Gruhalakshmi :: ಗೃಹಲಕ್ಷ್ಮಿ 27ನೇ ಕಂತಿನ ಹಣ ಮಾರ್ಚ್ ತಿಂಗಳಿನಲ್ಲಿ ಜಮವಾಗುತ್ತಾ??ಮಾರ್ಚ್ ತಿಂಗಳ ಪಿಂಚಣಿ ವಿತರಣೆ ಮತ್ತು ಶಕ್ತಿ ಯೋಜನೆ!!
ಗೃಹಲಕ್ಷ್ಮಿ ಕಾರ್ಯಕ್ರಮ, ಮಾರ್ಚ್ ತಿಂಗಳ ಪಿಂಚಣಿ ವಿತರಣೆ ಮತ್ತು ಶಕ್ತಿ ಯೋಜನೆಯ ಕುರಿತಾದ ಕೆಲವು ಅಗತ್ಯವಾದ ವಿವರಗಳು :-
• ಮಾರ್ಚ್ ತಿಂಗಳ ಪಿಂಚಣಿ- ಮಾರ್ಚ್ ತಿಂಗಳ ಪಿಂಚಣಿಯ ಮೊತ್ತವನ್ನು ಈಗಾಗಲೇ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ವಿತರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮುಂದಿನ 3-4 ದಿನಗಳಲ್ಲಿ ಹಣವನ್ನು ಜಮಾ ಮಾಡಲಾಗುತ್ತದೆ.
* ಗೃಹಲಕ್ಷ್ಮಿ 27ನೇ ಕಂತು – ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣವನ್ನು ಈ ಮಾರ್ಚ್ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಪ್ರಸ್ತುತವಾಗಿ, ಹಣಕಾಸು ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣವನ್ನು ವರ್ಗಾಯಿಸುವುದು ಬಾಕಿ ಇರುವುದರಿಂದ ಸ್ವಲ್ಪ ವಿಳಂಬವಾಗುವ ಸಾಧ್ಯತೆಗಳಿವೆ.
• ಬಾಕಿ ಉಳಿದಿರುವ ಕಂತುಗಳು – ಸದ್ಯಕ್ಕೆ 26ನೇ ಕಂತಿನ ಹಣವನ್ನು (ನವೆಂಬರ್ ತಿಂಗಳಿನದು) ಬಿಡುಗಡೆ ಮಾಡಲಾಗಿದೆ. ಡಿಸೆಂಬರ್, ಜನವರಿ, ಫೆಬ್ರವರಿ ಮತ್ತು ಮಾರ್ಚ್ ಸೇರಿದಂತೆ ಸುಮಾರು 4-5 ತಿಂಗಳುಗಳ ಹಣವು ಬಿಡುಗಡೆಯಾಗಲು ಬಾಕಿ ಇದೆ ಎಂದು ಹೇಳಲಾಗಿದೆ.
* ಯುವನಿಧಿ ಯೋಜನೆ – ಯುವನಿಧಿ ಯೋಜನೆಯ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ ಮತ್ತು ಜನವರಿ ತಿಂಗಳಿನ ಹಣದ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಡಿಬಿಟಿ ಸ್ಟೇಟಸ್ ಅನ್ನು ಪರೀಕ್ಷಿಸಿಕೊಳ್ಳಬಹುದು.
• ಮರಣ ಹೊಂದಿದ ಫಲಾನುಭವಿಗಳ ಹಣ ಹಿಂತಿರುಗಿಸುವಿಕೆ – ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬ್ಯಾಂಕುಗಳ ಮುಖಾಂತರ ವಾಪಸ್ ಪಡೆಯಲು ಸರ್ಕಾರವು ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ ಎಂಬ ಮಾಹಿತಿಯಿದೆ.
* ಜೀವಿತ ಪ್ರಮಾಣ ಪತ್ರ (Life Certificate) – 27ನೇ ಕಂತಿನ ಹಣವನ್ನು ಪಡೆಯಲು ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಸದ್ಯಕ್ಕೆ ಕಡ್ಡಾಯವಾಗಿರುವುದಿಲ್ಲ. ಈ ವಿಷಯದ ಬಗ್ಗೆ ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ.
• ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ – ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಣೆಯು ಇನ್ನೂ ಅಧಿಕೃತವಾಗಿ ಪ್ರಾರಂಭವಾಗಿಲ್ಲ. ಅಲ್ಲಿಯವರೆಗೆ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಅನ್ನು ತೋರಿಸುವುದರ ಮೂಲಕ ಉಚಿತವಾಗಿ ಪ್ರಯಾಣವನ್ನು ಮಾಡಬಹುದು.
ಕರ್ನಾಟಕ ಸರ್ಕಾರದ ಜನಪರ ಯೋಜನೆಗಳು, ಫಲಾನುಭವಿಗಳಿಗೆ ಸಹಾಯ:-
People centric karnataka state government schemes helping to the beneficiaries :-
ಗೃಹಲಕ್ಷ್ಮಿ ಮತ್ತು ಪೆನ್ಶನ್ ಯೋಜನೆಗಳು: ಮಹಿಳೆಯರು ಮತ್ತು ಹಿರಿಯ ನಾಗರಿಕರ ಖಾತೆಗೆ ನೇರ ಹಣ ಜಮೆ(DBT)ಯಿಂದ, ಆಹಾರ, ಔಷಧಿ ಮುಂತಾದ ಖರ್ಚುಗಳಿಗೆ ಆರ್ಥಿಕ ಸ್ವತಂತ್ರ ಸಿಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹಣವು ಗೃಹಿಣಿಯರಿಗೆ ಕುಟುಂಬ ನಿರ್ವಹಣೆಗೆ ಆಸರೆಯಾಗಿದೆ.ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದಿಂದ ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರಯಾಣ ವೆಚ್ಚ ಉಳಿತಾಯವಾಗುತ್ತಿದೆ.
ಸ್ಮಾರ್ಟ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುವ ಅವಕಾಶವಿರುವುದು ಅನುಕೂಲಕರವಾಗಿದೆ.ನಿರುದ್ಯೋಗಿ ಪದವೀಧರರಿಗೆ ಸಿಗುತ್ತಿರುವ ಮಾಸಿಕ ಧನಸಹಾಯವು ಉದ್ಯೋಗ ಹುಡುಕಾಟದಲ್ಲಿ ಆರ್ಥಿಕ ಹೊರೆಯಾಗದಂತೆ ಬೆಂಬಲ ನೀಡುತ್ತಿದೆ.
ಈ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸಲು ಸಹಾಯ ಮಾಡುತ್ತವೆ.
Gruhalakshmi and pension schemes: Direct Benefit Transfers (DBT) to women/senior citizens offer financial freedom for needs like food and medicine. Gruhalakshmi supports housewives in running homes.
Free government bus rides lower travel costs for working women/students. Travel using Aadhaar, even without a smart card, is helpful. Monthly money for unemployed graduates ensures finances don’t hinder job searches. These programs improve lives and provide long-term financial security.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply