"Agriculture is our CULTURE"

Crop Insurance Claim :: ನಿಮ್ಮ ಬೆಳೆ ನಾಶವಾಗಿದ್ದರೆ, ಅರ್ಜಿ ಸಲ್ಲಿಸಿ ಬೆಳೆ ವಿಮೆ ಪರಿಹಾರ ಪಡೆಯುವುದು ಹೇಗೆ? ಕ್ಲೇಮ್ ಮಾಡುವ ಬಗ್ಗೆ ಗೊತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಮಾಹಿತಿ! 72 ಗಂಟೆಯೊಳಗೆ ಕ್ಲೇಮ್ ಮಾಡಲು ಅಜಿ೯ ಹಾಕಬೇಕು! 

ರಾಜ್ಯದಲ್ಲಿ ಇತ್ತೀಚೆಗೆ ರೈತರಿಗೆ ಕೃಷಿಯಲ್ಲಿ ಸಾಕಷ್ಟು ಆರ್ಥಿಕವಾಗಿ ನಷ್ಟವಾಗುತ್ತಿದ್ದು ಬೆಳೆ ನಾಶವಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ಹಾಗಾಗಿ ಸರ್ಕಾರವು ಕೂಡ ರೈತರಿಗೆ ಆರ್ಥಿಕವಾಗಿ ನಾಷ್ಟವಾಗುವುದನ್ನು ತಡೆಯಲು ಕಷ್ಟಕ್ರಮಗಳನ್ನು ಕೈಗೊಂಡಿದ್ದು ಅದಕ್ಕಾಗಿ ಫಸಲ್ ಬಿಮಾ ಯೋಜನೆಗಳಂತಹ ಬೆಳೆ ವಿಮೆಗಳನ್ನು ಜಾರಿಗೆ ತಂದಿದೆ.

ಈ ಫಸಲ್ ಬಿಮಾ ಯೋಜನೆ(Fasal bima yojane) ಯಡಿಯಲ್ಲಿ ಮಾಡಿಸುವ ಬೆಳೆ ವಿಮೆಗಳು ರೈತರಿಗೆ ತುಂಬಾ ಅನುಕೂಲಕರವಾಗಿದ್ದು ರೈತರು ಮುಂಗಾರು ಹಾಗೂ ಹಿಂಗಾರು ಹಂಗಾಮಗಳಲ್ಲಿ ಬೆಳೆ ವಿಮೆ ಮಾಡಿಸುತ್ತಿದ್ದಾರೆ

ಆದರೆ ಅದೆಷ್ಟೋ ರೈತರಿಗೆ ಬೆಳೆ ನಾಶವಾದಾಗ ವಿಮೆಯನ್ನು ಹೇಗೆ ಕ್ಲೇಮ್ ಮಾಡಬೇಕು ಎಂದು ಗೊತ್ತೇ ಆಗುತ್ತಿಲ್ಲ ಇದರಿಂದಾಗಿ ರೈತರು ತಮಗೆ ಉಂಟಾಗುತ್ತಿರುವ ನಷ್ಟದಿಂದ ಪಾರಾಗುವುದು ಕಷ್ಟವಾಗುತ್ತಿದೆ

ಆದ್ದರಿಂದಾಗಿ ನಾವು ಇಲ್ಲಿ ನಿಮ್ಮ ಬೆಳೆ ನಷ್ಟವಾದಾಗ ನೀವು ಹೇಗೆ ಬೆಳೆಬಿಮೆಯನ್ನು ಕ್ಲೇಮ್ ಮಾಡಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ.

ಮೊದಲು ನೀವು ಫಸಲ್ ಬಿಮಾ ಯೋಜನೆಯಡಿಯಲ್ಲಿ ಯಾವ ಬೆಳೆ ವಿಮಾ ಕಂಪನಿ ಆಯ್ಕೆ ಮಾಡಿಕೊಂಡಿದ್ದೀರೋ ಅವರ ಕಸ್ಟಮರ್ ಕೇರ್ ನಂಬರ್ ಗೆ ಕಾಲ್ ಮಾಡಬೇಕು.

(ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಲಭ್ಯವಿರುವ ಎಲ್ಲಾ ವಿಮಾ ಕಂಪನಿಗಳ ಕಸ್ಟಮರ್ ಕೇರ್ ನಂಬರ್ ಹಾಗೂ ಇಮೇಲ್ ವಿಳಾಸಗಳನ್ನು ಕೆಳಗೆ ಕೊಡಲಾಗಿದೆ.)

ಉದಾಹರಣೆಗೆ ನಾವು UNIVERSAL SOMPO ಕಂಪನಿಯ ಕಸ್ಟಮರ್ ಕೇರ್ ನಂಬರ್ ತೆಗೆದುಕೊಂಡಿದ್ದು, ಹೇಗೆ ಕ್ಲೇಮ್ ಮಾಡುವುದು ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಮೊದಲು ಕಂಪನಿಯ ಕಸ್ಟಮರ್ ಕೇರ್ ನಂಬರನ್ನು ಡಯಲ್ ಮಾಡಿ ಕಾಲ್ ಮಾಡಿ -1800 200 5142

*ಆಗ ಕಂಪನಿಯವರು ಪಸಲ ದಾವಾ ಗೆ ಒಂದನ್ನು ಪ್ರೆಸ್ ಮಾಡಿ ಎನ್ನುತ್ತಾರೆ. ನೀವು ಡಯಲ್ ಪ್ಯಾಡ್ ಮೂಲಕ 1 ನ್ನು ಒತ್ತಿ.

*ನಂತರ ಯಾವ ರಾಜ್ಯದವರು ? ಎಂದು ಕೇಳುತ್ತಾರೆ ಆಗ ನೀವು ಕರ್ನಾಟಕ ಎಂದು ಧ್ವನಿ ಮೂಲಕ ಹೇಳಿ

*ನಂತರ ಅಪ್ಲಿಕೇಶನ್ ನಂಬರ್ ಇದಿಯಾ ಎಂದು ಕೇಳುತ್ತಾರೆ ಆಗ ನೀವು “ಹೌದು” ಎಂದು ಹೇಳಬೇಕು

*ನಂತರ Application Number ಹಾಕಿ * ಚಿನ್ಹೆ ಒತ್ತಲು ಹೇಳುತ್ತಾರೆ.

*ನೀವು ನಿಮ್ಮ ವಿಮೆ ಅಜಿ೯ಯ ಅಪ್ಲಿಕೇಶನ್ ನಂಬರ ಹಾಕಿ ನಂತರ * ಚಿನ್ಹೆ ಒತ್ತಿ.

*ಆಗ ನಿಮ್ಮ ಅಪ್ಲಿಕೇಶನ್ ಪರಿಶೀಲಿಸಿ ದಾಖಲೆ ಸರಿಯಿದ್ದರೆ ರೈತನ ಹೆಸರು ಹೇಳುತ್ತೆ.

*ಆಗ ನೀವು ನಿಮ್ಮ ಹೆಸರು ಸರಿಯಾಗಿದ್ದರೆ ಹೌದು ಎಂದು ಹೇಳಬೇಕು.

*ನಂತರ ಬೆಳೆ ನಷ್ಟದ ಕಾರಣ ಕೇಳುತ್ತೆ.

1) water logging

2) ಪ್ರವಾಹ,

3) ಬೆಂಕಿ ಅವಘಡ,

4) ಕೀಟಭಾದೆ

ಆಗ ನೀವು ನಿಮ್ಮ ಬೆಳೆ ಯಾವ ಕಾರಣಕ್ಕೆ ನಷ್ಟವಾಗಿದೆಯೋ ಅದಕ್ಕೆ ಹೊಂದುವ ನಂಬರ್ ನ್ನು ಡಯಲ್ ಪ್ಯಾಡ್ ನಲ್ಲಿ ಒತ್ತಿ.

ಅಂದರೆ ಪ್ರವಾಹ ಬಂದು ಬೆಳೆ ನಾಶವಾಗಿದ್ದರೆ 2 ಒತ್ತಬೇಕು. ಹೀಗೆ ಕಾರಣ ಹೇಳಬೇಕು.

*ನಂತರ ಬೆಳೆ ನಷ್ಟ ದಿನಾಂಕ ಧ್ವನಿ ಮೂಲಕ ಹೇಳಿ ಎಂದು ಕೇಳುತ್ತೆ.

*ಆಗ ನೀವು ಸ್ಪಷ್ಟವಾಗಿ ಯಾವ ದಿನದಂದು ಬೆಳೆ ನಷ್ಟವಾಗಿದೆ ಎಂದು ಧ್ವನಿ ಮೂಲಕ ದಿನಾಂಕ ಹೇಳಬೇಕು (ಉದಾ:3 ಆಗಸ್ಟ್ 2023ಎಂದು ಹೇಳಬೇಕು)

*ಆಗ ನಿಮ್ಮ Claim Intimation Number ಹೇಳುತ್ತೆ,ಅದನ್ನು ಬರೆದಿಟ್ಟುಕೊಳ್ಳಬೇಕು.

claim ಮಾಡುವವರಿಗೆ ಮುಖ್ಯ ಸೂಚನೆ!

Crop Insurance ಕಂಪನಿಗಳು ಬೇರೆ ಬೇರೆಯಾಗಿದ್ದರೂ ಕೂಡ ಕಸ್ಟಮರ್ ಕೇರ್ ಗೆ ಕಾಲ್ ಮಾಡಿದಾಗ ಕೇಳುವ ಮಾಹಿತಿ ಒಂದೇ ತರಹ ಇರುತ್ತೆ.

ಆದ್ದರಿಂದ ಕೇಳುವ ಪ್ರತಿಯೊಂದು ಮಾಹಿತಿ ಕೊಟ್ಟು ಕ್ಲೇಮ್ ಮಾಡಲು ಅಜಿ೯ ಸಲ್ಲಿಸಿ

ರೈತರೇ ಇದನ್ನು ಗಮನವಿಟ್ಟು ಓದಿ.!

1) ಬೆಳೆ ನಷ್ಟದ ಮಾಹಿತಿಯನ್ನು ವಿಮೆ ಕಂಪನಿಗೆ ಬೆಳೆ ಹಾನಿಯಾದ 72 ಗಂಟೆ ಒಳಗಡೆ ಕೊಡಬೇಕು

2) Crop loss intimation ನ್ನು online & e-mail ಮೂಲಕ ಕೂಡ ಸಲ್ಲಿಸಬಹುದು

3) ಬೆಳೆ ನಷ್ಟದ ಮಾಹಿತಿಯನ್ನು ಸ್ಪಷ್ಟವಾಗಿ ಕೊಡಬೇಕು

4) ಮೊಬೈಲ್ ನಲ್ಲಿಯೇ ಬೆಳೆ ಸಮೀಕ್ಷೆ ಮಾಡುವ ಸೌಲಭ್ಯಗಳಿದ್ದು ಸಮೀಕ್ಷೆ ಮಾಡುವುದು ಒಳ್ಳೆಯದು, ಬೆಳೆ ಸಮೀಕ್ಷೆ ಮಾಡುವುದು ಹೇಗೆ ವಿಡಿಯೋಗಳು ಯುಟ್ಯೂಬ್ ನಲ್ಲಿ ಲಭ್ಯವಿದೆ.

5) ಎಲ್ಲಾ ಕಡೆ ಒಂದೇ ಬೆಳೆ ಹೆಸರು ದಾಖಲಿಸಿದರೆ, ಪರಿಹಾರ ಸಿಗಲು ಅನುಕೂಲವಾಗುತ್ತದೆ.

6) Claim Intimation Number ಬರೆದಿಟ್ಟುಕೊಳ್ಳುವುದು ತುಂಬಾ ಮುಖ್ಯ

7) ಬೆಳೆ ನಷ್ಟದ ಆಧಾರದ ಮೇಲೆ ಬೆಳೆ ಪರಿಹಾರ ನೀಡಲಾಗುತ್ತದೆ.

8)ನೀವು ಬೆಳೆ ಬೆಳೆಯಲು ಪ್ರಾರಂಭಿಸಿದಾಗಿನಿಂದ ಹಿಡಿದು ಬೆಳೆ ರಾಶಿ ಆಗುವರೆಗು ಕ್ಲೇಮ್ ಮಾಡಲು ಅವಕಾಶ ಇರುತ್ತದೆ.

ಯಾವಾಗ ಬೆಳೆ ನಾಶವಾದರೂ ಕ್ಲೇಮ್ ಮಾಡಬಹುದು.

ಫಸಲ್ ಭೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡುವ ಕಂಪನಿಗಳ ಕಸ್ಟಮರ್ ಕೇರ್ ನಂಬರ್ ಹಾಗೂ ಇಮೇಲ್ ವಿಳಾಸ!

*HDFC CLAIM INTIMATION NUMBER:- 18002660700,

*Universal shampoo crop claim number:- 18002005142,

*FUTURE GENERALI INDIA INSURANCE CO. LTD:-18002664141

*HDFC ERGO GENERAL INSURANCE:- 18002660700

Email:- pmfbycell@hdfcergo.com

*ICICI LOMBARD GENERAL INSURANCE CO. LTD:- 18002669725

Email:-customersupport@icicilombard.com

*IFFCO TOKIO GENERAL INSURANCE:- 18001035490

Email:- supportagri@iffcotokio.co.in

*NATIONAL INSURANCE COMPANY LIMITED:- 18003450330

Email:- customer.relations@nic.co.in

*NEW INDIA ASSURANCE COMPANY:- 18002091415

Email:- customercare.ho@newindia.co.in,

*ORIENTAL INSURANCE:- 1800118485

Email:- crop.grievance@orientalinsurance.co.in

*RELIANCE GENERAL INSURANCE CO. LTD: 1800 102 4088

Email:- rgicl.pmfby@relianceada.com

*SBI GENERAL INSURANCE:- 1800 22 1111 or 1800 102 1111

Email:- customer.care@sbigeneral.in

*UNITED INDIA INSURANCE CO:- 180042533333

Email:- customercare@uiic.co.in

*UNIVERSAL SOMPO GENERAL INSURANCE

COMPANY:- 18002005142

Email:- contactclaims@universalsompo.com

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"