Apply for new Ration card :: ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ!! ಅರ್ಜಿ ಸಲ್ಲಿಸುವ ವಿಧಾನ ಮತ್ತು ನಿಯಮಗಳು!!
ಕರ್ನಾಟಕ ರಾಜ್ಯ ಸರ್ಕಾರವು ಹೊಸ ಬಿಪಿಎಲ್ (ಬೆಲೋ ಪಾವರ್ಟಿ ಲೈನ್ – Below Poverty Line) ರೇಷನ್ ಕಾರ್ಡ್‌ಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಮತ್ತು ಈಗಾಗಲೇ ಇರುವ ಹಳೆಯ ರೇಷನ್ ಕಾರ್ಡ್‌ಗಳಲ್ಲಿ ಏನಾದರೂ ತಿದ್ದುಪಡಿಗಳನ್ನು ಮಾಡಬೇಕಾದರೆ ಅದಕ್ಕೂ ಅವಕಾಶವನ್ನು ಕಲ್ಪಿಸಿದೆ.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಮಾರ್ಚ್ 2026 ರವರೆಗೆ ಅವಕಾಶವಿರುತ್ತದೆ. ಈ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
• ಅಧಿಕೃತ ವೆಬ್‌ಸೈಟ್ ಸಮಯ – ಅರ್ಜಿಯನ್ನು ಸಲ್ಲಿಸಲು ಅಥವಾ ತಿದ್ದುಪಡಿಗಳನ್ನು ಮಾಡಲು ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಬೆಳಗ್ಗೆ 10:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ ಮಾತ್ರ ಲಿಂಕ್ ಲಭ್ಯವಿರುತ್ತದೆ ನಿಗದಿತ ಸಮಯದ ನಂತರ ಲಿಂಕ್ ಕಾರ್ಯನಿರ್ವಹಿಸುವುದಿಲ್ಲ.
ಯಾರು ಅರ್ಜಿ ಸಲ್ಲಿಸಬಹುದು?
Who all can apply?
• ಸದ್ಯಕ್ಕೆ ಸರ್ಕಾರವು ಮೂರು ವರ್ಗದ ಜನರಿಗೆ ಮಾತ್ರ ಅವಕಾಶವನ್ನು ನೀಡಿದೆ:ಮೊದಲಿಗೆ ಈ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕರ ಬಳಕೆಯಲ್ಲಿ ನಿಮ್ಮ ವಿಭಾಗ ಸೆಲೆಕ್ಟ್ ಮಾಡಿ. https://ahara.karnataka.gov.in/NRC/app_offline_current.aspx

Region Wise
ಸಾರ್ವಜನಿಕರ ಬಳಕೆ ಪೇಜ್
1. ಇ-ಶ್ರಮ (e-Shram) ಕಾರ್ಡ್ ಹೊಂದಿರುವ ಕಾರ್ಮಿಕರು: ಇ-ಶ್ರಮ ಕಾರ್ಡ್ ಹೊಂದಿರುವಂತಹ ಕಾರ್ಮಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
2. ಪಿವಿಟಿಜಿ ಸಮುದಾಯದವರು (PVTG Community): ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರು ಸಹ ಹೊಸ ರೇಷನ್ ಕಾರ್ಡ್‌ಗೆ ಅರ್ಜಿಯನ್ನು ಸಲ್ಲಿಸಬಹುದು.
3. ತುರ್ತು ವೈದ್ಯಕೀಯ ಚಿಕಿತ್ಸೆ (Medical Emergency) ಅಗತ್ಯವಿರುವವರು: ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ವ್ಯಕ್ತಿಗಳು ಈ ಸೌಲಭ್ಯದ ಅಡಿಯಲ್ಲಿ ರೇಷನ್ ಕಾರ್ಡ್ ಪಡೆಯಬಹುದು.
ಹೊಸ ರೇಷನ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:-
How to apply online:-
Step 1- ಅಪ್ಲಿಕೇಶನ್ ಆಯ್ಕೆ ವೆಬ್‌ಸೈಟ್‌ಗೆ ಲಾಗಿನ್ ಆದ ಬಳಿಕ, ಮುಖ್ಯ ಪುಟದಲ್ಲಿ “ಹೊಸ ಪಡಿತರ ಚೀಟಿ” ಆಯ್ಕೆ ಆರಿಸಿ.
Step 2 – ಅರ್ಹತಾ ಮಾನದಂಡ ಪರಿಶೀಲನೆ
ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:-
Answering the criterias:-
• ಕುಟುಂಬದ ಸದಸ್ಯರು ಸರ್ಕಾರಿ ಕೆಲಸ ಅಥವಾ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆಯೇ? ಅಥವಾ ಆದಾಯ ತೆರಿಗೆ ಪಾವತಿಸುತ್ತಾರೆಯೇ?
* ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್ ಒಣಭೂಮಿ/ನೀರಾವರಿ ಭೂಮಿ ಹೊಂದಿದ್ದೀರಾ? ಅಥವಾ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿದ್ದೀರಾ?
• ಜೀವನೋಪಾಯಕ್ಕಾಗಿ ಬಳಸುವ ವಾಹನಗಳನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದೀರಾ?
* ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಕ್ಕಿಂತ ಹೆಚ್ಚಿದೆಯೇ?
ಸೂಚನೆ – ನಿಮ್ಮ ಉತ್ತರ ‘ಇಲ್ಲ’ ಎಂದಾಗಿದ್ದರೆ ಮಾತ್ರ ನೀವು ಬಿಪಿಎಲ್ ಕಾರ್ಡ್‌ಗೆ ಅರ್ಹರು.
Step 3- ಸಲ್ಲಿಕೆ
ಎಲ್ಲಾ ಆಯ್ಕೆಗಳನ್ನು ಭರ್ತಿ ಮಾಡಿದ ನಂತರ “ಮುಂದುವರೆಯಲು” ಬಟನ್ ಮೇಲೆ ಕ್ಲಿಕ್ ಮಾಡಿ.
ಮಾನದಂಡ ಪರಿಶೀಲನೆ
ಪ್ರಮುಖ ಮಾಹಿತಿ:-
Important information :-
• ಹೊಸ ಅರ್ಜಿ – ಅರ್ಹ ವ್ಯಕ್ತಿಗಳು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಇ-ಶ್ರಮ ಕಾರ್ಡ್‌ನ ಯುಎಎನ್ (UAN) ಸಂಖ್ಯೆಯನ್ನು ನಮೂದಿಸುವ ಮೂಲಕ ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿಯನ್ನು ಸಲ್ಲಿಸಬಹುದು.
• ತಿದ್ದುಪಡಿಗಳು – ಒಂದು ವೇಳೆ ರೇಷನ್ ಕಾರ್ಡ್‌ನಲ್ಲಿ ಏನಾದರೂ ತಿದ್ದುಪಡಿಗಳನ್ನು ಮಾಡಬೇಕಾದರೆ, ಉದಾಹರಣೆಗೆ ಹೊಸ ಸದಸ್ಯರ ಹೆಸರನ್ನು ಸೇರಿಸುವುದು, ಹೆಸರು ತೆಗೆದುಹಾಕುವುದು,
ವಿಳಾಸವನ್ನು ಬದಲಾಯಿಸುವುದು ಅಥವಾ ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಲು ಬಯಸಿದರೆ ಅದಕ್ಕೂ ಅವಕಾಶವಿರುತ್ತದೆ.
ತಿದ್ದುಪಡಿ ಎಲ್ಲಿ ಮಾಡಿಸಬೇಕು?
Where to do corrections?
ಸಾರ್ವಜನಿಕರು ರೇಷನ್ ಕಾರ್ಡ್‌ನಲ್ಲಿನ ತಿದ್ದುಪಡಿಗಳನ್ನು ಸ್ವತಃ ಮಾಡಲು ಸಾಧ್ಯವಿಲ್ಲ. ತಿದ್ದುಪಡಿಗಳನ್ನು ಮಾಡಲು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಬೇಕು.
ಅಗತ್ಯವಿರುವ ದಾಖಲೆಗಳು:-
Required documents :-
ಅರ್ಜಿದಾರರು ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ (Income Certificate), ಮೊಬೈಲ್ ಸಂಖ್ಯೆ ಮತ್ತು ಮನೆಯಲ್ಲಿ ಮಕ್ಕಳನ್ನು ಸೇರಿಸುವುದಾದರೆ ಅವರ ಜನನ ಪ್ರಮಾಣ ಪತ್ರವನ್ನು (Birth Certificate) ಹೊಂದಿರಬೇಕು.
ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಭಾಗ್ಯ:-
BPL Benefits for Eligible Beneficiaries:-
ಕರ್ನಾಟಕ ಸರ್ಕಾರದ ಈ ಕ್ರಮವು ಹಿಂದುಳಿದ ಮತ್ತು ಅಗತ್ಯವಿರುವ ವರ್ಗಗಳಿಗೆ ಭದ್ರತೆ ನೀಡುತ್ತದೆ. ಬಿಪಿಎಲ್ ಕಾರ್ಡ್‌ನಿಂದ ರಿಯಾಯಿತಿ ದರದಲ್ಲಿ ಪಡಿತರ ಮತ್ತು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಬಹುದು.
ಇದು, ಇ-ಶ್ರಮ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಮತ್ತು ಬುಡಕಟ್ಟು ಸಮುದಾಯದವರಿಗೆ ಆರ್ಥಿಕವಾಗಿ ಸಹಕಾರಿ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಕಾರ್ಡ್ ವಿತರಣೆಯಿಂದ ಆಸ್ಪತ್ರೆ ವೆಚ್ಚಗಳಿಗೆ ಅನುಕೂಲವಾಗುತ್ತದೆ.
ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ತಿದ್ದುಪಡಿಗೆ ಅವಕಾಶವಿರುವುದರಿಂದ, ಮಧ್ಯವರ್ತಿಗಳಿಲ್ಲದೆ ಹೆಸರು ಸೇರ್ಪಡೆ/ವಿಳಾಸ ಬದಲಾವಣೆ ಮಾಡಬಹುದು.
The Government of Karnataka’s measure secures backward and needy communities. A BPL card enables subsidized food grains and government welfare schemes. It benefits e-Shram card laborers and tribal communities.
Emergency card issuance covers hospital expenses via government aid. Gram One and Karnataka One centers facilitate corrections, allowing beneficiaries to update information without intermediaries.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply