Gruhalakshmi and Pension :: ಗೃಹಲಕ್ಷ್ಮಿ 34, 35 ಮತ್ತು 36ನೇ ಕಂತಿನ ಹಾಗೂ ಪಿಂಚಣಿ ಹಣದ ಅಪಡೇಟ್!! ಫಲಾನುಭವಿಗಳ ಖಾತೆಗಳಿಗೆ ಹಣ ಯಾವಾಗ ಜಮಾ ಆಗುತ್ತದೆ?
ಗೃಹಲಕ್ಷ್ಮಿ ₹6,000 + ಪಿಂಚಣಿ ಹಣ- ಫಲಾನುಭವಿಗಳಿಗೆ ಡಬಲ್ ಧಮಾಕಾ!!
Gruhalakshmi ₹6,000 + Pension Money – Double Dhamaka for Beneficiaries!!
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ 34, 35 ಮತ್ತು 36ನೇ ಕಂತುಗಳ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಮಹಿಳೆಯರ ಖಾತೆಗೆ ಒಟ್ಟು ₹6,000 (ಪ್ರತಿ ಕಂತಿಗೆ ₹2,000) ಜಮೆ ಮಾಡುವುದಾಗಿ ಸರ್ಕಾರ ಹೇಳಿತ್ತಾದರೂ, ಡಿಬಿಟಿ (DBT – Direct Benefit Transfer) ಪ್ರಕ್ರಿಯೆಯಿಂದಾಗಿ ಹಣ ಹಂತ ಹಂತವಾಗಿ ತಲುಪುತ್ತಿದೆ.
34ನೇ ಕಂತಿನ ಸ್ಥಿತಿ/ 34th Installment Credit Status:-
* ನವೆಂಬರ್ 6ರಿಂದಲೇ 34ನೇ ಕಂತಿನ ಹಣ ಜಮೆಯಾಗಲು ಶುರುವಾಗಿತ್ತು.
• ಈವರೆಗೆ ರಾಜ್ಯದಾದ್ಯಂತ 60%ಕ್ಕಿಂತ ಹೆಚ್ಚು ಮಹಿಳೆಯರ ಖಾತೆಗಳಿಗೆ ಈ ಕಂತಿನ ಹಣ ಯಶಸ್ವಿಯಾಗಿ ತಲುಪಿದೆ.
35ನೇ ಕಂತಿನ ಸ್ಥಿತಿ/ 35th Installment Credit Status
* 34ನೇ ಕಂತು ಜಮೆಯಾದ ಕೆಲವೇ ದಿನಗಳ ಅಂತರದಲ್ಲಿ 35ನೇ ಕಂತಿನ ಹಣವೂ ಬಿಡುಗಡೆಯಾಗಿದೆ. ಸದ್ಯಕ್ಕೆ ರಾಜ್ಯದ ಸುಮಾರು 20%ರಿಂದ 25%ರಷ್ಟು ಫಲಾನುಭವಿಗಳಿಗೆ ಈ ಹಣ ಸಿಕ್ಕಿದೆ.
36ನೇ ಕಂತಿನ ಸ್ಥಿತಿ/36th Installment Credit Status:-
* ಮೊದಲಿಗೆ ಚಿತ್ರದುರ್ಗ ಮತ್ತು ಕೊಪ್ಪಳದಂತಹ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ 36ನೇ ಕಂತಿನ ಹಣ, ಈಗ ಇನ್ನೂ ಕೆಲವು ಜಿಲ್ಲೆಗಳಿಗೂ ವಿಸ್ತರಣೆಯಾಗುತ್ತಿದೆ.
• ಆದರೂ 34 ಮತ್ತು 35ನೇ ಕಂತಿಗೆ ಹೋಲಿಸಿದರೆ 36ನೇ ಕಂತಿನ ಜಮೆ ಸ್ವಲ್ಪ ನಿಧಾನವಾಗಿದ್ದು, ಇನ್ನೂ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಹಣ ಬಂದಿದೆ.
ಹಣ ಜಮೆಯಾಗಲು ಎಷ್ಟು ಸಮಯ ಬೇಕು:-
Time required to reach beneficiaries :-
* ಕೊಪ್ಪಳ, ಚಿತ್ರದುರ್ಗ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಕೆಲವರಿಗೆ ಮೂರೂ ಕಂತುಗಳ ಹಣ ಒಟ್ಟಿಗೆ ಜಮೆಯಾಗಿರುವ ಬಗ್ಗೆ ಟೆಲಿಗ್ರಾಂ ಮತ್ತು ಕಮ್ಯೂನಿಟಿ ಪೋಸ್ಟ್ಗಳಲ್ಲಿ ಸಾಕ್ಷಿಗಳು ಸಿಕ್ಕಿವೆ.
• ಇದೇ ವೇಗದಲ್ಲಿ ಹಣ ವರ್ಗಾವಣೆ ಮುಂದುವರಿದರೆ, ಮುಂದಿನ 15ರಿಂದ 20 ದಿನಗಳಲ್ಲಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಬಾಕಿ ಇರುವ ₹6,000 ಸಂಪೂರ್ಣವಾಗಿ ಜಮೆಯಾಗುವ ನಿರೀಕ್ಷೆಯಿದೆ.
ನವೆಂಬರ್ ತಿಂಗಳ ಪಿಂಚಣಿ ಹಣದ ಬಿಡುಗಡೆ:-
November Month Pension Update:-
* ಪಿಂಚಣಿ ಜಮೆ ಶುರು – ನವೆಂಬರ್ 12ರಿಂದಲೇ ನವೆಂಬರ್ ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿ ಹಣ ಬಿಡುಗಡೆಯಾಗಲು ಆರಂಭವಾಗಿದೆ.
ಸದ್ಯದ ಸ್ಥಿತ/ current status:-
* ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಮನಸ್ವಿನಿ ಯೋಜನೆ ಮತ್ತು ಇತರೆ ಪಿಂಚಣಿಗಳಿಗಾಗಿ ಕಾಯುತ್ತಿರುವ ಫಲಾನುಭವಿಗಳಿಗೆ ಇನ್ನೂ ಸಂಪೂರ್ಣ ಹಣ ತಲುಪಿಲ್ಲ.
• ಪ್ರಸ್ತುತ ಕೇವಲ 20%ರಿಂದ 25%ರಷ್ಟು ಜನರಿಗೆ ಮಾತ್ರ ಪಿಂಚಣಿ ಹಣ ಜಮೆಯಾಗಿದೆ.
* ಫಲಾನುಭವಿಗಳಿಗೆ ಸಲಹೆ: ಡಿಬಿಟಿ ಮೂಲಕ ಹಣ ಹಂತ ಹಂತವಾಗಿ ಜಮೆಯಾಗುತ್ತಿರುವುದರಿಂದ ವೃದ್ಧಾಪ್ಯ ಅಥವಾ ಇತರೆ ಪಿಂಚಣಿದಾರರು ಆತಂಕಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಎಲ್ಲ ಜಿಲ್ಲೆಗಳಿಗೂ ಪಿಂಚಣಿ ಹಣ ತಲುಪಲಿದೆ.
ಜನರಿಗೆ ಆಸರೆ :-
Support for the People:-
ಗೃಹಲಕ್ಷ್ಮಿ ಯೋಜನೆಯ ಮೂರು ಕಂತುಗಳ ಒಟ್ಟು ₹6,000 ಹಣ ಮತ್ತು ನವೆಂಬರ್ ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿ ಹಣ ಒಟ್ಟಿಗೆ ಬಿಡುಗಡೆಯಾಗುತ್ತಿರುವುದು
ರಾಜ್ಯದ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಸಹಾಯವಾಗಲಿದೆ. ಈ ಹಣ ಮಹಿಳೆಯರಿಗೆ ದಿನನಿತ್ಯದ ಮನೆ ನಿರ್ವಹಣೆ, ದಿನಸಿ ತರುವುದು,
ಮಕ್ಕಳ ಓದು ಮತ್ತು ಆರೋಗ್ಯದ ಖರ್ಚುಗಳನ್ನು ನಿಭಾಯಿಸಲು ತುಂಬಾ ಉಪಯೋಗಕ್ಕೆ ಬರುತ್ತದೆ. ಹಾಗೆಯೇ, ವೃದ್ಧಾಪ್ಯ ವೇತನ,
ಅಂಗವಿಕಲರ ವೇತನ ಮತ್ತು ಮನಸ್ವಿನಿ ಯೋಜನೆಯ ಪಿಂಚಣಿ ಹಣ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಔಷಧಿ ಹಾಗೂ ಮೂಲ ಅಗತ್ಯಗಳಿಗೆ ಆಸರೆಯಾಗಿ,
ಅವರಲ್ಲಿ ಸ್ವಾವಲಂಬನೆ ಮತ್ತು ಭದ್ರತೆಯ ಭಾವನೆ ಮೂಡಿಸುತ್ತದೆ. ಒಟ್ಟಿನಲ್ಲಿ, ಈ ಎರಡೂ ಯೋಜನೆಗಳ ಹಣ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಅವರ ಜೀವನಮಟ್ಟ ಸುಧಾರಿಸಲು ನೇರವಾಗಿ ನೆರವಾಗಲಿದೆ.
The simultaneous release of ₹6,000 from three installments of the Gruhalakshmi scheme, along with the November social security pension funds,
Will provide significant financial relief to millions of poor and middle-class families across the state.
This money will be very useful for women in managing daily household expenses, buying groceries, and covering their children’s education and healthcare costs.
Similarly, pension funds under the Old Age Pension, Disability Pension, and Manaswini schemes will support the medical and basic needs of senior citizens and persons with disabilities,
Fostering a sense of self-reliance and security among them. Overall, the funds from both schemes will directly help reduce the financial burden on families and improve their standard of living.
Thank you.
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

