Schemes Under Horticulture department :: ತೋಟಗಾರಿಕೆ ಇಲಾಖೆಯಲ್ಲಿ ಯಾವ ಯಾವ ಸಬ್ಸಿಗಳು ಸಿಗುತ್ತವೆ?
Farmers are the backbone of countries economy because they produce food for entire population. However agriculture involves many challenges like uncertain weather,lack of irrigation, best and financial difficulties.
To support farmers government bring so many welfare schemes like pm Kisan, fasal Bima Yojana and many other. Which support farmers to improve their productivity and good income.
ರೈತರು ಭಾರತದ “ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ” ಎಂದರೆ ತಪ್ಪಾಗುವುದಿಲ್ಲ, ಈಗಲೂ ಸಹ ಭಾರತದ ಬಹುತೇಕ ಭಾಗಗಳಲ್ಲಿ ಕೃಷಿ ಆರ್ಥಿಕತೆಯ ಮೂಲವಾಗಿದೆ, ಆದರೆ ವಾತಾವರಣದ ಅನಿಶ್ಚಿತತೆ, ಕಡಿಮೆ ಬಂಡವಾಳ ಹೂಡಿಕೆ,
ನೀರಿನ ಕೊರತೆ, ಮಣ್ಣಿನ ಫಲವತ್ತತೆಯ ಕೊರತೆ,ಅಲ್ಲದೆ ಇನ್ನು ಹಲವು ಕಾರಣಗಳಿಂದ ರೈತರು ತಮ್ಮ ಕೃಷಿಯಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇನ್ನು ಕೆಲವು ರೈತರು ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ,
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೋಟಗಾರಿಕೆ ಇಲಾಖೆ ರೈತರಿಗೆಂದೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಮುಖ್ಯವಾದ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ,
1) ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY) :-
ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಈ ಯೋಜನೆಯ ಅಡಿಯಲ್ಲಿ ಅಂತರಕ್ಕೆ ಅನುಗುಣವಾಗಿ ಹನಿ ನೀರಾವರಿಯನ್ನು ಅಳವಡಿಸಲು ಎಲ್ಲಾ ವರ್ಗದ ರೈತರಿಗೂ 2 ಹೆಕ್ಟರ್ ಕೃಷಿ ಭೂಮಿಯನ್ನು ಹೊಂದಿರುವ,
ಅಲ್ಲದೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ “90% ಸಹಾಯಧನ”ವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ.
2) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(RKVY) :-
ಈ ಪ್ರಮುಖ ಯೋಜನೆಯ ಅಡಿಯಲ್ಲಿ ಆರು ಉಪಯೋಗಗಳನ್ನು ಕಾಣಬಹುದು ಅವುಗಳೆಂದರೆ
•“ನೀರು ಸಂಗ್ರಹಣ ಘಟಕ”:- ನೀರನ್ನು ಸಂಗ್ರಹಿಸುವ ಘಟಕದ ಗಾತ್ರಕ್ಕೆ ಅನುಗುಣವಾಗಿ ಸಹಾಯಧನವನ್ನು ನೀಡಲಾಗುವುದು.
* “ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ”:- ಪ್ರತಿ ರೈತರಿಗೂ “ಒಂದು ಹೆಕ್ಟರ್ ಗೆ ಮೀರದಂತೆ ಶೇಕಡಾ 25ರಷ್ಟು, ಎಕರೆಗೆ ಹತ್ತು ಸಾವಿರ ಸಹಾಯಧನ”ವನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.
• “ನೀರಿನಲ್ಲಿ ಕರಗುವ ರಸಗೊಬ್ಬರದ ಖರೀದಿ”:- ಪ್ರತಿ ಫಲಾನುಭಾವಿಗೂ “ಒಂದು ಹೆಕ್ಟರ್ ಗೆ ಮೀರದಂತೆ ಶೇಕಡ 25ರಷ್ಟು, ಎಕರೆಗೆ 17,500 ಗಳಷ್ಟು ಸಹಾಯ ಧನ” ನೀಡಲಾಗುವುದು.
* “ಬೆಳೆ/ ಹಣ್ಣು/ ಹೂವು ಹೊದಿಕೆಗಳಿಗೆ ಸಹಾಯಧನ”:-
ಪ್ರತಿ ಫಲಾನುಭವಿಗಳಿಗೆ ಗರಿಷ್ಠ ಒಂದು ಹೆಕ್ಟರ್ ಗೆ ಮೀರದಂತೆ “ಶೇಕಡ 25 ರಷ್ಟು ಪ್ರತಿ ಎಕರೆಗೆ 5 ಸಾವಿರ ರೂಗಳ ಸಹಾಯಧನ” ದೊರೆಯುತ್ತದೆ.
•“farm gate”:- “8*5*3 ಮೀಟರ್ ಅಳತೆಯ ಫಾರ್ಮ್ ಗೇಟ್ ನಿರ್ಮಾಣ ಮಾಡಲು” “1 ಲಕ್ಷ ರೂಗಳ ವರೆಗೂ ಸಹಾಯಧನ” ನೀಡಲಾಗುವುದು.
* “ಸೋಲಾರ್ ಪಂಪ್ ಸೆಟ್”:- ಈ ಯೋಜನೆಯ ಅಡಿಯಲ್ಲಿ “3hp ಸೋಲಾರ್ ಪಂಪ್ ಸೆಟ್ ಗೆ ಎರಡು ಲಕ್ಷ”ಗಳವರೆಗೂ ದೊರೆಯುತ್ತದೆ. ಆದರೆ “5 hp ಸೋಲಾರ್ ಪಂಪ್ ಸೆಟ್ ಗೆ 3 ಲಕ್ಷಗಳ ವರೆಗೂ ಸಹಾಯಧನ” ದೊರೆಯುತ್ತದೆ.
ಇದರಲ್ಲಿ “ಶೇಕಡ 50ರಷ್ಟು ಸಹಾಯಧನ ಆಗಿರುತ್ತದೆ”, ಉಳಿದ “ಶೇಕಡ 50ರಷ್ಟು ರೈತರಿಗೆ ಸಾಲ” ಆಗಿರುತ್ತದೆ.
3) “ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ(NHMS)”:-
ಈ ಯೋಜನೆಯ ಅಡಿಯಲ್ಲಿ ಹಲವು ಉಪ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ ಅವುಗಳೆಂದರೆ,
• “ಹೊಸ ಪ್ರದೇಶ ವಿಸ್ತರಣೆಗೆ ಶೇಕಡ 40ರಂತೆ ಗರಿಷ್ಟ ಎರಡು ಹೆಕ್ಟರ್ ವರೆಗೂ ಬೆಳೆಗಳ ಅನುಗುಣವಾಗಿ ಸಹಾಯಧನ”ವನ್ನು ನೀಡಲಾಗುತ್ತದೆ.
* “ನೀರು ಸಂಗ್ರಹಣ ಘಟಕ (ವೈಯಕ್ತಿಕ) ಈ ಯೋಜನೆಯ ಅಡಿಯಲ್ಲಿ1200 ಘ. ಮೀ” ನಷ್ಟು ಸಾಮರ್ಥ್ಯದ “ವೈಯಕ್ತಿಕ ನೀರಿನ ಸಂಗ್ರಹಣ ಘಟಕ ನಿರ್ಮಾಣಕ್ಕೆ ಶೇಕಡ 50ರಷ್ಟು ಸಹಾಯಧನ” ನೀಡಲಾಗುತ್ತದೆ.
ಅಂದರೆ “75 ಸಾವಿರ ರೂಪಾಯಿಗಳನ್ನು ಸಹಾಯಧನ”ದ ರೂಪದಲ್ಲಿ ನೀಡಲಾಗುತ್ತದೆ.
• “ಪ್ಲಾಸ್ಟಿಕ್ ಹೊದಿಕೆ ಹೊದಿಸಲು ಪ್ರತಿ ಹೆಕ್ಟರಿಗೆ ಶೇಕಡ 50 ರಂತೆ, 16 ಸಾವಿರ ರೂಗಳನ್ನು ಗರಿಷ್ಠ ಎರಡು ಹೆಕ್ಟರ್ ವರೆಗೂ ಸಹಾಯಧನ”ವನ್ನು ನೀಡಲಾಗುತ್ತದೆ.
* “ಹಸಿರು ಮನೆ ನಿರ್ಮಾಣಕ್ಕಾಗಿ ಪ್ರತಿಫಲನುಭಾವಿಗೆ ಶೇಕಡ 50ರಂತೆ ಗರಿಷ್ಠ 4000 ಚದರ ಮೀಟರ್ ಹಸಿರು ಮನೆ ನಿರ್ಮಾಣ ಘಟಕಕ್ಕೆ 15.82 ಲಕ್ಷ ರೂ ಮತ್ತು ಬೆಳೆ ನಾಟಿ ಮಾಡಲು 1.40 ಲಕ್ಷ ಗಳ ಸಹಾಯಧನ”ವನ್ನು ನೀಡಲಾಗುತ್ತದೆ.
•“cold room staggering:- ಈ ಯೋಜನೆಯ ಅಡಿಯಲ್ಲಿ ಶೇಕಡ 35ರಂತೆ 5.25 ಲಕ್ಷಗಳ ಸಹಾಯಧನ”ವನ್ನು ನೀಡಲಾಗುತ್ತದೆ.
* “ತೋಟಗಾರಿಕೆಯಲ್ಲಿ ಯಾಂತ್ರಿಕರಣ” ಇದೊಂದು ಉತ್ತಮ ಯೋಜನೆ ಯಾಗಿದ್ದು,ಈ ಯೋಜನೆಯ ಅಡಿಯಲ್ಲಿ “ಮಿನಿ ಟ್ರ್ಯಾಕ್ಟರ್ ಖರೀದಿಗೆ ಸಾಮಾನ್ಯ ವರ್ಗಕ್ಕೆ ಶೇಕಡ 25% ಗರಿಷ್ಠ 75000 ರೂಗಳು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಸಮುದಾಯಕ್ಕೆ ಶೇಕಡ 35ರಂತೆ ಗರಿಷ್ಠ ಒಂದು ಲಕ್ಷ ರೂಪಾಯಿಗಳ ಸಹಾಯಧನ”ವನ್ನು ನೀಡಲಾಗುತ್ತದೆ.
• “ಪ್ಯಾಕ್ ಹೌಸ್”:-“9 ಮೀ * 6 ಮೀ *3 ಮೀ. ವಿನ್ಯಾಸದ ಘಟಕಕ್ಕೆ ಪ್ಯಾಕ್ ಹೌಸ್ ನಿರ್ಮಾಣ ಘಟಕಕ್ಕೆ ಶೇಕಡ. 50ರಂತೆ ಗರಿಷ್ಠ 2 ಲಕ್ಷ ಸಹಾಯಧನ”ವನ್ನು ನೀಡಲಾಗುತ್ತದೆ.
*“ಸಮಗ್ರ ಪೋಷಕಾಂಶಗಳು ಹಾಗೂ ರೋಗ, ಕೀಟಗಳ ಹಾವಳಿಯನ್ನು ನಿಯಂತ್ರಣ ಮಾಡಲು ಶೇಕಡ 30ರಂತೆ ಪ್ರತಿ ಹೆಕ್ಟರ್ ಗೆ 1200ರೂ ರಂತೆ ಮಿತಿಗೊಳಿಸಿ ಗರಿಷ್ಠ ನಾಲ್ಕು ಹೆಕ್ಟರ್ವರೆಗೂ ನೀಡಲಾಗುವುದು”.
4) “ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ”:-
ಈ ಯೋಜನೆಯಲ್ಲಿ ರೈತರು ಎರಡು ತರಹದ ಉಪ ಯೋಜನೆಗಳನ್ನು ಕಾಣಬಹುದಾಗಿದೆ. ಅವುಗಳೆಂದರೆ,
• “ಹೈಬ್ರಿಡ್ ತರಕಾರಿಗಳ ಕಿಟ್ ವಿತರಣೆ”:
ಈ ಯೋಜನೆಗಲ್ಲಿ ರೈತರಿಗೆ “2000 ಬೆಲೆ ಬಾಳುವ ತರಕಾರಿ ಬೀಜಗಳ ಕಿಟ್” ಅನ್ನು ವಿತರಿಸಲಾಗುತ್ತದೆ.
* “ವಿದ್ಯಾರ್ಥಿಗಳಿಗೆ ತೋಟಗಾರಿಕೆ ತರಬೇತಿ”:- ಈ ಯೋಜನೆಯ ಅಡಿಯಲ್ಲಿ “ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕೆಯ ಬಗ್ಗೆ ಆಸಕ್ತಿ ಬೆಳೆಯಲು ಹಾಗೂ ತೋಟಗಾರಿಕೆ ಬೆಳೆಯ ಬಗ್ಗೆ ಜಾಗೃತಿ ಬೆಳೆಸಲು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋಟಗಾರಿಕೆ ತರಬೇತಿ” ನೀಡಲಾಗುತ್ತದೆ.
5) “ಜೇನು ಸಾಕಾಣಿಕೆ ತರಬೇತಿ ಮತ್ತು ಸಹಾಯಧನ”:- ರೈತರು ಈ ಯೋಜನೆಯಲ್ಲಿ ಆಸಕ್ತಿ ಇಂದ ಪಾಲ್ಗೊಳ್ಳಬೇಕು. ಪ್ರತಿ ಘಟಕಕ್ಕೆ “ಶೇಕಡ 75 ರಂತೆ, 3375 ರೂಪಾಯಿಗಳ ಸಹಾಯಧನ”ವನ್ನು ನೀಡಲಾಗುತ್ತದೆ.
ಈ ರೀತಿಯಾಗಿ ರೈತರಿಗೆ ಎಲ್ಲಾ ತರಹದಲ್ಲೂ ತೋಟಗಾರಿಕೆ ಇಲಾಖೆ ಪ್ರೋತ್ಸಾಹಿಸುತ್ತಾ ಬರುತ್ತಿದೆ, ಮುಖ್ಯವಾಗಿ ರೈತರ ಆರ್ಥಿಕ ಪರಿಸ್ಥಿತಿಯನ್ನರಿತು ರೈತರಿಗೆ ಅಗತ್ಯ ಸಾಲ ಹಾಗೂ ಸಹಾಯಧನಗಳಂತಹ ಯೋಜನೆಗಳನ್ನು ರೈತರಿಗೆ ತಲುಪಿಸುತ್ತಿದೆ.
ಆದರೂ ಹೆಚ್ಚಿನ ಸಮಯಗಳಲ್ಲಿ ರೈತರಿಗೆ ಈ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿ ಇಲ್ಲದೆ, ಅವಕಾಶ ವಂಚಿತರಾಗಿ ಸಾಲದ ಸುಳಿಯಲ್ಲಿ ಸಿಲುಕಿ ಜೀವನವನ್ನು ಮತ್ತಷ್ಟು ಕಷ್ಟಕರವಾಗಿಸಿಕೊಳ್ಳುತ್ತಿದ್ದಾರೆ.
ಹಾಗಾಗಿ ಈ ಮಾಹಿತಿಯು ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಲಭ್ಯವಿರುವ ಎಲ್ಲಾ ಯೋಜನೆಗಳ ಪ್ರಮುಖ ಸಾರವಾಗಿದೆ, ಇದರಿಂದ ರೈತರು ಅಗತ್ಯ ಮಾಹಿತಿ ಜೊತೆಗೆ ಯೋಜನೆಯ ಲಾಭದ ಬಗ್ಗೆಯೂ ತಿಳಿಯಬಹುದು.
Horticulture department schemes plays important role in development of agriculture and improve farmers income. The schemes encourage farmers to grow fruits flowers and other horticulture crops.
Through financial assistance, subsidies, training programs, support for irrigation and storage facilities, department helps farmers increase productivity and quality of Horticulture crops.
In conclusion, horticulture department schemes are very beneficial for farmers as they support agriculture diversity, increase income and contribute overall agriculture sector and rural development.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply