Arecanut Further :: ಮತ್ತೆ ಅಡಿಕೆ ಬೆಳೆಗಾರರಿಗೆ ಬಂತು ಬೆಲೆಯ ಸುಗ್ಗಿ ಕಾಲ!! ಅಡಿಕೆಯ ಮುಂದಿನ ಭವಿಷ್ಯವೇನು?
ಇಳಿಕೆಯತ್ತ ಸಾಗಿದ್ದ ಅಡಿಕೆ ಬೆಲೆ ಕಳೆದ ಮೂರು ದಿನಗಳಿಂದ ಏರುಗತಿಯಲ್ಲಿದ್ದು, ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ.
ಹೌದು, ಈಗಾಗಲೇ ಬಯಲುಸೀಮೆಯಲ್ಲಿ ಡಿಸೆಂಬರ್ ಕೊನೆಯಲ್ಲಿಯೇ ಕೊಯ್ಲು ಮುಗಿದಿದ್ದು, ಸ್ವಲ್ಪ ರೈತರು ಅಡಿಕೆ ಮಾರಾಟ ಮಾಡಿರುತ್ತಾರೆ.
ಆದರೆ ಬೆಲೆ ಇಳಿಕೆಯಲ್ಲಿದ್ದ ಕಾರಣ ದಾಸ್ತಾನು ಮಾಡಿಟ್ಟುಕೊಂಡಿರುವ ರೈತರಿಗೆ ಇದೀಗ ಹೆಚ್ಚಿನ ಅನುಕೂಲವಾಗಿದ್ದು,
ಬೆಲೆಯಲ್ಲಿ 50000 ದಾಟಿದೆ. ದಾಸ್ತಾನು ಮಾಡಿದ್ದ ರೈತರು ಇದೀಗ ಅಡಿಕೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.
50,539 ರೂ. ಗೆ ಮಾರಾಟವಾದ ಅಡಿಕೆ!
ಹೌದು, ಕಳೆದ 3 ದಿನಗಳಿಂದ ಅಡಿಕೆ ಬೆಲೆ ಏರುಗತಿಯಲ್ಲಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಅಡಕೆ ಬೆಲೆ ಹೆಚ್ಚಾಗಿದ್ದು,
ಅದರಲ್ಲೂ ಚನ್ನಗಿರಿ ತಾಲೂಕಿನ ತುಮ್ ಕೋಸ್ನ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಕ್ವಿಂಟಾಲ್ ಅಡಿಕೆಗೆ ಗರಿಷ್ಠ 50,539 ರೂ. ಮಾರಾಟವಾಗಿದೆ.
ಇದರಿಂದ ಅಡಕೆ ಬೆಳೆಗಾರರು ಫುಲ್ ಖುಷಿಯಲ್ಲಿದ್ದಾರೆ. ಇನ್ನು ಸರಾಸರಿ ಬೆಲೆ ಗಮನಿಸುವುದಾದರೆ 5088 ರೂ. ಧಾರಣೆಗೆ ಮಾರಾಟ ನಡೆದಿದೆ.
ಅಡಕೆ ಬೆಲೆ ಏರಿಕೆ, ತೋಟ ಉಳಿಸಿಕೊಳ್ಳಲು ಬಂಡವಾಳ ಹಾಕಲು ರೈತರು ಸಿದ್ದ!
ಅಡಿಕೆ ಬಂಗಾರದ ಬೆಳೆಯಾಗಿರುವುದರಿಂದ ಈಗಾಗಲೇ ಬಯಲುಸೀಮೆಗೂ ವಿಸ್ತರಿಸಿದ್ದು, ಅಡಕೆ ಉತ್ತಮ ಬೆಲೆ ಸಿಗುವುದರಿಂದ ರಾಜ್ಯಾದ್ಯಂತ ಅಡಕೆ ಪ್ರದೇಶ ಹಿಗ್ಗುತ್ತಿದೆ,
ಇದರಿಂದಾಗಿ ಬೋರ್ವೆಲ್ ಗಳ ಸಂಖ್ಯೆಯೂ ಕೂಡ ದಿನೇ ದಿನೇ ಹೆಚ್ಚುತ್ತಿದೆ.
ಆದರೆ ಕಳೆದ ವಷ೯ ಬರದ ಹಿನ್ನೆಲೆ ಎಲ್ಲೆಡೆ ಬೋರ್ವೆಲ್ಗಳು ಬತ್ತುತ್ತಿದ್ದು, ರೈತರು ತೋಟಗಳ ಉಳಿಸಿಕೊಳ್ಳಲು ಲಕ್ಷಾಂತರ ಹಣ ಸುರಿಯಬೇಕಾಗಿತ್ತು.
ಈಗ ಮತ್ತೆ ಬೆಲೆಯಲ್ಲಿ ಏರಿಕೆಯಾಗುತ್ತಿರುವುರಿಂದ ರೈತರು ಲಕ್ಷಾಂತರ ರೂಪಾಯಿ ಖಚು೯ ಮಾಡಿಯಾದರೂ ತೋಟ ಉಳಿಸಿಕೊಳ್ಳುವ ನಿಧಾ೯ರ ಮಾಡಿದ್ದಾರೆ.
ಏರಿಕೆಯಾಗುತ್ತಿರುವ ಬೆಲೆ ರೈತರಿಗೆ ಇನ್ನಷ್ಟು ಬಂಡವಾಳ ಹೂಡಲು ಬಲ ನೀಡಿದೆ. ಅಲ್ಲದೇ ಅಲ್ಲಲ್ಲಿ ಬೀಳುತ್ತಿರುವ ಮಳೆ ಕೂಡ ಇದಕ್ಕೆ ಸಹಕಾರಿಯಾಗಿದೆ.
ಚುನಾವಣಾ ನೀತಿಸಂಹಿತೆ ಪ್ರಭಾವ!
ಇನ್ನು ಹಲವೆಡೆ ಚುನಾವಣಾ ನೀತಿಸಂಹಿತೆಯು ಕೂಡ ಬೆಲೆ ಹೆಚ್ಚಾಗಲು ಕಾರಣವೆನ್ನಲಾಗುತ್ತಿದೆ. ಏಕೆಂದರೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದಾಗಿ ಬಿಲ್ ಇರುವ ಅಡಿಕೆ ಲಾರಿಗಳು ಮಾತ್ರ ಓಡಾಡುತ್ತಿದ್ದು,
ಇದರಿಂದಾಗಿ ಅಡಿಕೆ ಆಮದಿನಲ್ಲಿ ಇಳಿಕೆ ಕಂಡುಬಂದಿದೆ. ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ.
ಅಲ್ಲದೇ ಸಾಮಾನ್ಯವಾಗಿ ಸುಗ್ಗಿಯ ಕೊನೆಯಲ್ಲಿ ಅಡಿಕೆ ಮಾರಾಟ ಮಗಿಯುವ ಹೊತ್ತಿಗೆ ಬೆಲೆ ಏರಿಕೆಯಾಗುವುದು ಸಹಜ.
ಈ ಬಾರಿಯು ಕೂಡ ಹಾಗೆಯೇ ಆಗಿದ್ದು, ಬೆಲೆ ಹೆಚ್ಚಾಗಿದೆ ಎನ್ನುತ್ತಾರೆ ಕೆಲವು ರೈತರು. ದಾಸ್ತಾನು ಮಾಡಿರುವ ರೈತರಿಗೆ ಇದು ಬಹಳಷ್ಟು ಸಹಕಾರಿಯಾಗಿದೆ.
ಕಳೆದ 10 ವಷ೯ದಲ್ಲಿ ಅಡಕೆ ಬೆಲೆ 80000 ವರೆಗೂ ಏರಿಕೆ ಕಂಡಿದೆ. ಅಲ್ಲದೇ ಕಳೆದ ಮಾಚ್೯ ಏಪ್ರೀಲ್ ನಲ್ಲಿ 57000 ಏರಿಕೆ ಕಂಡಿತ್ತು.
ಇದೀಗ 3 ದಿನಗಳಿಂದ ಏರಿಕೆಯಾಗುತ್ತಿರುವ ಬೆಲೆ ರೈತರಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಆಶಾಭಾವ ಹುಟ್ಟಿಸಿದ್ದು, ಮುಂದಿನ ದಿನಗಳಲ್ಲೂ ಏರಿಕೆಯಾಗುವ ಭರವಸೆಯಿದೆ ಎನ್ನುತ್ತಿದ್ದಾರೆ ಅಡಿಕೆ ಬೆಳೆಗಾರರು.
4 ವರ್ಷದಿಂದ ಅಡಕೆ ಬೆಲೆ ಸ್ಥಿರತೆ!
ಸುಗ್ಗಿಯ ಕೊನೆಯಲ್ಲಿ ಧಾರಣೆ ಹೆಚ್ಚುವುದು ಸಹಜವಾಗಿದ್ದು, ಈಗಾಗಲೇ ತುಮ್ ಕೋಸ್ ನಲ್ಲಿ 94,000 ಬ್ಯಾಗ್ ರೈತರ ಅಡಕೆ ಹಾಗೂ 36,000 ಬ್ಯಾಗ್ ಟ್ರೇಡರ್ ನದು ದಾಸ್ತಾನು ಮಾಡಲಾಗಿದೆ.
ಈಗ ಮತ್ತೆ ಬೆಲೆ ಏರಿಕೆಯಾಗುತ್ತಿರುವುದರಿಂದ ರೈತರು ತಮ್ಮ ಬಳಿ ದಾಸ್ತಾನು ಮಾಡಿರುವ ಅಡಿಕೆಯನ್ನು ಕೂಡ ತರುತ್ತಾರೆ.
ಆದ್ದರಿಂದ ಮತ್ತೆ ಹೊಸ ಅಡಕೆ ಬರುವ ಮುನ್ನ ಈಗ ದಾಸ್ತಾನಾಗಿರುವ ಹಳೆ ಅಡಿಕೆಯನ್ನು ಮಾರುವುದು ಉತ್ತಮ ಎಂದು ಚೆನ್ನಗಿರಿಯ ತುಮ್ಕೋಸ್ ಅಧ್ಯಕ್ಷ ಆರ್. ಎಮ್ ರವಿ ಹೇಳಿದ್ದಾರೆ.
ಅಲ್ಲದೇ ವಷ೯ ರಾಜ್ಯದಲ್ಲಿ ಅಡಿಕೆ ಬೆಳೆಯುವುದರಲ್ಲಿ ಮೊದಲ ಸ್ಥಾನದಲ್ಲಿರುವ ದಾವಣಗೆರೆ ಜಿಲ್ಲೆಯು ಕಳೆದ ವಷ೯ ತುಮ್ಕೋಸ್ 1000 ಕೋಟಿ ವ್ಯವಹಾರ ನಡೆಸಿದೆ ಎನ್ನಲಾಗಿದ್ದು,
ಒಟ್ಟು 208774 ಕ್ವಿಂಟಾಲ್, ಅಂದರೆ 3 ಲಕ್ಷದ 380 ಚೀಲ ಮಾರಾಟ ಮಾಡಿದೆ. ತುಮ್ಕೋಸ್ ನಲ್ಲಿ ಇನ್ನೂ 1.33 ಲಕ್ಷ ಚೀಲ ದಾಸ್ತಾನು ಮಾಡಲಾಗಿದೆ ಎಂದು ತುಮ್ಕೋಸ್ ಅಧ್ಯಕ್ಷರು ಹೇಳಿದ್ದಾರೆ.
ಒಟ್ಟಿನಲ್ಲಿ ನೀರಿಲ್ಲದೆ ಟ್ಯಾಂಕರ್ ಮೂಲಕ ನೀರು ಹೊಡೆಸಿ ತೋಟ ಕಾಪಾಡಿಕೊಳ್ಳಲು ಹೊರಟಿರುವ ರೈತರಿಗೆ ಬೆಲೆ ಏರಿಕೆ ಇನ್ನಷ್ಟು ಉತ್ಸಾಹ ತಂದಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್ಸೈಟ್ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ