 7: Select data entry option
Step 10: ಮೊದಲಿಗೆ ನೀವು ಸರ್ಕಾರಿ ನೌಕರರ ಅಥವಾ ಸಾಮಾನ್ಯ ವ್ಯಕ್ತಿ ಎಂದು ಕೇಳುತ್ತದೆ ಸರ್ಕಾರಿ ನೌಕರ ಯಾಕೆ ಇನ್ನು ಸೆಲೆಕ್ಟ್ ಮಾಡಿಕೊಂಡರೆ ಈ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ
Step 11: ನಂತರ ಮೊದಲ ಮಗು ಅಥವಾ ಎರಡನೇ ಮಗು ಎಂಬ ಆಯ್ಕೆಯಾಗಿದ್ದು ಅದನ್ನು ಸೆಲೆಕ್ಟ್ ಮಾಡಬೇಕು ಮೊದಲ ಮಗು ಯಾವುದೇ ಮಗು ಆಗಿದ್ದರು ಕೂಡ ಅದಕ್ಕೆ ಹಣ ಸಿಗುತ್ತದೆ ಎರಡನೇ ಮಗು ಹೆಣ್ಣು ಮಗುವಾಗಿದ್ದಲ್ಲಿ ಮಾತ್ರ ಈ ಯೋಜನೆ ಅಡಿಯಲ್ಲಿ ಹಣ ಸಿಗುತ್ತದೆ

Pic 8: Enter basic family details
Step 12: ನಂತರ ನಂಬರ್ ಆಫ್ ಲೀವಿಂಗ್ ಚಿಲ್ಡ್ರನ್ (Number of living children) ಎಂಬ ಆಯ್ಕೆ ಇದು ಅದರಲ್ಲಿ ನಿಮಗೆ ಎಷ್ಟು ಜೀವಂತ ಮಕ್ಕಳಿದ್ದಾರೆ ಎಂದು ಹಾಕಿ
Step 13: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು, ಜನ್ಮ ದಿನಾಂಕ, ವಯಸ್ಸು, ಇನ್ನೀತರ ಕೇಳಲಾದ ಎಲ್ಲಾ ಮಾಹಿತಿ ಹಾಕಿ

Pic 9: Enter Aadhar number
Step 14:ಎಲಿಜಿಬಿಲಿಟಿ ಕ್ರೈಟಿರಿಯಾ( Eligibility criteria) ಎಂಬ ಆಯ್ಕೆಯಿದ್ದು ಅಲ್ಲಿ ಬಿಪಿಎಲ್ ರೇಷನ್ ಕಾಡ್೯ ಎಂದು ಸೆಲೆಕ್ಟ್ ಮಾಡಿ ಬಿಪಿಎಲ್ ಕಾಡ್೯ ಇಲ್ಲದಿದ್ದಲ್ಲಿ ಬೇರೆ ದಾಖಲೆ ಆಯ್ಕೆ ಮಾಡಬಹುದು
Step 15: ನಂತರ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಂಬರ್ ಹಾಕಿ ಹಾಗೂ ಅದನ್ನು ಅಪ್ಲೋಡ್ ಮಾಡಬೇಕು

Pic 10: Enter BPL card number
Step 16: ನಂತರದಲ್ಲಿ ಕೆಲವೊಂದು ಮುಖ್ಯ ದಿನಾಂಕಗಳ ಬಗ್ಗೆ ಮಾಹಿತಿಯನ್ನು ಕೇಳಿರುತ್ತಾರೆ ತಾಯಿ ಕಾರ್ಡ್ ನೋಡಿಕೊಂಡು ಆ ದಿನಾಂಕಗಳನ್ನು ಅಲ್ಲಿ ಹಾಕಿ

Pic 11: Enter complete details
Step 17: ನಂತರದಲ್ಲಿ ಮಗುವಿನ ವಿವರಗಳನ್ನು ಕೇಳುತ್ತಾರೆ ಅದನ್ನು ಸರಿಯಾಗಿ ಭರ್ತಿ ಮಾಡಿ

Pic 12: Fill basic details age gender
Step 18: ನಂತರ ನಿಮ್ಮ ಪ್ರಸ್ತುತ ವಿಳಾಸವನ್ನು ಹಾಕಿ ಕೆಳಗಡೆ ಅಂಗನವಾಡಿಯನ್ನು ಸೆಲೆಕ್ಟ್ ಮಾಡಿ
ನಂತರ ವಿವರಗಳೆಲ್ಲ ಸರಿಯಾಗಿದೆ ಎಂದು ಒಂದು ಸಲ ನೋಡಿಕೊಂಡು ಅರ್ಜಿಯನ್ನು ಸಬ್ಮಿಟ್(Submit) ಮಾಡಿ

Pic 13: Enter address
ಅಜಿ೯ ಸಲ್ಲಿಸಲು ಬೇಕಾಗುವ ದಾಖಲೆಗಳು!
1.ಗರ್ಭಾವಸ್ಥೆ ದೃಢೀಕರಣ ಪತ್ರ.
2.ಆದಾಯ ಪ್ರಮಾಣಪತ್ರ
3.ಬ್ಯಾಂಕ್ ಖಾತೆ ವಿವರ.
4.ಗುರುತಿನ ಚೀಟಿ (ಆಧಾರ್ ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ).
ಆಫ್‌ಲೈನ್ ಮೂಲಕ ಅಜಿ೯ ಸಲ್ಲಿಸುವುದು ಹೇಗೆ?
ಗರ್ಭಿಣಿ ಮಹಿಳೆಯರು ತಮ್ಮ ಹತ್ತಿರದ ಆಂಗನವಾಡಿ ಕೇಂದ್ರ ಅಥವಾ ಆರೋಗ್ಯ ಕೇಂದ್ರದಿಂದ PMMVY ಅರ್ಜಿ ಫಾರ್ಮ್ ಪಡೆದು ಭತಿ೯ ಮಾಡಿ ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಜೋಡಿಸಿ
ಆಂಗನವಾಡಿ ಕಾರ್ಯಕರ್ತೆ ಅಥವಾ ಆರೋಗ್ಯ ಕೇಂದ್ರದ ಅಧಿಕೃತರಿಗೆ ನೀಡಿ.
ಇತರ ಮಾಹಿತಿಗಾಗಿ:
ಹತ್ತಿರದ ಆಶಾ ಕಾರ್ಯಕರ್ತೆ, ಆಂಗನವಾಡಿ ಕೇಂದ್ರ, ಅಥವಾ ಗ್ರಾಮ ಪಂಚಾಯತಿ ಕಚೇರಿಯ ಸಂಪರ್ಕಿಸಿ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ