Does Watermelon Contain poison :: ಕಲ್ಲಂಗಡಿ ಹಣ್ಣಿಗೆ ಕೆಂಪು ಇಂಜೆಕ್ಷನ್ ಮಾಡುತ್ತಾರೆ? ಇದು ಸಾಧ್ಯವೇ,ಗಾಳಿ ಸುದ್ದಿಗೆ ಕಿವಿಗೊಡಬೇಡಿ!!

"Agriculture is our CULTURE"

Click Here Join WhatsApp Group

Does Watermelon Contain poison :: ಕಲ್ಲಂಗಡಿ ಹಣ್ಣಿಗೆ ಕೆಂಪು ಇಂಜೆಕ್ಷನ್ ಮಾಡುತ್ತಾರೆ? ಇದು ಸಾಧ್ಯವೇ,ಗಾಳಿ ಸುದ್ದಿಗೆ ಕಿವಿಗೊಡಬೇಡಿ!!

ಗಾಳಿ ಸುದ್ದಿಗೆ ಕಿವಿಗೊಡಬೇಡಿ – ಕಲ್ಲಂಗಡಿ ಹಣ್ಣಿನ ಅಸಲಿ ಸತ್ಯ!

Don’t Listen to Rumors – The Real Truth of Watermelon!

ಇತ್ತೀಚಿನ ದಿನಗಳಲ್ಲಿ ಕಲ್ಲಂಗಡಿ ಹಣ್ಣುಗಳಿಗೆ (Watermelon) ಕೃತಕ ಬಣ್ಣವನ್ನು ಇಂಜೆಕ್ಷನ್ ಮಾಡುವಂತ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.

ಪ್ರಾಯೋಗಿಕ ಪರೀಕ್ಷೆ :-

Practical Demonstration:-

ಎರಡು ಕಲ್ಲಂಗಡಿ ಹಣ್ಣುಗಳನ್ನು ಹೋಲಿಕೆಗಾಗಿ ತೆಗೆದುಕೊಳ್ಳಿ :-

1. ನೈಸರ್ಗಿಕ ಕಲ್ಲಂಗಡಿ ಹಣ್ಣು – ಯಾವುದೇ ಕೃತಕ ಬಣ್ಣವನ್ನು ಸೇರಿಸದ ನೈಸರ್ಗಿಕ ಹಣ್ಣು.

2. ಬಣ್ಣ ಇಂಜೆಕ್ಟ್ ಮಾಡಿದ ಕಲ್ಲಂಗಡಿ ಹಣ್ಣು – ಪ್ರತ್ಯೇಕವಾಗಿ ಕೆಂಪು ಬಣ್ಣದ ಫುಡ್ ಕಲರ್ ಅನ್ನು ಇಂಜೆಕ್ಷನ್ ಮೂಲಕ ಸೇರಿಸಲಾದ ಹಣ್ಣು.

Injecting For Early Ripening of Watermelon

ಇಂಜೆಕ್ಷನ್ ಮೂಲಕ ಸೇರಿಸಲಾದ ಹಣ್ಣು.

Fake Watermelon

ವ್ಯತ್ಯಾಸ ಎರಡು ಹಣ್ಣುಗಳ ಮಧ್ಯ 

ಪ್ರಮುಖ ಅಂಶಗಳು :-

Key Findings & Points:-

* ಬಣ್ಣದ ವ್ಯತ್ಯಾಸ – ನೈಸರ್ಗಿಕ ಕಲ್ಲಂಗಡಿ ಹಣ್ಣನ್ನು ಕತ್ತರಿಸಿದಾಗ, ಅದು ನೈಸರ್ಗಿಕವಾದ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಅಲ್ಲದೆ, ಅದರ ಒಳಗಿನ ಬಿಳಿ ಸಿಪ್ಪೆಯ ಭಾಗವು ಬಿಳಿಯಾಗಿಯೇ ಇರುತ್ತದೆ.

ಆದರೆ, ಕೃತಕ ಬಣ್ಣವನ್ನು ಇಂಜೆಕ್ಟ್ ಮಾಡಿದ ಕಲ್ಲಂಗಡಿ ಹಣ್ಣಿನಲ್ಲಿ, ಆ ಬಣ್ಣವು ಬಿಳಿ ಸಿಪ್ಪೆಯ ಭಾಗಕ್ಕೂ ಹರಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಹಣ್ಣಿನ ಸ್ಥಿತಿಗತಿ – ಕೃತಕ ಬಣ್ಣವನ್ನು ಇಂಜೆಕ್ಷನ್ ಮಾಡಿದ 24 ಗಂಟೆಗಳ ನಂತರ, ಆ ಹಣ್ಣು ಒಳಗಿನಿಂದ ಕೊಳೆಯಲು ಅಥವಾ ಹಾಳಾಗಲು ಪ್ರಾರಂಭವಾಗುತ್ತದೆ. ಬಣ್ಣವನ್ನು ಇಂಜೆಕ್ಟ್ ಮಾಡಿದ ಜಾಗದಲ್ಲಿ ಒಂದು ಸಣ್ಣ ತೂತು (Hole) ಎದ್ದು ಕಾಣುತ್ತದೆ ಮತ್ತು ಅಲ್ಲಿಂದ ಬಣ್ಣ ಸೋರಿಕೆಯಾಗುತ್ತಿರುತ್ತದೆ.

* ಆರ್ಥಿಕ ಲೆಕ್ಕಾಚಾರದ ವಿಶ್ಲೇಷಣೆ – ಒಂದು ಇಂಜೆಕ್ಷನ್ ಟ್ಯೂಬ್‌ಗೆ ಸರಿಸುಮಾರು 50 ರೂ.ಗಳು ಮತ್ತು ಬಣ್ಣಕ್ಕೆ 10 ರೂ.ಗಳು ಖರ್ಚಾಗುತ್ತದೆ. ಕಡಿಮೆ ಬೆಲೆಗೆ ಮಾರಾಟವಾಗುವ

ಪ್ರತಿ ಕಲ್ಲಂಗಡಿ ಹಣ್ಣಿಗೆ ಇಷ್ಟೊಂದು ಹಣ ಮತ್ತು ಸಮಯವನ್ನು ವ್ಯಯಿಸಿ ಕೃತಕ ಬಣ್ಣವನ್ನು ಹಾಕುವುದು ಪ್ರಾಯೋಗಿಕವಾಗಿ ಅಸಾಧ್ಯವೆನಿಸುತ್ತದೆ.

ರೈತರ ಹಿತದೃಷ್ಟಿಯ ಮಹತ್ವ – ರೈತರು ತಾವು ಬೆಳೆದ ಕಲ್ಲಂಗಡಿ ಹಣ್ಣುಗಳಿಗೆ ವಿಷಕಾರಿ ಬಣ್ಣವನ್ನು ಬೆರೆಸಿ ಎಂದಿಗೂ ಮಾರಾಟ ಮಾಡುವುದಿಲ್ಲ. ಇಂತಹ ಸುಳ್ಳು ಸುದ್ದಿಗಳು ಹರಡುವುದರಿಂದ ಕಲ್ಲಂಗಡಿ ಹಣ್ಣುಗಳನ್ನು

ಬೆಳೆಯುವ ರೈತರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಅಪಾರ ನಷ್ಟ ಉಂಟಾಗುತ್ತದೆ.

ರೈತರ ಶ್ರಮಕ್ಕೆ ಬೆಲೆ ಕೊಡಿ :-

Value Farmers’ Hard Work:-

ಕಲ್ಲಂಗಡಿ ಹಣ್ಣಿಗೆ ಬಣ್ಣದ ಇಂಜೆಕ್ಷನ್ ಮಾಡ್ತಾರೆ ಅನ್ನೋದು ಸುಳ್ಳು ಸುದ್ದಿ ಮತ್ತು ಬರೀ ವದಂತಿ. ನಿಜವಾಗಿ ನೋಡಿದ್ರೆ, ಒಂದೊಂದು ಹಣ್ಣಿಗೂ ಬೇರೆ ಬೇರೆಯಾಗಿ ಇಂಜೆಕ್ಷನ್ ಮಾಡೋಕೆ ಖರ್ಚು ಮತ್ತು ಟೈಮ್ ಜಾಸ್ತಿ ಆಗುತ್ತೆ.

ಇದು ಹಣ್ಣಿನ ಮಾರಾಟದ ಬೆಲೆಗಿಂತ ಹೆಚ್ಚಾಗಿರುತ್ತೆ, ಇದರಿಂದ ಯಾರಿಗೂ ಲಾಭ ಆಗಲ್ಲ. ಜೊತೆಗೆ, ಇಂಜೆಕ್ಷನ್ ಮಾಡಿದ ಹಣ್ಣು ಬೇಗನೆ ಹಾಳಾಗೋದಕ್ಕೆ ಶುರು ಮಾಡುತ್ತೆ, ಅದನ್ನ ಮಾರುಕಟ್ಟೆಯಲ್ಲಿ ಮಾರೋಕೆ ಆಗೋದಿಲ್ಲ.

ಅದಕ್ಕೆ, ಸೋಶಿಯಲ್ ಮೀಡಿಯಾದಲ್ಲಿ ಬರುವ ಇಂತಹ ಸುಳ್ಳು ಸುದ್ದಿಗಳಿಗೆ ತಲೆ ಕೆಡಿಸಿಕೊಳ್ಳದೆ, ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದಾದ ಕಲ್ಲಂಗಡಿ ಹಣ್ಣನ್ನು ಭಯ ಇಲ್ಲದೆ ತಿನ್ನಬಹುದು.

ನಮ್ಮ ರೈತರ ಕಷ್ಟಕ್ಕೆ ಬೆಲೆ ಕೊಡಿ ಮತ್ತು ಸುಳ್ಳು ಮಾಹಿತಿಯಿಂದ ಅವರಿಗೆ ನಷ್ಟ ಆಗದ ಹಾಗೆ ಎಚ್ಚರದಿಂದ ಇರಿ. ಕಲ್ಲಂಗಡಿ ಹಣ್ಣುಗಳಿಗೆ ಕಲರ್ ಹಾಕ್ತಾರೆ ಅನ್ನೋದು ಬರೀ ವದಂತಿ.

ಬೇಸಿಗೆಯಲ್ಲಿ ನೀರಿನ ಅಭಾವ ಆಗದಂತೆ (Dehydration) ತಡೆಯಲು ಕಲ್ಲಂಗಡಿ ಹಣ್ಣನ್ನು ಧೈರ್ಯವಾಗಿ ತಿನ್ನಬಹುದು.

The idea that watermelons are injected with color is false and just a rumor. It would cost too much time and money to inject each watermelon, more than what the fruit sells for, so it’s not profitable.

Also, injected watermelons spoil fast, so they can’t be sold. You don’t need to worry about these fake stories online; you can safely eat watermelons, which are very healthy in the summer.

Respect the hard work of our farmers and don’t cause them to lose money by spreading false information. The idea of added colors is just a rumor; you can confidently eat watermelons to stay hydrated in the summer heat.

ಧನ್ಯವಾದಗಳು 

Thank you

<<< Arecanut Market : Daily Arecanut Market ( Click Here ) >>>

<  For job updates and employment related information and carrier paths please follow below Facebook Group and WhatsApp Group  >

1) ” Facebook Group ” – Click Here

2) ” WhatsApp Group ” – Click Here

Forever helpful and useful updates

 vkgrowmore.com 💚

– VK
Knowledge Lead’s & Live’s Life


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.