Gruhalakshmi, March pension Live Updates :: ಗೃಹಲಕ್ಷ್ಮಿ 27ನೇ ಕಂತು ಮತ್ತು ಪಿಂಚಣಿ ಹಣ ಮತ್ತು ಯುವ ನಿಧಿ ಈ ಕ್ಷಣದ ಲೈವ್ ಅಪ್ಡೇಟ್!!! 19 ಜಿಲ್ಲೆಗಳಿಗೆ ಹಣ ಜಮಾ!!
ಗೃಹಲಕ್ಷ್ಮಿ 27ನೇ ಕಂತು ಮತ್ತು ಪಿಂಚಣಿ ಹಣ ಈ ಕ್ಷಣದ ಲೈವ್ ಅಪ್ಡೇಟ್!
Gruhalakshmi 27th Installment & Pension Live Status Update!!
ಇತ್ತೀಚಿನ ಗೃಹಲಕ್ಷ್ಮಿ ಯೋಜನೆ (27ನೇ ಕಂತು), ಪಿಂಚಣಿ ಹಣದ ಬಿಡುಗಡೆ ಮತ್ತು ಯುವನಿಧಿ ಯೋಜನೆಯ ಪ್ರಗತಿಯ ಬಗ್ಗೆ ಮಾಹಿತಿ
ಗೃಹಲಕ್ಷ್ಮಿ ಯೋಜನೆ – 27ನೇ ಕಂತಿನ :-
Gruhalakshmi Scheme – 27th Installment Update:-
* ಹಣ ಜಮಾ ಮಾಡುವ ವಿಧಾನ: ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣವನ್ನು ವಿತರಿಸುವ ಪ್ರಕ್ರಿಯೆಯು ಮಾರ್ಚ್ 1ರಿಂದಲೇ ಪ್ರಾರಂಭವಾಗಿದೆ.
ಸದ್ಯಕ್ಕೆ ಅಂದಾಜು 40% ರಿಂದ 45% ಫಲಾನುಭವಿಗಳಿಗೆ ಹಣ ತಲುಪಿದೆ, ಮತ್ತು ಉಳಿದ ಫಲಾನುಭವಿಗಳಿಗೆ ಮುಂದಿನ ಕೆಲವೇ ದಿನಗಳಲ್ಲಿ ಹಣ ಜಮಾ ಆಗಲಿದೆ.
* ಹಣ ಜಮಾ ಪ್ರಕ್ರಿಯೆ ಆರಂಭವಾಗಿರುವ ಜಿಲ್ಲೆಗಳು:-
Districts received money:-
ಈ ಕೆಳಗಿನ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಈಗಾಗಲೇ ಜಮೆಯಾಗಲು ಶುರುವಾಗಿದೆ:
1. ಬೆಂಗಳೂರು ನಗರ (Bengaluru Urban)
2. ಬೆಂಗಳೂರು ಗ್ರಾಮಾಂತರ (Bengaluru Rural)
3. ಮೈಸೂರು (Mysuru)
4. ದಾವಣಗೆರೆ (Davanagere)
5. ರಾಮನಗರ (Ramanagara)
6. ಚನ್ನಪಟ್ಟಣ (Channapatna)
7. ಚಿತ್ರದುರ್ಗ (Chitradurga)
8. ತುಮಕೂರು (Tumakuru)
9. ಮಂಡ್ಯ (Mandya)
10. ಬೀದರ್ (Bidar)
11. ಕೋಲಾರ (Kolar)
12. ಬಾಗಲಕೋಟೆ (Bagalkote)
13. ಗದಗ್ (Gadag)
14. ಬೆಳಗಾವಿ (Belagavi)
15. ಕೊಪ್ಪಳ (Koppal)
16. ಗುಲ್ಬರ್ಗ/ಕಲಬುರಗಿ (Kalaburagi)
17. ಉಡುಪಿ (Udupi)
18. ಬಳ್ಳಾರಿ (Ballari)
19. ರಾಯಚೂರು (Raichuru)
ಈ ನಿರ್ದಿಷ್ಟ ಜಿಲ್ಲೆಗಳ ಫಲಾನುಭವಿಗಳು, ಅವರಿಗೆ ಹಣ ಸಂದಾಯವಾಗಿರುವ ಬಗ್ಗೆ ಖಚಿತಪಡಿಸಿ, ಸ್ಕ್ರೀನ್ಶಾಟ್ಗಳ ಮೂಲಕ ಮಾಹಿತಿಯನ್ನು ನಮಗೆ ಕಳುಹಿಸಿದ್ದಾರೆ.

Money Credited Status in Udupi
ಉಡುಪಿ (Udupi)

Money Credited Status in Ballari
ಬಳ್ಳಾರಿ (Ballari)

Money Credited Status in Raichur
ರಾಯಚೂರು (Raichuru)
ಹಣ ಜಮಾ ಆಗಲು ಬಾಕಿ ಇರುವ ಜಿಲ್ಲೆಗಳು:-
Districts yet to receive money:-
ಈ ಜಿಲ್ಲೆಗಳಲ್ಲಿ ಹಣ ಬಿಡುಗಡೆಯ ಪ್ರಕ್ರಿಯೆ ಇನ್ನೂ ವೇಗಗೊಳ್ಳಬೇಕಿದೆ ಅಥವಾ ಮುಂದಿನ ಹಂತದಲ್ಲಿ ಜಮೆಯಾಗಲಿದೆ:
1. ಹಾಸನ (Hassan)
2. ಹಾವೇರಿ (Haveri)
3. ಶಿವಮೊಗ್ಗ (Shivamogga)
4. ಚಿಕ್ಕಮಗಳೂರು (Chikkamagaluru)
5. ವಿಜಯಪುರ (Vijayapura)
6. ದಕ್ಷಿಣ ಕನ್ನಡ (Dakshina Kannada)
7. ಕೊಡಗು (Kodagu)
ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯ ಹೆಸರಿದ್ದರೂ ಹಣ ಬರದೇ ಇದ್ದರೆ ಗಾಬರಿ ಬೇಡ; ಡಿಬಿಟಿ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯುವುದರಿಂದ ಇನ್ನೂ ಕೆಲವು ದಿನಗಳ ಕಾಲಾವಕಾಶ ಬೇಕಾಗಬಹುದು.
ಪಿಂಚಣಿ ಹಣದ ನವೀಕರಣ (ವೃದ್ಧಾಪ್ಯ ವೇತನ, ವಿಧವಾ ವೇತನ, ಇತ್ಯಾದಿ):-
Pension Funds Update (Old Age, Widow Pension, etc.):-
• ಮಾರ್ಚ್ ತಿಂಗಳ ಪಿಂಚಣಿ ಹಣ: ಮಾರ್ಚ್ ತಿಂಗಳ ಪಿಂಚಣಿ ಹಣವನ್ನು ಈಗಾಗಲೇ ಸರ್ಕಾರವು ಬಿಡುಗಡೆ ಮಾಡಿದೆ. ಮತ್ತು ಅದನ್ನು ಡಿಬಿಟಿ (DBT) ಮೂಲಕ ವರ್ಗಾಯಿಸಲು ಕಳುಹಿಸಲಾಗಿದೆ.
ಬಹುಶಃ ಮಾರ್ಚ್ 15ರ ಒಳಗಾಗಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗುವ ಸಾಧ್ಯತೆ ಇದೆ.
* ಫೆಬ್ರವರಿ ತಿಂಗಳ ಬಾಕಿ ಹಣ: ಒಂದು ವೇಳೆ ಫೆಬ್ರವರಿ ತಿಂಗಳ ಪಿಂಚಣಿ ಹಣವು ನಿಮಗೆ ಬಾರದೇ ಇದ್ದಲ್ಲಿ, ಅದು ಮಾರ್ಚ್ ತಿಂಗಳ ಹಣದೊಂದಿಗೆ ಸೇರಿ ಬರುವ ಸಾಧ್ಯತೆಗಳಿವೆ.
ಒಂದು ವೇಳೆ ಹಾಗೆಯೂ ಬರದೇ ಇದ್ದರೆ, ಆಯಾ ತಾಲೂಕಿನ ಪಿಂಚಣಿ ವಿಭಾಗವನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸೂಚಿಸಲಾಗಿದೆ.
ಯುವನಿಧಿ ಯೋಜನೆಯ ಅಪ್ಡೇಟ್:-
Yuvanidhi Scheme Update:-
• ಹಣವು ಸ್ಥಗಿತಗೊಂಡಿಲ್ಲ- ಈ ಬಾರಿಯ ಬಜೆಟ್ನಲ್ಲಿ ಈ ಯೋಜನೆಯ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸದ ಕಾರಣಕ್ಕೆ, ಈ ಯೋಜನೆ ನಿಂತುಹೋಗಿದೆ ಎಂಬ ಆತಂಕ ಬೇಡ.
ಡಿಸೆಂಬರ್ ಮತ್ತು ಜನವರಿ ತಿಂಗಳ ಹಣವನ್ನು ಬಿಡುಗಡೆ ಮಾಡುವ ಹಂತದಲ್ಲಿದ್ದು, ಈಗಾಗಲೇ ‘ಪುಶ್ ಟು ಡಿಬಿಟಿ’ ಎಂಬ ಸ್ಥಿತಿಯನ್ನು ತೋರಿಸುತ್ತಿದೆ.
* ಸೂಚನೆ: ಪ್ರತಿಯೊಬ್ಬ ಫಲಾನುಭವಿಯು ಪ್ರತಿ ತಿಂಗಳು ತಪ್ಪದೇ ‘ಸ್ವಯಂ ಘೋಷಣೆ’ಯನ್ನು ಸಲ್ಲಿಸಬೇಕು. ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಹತ್ತಿರದ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು.
ಸದ್ಯಕ್ಕೆ ಮೊಬೈಲ್ ಫೋನ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಥಿತಿಯನ್ನು ಪರೀಕ್ಷಿಸಲು ಯಾವುದೇ ಅಧಿಕೃತ ವೆಬ್ಸೈಟ್ ಕಾರ್ಯನಿರ್ವಹಿಸುತ್ತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಅಥವಾ ಟೆಲಿಗ್ರಾಂ ಚಾನೆಲ್ಗಳನ್ನು ಗಮನದಲ್ಲಿ ಇಟ್ಟುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ಸಿಗುವ ₹2,000 ಹಣ ಮನೆಯ ಒಡತಿಯರಿಗೆ ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡುತ್ತದೆ. ಇದರಿಂದ ದಿನಸಿ ತರಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಅಥವಾ ಸ್ವಲ್ಪ ಹಣ ಉಳಿತಾಯ ಮಾಡಲು ಅನುಕೂಲವಾಗುತ್ತದೆ.
ವೃದ್ಧಾಪ್ಯ ಪಿಂಚಣಿ ಮತ್ತು ವಿಧವಾ ವೇತನದಂತಹ ಯೋಜನೆಗಳು ವಯಸ್ಸಾದವರು ಮತ್ತು ಕಷ್ಟದಲ್ಲಿರುವವರಿಗೆ ನೆಮ್ಮದಿಯ ಜೀವನ ನಡೆಸಲು ಮತ್ತು ಔಷಧಿ ಖರ್ಚುಗಳಿಗೆ ಸಹಾಯ ಮಾಡುತ್ತವೆ.
ಯುವನಿಧಿ ಯೋಜನೆಯು ಕೆಲಸವಿಲ್ಲದ ಪದವೀಧರರಿಗೆ ಉದ್ಯೋಗ ಸಿಗುವವರೆಗೆ ಆರ್ಥಿಕ ಸಹಾಯ ನೀಡಿ ಅವರಲ್ಲಿ ಧೈರ್ಯ ತುಂಬುತ್ತದೆ. ಈ ಹಣ ನೇರವಾಗಿ ಬ್ಯಾಂಕ್ ಖಾತೆಗೆ (DBT) ಹಾಕುವುದರಿಂದ ಮಧ್ಯದಲ್ಲಿ ಯಾರೂ ಕಮಿಷನ್ ಪಡೆಯಲು ಸಾಧ್ಯವಿಲ್ಲ.
ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನ ಚೆನ್ನಾಗಿ ಆಗಲು ಮತ್ತು ಅವರ ಆರ್ಥಿಕ ಕಷ್ಟಗಳು ಕಡಿಮೆಯಾಗಲು ಸಹಾಯವಾಗುತ್ತದೆ.
The ₹2,000 given each month through the Gruhalakshmi Scheme helps female heads of families gain financial independence. This makes it easier to buy food, pay for children’s schooling, or save a little money.
Programs like Old Age Pension and Widow Pension help senior citizens and those in need to live comfortably and pay for healthcare. The Yuvanidhi Scheme gives money to jobless graduates until they get a job, which increases their self-belief.
Because this money goes straight into bank accounts using DBT (Direct Benefit Transfer), no one can take a cut.
This helps to raise the living standards of poor and middle-class families and eases their money problems.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply