"Agriculture is our CULTURE"

SSP scholarship:: SSP ಯಿಂದ 2024-25 ನೇ ಸಾಲಿನ ಸ್ಕಾಲರ್ ಶಿಪ್ ಅಜಿ೯ ಆಹ್ವಾನ! ವರ್ಷಕ್ಕೆ 15 ರಿಂದ 25000 ಸ್ಕಾಲರ್ಶಿಪ್!!!

2024-25 ನೇ ಸಾಲಿನ ಮ್ಯಾಟ್ರಿಕ್ ಪೂವ೯(pre metric scholarship) ವಿದ್ಯಾರ್ಥಿಗಳಿಗಾಗಿ ನೀಡುವ ಸ್ಕಾಲರ್ಶಿಪ್ ಗೆ ಶಿಕ್ಷಣ ಇಲಾಖೆಯು ಎಸ್ ಎಸ್ ಪಿ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು,

1 ನೇ ತರಗತಿಯಿಂದ 10ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬಹುದಾಗಿರುತ್ತದೆ.

ಮೆಟ್ರಿಕ್ ಪೂರ್ವ (pre metric scholarship) ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಅಜಿ೯ಗಳನ್ನು ಎಸ್‌ಎಸ್‌ಪಿ ತಂತ್ರಾಂಶದ ವೆಬ್ಸೈಟ್ನಲ್ಲಿ ಹಾಕಬಹುದಾಗಿದ್ದು,

ಅದಕ್ಕಾಗಿ ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಡೈರೆಕ್ಟ್ ಎಸ್‌ಎಸ್‌ಪಿ ತಂತ್ರಾಂಶಕ್ಕೆ ಭೇಟಿ ನೀಡಬಹುದು.

ಖಾತೆ ಸೃಜನೆ ಮಾಡುವುದು ಹೇಗೆ? 

*ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ssp.postmatric.karnataka.gov.in/

*ನಂತರ ಓಪನ್ ಆಗುವ ಪೇಜ್ ನಲ್ಲಿ 3 ಆಯ್ಕೆಗಳಿದ್ದು, ನೀವು ಈಗಾಗಲೇ ಎಸ್ ಎಸ್ ಪಿ ತಂತ್ರಾಂಶದಲ್ಲಿ ಖಾತೆ ಹೊಂದಿದ್ದಲ್ಲಿ ನೇರವಾಗಿ ಮೆಟ್ರಿಕ್ ಪೂವ೯ ಸ್ಕಾಲರ್ಶಿಪ್ ಗೆ ಅಜಿ೯ ಹಾಕಲು 3 ನೇ ಆಯ್ಕೆ ಮೇಲೆ ಕ್ಲಿಕ್ ಮಾಡಿ

*ಇಲ್ಲವಾದಲ್ಲಿ ಮೊದಲವೆ ಆಯ್ಕೆ ಮೇಲೆ ಕ್ಲಿಕ್ ಮಾಡಿ

*ಆಗ ಓಪನ್ ಆಗುವ ಪೇಜ್ನಲ್ಲಿ ನಿಮ್ಮ ಆಧಾರ ಕಾರ್ಡ್ ನಂಬರ್ ಹಾಕಿ ಪ್ರೋಸೀಡ್ ಮೇಲೆ ಕ್ಲಿಕ್ ಮಾಡಿ

*ಆಗ ನಿಮ್ಮ ಹೆಸರು ಕೇಳುತ್ತದೆ. ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು ಹಾಕಿ

*ನಂತರದಲ್ಲಿ ನಿಮ್ಮ ಲಿಂಗ, ಇಮೇಲ್ ಐಡಿ, ಮೊಬೈಲ್ ನಂಬರ್ ಹಾಕಿ ಸಬ್ಮಿಟ್ ಮಾಡಿ

*ಆಗ ನೀವು ಹಾಕಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿ ಸಬ್ಮಿಟ್ ಮಾಡಿ

*ನಂತರದಲ್ಲಿ ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಲು ತೋರಿಸುತ್ತೆ. ಅದನ್ನು ಕ್ರಿಯೇಟ್ ಮಾಡಿಕೊಳ್ಳಿ.

ಸ್ಕಾಲರ್ಶಿಪ್(pre metric scholarship) ಅಜಿ೯ ಸಲ್ಲಿಸುವುದು ಹೇಗೆ? 

*ನಂತರ ಅದೇ ಯೂಸರ್ ಐಡಿ(ಎಸ್ ಎಸ್ ಪಿ ಐಡಿ) ಹಾಗೂ ಪಾಸ್ವರ್ಡ್ ಮತ್ತು ಕೊಟ್ಟಿರುವ ಕ್ಯಾಪ್ಚಾ ಎಂಟರ್ ಮಾಡಿ ಲಾಗಿನ್ ಆಗಿ

*ನಂತರ ಮೇಲೆ ಇಕೆವೈಸಿ ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ ಇಕೆವೈಸಿ ಕಂಪ್ಲೀಟ್ ಮಾಡಿಕೊಳ್ಳಿ

*ನಂತರ ಅದರ ಪಕ್ಕದಲ್ಲಿಯೇ ಇರುವ ಅಪ್ಲೈ ಫಾರ್ ಪ್ರೀ ಮೆಟ್ರಿಕ್ ಸ್ಕಾಲರ್ಶಿಪ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

*ಸ್ಕಾಲರ್ಶಿಪ್ ಅಜಿ೯ಯಲ್ಲಿ 3 ಸ್ಟೆಪ್ ಗಳಿವೆ.

*ಮೊದಲ ಸ್ಟೆಪ್ ಅಲ್ಲಿ ನಿಮ್ಮ ವೈಯಕ್ತಿಕ ವಿವರ, ಜಾತಿ ವಿವರ ಹಾಗೂ ವ್ಯಾಸಂಗದ ವಿವರಗಳನ್ನು ಹಾಕಿ

ಅಂದರೆ SATS ID, ಶಾಲೆಯ ವಿವರ, ತರಗತಿ ಹಾಗೂ ಗ್ರೇಡ್ ವಿವರ ಹಾಗೂ ಜಾತಿ ವಿವರಗಳಲ್ಲಿ ನಿಮ್ಮ ಜಾತಿ, ಆರ್ ಡಿ ನಂಬರ್,

ಕುಟುಂಬದ ಆದಾಯ ಹೀಗೆ ಎಲ್ಲ ವಿವರಗಳು ಇರುತ್ತವೆ. ವೈಯಕ್ತಿಕ ವಿವರಗಳಲ್ಲಿ ನಿಮ್ಮ ಹೆಸರು, ಲಿಂಗ, , ಬ್ಯಾಂಕ್ ವಿವರಗಳು ಇರುತ್ತವೆ.

ಹಾಗೂ ನಿಮ್ಮ ಮನೆಯ ವಿಳಾಸ ಶಾಲೆಯ ವಿಳಾಸ ಹೀಗೆ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಎಂಟರ್ ಮಾಡಿ

*ಸ್ಟೆಪ್ 2 ನಲ್ಲಿ ನೀವು ಹಾಸ್ಟೆಲ್ ನಲ್ಲಿ ವಸತಿ ಇದ್ದರೆ ಅದರ ರಿಜಿಸ್ಟ್ರೇಷನ್ ನಂಬರ್ ಹಾಗೂ ಇತರೆ ವಿವರಗಳನ್ನು ಹಾಕಿ.

*ಸ್ಟೆಪ್ 3 ರಲ್ಲಿ ನೀವು ಕೊಟ್ಟಿರುವ ಎಲ್ಲಾ ಮಾಹಿತ್ ಸರಿಯಾಗಿದೆಯೇ ಎಂದು ಮತ್ತೊಮ್ಮೆ ನೋಡಿ ಸರಿಯಾಗಿದ್ದಲ್ಲಿ ಸಬ್ಮಿಟ್ ಮಾಡಿ ಇಲ್ಲವಾದಲ್ಲಿ

ಎಡಿಟ್ ಮಾಡಿ ನಂತರ ಅಲ್ಲಿರುವ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಅಜಿ೯ ಸಲ್ಲಿಕೆ ಸಕ್ಸಸ್ಫುಲ್ ಎಂದು ತೋರಿಸುತ್ತದೆ ಆಗ ನೀವು ಅಕ್ನಾಲೆಡ್ಜಮೆಂಟ್ ಪ್ರಿಂಟ್ ತೆಗೆದುಕೊಳ್ಳಬಹುದು.

ಹಾಗೂ ಪ್ರೋಫೈಲ್ ಅಪ್ಡೇಟ್ ಕೂಡ ಮಾಡಬಹುದಾಗಿದೆ. ಹೀಗೆ ನೀವು ಪ್ರಿ ಮೆಟ್ರಿಕ್ ಸ್ಕಾಲರ್ಶಿಪ್ ಅಜಿ೯ಯನ್ನು ಹಾಕಬಹುದು

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"