Annabhagya Scheme:: ಅನ್ನಭಾಗ್ಯದ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಂತಹವರಿಗೆ ಅನ್ನಭಾಗ್ಯ ಹಣ ಸಿಗಲ್ಲ!
ಬಿಪಿಎಲ್ ಕಾಡು ರದ್ದು ಪ್ರಕ್ರಿಯೆಯಿಂದಾಗಿ ಕಳೆದ 3-4 ತಿಂಗಳಿಂದ ಅನ್ನಭಾಗ್ಯದ ಹಣ ಯಾರಿಗೂ ಜಮೆಯಾಗಿಲ್ಲ. ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ 170/- ಗಳಂತೆ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕುಟುಂಬದ ಮುಖ್ಯಸ್ಥನ ಖಾತೆಗೆ ಹಣ ಜಮೆಯಾಗುತ್ತಿತ್ತು. ಆದರೆ ಕಳೆದ 3-4 ತಿಂಗಳಿಂದ ಹಣ ಬಂದಿಲ್ಲ.
ಇದೀಗ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ನಿಂತಿದ್ದು, ಮೊದಲಿನಂತೆ ಬಿಪಿಎಲ್ ಕಾರ್ಡ್ದಾರರು ಪಡೆಯುವ ಎಲ್ಲಾ ಯೋಜನೆಗಳ ಸವಲತ್ತುಗಳನ್ನು ಪಡೆಯುತ್ತಾರೆ ಎಂದು ಆಹಾರ ಇಲಾಖೆ ಸಚಿವರು ಹೇಳಿಕೆ ನೀಡಿದ್ದಾರೆ ಹಾಗಾಗಿ ಸದ್ಯದಲ್ಲಿಯೇ ಅನ್ನಭಾಗ್ಯ ಹಣ ಜಮೆಯಾಗಲಿದೆ ಎಂದು ಸಕಾ೯ರದ ಮೂಲಗಳು ತಿಳಿಸಿವೆ.
#ಅನ್ನಭಾಗ್ಯ#ಬಿಪಿಎಲ್#ಅನ್ನಭಾಗ್ಯ ಹಣ #ಅನ್ನಭಾಗ್ಯ ಹಣ ಸಿಗಲ್ಲ
ಜನವರಿ ಮೊದಲ ವಾರದಲ್ಲಿ ಅನ್ನಭಾಗ್ಯ (Annabhagya) ಹಣ ಜಮೆ!
ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರಿಗೆ ಮಾತ್ರ ಅನ್ನಭಾಗ್ಯ ಯೋಜನೆಯ ಹಣ ಬಂದ್ ಆಗಲಿದ್ದು,
ಉಳಿದಂತೆ ಎಲ್ಲಾ ಬಿಪಿಎಲ್ ಕಾಡ್ದಾರರಿಗೆ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ಅನ್ನ ಭಾಗ್ಯ ಯೋಜನೆಯ ಹಣ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಅಥವಾ ಜನವರಿ ತಿಂಗಳ ಮೊದಲ ವಾರದಲ್ಲಿ ಜಮೆಯಾಗಲಿದೆ.
ಅನ್ನಭಾಗ್ಯ (Annabhagya) ಹಣ ಬಂದಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
Step 1: ಅದಕ್ಕಾಗಿ ಮೊದಲು ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ
https://ahara.karnataka.gov.in/Home/EServices
Step 2: ನಂತರ ಒಂದು ವೆಬ್ಬೆಟ್ ಒಪನ್ ಆಗುತ್ತದೆ. ಅಲ್ಲಿ ಎಡಭಾಗದಲ್ಲಿ 3 ಗೆರೆಗಳಿದ್ದು, ಅದರ ಮೇಲೆ ಕ್ಲಿಕ್ ಮಾಡಿ
Step 3: ನಂತರ ಇ-ಸ್ಥಿತಿ (e-status) ಮೇಲೆ ಕ್ಲಿಕ್ ಮಾಡಿ
#ಅನ್ನಭಾಗ್ಯ#ಬಿಪಿಎಲ್#ಅನ್ನಭಾಗ್ಯ ಹಣ #ಅನ್ನಭಾಗ್ಯ ಹಣ ಸಿಗಲ್ಲ
Step 4: ನಂತರ ಅದರ ಕೆಳಗೆ ಸ್ಕೋಲ್ ಮಾಡಿ ಹಾಗೂ DBT status ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
Step 5: ನಂತರ ಅಲ್ಲಿ ವಿಭಾಗಗಳನ್ನು ತೋರಿಸುತ್ತದೆ. ನಿಮ್ಮ ಜಿಲ್ಲೆಯಿರುವ ಭೌಗೋಳಿಕ ವಿಭಾಗದ ಮೇಲೆ ಕ್ಲಿಕ್ ಮಾಡಿ
Step 6: ನಂತರ ಒಂದು ಹೊಸ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಎಡಭಾಗದ ಕೊನೆಯಲ್ಲಿ ಡಿಬಿಟಿ ಸ್ಟೇಟಸ್ (status of DBT) ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ.
Step 7: ನಂತರ ಓಪನ್ ಆಗುವ ಪೇಜ್ನಲ್ಲಿ ವರ್ಷ, ತಿಂಗಳು, ರೇಷನ್ ಕಾರ್ಡ್ ನಂಬರ್ ಹಾಕಿ ಕೆಳಗೆ ಕೊಟ್ಟಿರುವ ಕ್ಯಾಪ್ಟಾ ಎಂಟರ್ ಮಾಡಿ ಗೋ ಬಟನ್(Go) ಮೇಲೆ ಕ್ಲಿಕ್ ಮಾಡಿ
Step 8: ಆಗ ನಿಮಗೆ ನಿಮ್ಮ ರೇಷನ್ ಕಾರ್ಡ್ ವಿವರ, ಅಕ್ಕಿ ಪ್ರಮಾಣ, ಇದುವರೆಗೆ ಎಷ್ಟು ಹಣ ಬಂದಿದೆ ಎಂಬ ಎಲ್ಲಾ ಮಾಹಿತಿ ಸಿಗುತ್ತದೆ.
ಇದರಲ್ಲಿ ಬೆಳಗಾವಿ ವಿಭಾಗವನ್ನು ಕೊಟ್ಟಿಲ್ಲ. ಬಹುಶಃ ತಾಂತ್ರಿಕ ತೊಂದರೆಗಳಿಂದಾಗಿ ಬೆಳಗಾವಿ ವಿಭಾಗ ಕೊಡದೇ ಇರಬಹುದು. ಈ ಬಗ್ಗೆ ನೀವು ನಿಮ್ಮ ಹತ್ತಿರದ ಆಹಾರ ಇಲಾಖೆ ಕಛೇರಿಗೆ ಭೇಟಿ ನೀಡಿ ವಿಚಾರಿಸಬಹುದು.
#ಅನ್ನಭಾಗ್ಯ#ಬಿಪಿಎಲ್#ಅನ್ನಭಾಗ್ಯ ಹಣ #ಅನ್ನಭಾಗ್ಯ ಹಣ ಸಿಗಲ್ಲ
ಅಂತ್ಯೋದಯ ಕಾಡ್೯ ದಾರರಿಗೆ ಈ ರೀತಿ ಸಿಗುತ್ತೆ ಅನ್ನಭಾಗ್ಯ ಹಣ!
ಅಂತ್ಯೋದಯ ಕಾಡ್೯ದಾರರಿಗೆ ಕುಟುಂಬದ ಸದಸ್ಯರ ಸಂಖ್ಯೆಗನುಗುಣವಾಗಿ ಅನ್ನಭಾಗ್ಯ ಹಣ ಜಮೆಯಾಗುವುದಿಲ್ಲ. ಏಕೆಂದೇರೆ ಅವರಿಗೆ 35 ಕೆ. ಜಿ ಅಕ್ಕಿ ಬರುತ್ತದೆ. ಇನ್ನುಳಿದ ಬಾಕಿ ಅಕ್ಕಿಯ ಬದಲಾಗಿ ಹಣ ಬರುತ್ತದೆ.
ಅಂದರೆ ಕುಟುಂಬದಲ್ಲಿ 3 ಜನರಿದ್ದರೆ ಯಾವುದೇ ಹಣ ಸಿಗಲ್ಲ. 4 ಜನರಿದ್ದರೆ ಒಟ್ಟು 40 ಕೆ. ಜಿ ಅಕ್ಕಿ ಬರಬೇಕು. ಹಾಗಾಗಿ ಉಳಿದ 5 ಕೆ. ಜಿಯ ಒಬ್ಬರ ಹಣ ಅಂದರೆ 170/- ಸಿಗುತ್ತದೆ. 5 ಜನರಿದ್ದರೆ 15 ಕೆ. ಜಿಯ 510/- ಅಕ್ಕಿಯ ಹಣ ಸಿಗುತ್ತದೆ.
#ಅನ್ನಭಾಗ್ಯ#ಬಿಪಿಎಲ್#ಅನ್ನಭಾಗ್ಯ ಹಣ #ಅನ್ನಭಾಗ್ಯ ಹಣ ಸಿಗಲ್ಲ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ