ಕೃಷಿ ಇಲಾಖೆಯಲ್ಲಿ ರೈತರಿಗೆ ಇಷ್ಟೊಂದು ಸೌಲಭ್ಯಗಳು!!ಏನೇನು ಸೌಲಭ್ಯಗಳು?ಎಷ್ಟು ಸಬ್ಸಿಡಿ ?
ಕೃಷಿ ಚಟುವಟಿಕೆಗಳಲ್ಲಿ ರೈತರಿಗೆ ಸಹಾಯಕವಾಗುವಂತೆ ಹಾಗೂ ಉತ್ತಮ ಫಸಲು ಪಡೆದು ರೈತರ ಹಾಗೂ ರಾಜ್ಯದ ಹಾಗೂ ದೇಶದ ಆರ್ಥಿಕತೆ,
ಆಹಾರ ಪೂರೈಕೆಗೆ ಸಹಾಯಕವಾಗಲಿ ಎಂದು ಸರ್ಕಾರವು ಹಲವು ಕಾರ್ಯಕ್ರಮಗಳ ಮೂಲಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಕೃಷಿಯಲ್ಲಿ ಮಹತ್ತರ ಬದಲಾವಣೆ ನೋಡಿಕೊಳ್ಳುತ್ತಿದೆ.
ಇದರಿಂದ ರೈತರ ಆದಾಯವು ಹೆಚ್ಚಿ ದೇಶದ ಆರ್ಥಿಕತೆಗೂ ತನ್ನ ಕೊಡುಗೆ ನೀಡುತ್ತದೆ.
ಇಂತಹ ಯೋಜನೆಗಳಲ್ಲಿ ಬಹು ಮುಖ್ಯವಾಗಿ ರೈತರಿಗೆ ಬೇಕಾಗಿರುವುದು ರೈತರ ಹಾಗೂ ಸರ್ಕಾರದ ನಡುವಿನ ಸಂಬಂಧವನ್ನು ಇನ್ನಷ್ಟು ಹತ್ತಿರಗೊಳಿಸುವ ಹಾಗೂ
ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ರೈತ ಸಂಪರ್ಕ ಕೇಂದ್ರಗಳು.
ಹೌದು, ಜಿಲ್ಲೆಗಳಲ್ಲಿ ರೈತರಿಗೆ ನೆರವಾಗಲು ಹಲವು ರೈತ ಸಂಪರ್ಕ ಕೇಂದ್ರಗಳನ್ನು ನಿಯೋಜಿಸಿದ್ದು,
ಇವುಗಳು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಅವಶ್ಯಕತೆ ಇರುವ ಉಪಕರಣಗಳು ಬೀಜ ಗೊಬ್ಬರ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ
ಸರ್ಕಾರದಿಂದ ರೈತರಿಗೆ ಆರ್ಥಿಕವಾಗಿ ಸಹಾಯಕವಾಗಬಹುದಾದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ.
ರೈತ ಸಂಪರ್ಕದ ಮುಖ್ಯ ಉದ್ದೇಶ!
ಸರ್ಕಾರದಿಂದ ಆಯಾ ಭಾಗದ ರೈತರು ಬೆಳೆಯುವ ಬೆಳೆಗಳ ಬೀಜಗಳನ್ನು ಸರ್ಕಾರದಿಂದ ಪೂರೈಸಿ ಅವುಗಳನ್ನು ಸಬ್ಸಿಡಿ ಕೊಡುವುದರ ಮುಖಾಂತರ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ
ಇದರಿಂದ ರೈತರು ಖಾಸಗಿಯಾಗಿ ಹೆಚ್ಚಿನ ಬೆಲೆಗೆ ಕೊಂಡು ತಂದು ಹೆಚ್ಚಿನ ಲಾಭಗಳಿಸಲು ಸಾಧ್ಯವಾಗದೆ ನಷ್ಟ ಅನುಭವಿಸುವ ಬದಲು
ಸಬ್ಸಿಡಿ ಮುಖಾಂತರ ಬೀಜಗಳನ್ನು ತಂದು ಉತ್ತಮ ಬೆಳೆ ಬೆಳೆದರೆ ಹೆಚ್ಚಿನ ಲಾಭ ಗಳಿಸಬಹುದು.
ಅಲ್ಲದೆ ಇಂತಹ ರೈತ ಸಂಪರ್ಕ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಗೊಬ್ಬರಗಳನ್ನು ಸಹ 50% ಸಬ್ಸಿಡಿ ಮುಖಾಂತರ ಮಾರಾಟ ಮಾಡಲಾಗುತ್ತಿದ್ದು
ರೈತರು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಬದಲು ಇಲ್ಲಿ ಗೊಬ್ಬರವನ್ನು ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲದೆ ಕೃಷಿಗೆ ಬೇಕಾದ ಉಪಕರಣಗಳಾದ ಮಿನಿ ಟ್ರಾಕ್ಟರ್, ಟಿಲ್ಲರ್, ರೋಟರ್, ನೇಗಿಲುಗಳನ್ನು ಸಹ ಪಡೆಯಬಹುದು.
ಸಾಮಾನ್ಯ ವಗ೯ದವರಿಗೆ 50% ಸಬ್ಸಿಡಿ ಹಾಗೂ ಎಸ್ಸಿ/ಎಸ್ಟಿ ಅವರಿಗೆ 75% ಸಬ್ಸಿಡಿ ಕೊಡಲಾಗುತ್ತದೆ. ಇದಕ್ಕೆ ಸಣ್ಣ ಹಾಗೂ ಮಧ್ಯಮ ರೈತರು ಎಂಬುದಿಲ್ಲ.
5 ಎಕರೆ ತನಕ ಭೂಮಿ ಹೊಂದಿರುವ ಎಲ್ಲರೂ ಈ ಸಹಾಯಧನ ಪಡೆಯಬಹುದು.
ಇಲ್ಲಿ ಕೃಷಿ ಸಂಸ್ಕರಣಾ ಘಟಕಗಳಿದ್ದು, ರೈಸ್ ಮಿಲ್, ಮಿನಿ ರೈಸ್ ಮಿಲ್, ಫ್ಲೋರ್ ಮಿಲ್ ಗಳಿಂದ ಲಾಭ ಪಡೆಯಬಹುದು.
ಕೃಷಿ ಯಂತ್ರಧಾರಿ ಯೋಜನೆಯ ಮೂಲಕ ನೀವು ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಪಡೆದು ನಿಮ್ಮ ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳಬಹುದು.
ಸೂಕ್ಷ್ಮ ನೀರಾವರಿ ಯೋಜನೆಗಳು ಇದ್ದು, ಇದರ ಮೂಲಕ ನೀವು ಡ್ರಿಪ್ ಇರಿಗೇಷನ್,
ಸ್ಪ್ರಿಂಕ್ಲರ್ ಇರಿಗೇಷನ್ ಎಂದು ಇದ್ದು, ಅವುಗಳಿಗೂ ಸಹ ಸಹಾಯಧನವನ್ನು ಪಡೆಯಬಹುದು.
ಈ ಯೋಜನೆಯಲ್ಲಿ ಸಾಮಾನ್ಯ ವರ್ಗದವರಿಗೆ 75% ಸಬ್ಸಿಡಿಯಿದ್ದು, ಎಸ್ ಸಿ ಎಸ್ ಟಿ ಅವರಿಗೆ 90% ಸಬ್ಸಿಡಿ ಸಿಗುತ್ತದೆ.
* ಅಲ್ಲದೆ ಸಮಗ್ರ ಕೃಷಿ ಅಭಿಯಾನ ಯೋಜನೆ ಅಡಿಯಲ್ಲಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರನ್ನು ಗುರುತಿಸಿ ಅವರಿಗೆ ಕೃಷಿ ಪಂಡಿತ್ ಪ್ರಶಸ್ತಿ ನೀಡಲಾಗುತ್ತದೆ.
* ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಕವಾಗುವಂತೆ ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಎಂಬ ಯೋಜನೆಯ ಜಾರಿಗೆ ತಂದಿದ್ದಾರೆ
ಇದರ ಮೂಲಕ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
* ಇದಲ್ಲದೆ ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ವಾರ್ಷಿಕ 6,000ಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ.
* ಹಾಗೂ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡಗಳನ್ನು ಮಾಡಿಸಲು ಸಹಾಯಧನ ಪಡೆಯಬಹುದು.
* ನಿಮ್ಮ ಭೂಮಿಯ ಮಣ್ಣಿನ ಪರೀಕ್ಷೆ ಕೂಡ ಮಾಡಿಸಬಹುದು.
* ಈ ಕೃಷಿ ಇಲಾಖೆಯಿಂದ ವ್ಯವಸಾಯಕ್ಕೆ ಸಂಬಂಧಿಸಿದಂತೆ ರೈತರಿಗೆ ಹಲವಾರು ತರಬೇತಿಗಳನ್ನು ನೀಡಲಾಗುತ್ತದೆ ಅವುಗಳನ್ನು ಉಚಿತವಾಗಿ ಪಡೆಯಬಹುದು.
* ಹಾಗೂ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದಲ್ಲಿ ಅಥವಾ ರೈತರು ಕೃಷಿಯಲ್ಲಿ ನಷ್ಟ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.
ಹೀಗೆ ರೈತರಿಗೆ ಹಲವಾರು ಯೋಜನೆಗಳ ಮೂಲಕ ಸರ್ಕಾರವು ಬೆನ್ನೆಲುಬಾಗಿ ನಿಂತಿದ್ದು ರೈತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ.
ಈ ಎಲ್ಲ ಯೋಜನೆಗಳ ಲಾಭವನ್ನು ರೈತರು ಬಳಸಿಕೊಂಡು ಉತ್ತಮ ಬೆಳೆ ಬೆಳೆದು ಹೆಚ್ಚಿನ ಆದಾಯ ಪಡೆಯಲಿ ಎಂಬುದು ನಮ್ಮ ಆಶಯ.
ಧನ್ಯವಾದಗಳು
*********ಅಂತ್ಯ************
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು
ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ – ( ಕ್ಲಿಕ್ ಮಾಡಿ / ಇಲ್ಲಿ ಕ್ಲಿಕ್ ಮಾಡಿ)
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ