Free tailoring Machine :: ಡಿ. ದೇವರಾಜ ಅರಸು ನಿಗಮದಿಂದ ಮಹಿಳೆಯರಿಗೆ ಉಚಿತ ಟೈಲರಿಂಗ್ ಮಿಷನ್!! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್!!
ಡಿ. ದೇವರಾಜ ಅರಸು ನಿಗಮದಿಂದ ಮಹಿಳೆಯರಿಗೆ ಉಚಿತ ಟೈಲರಿಂಗ್ ಮಿಷನ್ – ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ದಾಖಲೆಗಳು!!
Free Sewing Machine Scheme 2026 – Complete Step-by-Step Guide to Apply Online via Seva Sindhu Portal!!
2026ನೇ ವರ್ಷಕ್ಕೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಉಚಿತ ಹೊಲಿಗೆ ಯಂತ್ರಕ್ಕೆ (Free Sewing Machine) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ::
ಮುಖ್ಯ ಅಂಶಗಳು:-
Key Highlights:-
• ಯೋಜನೆಯ ಹೆಸರು – ಡಿ. ದೇವರಾಜ ಅರಸು ನಿಗಮದ ಉಚಿತ ಹೊಲಿಗೆ ಯಂತ್ರ ಯೋಜನೆ 2026.
* ಯಾರು ಅರ್ಜಿ ಸಲ್ಲಿಸಬಹುದು – ಈ ಯೋಜನೆಗೆ ಕೇವಲ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
• ಯಾವ ವರ್ಗದವರು (Categories) – ಪ್ರವರ್ಗ-1, 2A, 3A ಮತ್ತು 3Bಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೇಗೆ ಅರ್ಜಿ ಸಲ್ಲಿಸುವುದು:-
How to apply:-
* ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ಬಳಸಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
Required Documents:-
• ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಲಿಂಕ್ ಆಗಿರಬೇಕು).
* ರೇಷನ್ ಕಾರ್ಡ್ (ಪಡಿತರ ಚೀಟಿ).
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste & Income Certificate – RD ಸಂಖ್ಯೆ ಕಡ್ಡಾಯ)
* ಟೈಲರಿಂಗ್ ತರಬೇತಿ ಪ್ರಮಾಣ ಪತ್ರ (Tailoring Training Certificate): ಇದು ಮುಖ್ಯವಾದ ದಾಖಲೆ. ಹೊಲಿಗೆ ಕೆಲಸದಲ್ಲಿ ತರಬೇತಿ ಪಡೆದ ಬಗ್ಗೆ ಪ್ರಮಾಣ ಪತ್ರ ಇರಬೇಕು.
ಅರ್ಜಿ ಸಲ್ಲಿಸುವ ಬಗೆ:-
Application Process:-
* Step 1 – ನೋಂದಣಿ (Registration)
• ಸೇವಾ ಸಿಂಧು (Seva Sindhu) ವೆಬ್‌ಸೈಟ್‌ಗೆ ಹೋಗಿ ‘New User‘ ಆಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

Click On Login
Login
* ನಿಮ್ಮ ಆಧಾರ್ ನಂಬರ್ ಮತ್ತು ಓಟಿಪಿ (OTP) ಹಾಕಿ ಡಿಜಿಲಾಕರ್ (DigiLocker) ಮೂಲಕ ಖಚಿತಪಡಿಸಿಕೊಳ್ಳಿ.
• ಹೊಸ ಫೋನ್ ನಂಬರ್ ಮತ್ತು ಪಾಸ್‌ವರ್ಡ್ ಹಾಕಿ ಲಾಗಿನ್ ಆಗಬೇಕು.
* Step 2 – ಅರ್ಜಿಯನ್ನು ಆಯ್ಕೆ ಮಾಡಿ (Selecting the Service)
• ಲಾಗಿನ್ ಆದ ಬಳಿಕ ‘Apply for Services‘ ಮೇಲೆ ಕ್ಲಿಕ್ ಮಾಡಿ, ಸರ್ಚ್ ಬಾರ್‌ನಲ್ಲಿ “Machine” ಅಂತ ಟೈಪ್ ಮಾಡಿ.

Click On Apply For Services
Apply for Services
• ಅಲ್ಲಿ ಕಾಣುವ ‘ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ’ದ ಹೊಲಿಗೆ ಯಂತ್ರ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.

Click On Arrow Mark
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
* Step 3 – ಮಾಹಿತಿ ಭರ್ತಿ ಮಾಡಿ (Filling Details)
• ಆರ್ಥಿಕ ವರ್ಷವನ್ನು 2025-26 ಎಂದು ಸೆಲೆಕ್ಟ್ ಮಾಡಿ.

Select Year
select year
* ಆಧಾರ್ ದೃಢೀಕರಣ ಮಾಡಿದ ತಕ್ಷಣ ನಿಮ್ಮ ಹೆಸರು, ವಯಸ್ಸು ಮತ್ತು ರೇಷನ್ ಕಾರ್ಡ್ ಮಾಹಿತಿ ಆಟೋಮ್ಯಾಟಿಕ್ ಆಗಿ ಬರುತ್ತದೆ.
• ಜಾತಿ ಮತ್ತು ಆದಾಯ ಪ್ರಮಾಣ ಪತ್ರದ RD ಸಂಖ್ಯೆಯನ್ನು ನಮೂದಿಸಿ (ಗ್ರಾಮೀಣ ಭಾಗದವರಿಗೆ ₹98,000 ಮತ್ತು ನಗರ ಭಾಗದವರಿಗೆ ₹1,20,000 ಆದಾಯ ಇರಬೇಕು).
* Step 4- ದಾಖಲೆಗಳನ್ನು ಅಪ್ಲೋಡ್ ಮಾಡಿ (Document Upload)
• ಅರ್ಜಿಯ ಕೊನೆಯ ಹಂತದಲ್ಲಿ ನಿಮ್ಮ ‘ಟೈಲರಿಂಗ್ ತರಬೇತಿ ಪ್ರಮಾಣ ಪತ್ರ’ವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

Tailoring training Certificate
ಟೈಲರಿಂಗ್ ತರಬೇತಿ ಪ್ರಮಾಣ ಪತ್ರ
* Step 5 – ಸಲ್ಲಿಸುವುದು (Final Submission)
• ಎಲ್ಲ ವಿವರಗಳನ್ನು ಸರಿಯಾಗಿ ನೋಡಿಕೊಂಡು ‘Submit‘ ಕೊಟ್ಟ ನಂತರ ಸ್ವೀಕೃತಿ ಪತ್ರ (Acknowledgement) ಬರುತ್ತದೆ. ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
ಬಡ ಮಹಿಳೆಯರ ಸ್ವಾವಲಂಬನೆಗಾಗಿ ಉಚಿತ ಹೊಲಿಗೆ ಯಂತ್ರ:-
Empowering Women through Free Sewing Machine:-
ಈ ಯೋಜನೆಯು ಬಡ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಸಹಾಯ ಮಾಡುತ್ತದೆ. ತುಂಬಾ ಜನ ಮಹಿಳೆಯರು ಹೊಲಿಗೆ ತರಬೇತಿ ಪಡೆದಿದ್ದರೂ, ಹೊಲಿಗೆ ಮಿಷನ್ (machine) ಕೊಳ್ಳಲು ದುಡ್ಡಿಲ್ಲದೆ ಕಷ್ಟ ಪಡುತ್ತಾರೆ.
ಅಂಥವರಿಗೆ ಸರ್ಕಾರವು ಉಚಿತವಾಗಿ ಮಿಷನ್ ಕೊಟ್ಟು, ಮನೆಯಲ್ಲೇ ಬಟ್ಟೆ ಹೊಲಿಯುವ ಕೆಲಸ ಶುರು ಮಾಡಲು ಸಹಾಯ ಮಾಡುತ್ತದೆ. ಇದರಿಂದ ಅವರು ದಿನದ ಖರ್ಚಿಗೆ ಬೇರೆಯವರ ಸಹಾಯವಿಲ್ಲದೆ, ಸ್ವಂತವಾಗಿ ದುಡಿದು ಒಳ್ಳೆಯ ಜೀವನ ನಡೆಸಬಹುದು.
ಇದು ಹಳ್ಳಿ ಮತ್ತು ಪಟ್ಟಣದ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಮತ್ತು ಮಹಿಳೆಯರನ್ನು ಬಲಗೊಳಿಸಲು ಸಹಾಯ ಮಾಡುತ್ತದೆ.
ಸಣ್ಣ ಉದ್ಯಮ ಶುರು ಮಾಡುವ ಮೂಲಕ ಮಹಿಳೆಯರು ತಮ್ಮ ಕುಟುಂಬದ ವಿದ್ಯಾಭ್ಯಾಸ ಮತ್ತು ಆರೋಗ್ಯದ ಖರ್ಚುಗಳನ್ನು ನೋಡಿಕೊಳ್ಳಲು ಈ ಯೋಜನೆ ಒಂದು ಗಟ್ಟಿಯಾದ ಆಧಾರವಾಗಿದೆ.
This scheme helps underprivileged women gain financial independence through self-employment. Many women with tailoring skills lack funds to buy sewing machines.
By providing free machines, the government enables them to start home-based tailoring businesses, earning a livelihood independently.
This strengthens poor families’ economic status in rural and urban areas, empowering women to manage their family’s education and healthcare.
ಧನ್ಯವಾದಗಳು
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply