27th Gruhalakshmi :: ಕೊನೆಗೂ ಗೃಹಲಕ್ಷ್ಮಿ 27ನೇ ಕಂತಿನ ಹಣ ಜಮಾ!! 7 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ!!
ಬದಲಾಗುತ್ತಿರುವ ಬದುಕು – ಯೋಜನೆಗಳ ಫಲ!!
Transforming Lives – The Power of Schemes!!
ಗೃಹಲಕ್ಷ್ಮಿ ಯೋಜನೆಯ ಇತ್ತೀಚಿನ 27ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ವಿವರವಾದ ಮಾಹಿತಿ ಮತ್ತು ಪಿಎಂ ಕಿಸಾನ್ ಯೋಜನೆಯ ಕುರಿತಾದ ಪ್ರಮುಖವಾದ ಮಾಹಿತಿ::
ಗೃಹಲಕ್ಷ್ಮಿ ಯೋಜನೆ (27ನೇ ಕಂತು):-
Gruha lakshmin 27th installment :-
• ಹಣ ಜಮೆ ಯಾವಾಗ ಆರಂಭ – ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮಾರ್ಚ್ 9, 2026 ರಿಂದ ನೇರವಾಗಿ ಜಮೆಯಾಗಲು ಪ್ರಾರಂಭವಾಗಿದೆ. ಈಗಾಗಲೇ ಹಣ ಜಮೆ ಪ್ರಕ್ರಿಯೆ ಶುರುವಾಗಿದೆ.
ಯಾವ ಜಿಲ್ಲೆಗಳಿಗೆ ಜಮೆ ಆಗಿದೆ?
Credut to which districts?
ಪ್ರಸ್ತುತವಾಗಿ,
• ಬೆಳಗಾವಿ
* ಬಾಗಲಕೋಟೆ
• ಚಿತ್ರದುರ್ಗ
* ಕೋಲಾರ
• ಬೆಂಗಳೂರು ಗ್ರಾಮಾಂತರ
* ಗದಗ
• ಕೊಪ್ಪಳ
ನಮಗೆ ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, ಗದಗ, ಬೆಳಗಾವಿ,ಕೊಪ್ಪಳ ಸೇರಿದಂತೆ ಇನ್ನಿತರ ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ತಲುಪಿಸಲಾಗಿದೆ.
ಈ ನಿರ್ದಿಷ್ಟ ಜಿಲ್ಲೆಗಳ ಫಲಾನುಭವಿಗಳು, ಅವರಿಗೆ ಹಣ ಸಂದಾಯವಾಗಿರುವ ಬಗ್ಗೆ ಖಚಿತಪಡಿಸಿ, ಸ್ಕ್ರೀನ್ಶಾಟ್ಗಳ ಮೂಲಕ ಮಾಹಿತಿಯನ್ನು ನಮಗೆ ಕಳುಹಿಸಿದ್ದಾರೆ.

Money Received Status in Gadag
ಗದಗ

Money Received Status in Belgavi
ಬೆಳಗಾವಿ

Money Received Status in Koppal
ಕೊಪ್ಪಳ
• ಗಮನಿಸಬೇಕಾದ ಅಂಶ – ಸಾಮಾನ್ಯವಾಗಿ ಬೆಳಗಾವಿ ಜಿಲ್ಲೆಯ ಫಲಾನುಭವಿಗಳಿಗೆ ಕೊನೆಯಲ್ಲಿ ಹಣ ಜಮೆಯಾಗುತ್ತಿತ್ತು. ಆದರೆ, ಈ ಬಾರಿ ಮೊದಲ ಹಂತದಲ್ಲೇ ಹಣ ಜಮೆಯಾಗುತ್ತಿರುವುದು ವಿಶೇಷವಾಗಿದೆ.
ಉಳಿದ ಜಿಲ್ಲೆಗಳ ಫಲಾನುಭವಿಗಳಿಗೂ ಸಹ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡಲಾಗುವುದು.
ಪಿಎಂ ಕಿಸಾನ್ ಯೋಜನೆ :-
PM Kisan:-
• 22ನೇ ಕಂತಿನ ಬಿಡುಗಡೆ ದಿನಾಂಕ – ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಬಿಡುಗಡೆಯ ದಿನಾಂಕವನ್ನು ಸರ್ಕಾರವು ನಿಗದಿಪಡಿಸಿದ್ದು, ಮಾರ್ಚ್ 13, 2026 ರಂದು ನೇರವಾಗಿ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ.
ಇತರ ಪ್ರಮುಖ ಮಾಹಿತಿ:-
Other information :-
• ಯುವನಿಧಿ ಯೋಜನೆ ಮುಂದುವರಿಕೆ – ಯುವನಿಧಿ ಯೋಜನೆಯನ್ನು ಸರ್ಕಾರವು ಸ್ಥಗಿತಗೊಳಿಸಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ತಪ್ಪು ಮಾಹಿತಿಯನ್ನು ನಂಬಬೇಡಿ. ಶೀಘ್ರದಲ್ಲೇ ಈ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುವುದು.
* ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ – ಜನವರಿ ತಿಂಗಳಿನ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣದ ಬಗ್ಗೆ ಸರ್ಕಾರದಿಂದ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಬರಬೇಕಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ದೊರೆಯಲಿದೆ.
• ದಿನಸಿ ಕಿಟ್ ವಿತರಣೆ – ಯುಗಾದಿ ಹಬ್ಬದ ಸಂದರ್ಭದಲ್ಲಿ, ಅಂದರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದಿನಸಿ ಕಿಟ್ ವಿತರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬಲಿಷ್ಠ ಕುಟುಂಬ – ಸಮೃದ್ಧ ದೇಶ:-
Stronger Families, Prosperous Nation:-
ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂಪಾಯಿ ಆರ್ಥಿಕ ಸ್ವಾತಂತ್ರ್ಯ ನೀಡುತ್ತದೆ. ದಿನಬಳಕೆ ವಸ್ತು, ಹಾಲಿನ ಬಿಲ್ ಅಥವಾ ಮಕ್ಕಳ ಶಿಕ್ಷಣಕ್ಕೆ ಬಳಸಬಹುದು. ಮಹಿಳೆಯರು ಇತರರ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸಿ, ಆತ್ಮವಿಶ್ವಾಸ ತುಂಬುತ್ತದೆ.
ರೈತರಿಗೆ ಕೃಷಿಗೆ ನಗದು ಸಹಾಯವಾಗುತ್ತದೆ. ಬಿತ್ತನೆ ಬೀಜ, ಗೊಬ್ಬರ ಅಥವಾ ಕೃಷಿ ಉಪಕರಣಗಳ ರಿಪೇರಿಗೆ ಉಪಯುಕ್ತವಾಗಲಿದೆ. ಸಣ್ಣ ರೈತರ ಹಣಕಾಸಿನ ಅಗತ್ಯ ಪೂರೈಸಿ, ಕೃಷಿ ಸಾಲದ ಹೊರೆಯನ್ನು ತಗ್ಗಿಸುತ್ತದೆ.
ಇದು ನೇರ ನಗದು ವರ್ಗಾವಣೆ ಮೂಲಕ ಮಧ್ಯವರ್ತಿಗಳಿಲ್ಲದೆ ಪೂರ್ಣ ಮೊತ್ತ ಫಲಾನುಭವಿಗಳ ಕೈಸೇರುತ್ತದೆ. ಕುಟುಂಬದ ಜೀವನಮಟ್ಟ ಸುಧಾರಿಸಿ ಆರ್ಥಿಕತೆಯನ್ನು ಬಲಪಡಿಸುತ್ತದೆ.
₹2,000 monthly to female heads of households provides financial independence for essentials, bills, or education, preventing reliance on others and promoting confidence.
Farmers get cash assistance for seeds, fertilizer, or equipment repair, reducing agricultural debt. Direct Benefit Transfer (DBT) ensures beneficiaries receive the full amount, improving living standards and strengthening the economy.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply