Crop insurance check :: ಸರ್ವೇ ನಂಬರ್ ನಮೂದಿಸಿ, ನೀವು ಮಾಡಿಸಿರುವ ಬೆಳೆ ವಿಮೆ ಸರಿ ಇದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ!!
ಕರ್ನಾಟಕ ಸರ್ಕಾರದ ‘ಸಂರಕ್ಷಣೆ’ ಪೋರ್ಟಲ್ನಲ್ಲಿ ನಿಮ್ಮ ಬೆಳೆ ವಿಮೆಯ ಸ್ಥಿತಿಯನ್ನು ಮನೆಯಲ್ಲೇ ಕುಳಿತು ಪರಿಶೀಲಿಸುವುದು ಹೇಗೆ?
How to Easily Check Your Crop Insurance Status on the Government of Karnataka’s ‘SAMRAKSHANE’ Portal from the Comfort of Your Home?
ನೀವು ಯಾವ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ ಮತ್ತು ಆ ವಿಮೆಯ ವಿವರಗಳು ಸರಿಯಾಗಿ ಅಪ್ಡೇಟ್ ಆಗಿವೆಯೇ ಎಂಬುದನ್ನು ಒಮ್ಮೆ ಖಚಿತಪಡಿಸಿಕೊಳ್ಳಿ!!
ನಿಮ್ಮ ಬೆಳೆ ವಿಮೆಯ ಸ್ಥಿತಿಯು ಈಗಿನ ಮಟ್ಟಿಗೆ ಅಪ್ಡೇಟ್ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಗೆ ತಿಳಿಯುವುದು?
Check Your Crop Insurance Status Online!!
ಕರ್ನಾಟಕ ರಾಜ್ಯದ ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ವಿವಿಧ ಬೆಳೆಗಳಿಗೆ ತಾವು ಮಾಡಿಸಿರುವ ವಿಮೆಯ ಸಂಪೂರ್ಣ ವಿವರಗಳನ್ನು ಈಗ ಆನ್ಲೈನ್ ಮೂಲಕವೇ ಅತ್ಯಂತ ಸುಲಭವಾಗಿ ಮತ್ತು ಸರಳವಾಗಿ ಪರಿಶೀಲಿಸಿಕೊಳ್ಳಬಹುದಾಗಿದೆ.
‘SAMRAKSHANE‘ ಎಂಬ ಅಧಿಕೃತ ಪೋರ್ಟಲ್ ಬಳಸಿ ನಿಮ್ಮ ಬೆಳೆ ವಿಮೆಯ ಪ್ರಸ್ತುತ ಸ್ಥಿತಿಯನ್ನು (Insurance Status) ನಿಖರವಾಗಿ ತಿಳಿಯಲು ಈ ಕೆಳಗೆ ವಿವರಿಸಲಾದ ಹಂತಗಳನ್ನು ಹಂತ ಹಂತವಾಗಿ ಅನುಸರಿಸಿ.
ಕರ್ನಾಟಕ ಸರ್ಕಾರದ ಬೆಳೆ ವಿಮೆ ಸಂಪಕೂರ್ಣ ವಿವರಗಳನ್ನು ಮತ್ತು ಮಾಹಿತಿಯನ್ನು ಪಡೆಯಲು ಈ ಕೆಳಗಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ – SAMRAKSHANE Karnataka https://www.samrakshane.karnataka.gov.in/
ಬೆಳೆ ವಿಮೆ ವಿವರಗಳನ್ನು ಪರಿಶೀಲಿಸುವುದು ಹೇಗೆ?
How to check Crop Insurance Details?
ನೀವು ಈಗಾಗಲೇ ಬೆಳೆ ವಿಮೆ ಕಟ್ಟಿದ್ದೀರಾ ಮತ್ತು ಆ ವಿಮೆಯ ಮಾಹಿತಿಯು ಸರ್ಕಾರಿ ದಾಖಲೆಗಳಲ್ಲಿ ಅಪ್ಡೇಟ್ ಆಗಿದೆಯೇ ?
1. ವೆಬ್ಸೈಟ್ ತೆರೆಯಿರಿ: ಮೊದಲನೆಯದಾಗಿ, ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ SAMRAKSHANE ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಅಥವಾ ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://www.samrakshane.karnataka.gov.in/CropHome.aspx

Select Year & Crop
ಲಿಂಕ್ ಮೇಲೆ ಪ್ರೆಸ್ ಮಾಡಿದ ನಂತರ ವರ್ಷವನ್ನು “2026-27” ಎಂದು ಸೆಲೆಕ್ಟ್ ಮಾಡಿ.
ಸೀಸನ್ ಅನ್ನು “Kharif“ಎಂದು ಸೆಲೆಕ್ಟ್ ಮಾಡಿ
2. ಸರಿಯಾದ ಆಯ್ಕೆಯನ್ನು ಆರಿಸಿ – ವೆಬ್ಸೈಟ್ನ ಮುಖಪುಟದಲ್ಲಿ (Homepage) ಲಭ್ಯವಿರುವ ವಿವಿಧ ಸೇವೆಗಳ ಪೈಕಿ, “Crop Insurance Detail On Survey No.” ಎಂಬ ನಿರ್ದಿಷ್ಟ ಆಯ್ಕೆಯನ್ನು ಎಚ್ಚರಿಕೆಯಿಂದ ಗಮನಿಸಿ ಮತ್ತು ಆರಿಸಿ.

Crop Insurance Detail On Survey No
3. ನಿಮ್ಮ ವಿವರಗಳನ್ನು ಭರ್ತಿ ಮಾಡಿ – ಆ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ, ತೆರೆದುಕೊಳ್ಳುವ ಫಾರ್ಮ್ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮದ ಹೆಸರು ಮತ್ತು ನಿಮ್ಮ ಜಮೀನಿಗೆ ಸಂಬಂಧಿಸಿದ ಸರ್ವೆ ನಂಬರ್ (Survey Number) ಅನ್ನು ನಿಖರವಾಗಿ ನಮೂದಿಸಿ.

Enter Details
4. ಸ್ಥಿತಿಯನ್ನು ಪರಿಶೀಲಿಸಿ – ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಸಬ್ಮಿಟ್ (Submit) ಬಟನ್ ಮೇಲೆ ಕ್ಲಿಕ್ ಮಾಡಿದಾಗ, ನಿಮ್ಮ ಜಮೀನಿಗೆ ಸಂಬಂಧಿಸಿದ ಬೆಳೆ ವಿಮೆಯು ಅಪ್ಡೇಟ್ ಆಗಿದೆಯೇ ಅಥವಾ ಇಲ್ಲವೇ ಎಂಬ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಲಭ್ಯವಾಗುತ್ತದೆ.
ಅಲ್ಲಿ ನಿಮಗೆ ಯಾವ ಸರ್ವೇ ನಂಬರಿಗೆ ಯಾವ ಬೆಳೆ ವಿಮೆಯನ್ನು ಮಾಡಿಸಿದರೆ ಎಂಬುವ ಸಂಪೂರ್ಣ ಮಾಹಿತಿ ಬರುತ್ತದೆ.
ರೈತರಿಗೆ ಪ್ರಮುಖ ಸೂಚನೆ :-
Note for Farmers:-
ಈ ಪೋರ್ಟಲ್ನಲ್ಲಿ ಕೇವಲ ವಿಮೆ ಪರಿಶೀಲನೆ ಮಾತ್ರವಲ್ಲದೆ, “Check Status“, “Know Your Insurance Co.”, ಮತ್ತು “View Cut Off Dates” ನಂತಹ ಇತರ ಅತ್ಯಗತ್ಯ ಮತ್ತು ಉಪಯುಕ್ತ ಆಯ್ಕೆಗಳೂ ಲಭ್ಯವಿವೆ.
ಇವುಗಳನ್ನು ಬಳಸಿಕೊಂಡು ನಿಮ್ಮ ವಿಮೆಗೆ ಸಂಬಂಧಿಸಿದ ಇತರೆ ಹೆಚ್ಚಿನ ಮತ್ತು ವಿಶಿಷ್ಟ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
ಒಂದು ವೇಳೆ ನೀವು ವಿವರಗಳನ್ನು ನಮೂದಿಸಿದ ನಂತರವೂ ವಿಮೆ ಮಾಹಿತಿಗಳು ತೋರಿಸದಿದ್ದರೆ ಅಥವಾ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ,
ತಕ್ಷಣವೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಅಥವಾ ನಿಮ್ಮ ವಿಮೆಗೆ ಸಂಬಂಧಿಸಿದ ವಿಮಾ ಕಂಪನಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸೂಚಿಸಲಾಗಿದೆ.
ನಿಮ್ಮ ಬೆಳೆ, ನಿಮ್ಮ ವಿಮೆ:-
Your Crop, Your Insurance:-
ಈ ಯೋಜನೆಯ ಮೂಲಕ ರೈತರು ತಮ್ಮ ಬೆಳೆ ವಿಮೆಯ ಸ್ಥಿತಿಯನ್ನು ಮನೆಯಲ್ಲೇ ಕುಳಿತು ಸುಲಭವಾಗಿ ಮತ್ತು ಪಾರದರ್ಶಕವಾಗಿ ನೋಡಬಹುದು.ರೈತರು ತಮ್ಮ ಸರ್ವೆ ನಂಬರ್ ಬಳಸಿ ವಿಮೆ ಅಪ್ಡೇಟ್ ಆಗಿದೆಯೇ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.
ಇದರಿಂದ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗುತ್ತದೆ ಮತ್ತು ವಿಮಾ ಕಂಪನಿಯ ಮಾಹಿತಿ ಹಾಗೂ ಗಡುವು ದಿನಾಂಕಗಳಂತಹ ಪ್ರಮುಖ ವಿವರಗಳು ತಕ್ಷಣವೇ ಸಿಗುತ್ತವೆ.
ಒಟ್ಟಾರೆಯಾಗಿ, ಈ ಡಿಜಿಟಲ್ ವ್ಯವಸ್ಥೆಯು ಬೆಳೆ ಹಾನಿಯಾದಾಗ ಪರಿಹಾರ ಪಡೆಯುವ ಪ್ರಕ್ರಿಯೆಯನ್ನು ರೈತರಿಗೆ ಸರಳ ಮತ್ತು ವಿಶ್ವಾಸಾರ್ಹವಾಗಿಸುತ್ತದೆ.
This scheme allows farmers to easily and transparently check their crop insurance status from home. farmers can conveniently verify if their insurance is updated by using their survey number.
This reduces the need for middlemen and provides instant access to important details, like insurance company information and deadlines.
Overall, this digital system makes the process simpler and builds trust when seeking compensation for crop loss.
Thank you
ಧನ್ಯವಾದಗಳು
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
We are using this washing machine since many year, best washing machine for daily use dress.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– VK
ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.


Leave a Reply