"Agriculture is our CULTURE"

Scholarship:: ಸಕಾ೯ರದಿಂದ ಪಿಯುಸಿ  ಮೆಟ್ರಿಕ್ ಪಾಸಾದ ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಕಾಲರ್ಶಿಪ್! ಇನ್ನು ಹಲವು ಸ್ಕಾಲರ್ಶಿಪ್ ಮಾಹಿತಿ! ಕೂಡಲೇ ಅಜಿ೯ ಸಲ್ಲಿಸಿ

ಕನಾ೯ಟಕ ಸಕಾ೯ರವು ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಕಾಲರ್ಶಿಪ್ (Scholarship) ಯೋಜನೆಗಳನ್ನು ಜಾರಿಗೆ ತಂದಿದೆ.

ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಗಳಿಗೆ ಈಗಾಗಲೇ ಅಜಿ೯ಗಳನ್ನು ಆಹ್ವಾನಿಸಲಾಗಿದೆ.

ಹಾಗಾಗಿ ಯಾರೆಲ್ಲಾ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬೇರೆ ಬೇರೆ ಸ್ಟ್ರೀಮ್ ಗಳಲ್ಲಿ ಓದುತ್ತಿದ್ದರೂ ಕೂಡ ಅಜಿ೯ಗಳನ್ನು ಹಾಕಬಹುದು.

ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಗೆ ಅಜಿ೯ ಸಲ್ಲಿಸಲು SSP ಮೂಲಕ ಅಜಿ೯ ಸಲ್ಲಿಸಿ. ಅಜಿ೯ ಸಲ್ಲಿಸಲು ಕೊನೆಯ ದಿನಾಂಕ ನವ್ಹೆಂಬರ್ 10 ಆಗಿರುತ್ತದೆ.

ಸಕಾ೯ರದಿಂದ 50 ಲಕ್ಷ ಸ್ಕಾಲರ್ಶಿಪ್! 

ಸಕಾ೯ರದಿಂದ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಮುಖ್ಯ ಯೋಜನೆ ಜಾರಿಗೆ ಬಂದಿದ್ದು, ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳು 50 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್ ಪಡೆಯಬಹುದಾಗಿದೆ.

ಹೌದು, ಪಿಯುಸಿ ನಂತರ ಹಲವು ವಿದ್ಯಾರ್ಥಿಗಳು ಹಣಕಾಸಿನ ತೊಂದರೆಯಿಂದ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗುವುದಿಲ್ಲ.

ಇಲ್ಲವೇ ಬೇರೆ ಯಾವುದಾದರೂ ಕಡಿಮೆ ಶುಲ್ಕ ಹೊಂದಿರುವ ಉನ್ನತ ಶಿಕ್ಷಣದ ಆಯ್ಕೆ ಮಾಡಿಕೊಳ್ಳುತ್ತಾರೆ.

ಇದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದಲೇ ಸಕಾ೯ರವು ಈ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯು ಪಿಯುಸಿ ಸೈನ್ಸ್ ಮಾಡಿದ ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಪಿಯುಸಿ ಯಲ್ಲಿ ಶೇ. 95 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದವರು

ಹಾಗೂ ನೀಟ್ ಪರೀಕ್ಷೆಯಲ್ಲಿ ಉತ್ತಮ rank  ಪಡೆದಿದ್ದರೂ ಕೂಡ ಸಕಾ೯ರಿ ಕೋಟಾದಡಿ ಮೆಡಿಕಲ್ ಕಾಲೇಜ್ನಲ್ಲಿ ಸೀಟ್ ಸಿಗದೇ ಇರುವ ವಿದ್ಯಾರ್ಥಿಗಳು

ಮ್ಯಾನೇಜ್ಮೆಂಟ್ ಕೋಟಾದಡಿ ಮೆಡಿಕಲ್ ಸೀಟ್ ಪಡೆಯಲು ಈ ಸ್ಕಾಲರ್ಶಿಪ್ ನ್ನು ನೀಡಲಾಗುತ್ತಿದೆ. ಮೊದಲ ವಷ೯ 25 ಲಕ್ಷ ರೂಪಾಯಿ ಸ್ಕಾಲರ್ಶಿಪ್ (Scholarship)ಸಿಗುತ್ತದೆ.

ಮೊದಲ ವಷ೯ದ ಮೆಡಿಕಲ್ ಡಿಗ್ರಿಯಲ್ಲಿ ಶೇ 60 ರಷ್ಟು ಫಲಿತಾಂಶ ಬಂದರೆ ಎರಡನೇಯ ವಷ೯ದಲ್ಲೂ 25 ಲಕ್ಷ ರೂಪಾಯಿ ಸ್ಕಾಲರ್ಶಿಪ್ ಸಿಗುತ್ತದೆ.

ಈ ಸ್ಕಾಲರ್ಶಿಪ್ (Scholarship)ಗೆ ಅಜಿ೯ ಸಲ್ಲಿಸಲು ಇರಬೇಕಾದ ಅಹ೯ತೆಗಳು! 

*ಪಿಯುಸಿ ಸೈನ್ಸ್ ಸ್ಟ್ರೀಮ್ ನಲ್ಲಿ 95% ಅಂಕ ಗಳಿಸಿರಬೇಕು.

*ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇಗ೯ಡೆಯಾಗಿರಬೇಕು ಆದರೆ ಸಕಾ೯ರಿ ಕೋಟಾದಡಿ ಮೆಡಿಕಲ್ ಸೀಟ್ ಸಿಕ್ಕಿರಬಾರದು.

ಇದನ್ನು ಹೊರತುಪಡಿಸಿ ಜೆಇಇ, ಐಐಟಿ, ಐಐಎಮ್ ವಿದ್ಯಾರ್ಥಿಗಳಿಗೆ ಸಕಾ೯ರದ ಕಡೆಯಿಂದ 2 ಲಕ್ಷ ರೂಪಾಯಿ ಸ್ಕಾಲರ್ಶಿಪ್ ಸಿಗುತ್ತದೆ.

ಯಾರೆಲ್ಲಾ ಈ ಮೇಲಿನ ಸ್ಕಾಲರ್ಶಿಪ್ (Scholarship)ಗಳಿಗೆ ಅಹ೯ರಾಗಿದ್ದೀರೋ ಅವರು ಕೂಡಲೇ ಅಜಿ೯ ಸಲ್ಲಿಸಿ ಸ್ಕಾಲರ್ಶಿಪ್ ಪಡೆದು ಉನ್ನತ ವ್ಯಾಸಂಗ ಮಾಡಿ

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"