
Agriculture :: ಬೆಂಗಳೂರಿನ ಲಕ್ಸುರಿ ಲೈಫ್ ಬಿಟ್ಟು ಕೃಷಿಯತ್ತ ಮುಖ ಮಾಡಿದ ಪ್ರಗತಿಪರ ರೈತ!!
ಬೆಂಗಳೂರಿನ ದೊಡ್ಡ ಬಂಗಲೆ ಮತ್ತು ಐಷಾರಾಮಿ ಬದುಕನ್ನು ಬಿಟ್ಟು, ಹಳ್ಳಿಗೆ ಬಂದು ಕೃಷಿ ಮಾಡುತ್ತಿರುವ ಹಿರಿಯ ಪತ್ರಕರ್ತ ಲಕ್ಷ್ಮಣ ಹೂಗಾರ್ ಅವರ ಸ್ಫೂರ್ತಿದಾಯಕ ಕಥೆ!!
Leaving the Big Bungalow and Luxury Life of Bengaluru – The Inspiring Story of Senior Journalist Lakshman Hoogar Who Moved to a Village for Farming!!
ಹಿರಿಯ ರಾಜಕೀಯ ಪತ್ರಕರ್ತ ಲಕ್ಷ್ಮಣ ಹೂಗಾರ್ ಅವರು ತಮ್ಮ ಮಾಧ್ಯಮದ ಲೈಫ್ ಮತ್ತು ಈಗಿನ ಕೃಷಿ ಜೀವನದ ಬಗ್ಗೆ!!
ಬೆಂಗಳೂರಿನ ಲಕ್ಸುರಿ ಲೈಫಿಗೆ ಟಾಟಾ:-
Leaving Luxury Bengaluru Life for Village:-
• ಮಾಧ್ಯಮ ಜಗತ್ತೆಲ್ಲಾ ಗುರುತಿಸುವ ಹಾಗೆ, ಬೆಂಗಳೂರಲ್ಲಿ ಕಾರು, ಬಂಗಲೆ, ಫಾರ್ಮ್‌ಹೌಸ್ ಅಂತ ಸೆಟಲ್ ಆಗೋಕೆ ಏನೇನು ಬೇಕೋ ಅದೆಲ್ಲಾ ಇದ್ದರೂ,
ಲಕ್ಷ್ಮಣ ಹೂಗಾರ್ ಅವರು ಸಡನ್ ಆಗಿ ಎಲ್ಲ ಬಿಟ್ಟು ಹೆಂಡತಿ ಮಕ್ಕಳನ್ನ ಕರ್ಕೊಂಡು ಬೆಂಗಳೂರಿಂದ ಸುಮಾರು 180 ಕಿಲೋಮೀಟರ್ ದೂರ ಇರೋ ಹಳ್ಳಿಗೆ ಬಂದು ಸೆಟಲ್ ಆಗಿದ್ದಾರೆ.
• ಯಾವ ಆಳು ಕಾಳು ಇಲ್ಲ, ತಾವೇ ಸ್ವಂತ ಎಲ್ಲಾ ಕೃಷಿ ಕೆಲಸ ಮಾಡ್ಕೊಂಡು ನೇಚರ್ ಜೊತೆ ಖುಷಿಯಾಗಿ ಲೈಫ್ ಲೀಡ್ ಮಾಡ್ತಿದ್ದಾರೆ.
ಈಗಿನ ಕೃಷಿ ಜೀವನ ಮತ್ತು ಕಷ್ಟಗಳು:-
Present Farming Life and Challenges:-
• ಇವರ ಹತ್ರ ಟೋಟಲ್ 12 ಎಕರೆ ಜಮೀನಿದೆ. ಅದರಲ್ಲಿ ಸುಮಾರು 300 ತೆಂಗಿನ ಮರಗಳು ಮತ್ತೆ ಅಡಿಕೆ ಗಿಡಗಳು ಇವೆ.
* ಕಳೆದ ಎರಡು ವರ್ಷದಿಂದ ಮಳೆ ಇಲ್ಲದೆ, ನೀರಿಲ್ಲದೆ ಕೃಷಿ ಮಾಡೋದು ತುಂಬಾನೇ ಕಷ್ಟ ಆಗ್ತಿದೆ. ಇದ್ದ ಮೂರು ಬೋರ್‌ವೆಲ್‌ಗಳಲ್ಲಿ ಎರಡು ಬತ್ತೋಗಿವೆ. ಇರೋ ಒಂದರಲ್ಲೇ ತೋಟನ ಉಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದಾರೆ.
• ಸುತ್ತಮುತ್ತ ಕೆರೆಗಳೆಲ್ಲಾ ಖಾಲಿ ಇರೋದ್ರಿಂದ ನೀರು ಸಿಗ್ತಾ ಇಲ್ಲ. ಆಲ್ಮೋಸ್ಟ್ ಬರಗಾಲದ ಪರಿಸ್ಥಿತಿ ಇದೆ. ಆದರೂ ಸೋಷಿಯಲ್ ಮೀಡಿಯಾಗಳಲ್ಲಿ ಪಬ್ಲಿಸಿಟಿ ತಗೊಳ್ಳದೆ, ತಮಗೋಸ್ಕರ ಮತ್ತೆ ತಮ್ಮ ಖುಷಿಗೋಸ್ಕರ ಕೃಷಿ ಮಾಡ್ತಿದ್ದಾರೆ.
ಮಾಧ್ಯಮ ಜೀವನ ಹೇಗಿತ್ತು:-
Early Media Journey and Struggling Days:-
• ಸುಮಾರು 27 ವರ್ಷಗಳ ಹಿಂದೆ (1998 ರಲ್ಲಿ) ಸ್ಟೂಡೆಂಟ್ ಲೈಫ್ ಇಂದ ಬಂದ ಇವರನ್ನ ಹಿರಿಯ ಪತ್ರಕರ್ತ ಜೆ.ಎಸ್. ನಾರಾಯಣ್ ಅವರು ಗುರುತಿಸಿ ‘ಜನವಾಹಿನಿ’ ಪತ್ರಿಕೆಯಲ್ಲಿ ರಿಪೋರ್ಟರ್ ಕಮ್ ಟ್ರೈನಿಯಾಗಿ ಚಾನ್ಸ್ ಕೊಟ್ಟರು.
* ಸ್ಟಾರ್ಟಿಂಗ್ ಅಲ್ಲಿ ಕೇವಲ 3,000 ರೂಪಾಯಿ ಕೊಡ್ತಾ ಇದ್ರು. ದುಡ್ಡಿಲ್ಲದೆ ಹರಕು ಬಸ್ಸುಗಳಲ್ಲಿ ಓಡಾಡ್ತಾ, ವಸಂತನಗರದಿಂದ ನಡ್ಕೊಂಡು ಹೋಗಿ ಕಡ್ಲೆಕಾಯಿ ತಿಂದು ದಿನ ಕಳೆದ ಕಷ್ಟದ ದಿನಗಳ ಬಗ್ಗೆ ಹೇಳ್ಕೊಂಡ್ರು.
• ಹುಣಸವಾಡಿ ರಾಜನ್ ಅವರಿಂದ ನ್ಯೂಸ್ ಸೆನ್ಸ್ ಮತ್ತು ಅಕ್ಷರ ಅಭ್ಯಾಸ ಕಲಿತ ಇವರಿಗೆ, ಮುಂದೆ ‘ಕನ್ನಡ ಪ್ರಭ‘ ಪತ್ರಿಕೆಯಲ್ಲಿ ರಾಜಕೀಯ ರಿಪೋರ್ಟಿಂಗ್ ಮಾಡೋಕೆ ಫುಲ್ ಫ್ರೀಡಂ ಸಿಕ್ತು.
ವಿಷುಯಲ್ ಮೀಡಿಯಾ ಮತ್ತು ದೊಡ್ಡ ಚಾನೆಲ್‌ಗಳಲ್ಲಿ ಎಕ್ಸ್‌ಪೀರಿಯೆನ್ಸ್:-
Experience in Electronic Media:
* ‘ಕನ್ನಡ ಪ್ರಭ‘ ಆದ್ಮೇಲೆ ಟಿವಿ೯ (TV9) ಚಾನೆಲ್ ಶುರು ಆದಾಗ ಜಾಯಿನ್ ಆದ್ರು (ಕೇವಲ 7-8 ಜನ ಇದ್ರಂತೆ). ಮುಂಬೈ ಟೆರರಿಸ್ಟ್ ಅಟ್ಯಾಕ್ (2008) ಹಾಗು ತೆಲಂಗಾಣ ರಾಜ್ಯ ಹೋರಾಟದಂತಹ ದೊಡ್ಡ ನ್ಯೂಸ್ ಗಳನ್ನ ಲೈವ್ ಆಗಿ ರಿಪೋರ್ಟ್ ಮಾಡಿದ್ರು.
• ರಂಗನಾಥ್ ಭರದ್ವಾಜ್ ಜೊತೆ ಕೆಲಸ ಮಾಡಿದ ಅನುಭವ ಇದೆ. ಆಮೇಲೆ ಸುವರ್ಣ ನ್ಯೂಸ್, ನ್ಯೂಸ್18 ನಂತಹ ಚಾನೆಲ್ ಗಳಲ್ಲಿ ಇಂಪಾರ್ಟೆಂಟ್ ಪತ್ರಕರ್ತರಾಗಿ ಕೆಲಸ ಮಾಡಿದ್ರು.
ಪ್ರಾಮಾಣಿಕತೆ ಮತ್ತು ಲೈಫಿನ ಸತ್ಯ:-
Honesty and Philosophy of Life:-
• ಮೀಡಿಯಾದಲ್ಲಿ ಇದ್ದಾಗ ಮಿನಿಸ್ಟರ್‌ಗಳ ಹಿಂದೆ ಹೋಗಿ ಅಥವಾ ಗವರ್ನಮೆಂಟ್ ಇಂದ ಏನೋ ತಗೊಂಡು ಒಂದು ರೂಪಾಯಿ ಅನ್ಯಾಯವಾಗಿ ದುಡ್ಡು ಮಾಡಿಲ್ಲ ಅಂತ ತಮ್ಮ ತಾಯಿಯಾಣೆ ಮಾಡಿ ಹೇಳ್ತಾರೆ.
* ಮನಸ್ಸು ಮಾಡಿದ್ದರೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನ ಅಥವಾ ಏನೋ ಒಂದು ರಾಜಕೀಯ ಹುದ್ದೆ ಸಿಗ್ತಾ ಇತ್ತು. ಆದ್ರೆ ಅದೆಲ್ಲಾ ಬೇಡ ಅಂತ ಯಾರನ್ನೂ ಮೋಸ ಮಾಡದೆ ಸ್ವಂತ ದುಡಿಮೆಯಲ್ಲಿ ಬದುಕುತ್ತಿದ್ದಾರೆ.
• ಲೈಫಲ್ಲಿ ಯಾವುದು ಪರ್ಮನೆಂಟ್ ಅಲ್ಲ. ಇರೋ ದಿನ ಯಾರಿಗೆ ದ್ರೋಹ ಮಾಡದೆ, ನೇಚರ್ ಜೊತೆ ಖುಷಿಯಾಗಿ ಇರೋದೆ ಲೈಫಿನ ಸತ್ಯ ಅಂತ ತಮ್ಮ ಕೃಷಿ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ.
ಬದಲಾವಣೆಯಯೇ ಬಕುದು :-
Changing lives:-
ಹಣ, ಅಂತಸ್ತುಗಳಿಗಿಂತ ನೆಮ್ಮದಿ, ಸರಳ ಜೀವನ ಮುಖ್ಯ. ಯಾವುದೇ ರಂಗದಲ್ಲಿ ಪ್ರಾಮಾಣಿಕವಾಗಿ ಬದುಕುವುದೇ ಗೌರವ. ಸಮಾಜದ ಮಾತಿಗೆ ತಲೆಕೆಡಿಸಿಕೊಳ್ಳದೆ, ಆತ್ಮಸಾಕ್ಷಿಗೆ ದ್ರೋಹ ಬಗೆಯದೆ ಬದುಕಬೇಕು.
ರೈತನ ಶ್ರಮಕ್ಕೆ ಗೌರವಿಸಿ, ಪ್ರಕೃತಿ ಪ್ರೀತಿಸಿ ಸ್ವಾವಲಂಬಿಗಳಾಗಿರಿ. ಶಾಶ್ವತವಲ್ಲದ ಈ ಜಗತ್ತಿನಲ್ಲಿ ಒಳ್ಳೆತನದಿಂದ, ನೆಮ್ಮದಿಯಿಂದ, ಸಹಾಯ ಮಾಡುತ್ತಾ ಸಂತೋಷವಾಗಿರುವುದೇ ಸತ್ಯ.
Peace of mind and a simple life outweigh wealth. True respect lies in honest work. Live without societal worries, true to yourself.
Respect farmers’ hard work, love nature, and be self-reliant. In this impermanent world, happiness comes from goodness, peace, and helping others.
Thank you.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp Group – ಜೈನ್ ಆಗಿ/join whatsapp
3) ” ಟ್ವಿಟರ್ / Twitter – ಸೇರು/join Twitter
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V K
ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
