"Agriculture is our CULTURE"

Budget On Agriculture :: 17ನೇ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಏನೇನು ಕೊಡುಗೆ? ಕೃಷಿ ಕ್ಷೇತ್ರಕ್ಕೆ 4 ಮುಖ್ಯ ಅಂಶಗಳು!!

Karnataka Budget 2026- CM Siddaramaiah Announces Agriculture Boost ,Millet Hub ,CM Krishi Vistara Scheme

ಸಿದ್ದರಾಮಯ್ಯ 17ನೇ ಬಜೆಟ್: ಸರ್ವೋದಯದ ಹಾದಿಯಲ್ಲಿ ಸಮೃದ್ಧ ಕರ್ನಾಟಕ!!

Siddaramaiah’s 17th Budget: A Roadmap to a Prosperous and Inclusive!!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 17ನೇ ರಾಜ್ಯ ಬಜೆಟ್‌ನ ಮುಖ್ಯ ವಿಷಯಗಳು ಮತ್ತು ಕೃಷಿ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆಗಳ ವಿವರ!!

ಕೃಷಿ ಕ್ಷೇತ್ರಕ್ಕೆ ಮುಖ್ಯ ಯೋಜನೆಗಳು:-

Agriculture sector related schemes:-

ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ – ರೈತರಿಗೆ ನಿರಂತರ ಮತ್ತು ಹೆಚ್ಚು ಆದಾಯ ಸಿಗುವಂತೆ ಮಾಡಲು, ಸಂಸ್ಕರಣೆ, ಬೆಲೆ ಹೆಚ್ಚಿಸುವುದು ಮತ್ತು ಮಾರುಕಟ್ಟೆಗೆ ಸಂಪರ್ಕ ಬೆಳೆಸಲು ಈ ಯೋಜನೆಯನ್ನು ಶುರು ಮಾಡಲಾಗಿದೆ. ಮುಂದಿನ 3 ವರ್ಷಗಳಲ್ಲಿ 100 ಕೋಟಿ ರೂ. ಖರ್ಚು ಮಾಡಿ ಇದನ್ನು ಜಾರಿ ಮಾಡಲಾಗುವುದು.

* ಮಿಲೆಟ್ ಹಬ್- ಸಿರಿಧಾನ್ಯ ಮತ್ತು ಸಾವಯವ ವಸ್ತುಗಳನ್ನು ಬೆಳೆಸಲು ‘ಮಿಲೆಟ್ ಹಬ್’ ಅನ್ನು ಸ್ಥಾಪಿಸಲಾಗುವುದು. ಇದು ರೈತರು ಮತ್ತು ಹೊಸ ಉದ್ಯಮ ಮಾಡುವವರಿಗೆ ತಾಂತ್ರಿಕ ಸಹಾಯ ಮತ್ತು ಮಾರುಕಟ್ಟೆ ಸಂಪರ್ಕವನ್ನು ನೀಡುವ ಒಂದು ವ್ಯವಸ್ಥೆಯಾಗಿ ಕೆಲಸ ಮಾಡುತ್ತದೆ.

* ಕೃಷಿ ಅಭಿವೃದ್ಧಿಯ 4 ಮುಖ್ಯ ಅಂಶಗಳು:-

1. ವೈಜ್ಞಾನಿಕ ಕೃಷಿ ಬಗ್ಗೆ ಮಾಹಿತಿ.

2. ಹಣಕಾಸಿನ ಸಹಾಯ.

3. ಉತ್ತಮ ಗುಣಮಟ್ಟದ ಕೃಷಿ ವಸ್ತುಗಳ ಸರಬರಾಜು.

4. ಕೊಯ್ಲಿನ ನಂತರ ದಾಸ್ತಾನು ಮತ್ತು ಮಾರುಕಟ್ಟೆ ಹೆಚ್ಚಿಸುವುದು.

* ವಸುಧಾಮೃತ ಕಾರ್ಯಕ್ರಮ – ಮಣ್ಣಿನ ಫಲವತ್ತತೆ ಮತ್ತು ಸಾವಯವ ಇಂಗಾಲವನ್ನು ಜಾಸ್ತಿ ಮಾಡಿ ಪರಿಸರಕ್ಕೆ ಹಾನಿಯಾಗದ ಕೃಷಿಯನ್ನು ಬೆಂಬಲಿಸಲು ಮುಂದಿನ 3 ವರ್ಷಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಸಸ್ಯ ಸಂಜೀವನಿ ಯೋಜನೆ – ಬೆಳೆಗಳಲ್ಲಿ ಕೀಟ ಮತ್ತು ರೋಗಗಳನ್ನು ಮೊದಲೇ ಕಂಡುಹಿಡಿದು ಜೈವಿಕ ಕೀಟನಾಶಕಗಳನ್ನು ಬಳಸಿ ಸರಿಪಡಿಸಲು ಈ ಯೋಜನೆಯನ್ನು ಮಾಡಲಾಗಿದೆ.

* ಎಐ ತಂತ್ರಜ್ಞಾನ – ರೈತ ಕರೆ ಮಾಡುವ ಕೇಂದ್ರಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಉತ್ತಮ ಪಡಿಸಲಾಗುವುದು.

ರೇಷ್ಮೆ ಮತ್ತು ನೀರಾವರಿ ಯೋಜನೆಗಳ:-

Silk and irrigation schemes:-

* ರೇಷ್ಮೆ ಅಭಿವೃದ್ಧಿ- ಕರ್ನಾಟಕವು ದೇಶದ ರೇಷ್ಮೆ ಉತ್ಪಾದನೆಯಲ್ಲಿ 46% ನಷ್ಟು ಉತ್ಪಾದನೆ ಮಾಡುತ್ತದೆ. ಉತ್ತರ ಕರ್ನಾಟಕದ ರೈತರಿಗೆ ರೇಷ್ಮೆ ಗೂಡು ಸಾಗಿಸುವ ಖರ್ಚನ್ನು ಪ್ರತಿ ಕೆಜಿಗೆ 10 ರೂ. ಇಂದ 20 ರೂ.ಗೆ ಹೆಚ್ಚಿಸಲಾಗಿದೆ.

ರಾಮನಗರ, ಶಿಡ್ಲಘಟ್ಟ, ಹಾವೇರಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಸಿಲ್ಕ್ ಪಾರ್ಕ್ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು.

ಮೇಕೆದಾಟು ಮತ್ತು ಎತ್ತಿನಹೊಳೆ- ಮೇಕೆದಾಟು ಯೋಜನೆಗೆ ಸಂಬಂಧಿಸಿದ ಕಾನೂನಿನ ತೊಂದರೆಗಳು ಬಗೆಹರಿದ ನಂತರ, ಹೊಸ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ಎತ್ತಿನಹೊಳೆ ಯೋಜನೆಯ 2ನೇ ಹಂತದ ಕಾಲುವೆ ಕೆಲಸಗಳನ್ನು ಬೇಗ ಮುಗಿಸಲಾಗುವುದು.

* ಕೃಷ್ಣ ಮೇಲ್ದಂಡೆ ಯೋಜನೆ (UKP ಹಂತ-3)- ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನುಗಳಿಗೆ ಪರಿಹಾರವನ್ನು ನಿಗದಿಪಡಿಸಲಾಗಿದೆ (ಒಣ ಜಮೀನಿಗೆ 30 ಲಕ್ಷ ರೂ. ಮತ್ತು ನೀರಾವರಿ ಜಮೀನಿಗೆ 40 ಲಕ್ಷ ರೂ. ಪ್ರತಿ ಎಕರೆಗೆ).

• ತುಂಗಭದ್ರ ಅಣೆಕಟ್ಟು- ಹಾಳಾಗಿರುವ 33 ಗೇಟುಗಳನ್ನು ಮಳೆಗಾಲದ ಮುಂಚೆ ಬದಲಾಯಿಸಲಾಗುವುದು.

* ಕೆರೆ ತುಂಬಿಸುವ ಯೋಜನೆಗಳು: ಬೆಂಗಳೂರಿನ ವೃಷಭಾವತಿ ವ್ಯಾಲಿಯಿಂದ 259 ಕೆರೆಗಳನ್ನು ತುಂಬಿಸುವ ಯೋಜನೆಗೆ 650 ಕೋಟಿ ರೂ. ಮೀಸಲಿಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ:-

Women and child development :-

* ಗೃಹಲಕ್ಷ್ಮಿ ಯೋಜನೆ- ಈ ಯೋಜನೆಗೆ ಈ ಬಜೆಟ್‌ನಲ್ಲಿ 28,608 ಕೋಟಿ ರೂ. ಮೀಸಲಿಡಲಾಗಿದೆ. ಇಲ್ಲಿಯವರೆಗೆ 1.24 ಕೋಟಿ ಫಲಾನುಭವಿಗಳಿಗೆ 62,345 ಕೋಟಿ ರೂ. ತಲುಪಿಸಲಾಗಿದೆ.

ಅಕ್ಕಪಣೆ ಯೋಜನೆ– ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡಲು ಗೃಹ ಇಲಾಖೆಯ ಜೊತೆ ಸೇರಿ ಈ ಯೋಜನೆ ಜಾರಿಯಲ್ಲಿದೆ.

* ಮಾತೃತ್ವ ರಜೆ- ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ 90 ದಿನಗಳ ಹೆರಿಗೆ ರಜೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು.

ಸಮೃದ್ಧ ರೈತ, ಸಶಕ್ತ ಮಹಿಳೆ – ನವ ಕರ್ನಾಟಕದ ಪ್ರಗತಿಗೆ ಬಜೆಟ್ ಸಂಕಲ್ಪ:-

Prosperous Farmer, Empowered Woman- The Budget Blueprint for a Vibrant Karnataka:-

ಸಿದ್ದರಾಮಯ್ಯನವರ ಬಜೆಟ್ ಕೃಷಿ, ಮಹಿಳಾ ಸಬಲೀಕರಣಕ್ಕೆ ದೂರಗಾಮಿ ಪರಿಣಾಮಕಾರಿ. ಕೃಷಿ ವಿಸ್ತಾರ, ಮಿಲೆಟ್ ಹಬ್‌ನಿಂದ ರೈತರು ಉದ್ಯಮಿಗಳಾಗಿ ಬೆಳೆಯಲು, ಮಾರುಕಟ್ಟೆ ಸಂಪರ್ಕ ಸಿಗುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿ ಆದಾಯ ಸ್ಥಿರವಾಗುತ್ತದೆ.

ವಸುಧಾಮೃತ, ಸಸ್ಯ ಸಂಜೀವಿನಿ ಯೋಜನೆಗಳು ಮಣ್ಣಿನ ಆರೋಗ್ಯ ಕಾಪಾಡುತ್ತವೆ. ನೀರಾವರಿ ಯೋಜನೆಗಳಿಂದ ಬರಪೀಡಿತ ಪ್ರದೇಶಗಳಿಗೆ ನೀರಿನ ಭದ್ರತೆ ಸಿಗಲಿದೆ. ಗೃಹಲಕ್ಷ್ಮಿ ಯೋಜನೆಯ ನೆರವು ಕುಟುಂಬ ನಿರ್ವಹಣೆಗೆ ಬಲ ನೀಡುತ್ತದೆ.

ಅತಿಥಿ ಉಪನ್ಯಾಸಕಿಯರಿಗೆ ಮಾತೃತ್ವ ರಜೆ ಮಹಿಳಾ ಉದ್ಯೋಗಿಗಳ ಸಾಮಾಜಿಕ ಭದ್ರತೆ, ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಈ ಯೋಜನೆಗಳು ಗ್ರಾಮೀಣ ಆರ್ಥಿಕತೆ ಬಲಪಡಿಸಿ, ಜನರಲ್ಲಿ ಆರ್ಥಿಕ ಸ್ವಾವಲಂಬನೆ ಮೂಡಿಸುತ್ತವೆ.

Siddaramaiah’s budget emphasizes sustainable agriculture and women’s empowerment. Krishi Vistara and Millet Hubs enable farmers to become “Agri-entrepreneurs” through direct processing and market access, bypassing middlemen for stable prices and higher profits.

Vasudhamruta and Sasya Sanjeevini prioritize “Ecological Security” via soil health and biological pest control, ensuring long-term sustainability. Faster irrigation projects (Mekedatu, Upper Krishna) offer water security, stabilizing the rural economy. Gruhalakshmi empowers women financially.

Maternity leave for women guest lecturers ensures social security and occupational health. These initiatives strengthen the rural economy and promote economic self-reliance (Atmanirbharata) in Karnataka.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"