Management of Arecanut in Summer :: ಅಡಿಕೆ ತೋಟವನ್ನು ಬೇಸಿಗೆ ಕಾಲದಲ್ಲಿ ವೈಜ್ಞಾನಿಕವಾಗಿ ಹೇಗೆ ರಕ್ಷಿಸಿಕೊಳ್ಳಬೇಕು?
ಈ ಬೇಸಿಗೆ ಬಿಸಿಲಿನಿಂದ ಅಡಿಕೆ (Arecanut ) ತೋಟಗಳನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ? ಜೊತೆಗೆ ಬಿಸಿಲಿನಿಂದ ಅಡಿಕೆ ಮರದ ಕಾಂಡ ಹೊಡೆದು ಹೋಗುತ್ತದೆ ಅದಕ್ಕೆ ಪರಿಹಾರ ಏನು ಎಂಬ ಬಗ್ಗೆ ರೈತರಲ್ಲಿ ಚಿಂತೆ ಕಾಡುವುದು ಸಾಮಾನ್ಯ.
ಅಡಿಕೆ ತೋಟದಲ್ಲಿ ಅದರಲ್ಲೂ ಪೂರ್ವ ಮತ್ತು ಪಶ್ಚಿಮಾಭಿಮುಖವಾಗಿ ನಾಟಿ ಮಾಡಿರುವ ಅಡಿಕೆ ತೋಟಗಳಲ್ಲಿ , ಚಿಕ್ಕ ಗಿಡಗಳು ಅಂದರೆ ಸುಮಾರು 5 ವರ್ಷದೊಳಗಿನ ಅಡಿಕೆ ಮರಗಳಲ್ಲಿ ಅದರಲ್ಲೂ ಪಶ್ಚಿಮಾಭಿಮುಖವಾಗಿ ನಾಟಿ ಮಾಡಲಾದ ಕೊನೆಯ 4 ಸಾಲುಗಳ ಮರಗಳಲ್ಲಿ ಮರದ ಕಾಂಡಗಳು ಸುಟ್ಟು ಹೋಗಿರುವುದನ್ನು ನೋಡಿರುತ್ತೀರಿ.
ಇದು ಯಾಕೆ ಹೀಗೆ ಆಗುತ್ತೆ?
ಏಕೆಂದರೆ ಸಂಕ್ರಮಣದ ನಂತರ ಬೀಳುವ ಬಿಸಿಲು ಅದರಲ್ಲೂ ಮಧ್ಯಾಹ್ನದ ನಂತರ ಬೀಳುವ ಬಿಸಿಲಿನ ಪ್ರಕರತೆಯ ಹೆಚ್ಚಾಗಿರುವುದರಿಂದ ಬಿಸಿಲಿನ ತೀವ್ರ ತಾಪಕ್ಕೆ ಅಡಿಕೆ ಮರಗಳ ಕಾಂಡಗಳು ಸುಟ್ಟು ಹೋಗುತ್ತವೆ. ಮೊದಲ ಹಂತದಲ್ಲಿ ಕಾಂಡವು ಬಿಸಿಲಿನ ತೀವ್ರತೆಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ ನಂತರ ಕೆಂಪು ಬಣ್ಣಕ್ಕೆ ತಿರುಗುತ್ತದೆ ತದನಂತರದಲ್ಲಿ ಕಾಂಡವು ಬಿರುಕು ಬಿಡಲು ಪ್ರಾರಂಭಿಸುತ್ತದೆ ಈ ರೀತಿಯಾಗಿ ಕಾಂಡವು ಬಿರುಕು ಬಿಡುವುದರಿಂದ ಮರಗಳಿಗೆ ಪೋಷಕಾಂಶಗಳನ್ನು ಸಾಗಿಸುವ ಸೂಕ್ಷ್ಮ ಭಾಗವು ಸ್ಥಗಿತಗೊಂಡು ಮರದ ತುದಿಗೆ ಆಹಾರದ ಸಾಗಾಣಿಕೆಯ ಸ್ಥಗಿತಗೊಳ್ಳುತ್ತದೆ.
ಇದು ಏನು ಪರಿಣಾಮ ಬೀಳುತ್ತದೆ :-
ಇದರಿಂದ ಮರದ ಬೆಳವಣಿಗೆ ಕುಂಠಿತಗೊಳ್ಳುತ್ತದೆ ರೋಗನಿರೋಧಕ ಹಾಗೂ ಕೀಟ ಬಾಧಕ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಅಡಿಕೆ (Arecanut ) ಗಿಡಗಳು ಪೊಳ್ಳಾಗುತ್ತದೆ. ಪೊಳ್ಳಾದ ಸಂದರ್ಭದಲ್ಲಿ ಸೆಕೆಂಡರಿ ಇನ್ಫೆಕ್ಷನ್ ( ಇನ್ನಿತರ ರೋಗಗಳು) ಉಂಟಾಗುತ್ತದೆ.
ಇದರಿಂದ ತಪ್ಪಿಸಿಕೊಳ್ಳಲು ಉಪಾಯವೆಂದರೆ ಅಡಿಕೆ ತೋಟದ ಬೆಳೆಗಾರರಿಗೆ ನೀಡುವ ಶಿಫಾರಸು ಏನೆಂದರೆ ಪೂರ್ವಪಶ್ಚಿಮಾಭಿಮುಖವಾಗಿ ಪೂರ್ವ ಮತ್ತು ಉತ್ತರ ದಿಕ್ಕಿನ ಎಲ್ ಶೇಪ್ ರೀತಿಯಲ್ಲಿ ಆದಷ್ಟು ಎತ್ತರವಾದ ನೆರಳಿನ ಗಿಡಗಳನ್ನು ಬೆಳೆಸಿಕೊಳ್ಳಬೇಕು ಇದರಿಂದ ಸಂಕ್ರಮಣದ ಮಧ್ಯಾಹ್ನದ ಬಿಸಿಲಿನ ತೀವ್ರತೆಯನ್ನು ಈ ಎತ್ತರದ ಮರಗಳು ತಡೆಯುತ್ತವೆ.
ಈ ಮಾರ್ಗವನ್ನು ಪಾಲಿಸಿದರೆ , ನೀವು ತಡೆಗಟ್ಟಬಹುದು?
ಅಡಿಕೆ(Arecanut ) ಮರಗಳಿಗೆ ಸುಣ್ಣ ಹೊಡೆಯುವುದು ಒಂದು ಒಳ್ಳೆಯ ಕ್ರಮವಾಗಿದ್ದು ಆದರೆ ಬರೀ ಸುಣ್ಣವನ್ನು ಹೊಡೆಯುವುದರಿಂದ ಸೂರ್ಯನ ಬಿಸಿಲಿನ ಶಾಖವನ್ನು ತಡೆದು ಪಾಂಡು ಕಾಂಡವು ಬಿರುಕು ಬಿಡುವುದನ್ನು ತಡೆಯಲು ಕಷ್ಟವಾಗುತ್ತದೆ. ಆದರೆ ಈ ಕ್ರಮವು ಶೇಕಡ 50ರಷ್ಟು ಸಹಾಯಕಾರಿಯಾಗಿದೆ.
ವೈಜ್ಞಾನಿಕವಾಗಿ ಸುಣ್ಣ ಹೊಡೆಯುವುದು ಹೇಗೆ?
ಸುಣ್ಣ ಹೊಡೆಯುವ ಸಂದರ್ಭದಲ್ಲಿ ಅದರೊಟ್ಟಿಗೆ ಅಂಟು ದ್ರಾವಣವಾಗಿ ಮೈದಾ ಹಿಟ್ಟು, ಬೆಲ್ಲವನ್ನು ಹಾಗೂ ಶಿಲೀಂದ್ರ ನಾಶಕವಾದ ಕಾಪರ್ ಆಕ್ಷಿ ಕ್ಲೋರೈಡ್ (COC) 100 ಗ್ರಾಂ ಪ್ರತಿ 25 ಲೀಟರ್ ಸುಣ್ಣಕ್ಕೆ ಮಿಶ್ರಣ ಮಾಡಿ ಕಾಂಡಕ್ಕೆ ಲೇಪನ ಮಾಡಬೇಕು ಇದರಿಂದ ಫಂಗಲ್ “fungi” ಇನ್ಫೆಕ್ಷನ್ ಹಾಗೂ ಸೆಕೆಂಡರಿ ಇನ್ಫೆಕ್ಷನ್ ತಡೆಯಲು ಇದು ಸಹಕಾರಿಯಾಗುತ್ತದೆ ಅದರಿಂದ ರೈತ ಬಾಂಧವರು ಸುಣ್ಣ ಹೊಡೆಯುವ ಸಂದರ್ಭದಲ್ಲಿ ಮೇಲೆ ಹೇಳ್ದ ಹೇಳಲಾದ ವಿಶ್ವನವನ ಮಿಶ್ರಣವನ್ನು ಸುಣ್ಣದ ಒಟ್ಟಿಗೆ ಸೇರಿಸಿ ಮರದ ಕೈಗೆಟಕುವ ಎತ್ತರಕ್ಕೆ ಸುಣ್ಣವನ್ನು ಲೇಪನ ಮಾಡಬಹುದು. ಇದು ಒಂದು ವಿಧಾನ.
ಎರಡನೇ ವಿಧಾನದ ಬಗ್ಗೆ ತಿಳಿಯೋಣ?
ಅಡಿಕೆ(Arecanut ) ಮರದ ಕೊನೆಯ ಸಾಲುಗಳಲ್ಲಿ ಅಂದರೆ ಬಾರ್ಡರ್ ಸಾಲುಗಳ ಅಡಿಕೆ ಮರಗಳಿಗೆ ತೆಂಗಿನಕಾಯಿಯ ಗರಿಗಳನ್ನು ಸಂಪೂರ್ಣವಾಗಿ ಕಾಂಡವು ಮುಚ್ಚುವಂತೆ ಕಟ್ಟುವುದು ತುಂಬಾ ಒಳ್ಳೆಯ ವಿಧಾನವಾಗಿದೆ ಇದರಿಂದ ಸೂರ್ಯನ ಶಾಖವನ್ನು ತಡೆಯಲು ಸಾಧ್ಯವಾಗುತ್ತದೆ. ಬಾರ್ಡರ್ ಪ್ಲಾಂಟಿಂಗ್ ಮಾಡದೇ ಇರುವವರು ಶೀಘ್ರವಾಗಿ ಬೆಳೆಯುವ ಗಿಡಗಳಾದ ಚೊಗಚೆ ಅಥವಾ ಸಿಲ್ವರ್ ಗಿಡಗಳನ್ನು ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಕೆಲಸದಿಂದ ಬೆಳೆಸುವುದರಿಂದ ಸೂರ್ಯನ ಶಾಖವನ್ನು ತಡೆಯಲು ಅನುಕೂಲವಾಗುತ್ತದೆ.
ಹಾಗೆಯೇ ವೈಜ್ಞಾನಿಕವಾಗಿ ನಾಟಿ ಮಾಡುವ ವಿಧಾನ?
ಹಾಗೆಯೇ ವೈಜ್ಞಾನಿಕವಾಗಿ ನಾಟಿ ಮಾಡುವ ವಿಧಾನವನ್ನು ವಿಜ್ಞಾನಿಗಳು ಶಿಫಾರಸು ಮಾಡುತ್ತಾರೆ. ಅದೇ ಏನೆಂದರೆ ಉತ್ತರಮುಖಿಧಾಮ ಅಂದರೆ ರೈತರು ನಾಟಿ ಮಾಡುವ ಬೇಸ್ ಲೈನ್ ಉತ್ತರ ಮತ್ತು ದಕ್ಷಿಣ ವಾಗಿ ನಾಟಿ ಮಾಡಿಕೊಳ್ಳುವುದರಿಂದ ಮಾಡಿಕೊಳ್ಳುತ್ತಾರೆ. ಉತ್ತರ ದಿಕ್ಕಿನಲ್ಲಿ 35 ಡಿಗ್ರಿ ಆಂಗಲ್ ನಲ್ಲಿ ಮಾಡುವುದು ಇದಕ್ಕೆ ಆಂಗಲ್ ಪ್ಲಾಂಟಿಂಗ್ ಇಂದು ಕರೆಯುತ್ತಾರೆ. ಹೀಗೆ ಮಾಡುವುದರಿಂದ ಒಂದು ಗಿಡದ ನೆರಳು ಇನ್ನೊಂದು ಗಿಡದ ಮೇಲೆ ಬೀಳುತ್ತದೆ. ಇದರಿಂದ ಕೊನೆಯ ಒಂದು ಸಾಲು ಮರಗಳ ಮಾತ್ರ ನೆರಳನ್ನು ತಾಗುವುದಿಲ್ಲ . ಹೀಗೆ ಬಿಸಿಲಿನ ತಾಪವನ್ನು ತಪ್ಪಿಸಬಹುದಾಗಿದೆ. ಇದರಲ್ಲಿ ಒಂದು ಅನಾನುಕೂಲವಿದ್ದು ಈ ವಿಧಾನವನ್ನು ಅನುಸರಿಸಿದಲ್ಲಿ ಕೇವಲ ಒಂದು ದಿಕ್ಕಿಗೆ ಮಾತ್ರ ಉಳುಮೆ ಮಾಡಬಹುದು ಎರಡು ದಿಕ್ಕುಗಳಲ್ಲಿ ಉಳುಮೆ ಮಾಡಲು ಸಾಧ್ಯವಿಲ್ಲ. ಹೀಗೆ ಎಲ್ಲಾ ವಿಧಾನಗಳನ್ನು ಅನುಸರಿಸಿ ಬಿಸಿಲಿನ ತಾಪದಿಂದ ಅಡಿಕೆ ಮರಗಳನ್ನು ಕಾಪಾಡಿಕೊಳ್ಳಿ.
ಸೂಚನೆ: ರೈತರಿಗೆ ಇನ್ನೊಂದು ಕಿವಿಮಾತು ಎಂದರೆ ಈ ಬೇಸಿಗೆ ಕಾಲದಲ್ಲಿ ಉಳುಮೆ ಮಾಡಬೇಡಿ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬಿದ್ದು ಮರಳಿ ತಾಪಮಾನದಿಂದ ಅಡಿಕೆ ಮರಗಳ ಗರಿಗಳು ಸುಟ್ಟು ಹೋಗುತ್ತವೆ ಹಾಗೂ ಕೀಟಗಳ ಭಾದೆಯೂ ಜಾಸ್ತಿಯಾಗುತ್ತದೆ. ಆದ್ದರಿಂದ ಉಳುಮೆ ಮಾಡದೆ ಹಚ್ಚ ಹಸಿರಾಗಿರುವಂತೆ ಅಥವಾ ಹಸಿರೆಲೆಯ ಗೊಬ್ಬರವನ್ನು ಹಾಕಿ ಬಿಸಿಲಿನ ತಾಪದಿಂದ ಅಡಿಕೆ ಮರಗಳನ್ನು ರಕ್ಷಿಸಬಹುದಾಗಿದೆ.
ಧನ್ಯವಾದಗಳು
Village wise Rejected list :: ನಿಮ್ಮ ಹಳ್ಳಿಯಲ್ಲಿ ಎಷ್ಟು ಜನಕ್ಕೆ ಬೆಳೆ ಪರಿಹಾರ ಜಮಾ ಆಗುವುದಿಲ್ಲ? ಎಷ್ಟು ಜನರ ಆಧಾರ್ ಲಿಂಕ್ ಆಗಿಲ್ಲ, ಪಟ್ಟಿ ಬಿಡುಗಡೆ!!
ಬೆಳೆ ಪರಿಹಾರ ರಿಜೆಕ್ಟೆಡ್ ಲಿಸ್ಟ್ :-
1) ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://fruitspmk.karnataka.gov.in/MISReport/AadharNotSeededReport.aspx
2) ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ
3) ನಿಮ್ಮ ತಾಲೂಕಿನ ಮೇಲೆ ಕ್ಲಿಕ್ ಮಾಡಿ
4) ನಿಮ್ಮ ಹೋಬಳಿ ಮೇಲೆ ಕ್ಲಿಕ್ ಮಾಡಿ
5) ನಿಮ್ಮ ಪಂಚಾಯಿತಿ ಮೇಲೆ ಕ್ಲಿಕ್ ಮಾಡಿ
6) ನಿಮ್ಮ ಹಳ್ಳಿ ಮೇಲೆ ಕ್ಲಿಕ್ ಮಾಡಿ
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಜಮವಾಗುವುದಿಲ್ಲ. ಕೂಡಲೇ ನಿಮ್ಮ ಹತ್ತಿರದ ಬ್ಯಾಂಕನ್ನು ಭೇಟಿ ನೀಡಿ ಆಧಾರ್ ಲಿಂಕ್ ಆಗಿದೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಆಧಾರ್ ಲಿಂಕ್ ಆಗಿದೆ ಇಲ್ವೋ ಚೆಕ್ ಮಾಡಿಕೊಳ್ಳುವುದು ಹೇಗೆ?
1) ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://tathya.uidai.gov.in/access/login?role=resident
2) ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ
3) ಕೊಟ್ಟಿರುವಂಥ ಕ್ಯಾಪ್ಚರ್ ಎಂಟ್ರಿ ಮಾಡಿ, ನಿಮ್ಮ ಆಧಾರ್ ಕಾರ್ಡ್ ಬ್ಯಾಂಕಿಗೆ ಲಿಂಕ್ ಆಗಿದೆ ಇಲ್ವಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.
Drought Relief Link :: ಕಂದಾಯ ಇಲಾಖೆಯಿಂದ ಬರ ಪರಿಹಾರ ಜಮಾ !! ಆದರ್ ಅಥವಾ ಮೊಬೈಲ್ ನಂಬರ್ ನಮೂದಿಸಿ ಚೆಕ್ ಮಾಡಿಕೊಳ್ಳಿ!!
ಬರ ಪರಿಹಾರ ( Drought ) ಚೆಕ್ ಮಾಡಿಕೊಳ್ಳುವುದು ಹೇಗೆ?
1) ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://parihara.karnataka.gov.in/service92/
2) ವರ್ಷ :- “2023-24″ ಎಂದು ಆಯ್ಕೆ ಮಾಡಿ
Season/ಋತು :- ” Kharif / ಮುಂಗಾರು” ಎಂದು ಆಯ್ಕೆ ಮಾಡಿ
Calamity Type/ವಿಪತ್ತಿನ ವಿಧ :- Drought / ಬರ ಎಂದು ಆಯ್ಕೆ ಮಾಡಿ
3) Get data ಮೇಲೆ ಕ್ಲಿಕ್ ಮಾಡಿ.
4) Aadhaar Number/ಆಧಾರ್ ಸಂಖ್ಯೆ
Farmer ID/ ಫುಲ್ ಐ ಡಿ
Mobile Number/ ಫೋನ್ ನಂಬರ್
Survey Number/ಸರ್ವೆ ನಂಬರ್
ಇನ್ನಾಕರಲ್ಲಿ ಒಂದನ್ನು ಆಯ್ಕೆ ಮಾಡಿ ನಿಮ್ಮ ಖಾತೆಗೆ ಹಣ ಜಮವಾಗಿದ್ಯಲ್ಲ ತಿಳಿದುಕೊಳ್ಳಿ.
ಮುಂಗಾರು ಕೈಕೊಟ್ಟಿದ್ದರಿಂದ ಮಳೆಯಿಲ್ಲದ ಕಾರಣ ಬೆಳೆಗಳು ಬತ್ತಿಹೋಗಿದ್ದು, ಡ್ಯಾಂಗಳು ಕೂಡ ಖಾಲಿಯಾಗಿವೆ. ಇದರಿಂದ ರಾಜ್ಯದ 223 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದ್ದು, ಈ ತಾಲ್ಲೂಕುಗಳಲ್ಲಿ ಒಟ್ಟು 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಆದ್ದರಿಂದ ರಾಜ್ಯ ಸಕಾ೯ರವು ಬರ ಘೋಷಣೆ ಮಾಡಿ ಪರಿಹಾರಕ್ಕಾಗಿ ಕೇಂದ್ರ ಸಕಾ೯ರಕ್ಕೆ ಪತ್ರ ಬರೆದಿದ್ದು ಅಲ್ಲದೇ ಗೃಹ ಮಂತ್ರಿಗಳ ಭೇಟಿಗೆ ಅವಕಾಶ ಕೇಳಿದ್ದಾರೆ.
ಆದರೂ ಕೂಡ ಇವರೆಗೆ ಕೇಂದ್ರ ಸರ್ಕಾರವು ಪತ್ರಕ್ಕೆ ಉತ್ತರ ನೀಡಿಲ್ಲ. ಹಾಗೂ ಬೆಳೆ ನಷ್ಟ ಪರಿಹಾರವನ್ನು ಕೂಡ ಬಿಡುಗಡೆ ಮಾಡಿಲ್ಲ. ಎಷ್ಟೇ ಸಲ ಗೃಹಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಕೇಳಿದರೂ ಸ್ಪಂದಿಸುತ್ತಿಲ್ಲವೆಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಕಾ೯ರದಿಂದ ಯಾವುದೇ ರೀತಿಯ ಸಹಕಾರ ಸಿಗದಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಸ್ವತಃ ಪರಿಹರಿಸಲು ಮುಂದಾಗಿರುವ ರಾಜ್ಯ ಸರ್ಕಾರವು ತನ್ನ ವತಿಯಿಂದಲೇ ಮೊದಲ ಕಂತಿನ ಪರಿಹಾರವನ್ನು ನೀಡಲು ಮುಂದಾಗಿದೆ.
ಮೊದಲ ಕಂತಿನ ಪರಿಹಾರವಾಗಿ ಅರ್ಹ ರೈತರಿಗೆ 2 ಸಾವಿರ ರು.ವರೆಗೆ ಪರಿಹಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಲ್ಲದೇ ಈ ಪರಿಹಾರ ಹಣವು ಇನ್ನು 3-4 ದಿನಗಳಲ್ಲಿಯೇ ರೈತರ ಖಾತೆ ಸೇರಲಿದೆ ಎಂದು ಸಹ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳು ಇದೇ ಗುರುವಾರ ಸಂಜೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಜತೆ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಈ ಬಗ್ಗೆ ತೀಮಾ೯ನ ತೆಗೆದುಕೊಂಡಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬರ ಘೋಷಣೆಯ ಪ್ರಮುಖ ಅಂಶಗಳು!
• 223 ತಾಲೂಕುಗಳಲ್ಲಿ ರಾಜ್ಯದಲ್ಲಿ ಬರಗಾಲ ಘೋಷಿಸಲಾಗಿದೆ.
• ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದ ಒಟ್ಟು 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ.
• ಸಕಾ೯ರದ ನಿಯಮಗಳನ್ವಯ ಎಷ್ಟೇ ಪ್ರದೇಶದ ಬೆಳೆ ನಷ್ಟವಾಗಿದ್ದರೂ ಸಹ ಕೇವಲ ಎರಡು ಹೆಕ್ಟೇರ್ಗಷ್ಟೆ ಪರಿಹಾರ ಕೊಡಬಹುದು
• ಎನ್ಡಿಆರ್ಎಫ್ ನಿಯಮಗಳನ್ವಯ ಕೇಂದ್ರ ಸಕಾ೯ರದಿಂದ ಒಟ್ಟು ₹4663 ಕೋಟಿಯನ್ನು ಪರಿಹಾರವಾಗಿ ನೀಡಲು ಕೇಳಿದ್ದೇವೆ
• ಯಾವುದೇ ಉತ್ತರ ಬಾರದ ಕಾರಣ ಕೇಂದ್ರದ ಪರಿಹಾರಕ್ಕಾಗಿ ಕಾದರೆ ರೈತರಿಗೆ ಅನ್ಯಾಯವಾಗುತ್ತದೆ ಎಂದು ರೈತರ ಸಂಕಷ್ಟಕ್ಕೆ ಹೆಗಲು ಕೊಡುವ ನಿಟ್ಟಿನಲ್ಲಿ ರಾಜ್ಯ ಸಕಾ೯ರದಿಂದಲೇ ಪರಿಹಾರ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ರವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಹಣ ಜಮಾ!!
1) ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://fruitspmk.karnataka.gov.in/MISReport/GetDetailsByAadhaar.aspx
2) ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ. Search ಮೇಲೆ ಕ್ಲಿಕ್ ಮಾಡಿ.
3) ನಿಮ್ಮ ಹೆಸರು ಈ ಪಟ್ಟಿಯಲ್ಲಿ ಬಂದರೆ ನಿಮಗೆ ಬೆಳೆ ಪರಿಹಾರದ ಹಣ ಜಮವಾಗುತ್ತದೆ.
ಬರ ಪರಿಹಾರ ಪಡೆಯಲು FID ನಂಬರನ್ನು ರೈತರು ಕಡ್ಡಾಯವಾಗಿ ಹೊಂದಿರಬೇಕು.
ಪತ್ರಕ್ಕೆ ಸ್ಪಂದನೆ ಇಲ್ಲ! ಭೇಟಿಗೆ ಅವಕಾಶವಿಲ್ಲ!
ರಾಜ್ಯದಲ್ಲಿ ಬರಗಾಲ ಉಂಟಾಗಿ ರೈತರು ಸಂಕಷ್ಟದಲ್ಲಿದ್ದು, ಆದಷ್ಟು ಬೇಗ ಬರ ಪರಿಹಾರ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಸೆ.21 ರಂದು ಮೊದಲ ಮನವಿ ಸಲ್ಲಿಸಲಾಗಿತ್ತು. ಅದರ ಬಳಿಕ 3 ಬಾರಿ ಕಂದಾಯ ಸಚಿವರು ಪತ್ರ ಬರೆದಿದ್ದರೂ ಕೇಂದ್ರ ಸಕಾ೯ರದ ಕಡೆಯಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಇನ್ನು ಕಳೆದ ಶನಿವಾರ ಸ್ವತಃ ಸಿಎಂ ಅವರೇ ಗೃಹ ಸಚಿವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದಾರೆ ಆದರೆ ಅದಕ್ಕೂ ಕೂಡ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯ ಸಕಾ೯ರವು ಪರಿ ಪರಿಯಾಗಿ ಕೇಳಿದರೂ ಕೇಂದ್ರ ಸಕಾ೯ರದಿಂದ ಚರ್ಚೆಗೂ ಕೂಡ ಸಮಯ ನೀಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಕಾ೯ರದ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕಿದರು.
ಆದರೂ ಕೂಡ ರಾಜ್ಯ ಸಕಾ೯ರದಿಂದಲಾದರೂ ರೈತರಿಗೆ ಪರಿಹಾರ ಹಣ ಸಿಗುತ್ತಿರುವುದು ಕೊಂಚ ಸಮಾಧಾನ ತಂದಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸಕಾ೯ರಗಳು ಸಹಕಾರದೊಂದಿಗೆ ರೈತರಿಗೆ ಬರಗಾಲದ ಸುಳಿಯಿಂದ ಹೊರಬರಲು ಸಹಾಯಕವಾಗುವ ಕ್ರಮಗಳನ್ನು ಕೈಗೊಳ್ಳಲಿ ಎಂದು ಆಶಿಸುತ್ತೇವೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್ಸೈಟ್ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ