PM Kisan Not credited :: ಪಿಎಂ ಕಿಸಾನ್ ಹಣವು ನಿಮ್ಮ ಖಾತೆಗೆ ಜಮವಾಗದಿರಲು ಕಾರಣವೇನು? ಜಮವಾಗಿಲ್ಲ ಅಂದರೆ ಏನು ಮಾಡಬೇಕು?
ಪಿಎಂ ಕಿಸಾನ್ 22ನೇ ಕಂತು ರೈತರ ಆರ್ಥಿಕ ಸಬಲೀಕರಣದ ಹಾದಿ!!
PM-Kisan 22nd Installment A Path to Farmers Economic Empowerment!!
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 22ನೇ ಕಂತನ್ನು
ಬಿಡುಗಡೆ ಮಾಡಿರುವ ಕುರಿತು ಮತ್ತು ನಿಮ್ಮ ಸ್ಟೇಟಸ್ ಅನ್ನು ಹೇಗೆ ಪರಿಶೀಲಿಸಿಕೊಳ್ಳುವುದು ಎಂಬ ಬಗ್ಗೆ::
ಹಣ ಬಿಡುಗಡೆಯ ಪ್ರಮುಖ ವಿವರಗಳು:-
Money tranfered details :-
• ಇದು 22ನೇ ಕಂತಿನ ಹಣವಾಗಿದೆ.
* ದೇಶದಾದ್ಯಂತ ಸುಮಾರು 9.32 ಕೋಟಿ ರೈತರಿಗೆ ಒಟ್ಟು 18,640 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲಾಗಿದೆ.
• ಕರ್ನಾಟಕ ರಾಜ್ಯದ 41,40,106 ರೈತರಿಗೆ ಒಟ್ಟಾರೆಯಾಗಿ 828 ಕೋಟಿ ರೂಪಾಯಿ ಹಣವನ್ನು ತಲುಪಿಸಲಾಗಿದೆ. ಈ ಯೋಜನೆಯಲ್ಲಿ ಪ್ರತಿಯೊಬ್ಬ ಅರ್ಹ ರೈತರಿಗೆ 2,000 ರೂಪಾಯಿಗಳಂತೆ ಜಮೆಯಾಗಿದೆ.

Money Credited Status
Proof of money received
ರೈತರ ಖಾತೆಗೆ ಹಣ ಬಾರದಿರಲು ಕಾರಣಗಳು:-
Reasons for not money credited :-
ಸುಮಾರು 66 ಲಕ್ಷಕ್ಕೂ ಹೆಚ್ಚು ಅರ್ಜಿಗಳಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹಣವು ಸ್ಥಗಿತಗೊಂಡಿದೆ. ಅದಕ್ಕೆ ಪ್ರಮುಖ ಕಾರಣಗಳು ::
• ಇ-ಕೆವೈಸಿ (e-KYC) ಪೂರ್ಣಗೊಳ್ಳದಿರುವುದು – ರೈತರು ತಮ್ಮ ಆಧಾರ್ ಕಾರ್ಡ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಅವರಿಗೆ ಈ ಕಂತಿನ ಹಣ ಬರುವುದಿಲ್ಲ.
* ಲ್ಯಾಂಡ್ ಸೀಡಿಂಗ್ (Land Seeding) ಆಗದಿರುವುದು – ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಿಎಂ ಕಿಸಾನ್ ಪೋರ್ಟಲ್‌ನೊಂದಿಗೆ ಲಿಂಕ್ ಮಾಡದೇ ಇದ್ದರೆ ಹಣ ಬರುವುದಿಲ್ಲ.
• ಬ್ಯಾಂಕ್ ಆಧಾರ್ ಸೀಡಿಂಗ್ ಆಗದಿರುವುದು – ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆಯಾಗದೇ ಇದ್ದರೆ, ಡಿಬಿಟಿ (DBT) ಮೂಲಕ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ.
ಸ್ಟೇಟಸ್ ಚೆಕ್ ಮಾಡುವ ಮೂರು ವಿಧಾನಗಳು ಇಲ್ಲಿವೆ:-
Methods to Check Payment Status:-
1. ಅಧಿಕೃತ ವೆಬ್‌ಸೈಟ್ – ಪಿಎಂ ಕಿಸಾನ್ ಪೋರ್ಟಲ್ ಮೂಲಕ ನಿಮ್ಮ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. https://pmkisan.gov.in/rpt_beneficiarystatus_pub.aspx
2. ಕಿಸಾನ್ ಸುವಿಧಾ ವೆಬ್‌ಸೈಟ್ – ಈ ಪೋರ್ಟಲ್‌ನಲ್ಲಿ ಬೆನಿಫಿಷಿಯರಿ ಸ್ಟೇಟಸ್ ಚೆಕ್ ಮಾಡುವ ಆಯ್ಕೆ ಇದೆ. https://kisansuvidha.gov.in/pm-kisan/beneficiary-status

Select Id Type And Enter
ಕಿಸಾನ್ ಸುವಿಧಾ ವೆಬ್‌ಸೈಟ್
3. ಪಿಎಂ ಕಿಸಾನ್ GOI ಆಪ್ – ಇದು ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ ಆಗಿದೆ.
ಮೊಬೈಲ್ ಆಪ್ ಮೂಲಕ ಸ್ಟೇಟಸ್ ಚೆಕ್ ಮಾಡುವ ವಿಧಾನ:-
How to check status using mobile phone:-
* ನಿಮ್ಮ ಮೊಬೈಲ್‌ನ ಪ್ಲೇ ಸ್ಟೋರ್‌ನಿಂದ ‘PM Kisan GOI‘ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
• ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಲಾಗಿನ್ (Login) ಬಟನ್ ಮೇಲೆ ಕ್ಲಿಕ್ ಮಾಡಿ.

Click On Login Option
Login
* ನಂತರ ‘Beneficiary‘ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ರಿಜಿಸ್ಟ್ರೇಷನ್ ನಂಬರ್ ಅನ್ನು ನಮೂದಿಸಿ.
• ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಅನ್ನು ನಮೂದಿಸಿ ಲಾಗಿನ್ ಆಗಿ.

Login To Account
Beneficiary and OTP login
• ಡ್ಯಾಶ್‌ಬೋರ್ಡ್‌ನಲ್ಲಿ ಈ ಕೆಳಗಿನ ಮಾಹಿತಿಗಳು ‘Yes‘ ಎಂದು ಇರುವುದನ್ನು ಖಚಿತಪಡಿಸಿಕೊಳ್ಳಿ.
* Land Record Seeding ಆಗಿದೆಯೇ ಎಂದು ಪರಿಶೀಲಿಸಿ
• Aadhaar Bank Seeding ಆಗಿದೆಯೇ ಎಂದು ಪರಿಶೀಲಿಸಿ
* e-KYC Status ಪರಿಶೀಲಿಸಿ
• ‘Beneficiary Status‘ ಮೇಲೆ ಕ್ಲಿಕ್ ಮಾಡಿದರೆ, ನಿಮಗೆ ಯಾವ ಕಂತಿನ ಹಣ ಯಾವಾಗ ಜಮೆಯಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

Farmer Details
Beneficiary Status details
ಹಣವನ್ನು ಹಂತ ಹಂತವಾಗಿ ಜಮೆ ಮಾಡಲಾಗುತ್ತಿದ್ದು, ಒಂದು ವೇಳೆ ನಿಮಗೆ ಇನ್ನೂ ಹಣ ಬಾರದೇ ಇದ್ದರೆ, ನೀವು ಇಂದಿನ ಸಂಜೆಯವರೆಗೆ ಅಥವಾ ನಾಳೆಯವರೆಗೆ ಕಾಯುವಂತೆ ಸೂಚಿಸಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯು ರೈತರಿಗೆ ಹಣಕಾಸಿನ ನೆರವು ಕೊಡುವಲ್ಲಿ ಮುಖ್ಯವಾಗಿದೆ. ಈ ಯೋಜನೆಯಿಂದ ಸಿಗುವ ಹಣ ರೈತರಿಗೆ ಬಿತ್ತನೆ ಮಾಡುವಾಗ, ಅಂದರೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳನ್ನು ಕೊಳ್ಳಲು ಸಹಾಯ ಮಾಡುತ್ತದೆ.
ಇದರಿಂದ ರೈತರು ಕೃಷಿಗಾಗಿ ಹೆಚ್ಚು ಬಡ್ಡಿಯ ಸಾಲ ಪಡೆಯುವುದು ತಪ್ಪುತ್ತದೆ. ಕೃಷಿಯಷ್ಟೇ ಅಲ್ಲ, ಮನೆಯ ಖರ್ಚುಗಳಿಗೂ ಈ ಹಣ ಸಹಾಯ ಮಾಡುವುದರಿಂದ ರೈತರ ಕುಟುಂಬದ ದಿನನಿತ್ಯದ ಜೀವನ ಸುಲಭವಾಗುತ್ತದೆ.
ಮುಖ್ಯವಾಗಿ, ನೇರ ನಗದು ವರ್ಗಾವಣೆ (DBT) ಮೂಲಕ ಹಣ ಹಾಕುವುದರಿಂದ ಮಧ್ಯದಲ್ಲಿ ಯಾರೂ ಇಲ್ಲದೆ ಪೂರ್ತಿ ಹಣ ನೇರವಾಗಿ ರೈತರ ಕೈಗೆ ಸೇರಿ, ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ.
The Pradhan Mantri Kisan Samman Nidhi (PM-Kisan) program is very important because it gives money to farmers. This money helps them buy important farming items like seeds, fertilizers, and pesticides when it’s time to plant crops.
This stops farmers from having to borrow money at high interest rates to farm. Besides farming, this money also helps with family costs, making life easier for farming families every day.
Most importantly, because the money is sent directly to farmers through Direct Benefit Transfer (DBT), they get the full amount without any go-betweens, which helps them be more financially secure.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply