24/7 Free Health Support :: 24/7 ಲಭ್ಯವಿರುವ ಉಚಿತ ಸಲಹೆ!! ಯಾವುದೇ ಕಷ್ಟವಿದ್ದರೂ ಈ ನಂಬರಿಗೆ ಕರೆ ಮಾಡಿ!!

"Agriculture is our CULTURE"

Click Here Join WhatsApp Group

24/7 Free Health Support :: 24/7 ಲಭ್ಯವಿರುವ ಉಚಿತ ಸಲಹೆ!! ಯಾವುದೇ ಕಷ್ಟವಿದ್ದರೂ ಈ ನಂಬರಿಗೆ ಕರೆ ಮಾಡಿ!!

24/7 ಲಭ್ಯವಿರುವ ಉಚಿತ ಮನೋವೈದ್ಯಕೀಯ ಸಲಹೆ – ಈಗ ನಿಮ್ಮ ಭಾಷೆಯಲ್ಲೇ!

24/7 Free Mental Health Support – Now in Your Own Language!

ಭಾರತ ಸರ್ಕಾರವು ‘ಟೆಲಿ ಮಾನಸ್‘ (Tele MANAS – Tele Mental Health Assistance and Networking Across States) ಎಂಬ ಹೆಸರಿನಲ್ಲಿ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿಯನ್ನು ಪ್ರಾರಂಭಿಸಿದೆ.

ಈ ಸಹಾಯವಾಣಿಯು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ನೆರವು ನೀಡುವ ಗುರಿಯನ್ನು ಹೊಂದಿದೆ

ಸಹಾಯವಾಣಿಯ ಉದ್ದೇಶಗಳು ಮತ್ತು ವೈಶಿಷ್ಟ್ಯಗಳು:-

Tele MANAS Initiative and helpline:-

• ಟೆಲಿ ಮಾನಸ್ (Tele Mental Health Assistance and Networking Across States). ಇದು ದೂರವಾಣಿ ಮೂಲಕ ಮಾನಸಿಕ ಆರೋಗ್ಯ ಸಹಾಯ ಮತ್ತು ರಾಜ್ಯಗಳ ನಡುವೆ ಸಂಪರ್ಕವನ್ನು ಒದಗಿಸುವ ಜಾಲವಾಗಿದೆ.

* ಸಹಾಯವಾಣಿ ಸಂಖ್ಯೆ – 14416. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಸಹಾಯವನ್ನು ಪಡೆಯಬಹುದು.

• ಈ ಸಹಾಯವಾಣಿಯು ದಿನದ 24 ಗಂಟೆಯೂ (24×7) ಕಾರ್ಯನಿರ್ವಹಿಸುತ್ತದೆ. ಅಂದರೆ, ನೀವು ಯಾವುದೇ ಸಮಯದಲ್ಲಿ ಕರೆ ಮಾಡಬಹುದು. ಇದು ಸಂಪೂರ್ಣವಾಗಿ ಉಚಿತ ಸೇವೆಯಾಗಿದೆ.

* ಟೆಲಿ ಮಾನಸ್ ಸೇವೆಯು ಕನ್ನಡ ಸೇರಿದಂತೆ ಭಾರತದ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಇದರಿಂದಾಗಿ ವಿವಿಧ ಭಾಷೆಗಳನ್ನು ಮಾತನಾಡುವ ಜನರು ತಮ್ಮದೇ ಆದ ಭಾಷೆಯಲ್ಲಿ ಸಹಾಯ ಪಡೆಯಬಹುದು.

• ಕರೆ ಮಾಡುವವರ ಮಾಹಿತಿಯನ್ನು ಮತ್ತು ಅವರ ಸಮಸ್ಯೆಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತದೆ. ಅವರ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ತಿಳಿಸುವುದಿಲ್ಲ.

ಯಾವ ರೀತಿಯ ಸಮಸ್ಯೆಗಳಿಗೆ ಸಂಪರ್ಕಿಸಬಹುದು?

which all issues persons can contact?

* ಮಾನಸಿಕ ಒತ್ತಡ, ಆತಂಕ (Anxiety) ಮತ್ತು ಖಿನ್ನತೆ (Depression) ಮುಂತಾದ ಸಮಸ್ಯೆಗಳಿದ್ದಲ್ಲಿ ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು.

• ಕುಟುಂಬದಲ್ಲಿನ ಕಲಹಗಳು ಅಥವಾ ಸಂಬಂಧಗಳಲ್ಲಿನ ಸಮಸ್ಯೆಗಳ ಬಗ್ಗೆಯೂ ಇಲ್ಲಿ ಪರಿಹಾರವನ್ನು ಪಡೆಯಬಹುದು.

* ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಮತ್ತು ಭಾವನಾತ್ಮಕ ಏರುಪೇರುಗಳು ಉಂಟಾಗುತ್ತಿದ್ದರೆ, ಈ ಸಹಾಯವಾಣಿಯ ಮೂಲಕ ಮಾರ್ಗದರ್ಶನ ಪಡೆಯಬಹುದು.

• ವಿದ್ಯಾರ್ಥಿಗಳಲ್ಲಿ ಓದಿನ ಒತ್ತಡ ಹೆಚ್ಚಾಗಿದ್ದರೆ, ಓದಿನಲ್ಲಿ ಆಸಕ್ತಿ ಕಡಿಮೆಯಾಗಿದ್ದರೆ ಅಥವಾ ನೆನಪಿನ ಶಕ್ತಿಯ ಸಮಸ್ಯೆಗಳಿದ್ದರೆ, ಟೆಲಿ ಮಾನಸ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.

* ಮದ್ಯಪಾನ ಅಥವಾ ಧೂಮಪಾನದಂತಹ ಕೆಟ್ಟ ಚಟಗಳಿಂದ ಹೊರಬರಲು ಬಯಸಿದರೆ, ಈ ಸಹಾಯವಾಣಿ ನಿಮಗೆ ನೆರವಾಗುತ್ತದೆ.

• ಆರ್ಥಿಕ ಸಮಸ್ಯೆಗಳು ಅಥವಾ ಕೆಲಸದ ಒತ್ತಡದಿಂದ ಉಂಟಾಗುವ ಮಾನಸಿಕ ತೊಂದರೆಗಳಿಗೂ ಇಲ್ಲಿ ಪರಿಹಾರ ಸಿಗುತ್ತದೆ.

ಸಹಾಯವಾಣಿ ಹೇಗೆ ಕೆಲಸ ಮಾಡುತ್ತದೆ?

How does helpline works?

1. ಮೊದಲ ಹಂತ (Tier 1) – ನೀವು 14416 ಸಂಖ್ಯೆಗೆ ಕರೆ ಮಾಡಿದಾಗ, ಮೊದಲು ತರಬೇತಿ ಪಡೆದ ಕೌನ್ಸಿಲರ್ (Counselor) ನಿಮ್ಮೊಂದಿಗೆ ಮಾತನಾಡುತ್ತಾರೆ.

ಅವರು ನಿಮ್ಮ ಸಮಸ್ಯೆಯನ್ನು ಆಲಿಸುತ್ತಾರೆ ಮತ್ತು ಅಗತ್ಯವಿದ್ದರೆ ತಕ್ಷಣದ ಸಲಹೆ ಮತ್ತು ಬೆಂಬಲವನ್ನು ನೀಡುತ್ತಾರೆ.

2. ಎರಡನೇ ಹಂತ (Tier 2) – ಒಂದು ವೇಳೆ ನಿಮ್ಮ ಸಮಸ್ಯೆ ಹೆಚ್ಚು ಗಂಭೀರವಾಗಿದ್ದರೆ, ನಿಮ್ಮ ಕರೆಯನ್ನು ಮನಶ್ಶಾಸ್ತ್ರಜ್ಞರು (Mental Health Professionals) ಅಥವಾ ಸೈಕಿಯಾಟ್ರಿಸ್ಟ್‌ಗಳಿಗೆ ವರ್ಗಾಯಿಸಲಾಗುತ್ತದೆ.

ಅವರು ನಿಮಗೆ ವೃತ್ತಿಪರ ಸಹಾಯವನ್ನು ನೀಡುತ್ತಾರೆ.

3. ಹೆಚ್ಚಿನ ಚಿಕಿತ್ಸೆ – ಅಗತ್ಯವಿದ್ದಲ್ಲಿ, ನಿಮಗೆ ವಿಡಿಯೋ ಕನ್ಸಲ್ಟೇಶನ್ ಮೂಲಕ ಹೆಚ್ಚಿನ ಚಿಕಿತ್ಸೆಯನ್ನು ನೀಡಬಹುದು. ಅಥವಾ ನಿಮ್ಮ ಹತ್ತಿರದ ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರಗಳಿಗೆ (District Mental Health Program)

ಭೇಟಿ ನೀಡಲು ಮಾರ್ಗದರ್ಶನ ನೀಡಲಾಗುತ್ತದೆ. ಅಲ್ಲಿ ನೀವು ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬಹುದು.

ಮಾನಸಿಕ ಆರೋಗ್ಯವೇ ಭಾಗ್ಯ:-

Mental Health is Wealth:-

ಮಾನಸಿಕ ಒತ್ತಡ/ಆತಂಕಕ್ಕೊಳಗಾದವರು ತಮ್ಮ ನೋವು ಹಂಚಿಕೊಳ್ಳಲು ಬಯಸಿದಾಗ, ತರಬೇತಿ ಪಡೆದ ಆಪ್ತ ಸಮಾಲೋಚಕರು ತಾಳ್ಮೆಯಿಂದ ಆಲಿಸುತ್ತಾರೆ. ಇದು ಮನಸ್ಸಿನ ಭಾರ ಕಡಿಮೆಮಾಡಲು ತಕ್ಷಣದ ಮದ್ದು.

ಮಾತುಕತೆಯಿಂದ ಸರಿಹೋಗದ ಗಂಭೀರ ಸಮಸ್ಯೆಗಳಿದ್ದರೆ, ಸಹಾಯವಾಣಿ ತಜ್ಞ ಮನೋವೈದ್ಯರಿಗೆ ಕರೆಯನ್ನು ವರ್ಗಾಯಿಸುತ್ತದೆ.

ಅವರು ವಿಡಿಯೋ ಕನ್ಸಲ್ಟೇಶನ್ ಮೂಲಕ ಉಚಿತವಾಗಿ ಚಿಕಿತ್ಸಾ ಮಾರ್ಗಸೂಚಿ ನೀಡುತ್ತಾರೆ.

ಸಂಪೂರ್ಣ ಗೌಪ್ಯವಾಗಿರುವುದರಿಂದ, ಮುಜುಗರಕ್ಕೆ ಹೆದರುವವರಿಗೆ ಇದು ಸುರಕ್ಷಿತ ವೇದಿಕೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದು ಸಂಜೀವಿನಿ. ಗ್ರಾಮೀಣ ಭಾಗದ ಜನರಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳ ಮಾಹಿತಿ ನೀಡಿ, ವೈದ್ಯಕೀಯ ನೆರವು ಸಿಗುವಂತೆ ಮಾಡುತ್ತದೆ.

ಖಾಸಗಿ ಆಸ್ಪತ್ರೆಯಲ್ಲಿ ಹಣ ಪಾವತಿಸಬೇಕು, ಆದರೆ ಇಲ್ಲಿ ಉಚಿತವಾಗಿ ಸಲಹೆ ಪಡೆಯಬಹುದು. ಯಾರಾದರೂ ಮಾನಸಿಕವಾಗಿ ತೊಂದರೆಗೀಡಾಗಿದ್ದರೆ, ಈ ಸಹಾಯವಾಣಿಗೆ ಕರೆ ಮಾಡಬಹುದು.

Trained counselors listen to those with mental stress or anxiety, offering immediate relief. Serious issues are transferred to psychiatrists for free video consultation and treatment.

This confidential helpline is a safe platform, especially for the economically disadvantaged, acting as a lifeline (Sanjivini).

It informs rural residents about nearby government hospitals for free medical help, as opposed to private hospitals. Anyone with mental health issues can call.

ಧನ್ಯವಾದಗಳು 

Thank you

<<< Arecanut Market : Daily Arecanut Market ( Click Here ) >>>

<  For job updates and employment related information and carrier paths please follow below Facebook Group and WhatsApp Group  >

1) ” Facebook Group ” – Click Here

2) ” WhatsApp Group ” – Click Here

Forever helpful and useful updates

 vkgrowmore.com 💚

– VK
Knowledge Lead’s & Live’s Life


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.