"Agriculture is our CULTURE"

Plant protection method:: ನಿಮ್ಮ ತೋಟಕ್ಕೆ ಹೊಸ ಕೀಟ ಬರುವ ಮುನ್ನ ಈ ಕ್ರಮಗಳನ್ನು ತೆಗೆದುಕೊಳ್ಳಿ!! ಕೇವಲ 100 ರೂ ಸುಲಭ ಉಪಾಯ!!!

ವೈಜ್ಞಾನಿಕ ತಂತ್ರಜ್ಞಾನಗಳಿಂದ ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಕಾರಿ ಬೆಳವಣಿಗೆಗಳು ಉಂಟಾಗಿದ್ದು,

ಇದರಿಂದ ಉಪಯೋಗವೂ ಇದ್ದು ಕೆಲವೊಂದು ಬಾರಿ ತೊಂದರೆಗಳು ಸಹ ಆಗುತ್ತವೆ.

ಇದೇ ರೀತಿ ಕೃಷಿಯಲ್ಲಿ ಮೊದಲೆಲ್ಲಾ ಕೇವಲ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದರು.

ಆದರೆ ಹೆಚ್ಚಿನ ಇಳುವರಿ ಪಡೆಯಲು ರಾಸಾಯನಿಕಗಳನ್ನು ಕಂಡುಹಿಡಿದು ಬರಬರುತ್ತಾ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿತ್ತು.

ಆದರೆ ಇದರಿಂದಾಗಿ ಆಹಾರ ಧಾನ್ಯಗಳ ಗುಣಮಟ್ಟ ಕಡಿಮೆಯಾಗುತ್ತಿದ್ದು ಜನರ ಆರೋಗ್ಯದ ಮೇಲೆ

ಆಹಾರ ಧಾನ್ಯಗಳಲ್ಲಿನ ರಾಸಾಯನಿಕಗಳು ಕೆಟ್ಟ ಪರಿಣಾಮ ಬೀರುತ್ತಿವೆ.

ಜೈವಿಕ ಸಸ್ಯ ಸಂರಕ್ಷಣಾ ತರಬೇತಿ (Biological plant protection method)ಆಯೋಜನೆ!

ಆಹಾರ ಧಾನ್ಯ ತಿನ್ನುವ ಜನರ ಮೇಲಿನ ಕೆಟ್ಟ ಪರಿಣಾಮ ಒಂದು ಕಡೆಯಾದರೆ,

ರಾಸಾಯನಿಕ ಗೊಬ್ಬರಗಳನ್ನು ಬಳಸುವ ಭೂಮಿಯ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಬೀರಿ ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುತ್ತಿವೆ.

ಆದ್ದರಿಂದ ಜೈವಿಕ ಗೊಬ್ಬರಗಳ ಹಾಗೂ ಜೈವಿಕ ಆಧಾರಿತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ರೈತರನ್ನು ಪ್ರೋತ್ಸಾಹಿಸಲು ಹಾಗೂ

ರೈತರಿಗೆ ಜಾಗೃತಿ ಮೂಡಿಸಲು ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಬೆಂಗಳೂರು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯುರೋ ಸಹಯೋಗದೊಂದಿಗೆ

ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಕೃಷಿಯಲ್ಲಿ ಜೈವಿಕ ನಿಯಂತ್ರಣ ತರಬೇತಿ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಸಾಯನಿಕ ಗೊಬ್ಬರಗಳ (chemical fertilizer) ಬಳಕೆ ಅಪಾಯ!

ಇದರಲ್ಲಿ ತರಳಬಾಳು ಕೃಷಿ ಕೇಂದ್ರದ ತೋಟಗಾರಿಕಾ ವಿಜ್ಞಾನಿಯಾದ ಎಂ. ಜಿ ಬಸನಗೌಡ ಮಾತನಾಡಿ ಜೈವಿಕ ಆಧಾರಿತ ಸಸ್ಯ ಸಂರಕ್ಷಣಾ ಕ್ರಮಗಳು

ಕೃಷಿಗೆ ಪೂರಕ ಎಂದು ಹೇಳಿದ್ದಾರೆ. ಅತಿಯಾದ ರಾಸಾಯನಿಕಗಳ ಬಳಕೆ ಜಮೀನಿನ ಮಣ್ಣಿನ ಫಲವತ್ತತೆ ನಾಶಮಾಡುತ್ತದೆ ಅಲ್ಲದೇ ಪರಿಸರದಲ್ಲಿರುವ ರೈತರಿಗೆ

ಕೃಷಿ ಚಟುವಟಿಕೆಗಳಿಗೆ ಉಪಯುಕ್ತವಾಗಿರುವ ಕೀಟಗಳ ಸಂತತಿ ನಾಶಕ್ಕೆ ಕಾರಣವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜೈವಿಕ ಗೊಬ್ಬರಗಳ (Bio fertilizer) ಬಳಕೆ ಹೇಗೆ?

ಈ ಜೈವಿಕ ಗೊಬ್ಬರಗಳನ್ನು ಬೀಜ ತಯಾರಿಸುವಾಗ, ಬಿತ್ತುವಾಗ ಹೀಗೆ ಬೀಜೋಪಚಾರ ಮಾಡುವ ಸಂದರ್ಭದಲ್ಲಿ ಬಳಸಬಹುದು.

ತರಕಾರಿ ಬೆಳೆಗಳಲ್ಲಿ ಮೋಹಕ ಬೆಳೆ ಮತ್ತು ಬಲೆಗಳನ್ನು ಕಡ್ಡಾಯವಾಗಿ ಉಪಉಪಯೋಗಿಸುವ ಮೂಲಕ

ಪರಿಸರ ಪೂರಕ ನಿಯಂತ್ರಣ ಸಾಧಿಸಬಹುದು ಎಂದು ರೈತರಿಗೆ ತಿಳುವಳಿಕೆ ನೀಡಿದ್ದಾರೆ.

ಟ್ರೈಕೋಕಾಡ್೯(Trichochard) ಮೊಟ್ಟೆಗಳ ಚೀಟಿ ಕಟ್ಟುವುದರಿಂದ ಉಪಯೋಗ!

ಹತ್ತಿ ಮತ್ತು ಮೆಕ್ಕೆಜೋಳ ಕೃಷಿಯಲ್ಲಿ ಟ್ರೈಕೋಕಾಡ್೯ (Trichochard) ಮೊಟ್ಟೆಗಳ ಚೀಟಿ ಕಟ್ಟುವುದರಿಂದ ಲದ್ದಿಹುಳದ ಕಾಟದಿಂದ ಮೆಕ್ಕೆಜೋಳ ಸಂರಕ್ಷಿಸಬಹುದು

ಹಾಗೂ ಹತ್ತಿಯಲ್ಲಿ ಕಾಯಿಕೊರಕ ಕಾಟ ತಪ್ಪಿಸಬಹುದು ಎಂದು ಕೃಷಿ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿಯಾದ ಡಾ. ಟಿ.ಜಿ ಅವಿನಾಶ್ ತಿಳಿಸಿದ್ದಾರೆ.

ಅಲ್ಲದೇ ಈ ಟ್ರೈಕೋಕಾಡ್೯(Trichochard) ಮೊಟ್ಟೆಗಳ ಚೀಟಿ ಕಟ್ಟುವ ವಿಧಾನವನ್ನು ಕೂಡ ಈ ತರಬೇತಿಯಲ್ಲಿ ಮಾಡಿ ತೋರಿಸಿದ್ದಾರೆ.

ರೈತರು ತುಂಬಾ ವಷ೯ಗಳಿಂದ ಕೃಷಿಯಲ್ಲಿ ಪಳಗಿದ್ದರೂ ಕೂಡ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದ

ಹೊಸ ಹೊಸ ಸಮಸ್ಯೆಗಳನ್ನು ಇರಿಸಬೇಕಾಗುತ್ತದೆ ಹಾಗಾಗಿ ರೈತರು ತಮ್ಮ ಕೃಷಿಯಲ್ಲಿ ಬದಲಾವಣೆ ತರುವುದು ಅನಿವಾರ್ಯ ಹಾಗೂ

ಈ ಬದಲಾವಣೆಯನ್ನು ಕೃಷಿ ವಿಜ್ಞಾನ ಕೇಂದ್ರಗಳ ಸಹಾಯ ಪಡೆದು ಮಾಡಿಕೊಂಡರೆ ರೈತರಿಗೆ ಯಾವುದೇ ರೀತಿಯ ನಾ

ನಷ್ಟವಾಗುವುದಿಲ್ಲ ಇದರಿಂದಾಗಿ ಇಳುವರಿಯ ಜೊತೆಗೆ ಕೃಷಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

 ಎಲ್ಲಿ ಇದನ್ನು ತೆಗೆದುಕೊಳ್ಳುವುದು?

1) ನಿಮ್ಮ ಹತ್ತಿರದ ಕೃಷಿ ಸಂಪಕ್ಷ ಕೇಂದ್ರದಲ್ಲಿ ಜೈವಿಕನಾಶವು 60 ರೂಪಾಯಿಗೆ ಸಿಗುತ್ತದೆ.

2) ನಿಮ್ಮ ಜಿಲ್ಲೆಯಲ್ಲಿ ಜೈವಿಕ ಕೇಂದ್ರವಿದ್ದರೆ ಕೇವಲ ನೂರು ರೂಪಾಯಿಗೆ ಜೈವಿಕನಾಶವು ಸಿಗುತ್ತದೆ.

3) ಕೃಷಿ ವಿಜ್ಞಾನ ಕೇಂದ್ರದಲ್ಲಿಕೂಡ ಸಿಗುತ್ತದೆ.

4) ಅಥವಾ ಎಲ್ಲೂ ಸಿಗದಿದ್ದರೂ ನಿಮಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಮತ್ತು ಕಾಲೇಜುಗಳಲ್ಲಿ ಸಿಗುತ್ತದೆ.

ಧನ್ಯವಾದಗಳು

*********ಅಂತ್ಯ************

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು 

ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ – ( ಕ್ಲಿಕ್ ಮಾಡಿ / ಇಲ್ಲಿ ಕ್ಲಿಕ್ ಮಾಡಿ)

 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

   ಪರಿಸರ ಪರಿಸರದೊಂದಿಗೆ  ವಿಕೆ
   ಆರ್ಥಿಕತೆ


"Agriculture is our CULTURE"