Water Saving technology in Summer :: ಮಿಸ್ಟ್ ನೀರಾವರಿ, ಬೇಸಿಗೆಯಲ್ಲಿ ನೀರನ್ನು ಉಳಿಸಲು ತಂತ್ರಜ್ಞಾನ!! 

"Agriculture is our CULTURE"

Click Here Join WhatsApp Group

 

 

Water Saving technology in Summer :: ಮಿಸ್ಟ್ ನೀರಾವರಿ, ಬೇಸಿಗೆಯಲ್ಲಿ ನೀರನ್ನು ಉಳಿಸಲು ತಂತ್ರಜ್ಞಾನ!! 

ಬೇಸಿಗೆಯಲ್ಲಿ ನೀರನ್ನು ಉಳಿಸಲು ಮಿಸ್ಟ್ ನೀರಾವರಿ!! Mist irrigation to save water in summer NEW Technology!!
ಮಿಸ್ಟ್ ನೀರಾವರಿ – ಬೇಸಿಗೆಯ ಸುಡುವ ಬಿಸಿಲಲ್ಲೂ ನಿಮ್ಮ ತೋಟವನ್ನು ಮಲೆನಾಡಿನಂತೆ ತಂಪಾಗಿಸುವ ಹೊಸ ಹಾದಿ!
Mist Irrigation – A Modern Path to Keep Your Farm as Cool as Malnad Even in Scorching Summer!

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಜಾಜೂರು ಹಳ್ಳಿಯ ಹತ್ತಿರ ಇರುವ ದಿನೇಶ್ ಎಂಬ ರೈತರ ಜಮೀನಿನಲ್ಲಿ ಹಾಕಿರುವ ‘ಮಿಸ್ಟ್ ನೀರಾವರಿ’ (Mist Irrigation) ತಂತ್ರಜ್ಞಾನದ ಬಗ್ಗೆ.

ಕೇವಲ 1.5 ಎಕರೆ ಜಾಗದಲ್ಲಿ ಕಡಿಮೆ ನೀರನ್ನು ಉಪಯೋಗಿಸಿ ಹೇಗೆ ಉತ್ತಮ ಕೃಷಿ ಮಾಡಬಹುದು ಎಂಬುದನ್ನು ಇಲ್ಲಿ ತೋರಸಿದಾರೆ.

ಮಿಸ್ಟ್ ನೀರಾವರಿ ಅಂದರೆ ಏನು?

What is Mist Irrigation?

ಮಿಸ್ಟ್ ನೀರಾವರಿ ಎಂದರೆ ಹನಿ ನೀರಾವರಿಗಿಂತ ಬೇರೆಯಾಗಿದ್ದು, ಇಲ್ಲಿ ನೀರನ್ನು ಸಣ್ಣ ಹನಿಗಳಾಗಿ (ಮಂಜಿನ ರೀತಿ) ವಾತಾವರಣಕ್ಕೆ ಚಿಮುಕಿಸಲಾಗುತ್ತದೆ.

• ಸುಮಾರು 14 ಅಡಿ ಎತ್ತರದ ಕಂಬಗಳನ್ನು ಹಾಕಿ ಅದರ ಮೇಲೆ ಶವರ್‌ಗಳನ್ನು ಹಾಕಲಾಗಿದೆ.

* ಇದು ತೋಟದ ವಾತಾವರಣವನ್ನು ಮಲೆನಾಡಿನ ವಾತಾವರಣದ ತರಹ ತಂಪಾಗಿರುವಂತೆ ಮಾಡುತ್ತದೆ.

• ಮಂಜಿನ ರೀತಿಯಲ್ಲಿ ಬೀಳುವ ನೀರಿನ ಹನಿಗಳು ಗಾಳಿಯನ್ನು ತಂಪಾಗಿಸುವುದಲ್ಲದೆ, ನೆಲವನ್ನು ಸಹ ಮೆದುವಾಗಿಸುತ್ತದೆ.

Sprinkler Irrigation
Irrigation System

Mist Irrigation

ತಂತ್ರಜ್ಞಾನದ ಅನುಕೂಲಗಳು:-

Advantages of the Technology:-

* ನೀರಿನ ಉಳಿತಾಯ (Water Saving) – ಮೊದಲಿನ ಪದ್ಧತಿಗಳಿಗೆ ಹೋಲಿಸಿದರೆ ಈ ಪದ್ಧತಿಯಲ್ಲಿ ನೀರಿನ ಉಪಯೋಗವು ತುಂಬಾ ಕಡಿಮೆ. ತೆಂಗು ಮತ್ತು ಅಡಿಕೆ ಮರಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಬಹುದು

ವಿದ್ಯುತ್ ಉಳಿತಾಯ (Electricity Saving) – ಸೋಲಾರ್ ಪಂಪಿಂಗ್ ವ್ಯವಸ್ಥೆಯನ್ನು ಉಪಯೋಗಿಸಿರುವುದರಿಂದ ವಿದ್ಯುತ್ ಇಲ್ಲದೆ ನೀರನ್ನು ಹರಿಸಬಹುದು.

* ಉಳುಮೆಯ ಅವಶ್ಯಕತೆ ಕಡಿಮೆ (Less Tilling) – ಭೂಮಿ ಯಾವಾಗಲೂ ಮೆದುವಾಗಿರುವುದರಿಂದ ಪದೇ ಪದೇ ಉಳುಮೆ ಮಾಡುವ ಅವಶ್ಯಕತೆ ಇರುವುದಿಲ್ಲ.

ಕಡಿಮೆ ಖರ್ಚು (Cost-Effective) – ದೊಡ್ಡ ಕಂಪನಿಗಳ ದುಬಾರಿ ನೀರಾವರಿಗಿಂತ ಇದು ಕಡಿಮೆ ಖರ್ಚಿನಲ್ಲಿ ರೈತರೇ ಮಾಡಿಕೊಳ್ಳಬಹುದಾದ ಸುಲಭವಾದ ವ್ಯವಸ್ಥೆಯಾಗಿದೆ.

ಅಂತರ್ಜಲ ಮರುಪೂರಣ ಮತ್ತು ಕೃಷಿ ಹೊಂಡ:-

Borewell Recharge and Farm Pond:-

• ದಿನೇಶ್ ಅವರು ತಮ್ಮ ಜಮೀನಿನಲ್ಲಿ ಬೋರ್ವೆಲ್ ರೀಚಾರ್ಜ್ (Borewell Recharge) ವ್ಯವಸ್ಥೆಯನ್ನು ಮಾಡಿದ್ದಾರೆ. ಮಳೆ ನೀರು ವ್ಯರ್ಥವಾಗದೆ ಫಿಲ್ಟರ್ ಆಗಿ ಬೋರ್ವೆಲ್‌ಗೆ ಹೋಗುವ ಹಾಗೆ ಮಾಡಿದ್ದಾರೆ.

Recharge Well
Recharge well 

* ಸುಮಾರು 5 ಲಕ್ಷ ಲೀಟರ್ ನೀರನ್ನು ಶೇಖರಿಸಿ ಇಡುವ ಕೃಷಿ ಹೊಂಡವನ್ನು ನಿರ್ಮಿಸಿದ್ದಾರೆ.

• ನೀರಿನಲ್ಲಿ ತೇಲುವ ‘ಫ್ಲೋಟಿಂಗ್ ಮೋಟಾರ್‘ ಮೂಲಕ ಸೋಲಾರ್ ಸಹಾಯದಿಂದ ನೀರನ್ನು ಮಿಸ್ಟ್ ಇರಿಗೇಶನ್‌ಗೆ ಪಂಪ್ ಮಾಡುತ್ತಾರೆ.

ಸಮಗ್ರ ಕೃಷಿ ಪದ್ಧತಿ:-

Integrated Farming Approach:-

• ತೋಟದ ಸುತ್ತಲೂ ಬೇಲಿಯಾಗಿ ‘ಗ್ಲಿರಿಸಿಡಿಯಾ’ (ಗೊಬ್ಬರದ ಗಿಡ) ಗಿಡಗಳನ್ನು ಬೆಳೆಸಿದ್ದಾರೆ.

* ಹಸು ಸಾಕಾಣಿಕೆ ಮತ್ತು ಜೀವಾಮೃತದ ಬಳಕೆಯ ಮೂಲಕ ನೈಸರ್ಗಿಕ ಕೃಷಿಗೆ ಸಹಾಯವಾಗುವಂತೆ ಮಾಡಿದ್ದಾರೆ.

• ಕಡಿಮೆ ಜಾಗದಲ್ಲೇ ಹಣ್ಣಿನ ಗಿಡಗಳು, ತೆಂಗು ಮತ್ತು ಅಡಿಕೆಯನ್ನು ವೈಜ್ಞಾನಿಕವಾಗಿ ಬೆಳೆಸುತ್ತಿದ್ದಾರೆ.

ರೈತರಿಗೆ ಸಂದೇಶ:-

Message to Farmers:-

ಈ ವಿಧಾನದಿಂದ ನೀರು ಕಡಿಮೆ ಇರುವ ಜಾಗಗಳಲ್ಲಿ ನೀರನ್ನು ಉಳಿತಾಯ ಮಾಡಬಹುದು. ಹನಿ ನೀರಾವರಿಗಿಂತಲೂ ನಿಧಾನವಾಗಿ ನೀರನ್ನು ಚಿಮುಕಿಸುವುದರಿಂದ ನೀರು ಆವಿಯಾಗುವುದು ಕಡಿಮೆಯಾಗಿ ಪ್ರತಿಯೊಂದು ಹನಿಯೂ ಗಿಡಕ್ಕೆ ಸಿಗುತ್ತದೆ.

ಬೇಸಿಗೆಯಲ್ಲಿ ತೋಟದ ಬಿಸಿಯನ್ನು 5 ರಿಂದ 10 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆ ಮಾಡಿ, ಮಲೆನಾಡಿನ ತಂಪಾದ ವಾತಾವರಣವನ್ನು ಸೃಷ್ಟಿಸುವುದರಿಂದ ಗಿಡಗಳು ಒಣಗದಂತೆ ಕಾಪಾಡಬಹುದು.

ಸೋಲಾರ್ ಪಂಪ್‌ಗಳನ್ನು ಬಳಸುವುದರಿಂದ ರೈತರಿಗೆ ವಿದ್ಯುತ್ ಬಿಲ್ ಬರುವುದಿಲ್ಲ. ಮತ್ತೆ ಮತ್ತೆ ಉಳುಮೆ ಮಾಡುವ ಅಗತ್ಯವಿಲ್ಲದ ಕಾರಣ ಕೃಷಿ ಖರ್ಚು ಕೂಡ ಕಡಿಮೆಯಾಗುತ್ತದೆ. ಮುಖ್ಯವಾಗಿ,

ಕಡಿಮೆ ನೀರಿನಲ್ಲಿಯೇ ಹೆಚ್ಚು ಬೆಳೆ ತೆಗೆಯಲು ಮತ್ತು ಮಳೆ ಇಲ್ಲದಿದ್ದರೂ ತೋಟವನ್ನು ಉಳಿಸಿಕೊಳ್ಳಲು ಈ ತಂತ್ರಜ್ಞಾನವು ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. 

ಯಾವುದೇ ರೈತರು ತೋಟ ಮಾಡುವ ಮೊದಲು ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು. “ಹೊಲಕ್ಕೊಂದು ಕೆರೆ” ಎಂಬಂತೆ ಮಳೆ ನೀರನ್ನು ಶೇಖರಿಸಿ, ಮಿಸ್ಟ್ ನೀರಾವರಿಯಂತಹ

ಹೊಸ ತಂತ್ರಜ್ಞಾನವನ್ನು ಉಪಯೋಗಿಸಿದರೆ ಕಡಿಮೆ ನೀರಿನಲ್ಲಿಯೂ ಲಾಭದಾಯಕ ಕೃಷಿ ಮಾಡಬಹುದು ಎಂದು ಹೇಳಿದ್ದಾರೆ.

Ideal for dry areas, this water-saving method precisely sprays water, minimizing evaporation compared to drip irrigation, ensuring full absorption.

It can cool farms by 5°C to 10°C in summer, preventing crop damage.Using solar pumps cuts electricity costs. Consistent soil moisture reduces tilling, lowering expenses.

This technology enables greater yields using less water, securing plantations during monsoon shortfalls.

ಧನ್ಯವಾದಗಳು

Thank you.

Best Product in Amazon Online shopping based on our Live usage:: 

ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.

Click below link to purchase it

https://amzn.to/3PCyXxq

We are useing this washing machine since many year, best washing machine for daily use dress.

Thank you

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.