"Agriculture is our CULTURE"

Ration card apply: ಹೊಸ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸುವ ಸುಲಭ ವಿಧಾನ! ಕೂಡಲೇ ಅಜಿ೯ ಹಾಕಿ!!!

ಪ್ರಸ್ತುತ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಬಗ್ಗೆ ನಾವು ಹಿಂದಿನ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ.

ಐಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಪಡೆಯಬಹುದಾಗಿದೆ.

ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್(Ration card) ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ವಿವರಿಸಿದ್ದು ಸಂಪೂರ್ಣ ಲೇಖನವನ್ನು ಓದಿ.

ಹೊಸ ರೇಷನ್ ಕಾರ್ಡ್ (Ration card)ಗೆ ಅರ್ಜಿ ಸಲ್ಲಿಸುವ ವಿಧಾನ!

*ಮೊದಲಿಗೆ ಅಜಿ೯ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
http://ahara.kar.nic.in
* ನಂತರ ಓಪನ್ ಆಗುವ ಪೇಜ್ ನಲ್ಲಿ ಮೂರು ಅಡ್ಡ ಗೆರೆಗಳಿದ್ದು ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಅದರಲ್ಲಿ ಇ- ಸರ್ವೀಸ್ (E-Service) ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ
*ಅಲ್ಲಿ ಇ-ಪಡಿತರ ಚೀಟಿ ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಹೊಸ ಕಾಡ್೯ ಗೆ ಅಜಿ೯ ಎಂಬ ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಓಪನ್ ಆಗುವ ಪೇಜ್ ನಲ್ಲಿ ಎಪಿಎಲ್ ಅಥವಾ ಬಿಪಿಎಲ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ( ಅದಕ್ಕೆ ಬೇಕಾದ ಅಹ೯ತೆಗಳನ್ನು ಹೊಂದಿರಬೇಕು)
*ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಿ
*ನಂತರ ಆಧಾ‌ರ್ ಅಥೆಂಟಿಫಿಕೇಶನ್ ಮಾಡಬೇಕು. *ಅದಕ್ಕಾಗಿ Onetime Password To Mob ile Number Registered With The Adhar Card ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ನಂತರ ಆದಾಯ ಪ್ರಮಾಣ ಪತ್ರ ಹಾಗೂ ಆಧಾರ ಕಾಡ್೯, ನಿಮ್ಮ ಫೋಟೋ ಅಪ್ಲೋಡ್ ಮಾಡಿ
*ನಂತರ ಅಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ವಿವರ ಬರುತ್ತದೆ.
*ಇದೆಲ್ಲಾ ಮಾಡಿದ ನಂತರ ಕುಟುಂಬದ ಸದಸ್ಯರ ಮಾಹಿತಿಯನ್ನು ಒಂದೊಂದಾಗಿ ನೀಡಬಹುದು
*ನಂತರ ಮತ್ತೊಂದು ಓಟಿಪಿ ಬರುತ್ತದೆ. ಅದನ್ನು ಹಾಕಿ ಸಬ್ಮಿಟ್ ಮಾಡಿ
*ನಂತರ ನಿಮಗೆ ಒಂದು ರಿಸಿಪ್ಟ್ ಬರುತ್ತದೆ. ಅದನ್ನು ಪ್ರಿಂಟ್ ತೆಗೆದುಕೊಳ್ಳಿ
*ನಂತರ 3 ತಿಂಗಳಲ್ಲಿ ನಿಮಗೆ ರೇಷನ್ ಕಾಡ್೯ ಬಗ್ಗೆ ಮಾಹಿತಿ ಮೊಬೈಲ್ ನಂಬರ್ ಗೆ ಬರುತ್ತದೆ. ನಿಮ್ಮ ಹತ್ತಿರದ ರೇಷನ್ ಅಂಗಡಿ ಅಲಾಟ್ ಆಗಿರುತ್ತದೆ.

ಅಲ್ಲಿಗೆ ಹೋಗಿ ಒಂದು ಸೆಟ್ ದಾಖಲೆ ನೀಡಬೇಕು. ನಂತರ ನಿಮಗೆ ನಿಮ್ಮ ರೇಷನ್ ಕಾಡ್೯ ಬರುತ್ತದೆ.

ಎಪಿಎಲ್ ಕಾಡ್೯ ಆಗಿದ್ದಲ್ಲಿ ಮಾತ್ರ ಆಗಲೇ ರೇಷನ್ ಕಾಡ್೯ ಜನರೇಟ್ ಆಗುತ್ತದೆ. ಬಿಪಿಎಲ್ ಕಾಡ್೯ ಇದ್ದಲ್ಲಿ ರೇಷನ್ ಕಾಡ್೯ ಪ್ರಿಂಟ್ ಆಗುವುದಿಲ್ಲ.

ಅದು ಆಹಾರ ಇಲಾಖೆಗೆ ಪರಿಶೀಲನೆಗೆ ಹೋಗುತ್ತದೆ. ಪರಿಶೀಲನೆಯಲ್ಲಿ ಎಲ್ಲಾ ಷರತ್ತುಗಳು ಪೂರೈಸುತ್ತಿದ್ದರೆ ಹಾಗೂ ದಾಖಲೆಗಳು ಸರಿಯಾಗಿದ್ದರೆ ಮಾತ್ರ ಬಿಪಿಎಲ್ ರೇಷನ್ ಕಾಡ್೯ ಸಿಗುತ್ತದೆ.

ಇತ್ತೀಚಿನ ದಿನಗಳಲ್ಲಿ ಸಕಾ೯ರದ ಎಲ್ಲಾ ಯೋಜನೆಗಳಿಗೆ ರೇಷನ್ ಕಾಡ್೯ ಒಂದು ಮುಖ್ಯ ದಾಖಲೆಯಾಗಿದ್ದು,

ಇನ್ನೂ ಯಾರ ಬಳಿ ರೇಷನ್ ಕಾಡ್೯ ಇಲ್ಲವೋ ಅವರು ಆದಷ್ಟು ಬೇಗ ಹೊಸ ರೇಷನ್ ಕಾಡ್೯ ಗೆ ಅಪ್ಲೈ ಮಾಡಬಹುದು.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚


"Agriculture is our CULTURE"