Who will give Crop insurance :: ನಿಮಗೆ ಬೆಳವಿಮೆಯನ್ನು ಸರ್ಕಾರ ನೇರವಾಗಿ ನೀಡುವುದಿಲ್ಲ!! ಬೆಳೆವಿಮೆಯನ್ನು ಯಾರು ನೀಡುತ್ತಾರೆ ಚಕ್ ಮಾಡಿಕೊಳ್ಳಿ!!
ನಿಮಗೆ ಬೆಳೆವಿಮೆಯನ್ನು ಯಾರು ನೀಡುತ್ತಾರೆ, ಎಂಬುವುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಿ!!
Know who will give your Crop Insurance Details Now at Your Fingertips!!
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಕರ್ನಾಟಕದ ರೈತರು ತಮ್ಮ ಕೃಷಿ ಬೆಳೆಗಳಿಗೆ ವಿಮಾ ರಕ್ಷಣೆಯನ್ನು ಪಡೆಯುತ್ತಿದ್ದು, ಇದು ಬೆಳೆ ನಷ್ಟದ ಸಂದರ್ಭದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಆದಾಗ್ಯೂ, ಬಹಳಷ್ಟು ರೈತರಿಗೆ ತಮ್ಮ ನಿರ್ದಿಷ್ಟ ಜಿಲ್ಲೆ ಅಥವಾ ತಾಲ್ಲೂಕಿಗೆ ಯಾವ ವಿಮಾ ಕಂಪನಿಯು ಬೆಳೆ ವಿಮೆಯ ಜವಾಬ್ದಾರಿಯನ್ನು ಹೊಂದಿದೆ ಎಂಬ ಮಾಹಿತಿಯು ಲಭ್ಯವಿರುವುದಿಲ್ಲ.
ವಿಮಾ ಕಂಪನಿಯ ವಿವರಗಳನ್ನು ಹೇಗೆ ಪಡೆಯುವುದು?
How to know cropp insurance company details?
ರೈತರು ತಮ್ಮ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಅನ್ನು ಬಳಸಿಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ವಿಮಾ ಕಂಪನಿಯ ವಿವರಗಳನ್ನು ಸುಲಭವಾಗಿ ಪಡೆಯಬಹುದು
1. ಮೊದಲನೆಯದಾಗಿ, ಕರ್ನಾಟಕ ಸರ್ಕಾರದ ಅಧಿಕೃತ ಬೆಳೆ ವಿಮಾ ಪೋರ್ಟಲ್ ಸಂರಕ್ಷಣೆ ಗೆ ಭೇಟಿ ನೀಡಿ. https://www.samrakshane.karnataka.gov.in/ , ನಂತರ ಬರುವ ಮುಖಪುಟದಲ್ಲಿ ವಿಮೆ ಋತು ಮತ್ತು ವರ್ಷದ ಆಯ್ಕೆ / Select Insurance Season and Year ಆಯ್ಕೆ ಮಾಡಿ.

Select Year & Season
ಮುಖಪುಟದಲ್ಲಿ ವಿಮೆ ಋತು ಮತ್ತು ವರ್ಷದ ಆಯ್ಕೆ
2. ನಂತರ, ಮುಖಪುಟದಲ್ಲಿ ಕಾಣಿಸುವ “Know Your Insurance Co.” (ನಿಮ್ಮ ವಿಮಾ ಕಂಪನಿಯನ್ನು ತಿಳಿಯಿರಿ) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

Click On Know Your Insurance company
Know Your Insurance Co
3. ಆನಂತರ ನಿಮ್ಮ ನಿಮ್ಮ ಜಿಲ್ಲೆಯ ಹೆಸರನ್ನು ಆಯ್ಕೆಮಾಡಿ.

Select District Name
ನಿಮ್ಮ ಜಿಲ್ಲೆಯ ಆಯ್ಕೆ
4. ಕೂಡಲೇ ನಿಮ್ಮ ಪ್ರದೇಶಕ್ಕೆ ನಿಯೋಜಿಸಲಾದ ವಿಮಾ ಕಂಪನಿಯ ಹೆಸರು (ಉದಾಹರಣೆಗೆ: Universal Sompo, HDFC ERGO, ಮುಂತಾದವು) ಮತ್ತು ಅವುಗಳ ಸಹಾಯವಾಣಿ ಸಂಖ್ಯೆ (ಹೆಲ್ಪ್ಲೈನ್ ನಂಬರ್) ಪರದೆಯ ಮೇಲೆ ಕಾಣಿಸುತ್ತದೆ.

Selected District Details
ನಿಯೋಜಿಸಲಾದ ವಿಮಾ ಕಂಪನಿಯ ಹೆಸರು
ಒಂದು ವೇಳೆ ಬೆಳೆ ಹಾನಿಯಾದ ಸಂದರ್ಭದಲ್ಲಿ, ಪರಿಹಾರವನ್ನು ಪಡೆಯಲು ಸಂಬಂಧಪಟ್ಟ ಸರಿಯಾದ ವಿಮಾ ಕಂಪನಿಯನ್ನು ಸಂಪರ್ಕಿಸಲು ಈ ಕೆಳಗಿನ ವಿವರಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿರುತ್ತದೆ.
ಈ ಸೌಲಭ್ಯದ ಮುಖ್ಯ ಉದ್ದೇಶಗಳೇನು?
Aim of this facility?
ಕರ್ನಾಟಕ ಸರ್ಕಾರದ ಬೆಳೆ ವಿಮಾ ಪೋರ್ಟಲ್ನಲ್ಲಿ ಒದಗಿಸಲಾದ “Know Your Insurance Co.” (ನಿಮ್ಮ ವಿಮಾ ಕಂಪನಿಯನ್ನು ತಿಳಿಯಿರಿ) ಆಯ್ಕೆಯು ರೈತರಿಗೆ ಈ ಕೆಳಕಂಡ ಸನ್ನಿವೇಶಗಳಲ್ಲಿ ಉಪಯುಕ್ತವಾಗಿದೆ:
• ಬೆಳೆ ಹಾನಿಯ ಬಗ್ಗೆ ಮಾಹಿತಿ ನೀಡುವುದು – ಅಕಾಲಿಕ ಮಳೆ, ಅತಿಯಾದ ಬರಗಾಲ ಅಥವಾ ಪ್ರವಾಹದಂತಹ ನೈಸರ್ಗಿಕ
ವಿಕೋಪಗಳಿಂದ ಬೆಳೆ ಹಾನಿಯಾದಲ್ಲಿ, ಆದಷ್ಟು ಬೇಗ ಅಂದರೆ 72 ಗಂಟೆಗಳ ಒಳಗೆ ಸಂಬಂಧಪಟ್ಟ ವಿಮಾ ಕಂಪನಿಗೆ ಈ ಬಗ್ಗೆ ವರದಿ ಮಾಡಲು ಸಹಾಯ ಮಾಡುತ್ತದೆ.
* ಸಂಪರ್ಕದ ವಿವರಗಳನ್ನು ಪಡೆಯುವುದು – ರೈತರು ವಿಮಾ ಕಂಪನಿಯ ಕಚೇರಿಯ ವಿಳಾಸ ಮತ್ತು ಸಹಾಯವಾಣಿ (ಟೋಲ್-ಫ್ರೀ) ಸಂಖ್ಯೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.
• ಪಾರದರ್ಶಕತೆಯನ್ನು ಖಚಿತಪಡಿಸುವುದು – ನಿಮ್ಮ ವಿಮಾ ಕಂತಿನ (ಪ್ರೀಮಿಯಂ) ಹಣವು ಯಾವ ವಿಮಾ ಕಂಪನಿಗೆ ಜಮೆಯಾಗಿದೆ ಮತ್ತು ಬೆಳೆ ಹಾನಿಯ ಕ್ಲೈಮ್ ಮೊತ್ತವನ್ನು ಯಾರು ಪಾವತಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ಸಹಕಾರಿಯಾಗಿದೆ.
ಮಧ್ಯವರ್ತಿಗಳ ಕಾಟಕ್ಕೆ ಇನ್ನು ಬ್ರೇಕ್! ನೇರವಾಗಿ ನಿಮ್ಮ ವಿಮಾ ಕಂಪನಿ ಸಂಪರ್ಕಿಸಿ:-
Goodbye Middlemen! Connect Directly with Your Insurance Company:-
ಬೆಳೆ ನಷ್ಟವಾದಾಗ ರೈತರು ಯಾವುದೇ ಆತಂಕಕ್ಕೆ ಒಳಗಾಗದೆ, ತಕ್ಷಣವೇ ತಮ್ಮ ಬೆಳೆ ವಿಮಾ ಕಂಪನಿಯನ್ನು ಪತ್ತೆಹಚ್ಚಿ ನಷ್ಟದ ಬಗ್ಗೆ ದೂರು ದಾಖಲಿಸುವುದು ಅತ್ಯಗತ್ಯ.
ಈ ಡಿಜಿಟಲ್ ತಂತ್ರಜ್ಞಾನದ ಸೌಲಭ್ಯವು ರೈತರು ಮತ್ತು ಸರ್ಕಾರದ ನಡುವಿನ ಸಂಪರ್ಕವನ್ನು ಹೆಚ್ಚಿಸುವುದಲ್ಲದೆ, ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಡೆಗಟ್ಟಿ ನೇರವಾಗಿ ಪರಿಹಾರವನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
In instances where crops sustain damage, it becomes critically important for farmers to promptly determine the identity of their crop insurance provider and register a formal complaint regarding the incurred loss,
Maintaining composure and avoiding undue panic. This application of digital technology serves to reinforce the vital link between farmers and governmental bodies, simultaneously eliminating the potential for intermediary involvement,
Which allows farmers to obtain their entitled compensation payments directly and efficiently.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply