ವಿಜ್ಞಾನಿಗಳ ಪ್ರಕಾರ :: ಮುಂಗಾರು ತಡವಾಗಿದ್ದು, ಉತ್ತಮ ಫಸಲು ಪಡೆಯಲು ಅಡಿಕೆ ಮರಗಳಿಗೆ ಯಾವ ಯಾವ ಪೋಷಕಾಂಶ ನೀಡಬೇಕು ?
ಈ ವಷ೯ ಮುಂಗಾರು ತುಂಬಾ ತಡವಾಗಿ ಬಂದಿದ್ದು, ಜೂನ್ ಮೊದಲ ವಾರದಲ್ಲಿ ಆಗಮನವಾಗಬೇಕಿದ್ದ ಮುಂಗಾರು ಕೊನೆಯ ವಾರದಲ್ಲಿ ಬಂದಿದೆ. ಅಷ್ಟೇ ಅಲ್ಲದೇ ಬಿಫರ್ ಜಾಯ್ ಚಂಡಮಾರುತದಿಂದಾಗಿ ಮುಂಗಾರು ದುಬ೯ಲವಾಗಿದ್ದು,
ಇಂತಹ ಸಂದರ್ಭದಲ್ಲಿ ಅಡಿಕೆ ಬೆಳೆಯನ್ನು ಹೇಗೆ ಉತ್ತಮವಾಗಿ ನಿವ೯ಹಿಸಿ ಉತ್ತಮ ಫಸಲು ಪಡೆಯಬೇಕೇಂಬುದು ತುಂಬಾ ಮುಖ್ಯ.
ಆದ್ದರಿಂದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಬಸವನಗೌಡ ಎಮ್ ಜಿ ರವರು ಕೆಲವು ಸಲಹೆಗಳನ್ನು ನೀಡಿದ್ದು, ಇವುಗಳನ್ನು ಪಾಲಿಸುವ ಮೂಲಕ ನೀವು ಉತ್ತಮ ಫಸಲನ್ನು ಪಡೆಯಬಹುದು.
ಅಡಿಕೆಗೆ ನಾವು ಸರಿಯಾದ ಪೋಷಕಾಂಶಗಳ ನಿರ್ವಹಣೆ ಮಾಡದಿದ್ದಲ್ಲಿ ಇಳುವರಿಯ ಮೇಲೆ ಗಾಢವಾದ ಪರಿಣಾಮ ಬೀರುವುದನ್ನು ನೋಡಿದ್ದೇವೆ.
ಆದ್ದರಿಂದ ಈ ತಡವಾದ ಮುಂಗಾರಿನಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ಎಂಬ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಯಾವ ತಿಂಗಳಿನಲ್ಲಿ ಪೌಷ್ಟಿಕಾಂಶ ನೀಡಬೇಕು ?
ಸಾಮಾನ್ಯವಾಗಿ ಹತ್ತು ವರ್ಷ ಮೇಲ್ಪಟ್ಟ ಅಡಿಕೆ ಬೆಳೆಗೆ ವರ್ಷದಲ್ಲಿ ಎರಡು ಬಾರಿ ಪೋಷಕಾಂಶಗಳನ್ನು ನೀಡುವುದು ಅವಶ್ಯಕವಾಗಿದ್ದು,
ಮುಂಗಾರು ಹಂಗಾಮಿನ ಜೂನ್ ಜುಲೈ ತಿಂಗಳಲ್ಲಿ ಹಾಗೂ ಹಿಂಗಾರು ಹಂಗಾಮಿನ ಅಕ್ಟೋಬರ್ ನವೆಂಬರ್ ತಿಂಗಳುಗಳಲ್ಲಿ ಪೋಷಕಾಂಶಗಳನ್ನು ನೀಡಲಾಗುತ್ತದೆ.
ಮುಂಗಾರು ಹಂಗಾಮಿನ ತೋಟಗಳಿಗೆ ಪೋಷಕಾಂಶಗಳನ್ನು ನೀಡುವಾಗ ತುಂಬಾ ಎಚ್ಚರದಿಂದ ಇರಬೇಕು. ಅಲ್ಲದೆ ನೀವು ಮಣ್ಣು ಪರೀಕ್ಷೆಗೆ ಅನುಗುಣವಾಗಿ ಪೋಷಕಾಂಶಗಳನ್ನು ನೀಡುವಂತಿದ್ದರೆ
ಅದಕ್ಕೆ ಮೊದಲು ಜಮೀನಿಗೆ ಸಾವಯವ ಗೊಬ್ಬರಗಳನ್ನು ಸೇರಿಸಬೇಕು. ಅದು ಕೊಟ್ಟಿಗೆ ಗೊಬ್ಬರ ಇರಬಹುದು ಎರೆಹುಳು ಗೊಬ್ಬರ ಅಥವಾ ಇನ್ಯಾವುದೇ ಸಾವಯವ ಗೊಬ್ಬರ ಇರಬಹುದು.
ಅಲ್ಲದೆ ಈ ಮಣ್ಣು ಪರೀಕ್ಷೆಯಲ್ಲಿ ದೊರೆತ ರಸಸಾರಗಳ ಆಧಾರದಲ್ಲಿ ಮನೆಗೆ ವಿವಿಧ ರೀತಿಯ ಪೋಷಕಾಂಶಗಳನ್ನು ಸೇರಿಸಬೇಕಾಗುತ್ತದೆ ಉದಾಹರಣೆಗೆ ಮಣ್ಣಿನಲ್ಲಿ ಏಳುವರೆಯಿಂದ ಎಂಟು ರಸಸಾರಗಳಿದ್ದರೆ
ಅಂತಹ ಮಣ್ಣಿಗೆ ಜಿಪ್ಸಂ ನ್ನು ಸೇರಿಸಬೇಕಾದದ್ದು ಅನಿವಾಯ೯ವಾಗುತ್ತದೆ. ಆದ್ದರಿಂದ ಪ್ರತಿಯೊಂದು ಎಕರೆಗೆ ಮೂರರಿಂದ ನಾಲ್ಕು ಕ್ವಿಂಟಾಲ್ ಜಿಪ್ಸಂ ಅನ್ನು ಹೊಲದ ತುಂಬಾ ಎರಚಿ ಉಳುಮೆಯನ್ನು ಮಾಡಬೇಕು.
ಇದರಿಂದ ಮಣ್ಣಿನ ಭೌತಿಕ ಹಾಗೂ ರಾಸಾಯನಿಕ ಗುಣಗಳು ವೃದ್ಧಿಯಾಗಲು ಸಹಾಯಕವಾಗುತ್ತದೆ.
ಬಹಳಷ್ಟು ರೈತರಲ್ಲಿರುವ ಗೊಂದಲವೆಂದರೆ ಮಳೆ ಕಡಿಮೆಯಾಗುವ ಸಮಯದಲ್ಲಿ ಪೋಷಕಾಂಶಗಳನ್ನು ಕೊಟ್ಟರೆ ಮರದಿಂದ ಹರಳು ಉದುರಿಬಿಡುತ್ತದೆಯೋ ಅಥವಾ ಫಸಲು ಚೆನ್ನಾಗಿ ಬರುವುದಿಲ್ಲವೋ ಎಂಬ ಭಯ ಇರುತ್ತದೆ
ಆದರೆ ಈ ಸಮಯದಲ್ಲಿ ಅಂದರೆ ಜೂನ್ ನಲ್ಲಿ ನಾವು ಪೋಷಕಾಂಶಗಳನ್ನು ಕೊಟ್ಟರೆ ಅದು ಬೆಳೆಯನ್ನು ವೃದ್ಧಿಗೊಳಿಸಲು, ಫಸಲಿನ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.
ಮತ್ತು ಇದು ಅನಿವಾರ್ಯವಾಗಿದ್ದು ಈಗಾಗಲೇ 3-4 ಹಿಂಗಾರುಗಳಿಂದ ಮರಗಳಲ್ಲಿ ಹೂವು ಕಾಯಿ ಕಟ್ಟಿದ್ದು, ಅದರಿಂದ ಈಗ ಪೋಷಕಾಂಶಗಳನ್ನು ಕೊಡುವುದು ಅನಿವಾರ್ಯವಾಗಿದ್ದು, ಇದರಿಂದ ಉತ್ತಮ ಫಸಲು ಸಿಗುತ್ತದೆ.
ಅಡಿಕೆ ತೋಟಗಳಿಗೆ ಕೊಡಬಹುದಾದ ಗೊಬ್ಬರಗಳು!
ವೈಜ್ಞಾನಿಕವಾಗಿ ಅಡಿಕೆ ತೋಟಗಳಿಗೆ ಶಿಫಾರಸ್ಸು ಮಾಡಲಾದ ಪೋಷಕಾಂಶವೆಂದರೆ 100 ಗ್ರಾಂ ಸಾರಜನಕ, 40 ಗ್ರಾಂ ರಂಜಕ, 140 ಗ್ರಾಂ ಪೊಟ್ಯಾಷಿಯಂ. ಇವುಗಳ ಮಿಶ್ರಣವನ್ನು ವಿವಿಧ ರೀತಿಯ ಗೊಬ್ಬರಗಳ ಮೂಲಕ ಅಡಿಕೆ ತೋಟಗಳಿಗೆ ಕೊಡುವ ಕೆಲಸವನ್ನು ಮಾಡಬೇಕು.
ಕೆಂಪು ಮತ್ತು ಕಪ್ಪು ಬಣ್ಣದ ಮಣ್ಣಿಗೆ ಯಾವ ರೀತಿಯ ಗೊಬ್ಬರ?
ಕಪ್ಪು ಮಣ್ಣು ಆಗಿದ್ದರೆ ಬೇರೆ ರೀತಿಯ ಗೊಬ್ಬರಗಳ ಬಳಕೆ ಹಾಗೂ ಕೆಂಪು ಮಣ್ಣಾಗಿದ್ದರೆ ಬೇರೆ ರೀತಿಯ ಗೊಬ್ಬರಗಳ ಬಳಕೆಯನ್ನು ಸೂಚಿಸಲಾಗುತ್ತದೆ ಉದಾಹರಣೆಗೆ ಕಪ್ಪು ಮಣ್ಣು ಆಗಿದ್ದರೆ,
20-20-0-13 ಪೋಷಕಾಂಶವನ್ನು 150 ಗ್ರಾಂ ಹಾಗೂ 150 ಗ್ರಾಂ ಪೊಟ್ಯಾಶ್ ಹಾಗೂ ಲಘು ಪೋಷಕಾಂಶ ಮಿಶ್ರಣ 100 ಗ್ರಾಂ ಪ್ರತಿ ಗಿಡಕ್ಕೆ ಕೊಡಬೇಕು.
ಮರಳು ಮಿಶ್ರಿತ ಅಥವಾ ಕೆಂಪು ಮಿಶ್ರಿತ ಮಣ್ಣು ಆಗಿದ್ದರೆ 10-26-26 150 ಗ್ರಾಂ ಹಾಗೂ ಪೊಟ್ಯಾಶ್ 100ಗ್ರಾಂ ಹಾಗೂ ಲಘು ಪೋಷಕಾಂಶ ಮಿಶ್ರಣ 100 ಗ್ರಾಂ ಪ್ರತಿ ಗಿಡಕ್ಕೆ ನೀಡಬೇಕು.
ಈ ಕಾಂಬಿನೇಷನ್ ಗೊಬ್ಬರ ಸಿಗದೇ ಇದ್ದರೆ 9-24-24 150 ಗ್ರಾಂ ಹಾಗೂ ಪೊಟ್ಯಾಶ್ 100ಗ್ರಾಂ ಹಾಗೂ ಲಘು ಪೋಷಕಾಂಶ ಮಿಶ್ರಣ 100 ಗ್ರಾಂ ಪ್ರತಿ ಗಿಡಕ್ಕೆ ನೀಡಬೇಕು.
ಈ ಗೊಬ್ಬರವು ಸಿಗದೇ ಇದ್ದಲ್ಲಿ 15-15-15 200 ಗ್ರಾಂ ಹಾಗೂ ಪೊಟ್ಯಾಶ್ 100ಗ್ರಾಂ ಹಾಗೂ ಲಘು ಪೋಷಕಾಂಶ ಮಿಶ್ರಣ 100 ಗ್ರಾಂ ಪ್ರತಿ ಗಿಡಕ್ಕೆ ನೀಡಬೇಕು.
ಹಾಗಾದರೆ ಲಘು ಪೋಷಕಾಂಶದಲ್ಲಿ ಯಾವ ಮಿಶ್ರಣ ಕೊಡಬೇಕು?
ಸಾಮಾನ್ಯವಾಗಿ ರೈತರು ಲಘು ಪೋಷಕಾಂಶವೆಂದರೆ ಜಿಂಕ್ ಹಾಗೂ ಬೋರಾನ್ ನ್ನು ಕೊಡುತ್ತಾರೆ ಆದರೆ ಜಿಂಕ್ ಮತ್ತು ಬೋರಾನ್ ಅಲ್ಲದೆ ಐರನ್ ಮ್ಯಾಂಗನೀಸ್ ಕಾಪರ್ ಮೆಗ್ನೀಷಿಯಂ ನಂತಹ ಪೋಷಕಾಂಶಗಳ ಮಿಶ್ರಣವನ್ನು ಕೊಡಬಹುದು.
ಅಥವಾ ಮಾರುಕಟ್ಟೆಯಲ್ಲಿ ಆಲ್ ನ್ಯೂಟ್ರಿಯಂಟ್ ಮಿಕ್ಸ್(a nutrient mix) ಎಂಬ ಲಘು ಪೋಷಕಾಂಶ ಸಿಗುತ್ತದೆ ಅದನ್ನು ಸಹ ಪ್ರತಿ ಗಿಡಕ್ಕೆ 100 ಗ್ರಾಂ ಬಳಸಬಹುದು.
ಈ ರಸಗೊಬ್ಬರ ಕೊಡುವ ವಿಧಾನ ಹೇಗೆ?
ಸಾಮಾನ್ಯವಾಗಿ ಹತ್ತು ವರ್ಷದ ನಂತರ ಅದಕ್ಕೆ ಬೇರುಗಳು ಗಿಡದಿಂದ ಒಂದುವರೆ ಅಡಿ ದೂರದಲ್ಲಿ ಇರುತ್ತವೆ. ಆದ್ದರಿಂದ ಪೋಷಕಾಂಶಗಳನ್ನು ಒಂದುವರೆ ಅಡಿ ಅಂತರದಲ್ಲಿ ತಗ್ಗನ್ನು ತೆಗೆದು ನೀಡಬೇಕು.
ಅಥವಾ ಒಂದುವರೆ ಅಡಿ ಅಂತರದಲ್ಲಿ ಉದ್ದವಾದ ನೇಗಿಲನ್ನು ತೆಗೆದು ನೀಡಬಹುದು. ಅಥವಾ ಒಂದು ಅಡಿ ಅಂತರದಲ್ಲಿ ಮಣ್ಣಿನ ಮೇಲೆ ಗೊಬ್ಬರವನ್ನು ಎರಚಿ ನಂತರ ಅದರ ಮೇಲೆ ಉಳುಮೆ ಮಾಡಿ ಗೊಬ್ಬರವನ್ನು ಕೊಡಬಹುದು.
ರೈತರಿಗೆ ಕೊಡುವ ಮುಖ್ಯ ಸೂಚನೆ ಎಂದರೆ ನೀವು ಕೊಡುವ ಗೊಬ್ಬರ ಮಣ್ಣಿನಲ್ಲಿ ಬೆರೆತು ನಂತರ ಪೋಷಕಾಂಶಗಳು ಮರಕ್ಕೆ ದೊರೆಯುವುದರಿಂದ ಕೂಡಲೇ ತೋಟಗಳಿಗೆ ಪೋಷಕಾಂಶಗಳನ್ನು ಕೊಡಬೇಕು ನೀರಾವರಿಯಾಗಿದ್ದಲ್ಲಿ ಪೋಷಕಾಂಶಗಳನ್ನು ಕೊಟ್ಟು ಒಂದು ಹನಿನೀರಾವರಿಯನ್ನು ಬಿಡಬೇಕು.
ಪೋಷಕಾಂಶಗಳನ್ನು ಕೊಡುವುದು ಇನ್ನೂ ತಡಗಾದಲ್ಲಿ ಹಿಂಗಾರಿನಲ್ಲಿ ಕಾಯಿ ಕಟ್ಟುವುದು ತಡವಾಗಿ ಫಸಲು ಚೆನ್ನಾಗಿ ಬರುವುದಿಲ್ಲ ಆದ್ದರಿಂದ ಕಡಲೆ ಪೋಷಕಾಂಶಗಳನ್ನು ಕೊಡಲು ಕೃಷಿ ವಿಜ್ಞಾನಿಗಳು ಶಿಫಾರಸ್ಸು ಮಾಡಿದ್ದಾರೆ.
ಧನ್ಯವಾದಗಳು
*********ಅಂತ್ಯ************
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
We are using this washing machine since many year, best washing machine for daily use dress.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ಕಬ್ಬರಿ ಮತ್ತು ತೆಂಗಿನಕಾಯಿ ಮಾರು ಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ – ( ಕ್ಲಿಕ್ ಮಾಡಿ / ಇಲ್ಲಿ ಕ್ಲಿಕ್ ಮಾಡಿ)
– VK
ಪರಿಸರದೊಂದಿಗೆ
ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

