"Agriculture is our CULTURE"

22nd PM Kisan Release Date :: ಕೊನೆಗೂ 22ನೇ ಕಂತಿನ ಪಿಎಂ ಕಿಸಾನ್ ದಿನಾಂಕ ಫಿಕ್ಸ್ ಆಯ್ತು!!

ಯಾವ ದಿನಾಂಕದಂದು ಹಣ ಜಮಾ ಆಗಲಿದೆ?

ಪಿಎಂ ಕಿಸಾನ್ (PM-Kisan) ಯೋಜನೆಯ 22ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಮಾಹಿತಿ 

ಹಣ ಯಾವಾಗ ಜಮೆಯಾಗಬಹುದು?

When amount willbe credited ?

* ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ದೊರೆಯುವ 22ನೇ ಕಂತಿನ ಹಣ, ಅಂದರೆ ತಲಾ ₹2,000 ಮೊತ್ತವು ಮಾರ್ಚ್ 13 ರಂದು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಆದಾಗ್ಯೂ, ದಿನಾಂಕದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿರಬಹುದು.

* ಯೋಜನೆಯ ಸಂಪೂರ್ಣ ವಿವರ: ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ ಮೂಲಕ ದೇಶದ ರೈತರಿಗೆ ಆರ್ಥಿಕ ಸಹಾಯವನ್ನು ನೀಡುತ್ತಿದೆ.

ಈ ಯೋಜನೆಯಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗಳಿಗೆ ₹2,000 ಹಣವನ್ನು ಜಮೆ ಮಾಡಲಾಗುತ್ತದೆ. ಹೀಗೆ, ವರ್ಷಕ್ಕೆ ಒಟ್ಟು ₹6,000 ಮೊತ್ತವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ಇದು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗಲಿದೆ.

ಕಡ್ಡಾಯವಾಗಿ ಪೂರೈಸಬೇಕಾದ ಪ್ರಮುಖ ಅಂಶಗಳು (ಇ-ಕೆವೈಸಿ (e-KYC) ಮತ್ತು ಎಫ್‌ಐಡಿ (FID):-

Mandatory e-KYC and FID:-

* ಎಲ್ಲಾ ರೈತರು ಕಡ್ಡಾಯವಾಗಿ ಈ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ, ರೈತರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಿಎಸ್‌ಸಿ (CSC) ಕೇಂದ್ರಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ-ಕೆವೈಸಿ ಮಾಡಿಸಿಕೊಳ್ಳಬೇಕು.

* ಇದರ ಜೊತೆಗೆ, ಪ್ರತಿಯೊಬ್ಬ ರೈತರು ಕೇಂದ್ರ ಸರ್ಕಾರದಿಂದ ನೀಡಲಾಗುವ ಎಫ್‌ಐಡಿ (FID) ಸಂಖ್ಯೆಯನ್ನು ಸಹ ಪಡೆಯುವುದು ಅತ್ಯಗತ್ಯ.

ಒಂದು ವೇಳೆ ಈ ಎರಡು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ, ಪಿಎಂ ಕಿಸಾನ್ ಯೋಜನೆಯ ಹಣ ಮಾತ್ರವಲ್ಲದೆ,

ಬೆಳೆ ವಿಮೆ ಮತ್ತು ಬೆಳೆ ಹಾನಿಯ ಪರಿಹಾರದಂತಹ ಇತರ ಸಬ್ಸಿಡಿ ಹಣವು ಸಹ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. 

* ಆದ್ದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ.

ಯೋಜನೆಯ ಬಗ್ಗೆ ಹೆಚ್ಚಿನ ಮತ್ತು ನಿಖರವಾದ ಮಾಹಿತಿಗಾಗಿ, ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವುದು ಸೂಕ್ತ. ಅಲ್ಲಿ ನಿಮಗೆ ಯೋಜನೆಯ ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಲಾಗುವುದು.

ಪಿಎಂ-ಕಿಸಾನ್ ಸ್ಟೇಟಸ್ ಚೆಕ್ :-

Hwo to check status :-

* pmkisan.gov.in ಜಾಲತಾಣಕ್ಕೆ ಭೇಟಿ ನೀಡ.

• ‘Know Your Status‘ ಆಯ್ಕೆ ಮಾಡಿ.

Click On Know YourStatus

Know Your Status

• ನೋಂದಣಿ ಸಂಖ್ಯೆ ನಮೂದಿಸಿ. ಇಲ್ಲದಿದ್ದರೆ, ‘Know Your Registration Number‘ ಮೇಲೆ ಕ್ಲಿಕ್ ಮಾಡಿ ಪಡೆಯಿರಿ.

EnterRegistration Number and Get Data

Know Your Registration Number

• OTP ನಮೂದಿಸಿ ‘Get Data’ ಕ್ಲಿಕ್ ಮಾಡಿ.

• e-KYC Status – ‘Yes’ ಇರಬೇಕು.

* Land Seeding- ‘Yes‘ ಇರಬೇಕು.

• Aadhaar Bank Account Seeding- ’Yes‘ ಇದ್ದರೆ ಮಾತ್ರ ಹಣ ಜಮೆ ಆಗುತ್ತದೆ.

ರೈತರಿಗೆ ನೆರವು :-

Helping hand to farmers:-

ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ತಲಾ 2,000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ (DBT ಮೂಲಕ) ಜಮಾ ಆಗುತ್ತದೆ.

ಇದು ಕೃಷಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿ, ಸಾಲದ ಹೊರೆ ಕಡಿಮೆ ಮಾಡುತ್ತದೆ. ಈ ಸೌಲಭ್ಯ ಪಡೆಯಲು ರೈತರು ಇ-ಕೆವೈಸಿ (e-KYC) ಪೂರ್ಣಗೊಳಿಸಿ ಕೇಂದ್ರ ಎಫ್.ಐ.ಡಿ (FID) ಸಂಖ್ಯೆ ಸೃಜಿಸಬೇಕು.

ಇದರಿಂದ ಪಿಎಂ ಕಿಸಾನ್ ಹಣದೊಂದಿಗೆ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಮತ್ತು ಇತರ ಸಬ್ಸಿಡಿ ಹಣ ಪಡೆಯಲು ಸಹಾಯಕವಾಗುತ್ತದೆ. ಈ ಯೋಜನೆಯು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ.

The PM-Kisan program gives 6,000 rupees each year to farmers who qualify. The money is sent straight to the farmers’ bank accounts using Direct Benefit Transfer (DBT), in three payments of 2,000 rupees each.

The goal is to help farmers with their farming work and lower their debt. To get this benefit, farmers need to finish the e-KYC process and get a central Farmer ID (FID) number.

This ID helps farmers get PM-Kisan money, crop insurance, payments for lost crops, and other government help, which improves their financial situation.

Thank you..

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"