1800rs Gruhalakshmi :: ನಿಮ್ಮ ಖಾತೆಗೆ 1800 ಜಮಾ!! ಉಚಿತ ದಿನಸಿ ಕಿಟ್ ಅಪ್ಡೇಟ್!!
Your account will be credited with ₹2000 or ₹1800? And free grocery kit!!
ಗೃಹಲಕ್ಷ್ಮಿ ಯೋಜನೆ: ₹1800 ಅಥವಾ ₹2000? ಗೃಹಲಕ್ಷ್ಮಿ ಯೋಜನೆಯ ಹಣವು ₹1800ಕ್ಕೆ ಇಳಿಕೆಯಾಗಲಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಮಾಹಿತಿ :-
* ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಸರ್ಕಾರವು **’ವಿವಿಧೋದ್ದೇಶ ಸಹಕಾರ ಸಂಘ‘**ಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದೆ. ಈ ಸಹಕಾರ ಸಂಘಗಳ ಮೂಲಕ ಮಹಿಳೆಯರಿಗೆ ₹30,000 ದಿಂದ ₹3 ಲಕ್ಷದವರೆಗೆ ಸಾಲವನ್ನು ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
• ಈ ಸಾಲ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಫಲಾನುಭವಿಗಳು ಮೊದಲ 6 ತಿಂಗಳು ಪ್ರತಿ ತಿಂಗಳು ₹200 ರಂತೆ ಉಳಿತಾಯ ಮಾಡಬೇಕಾಗುತ್ತದೆ. ಈ ಉಳಿತಾಯದ ಮೊತ್ತವನ್ನು ನೇರವಾಗಿ ಗೃಹಲಕ್ಷ್ಮಿ ಯೋಜನೆಯ ₹2000 ಹಣದಿಂದಲೇ ಕಡಿತಗೊಳಿಸಿ,
ಉಳಿದ ₹1800 ಅನ್ನು ಫಲಾನುಭವಿಯ ಖಾತೆಗೆ ಜಮಾ ಮಾಡುವ ಬಗ್ಗೆ ಸರ್ಕಾರವು ಚಿಂತನೆ ನಡೆಸುತ್ತಿದೆ.
• ಇದು ಕಡ್ಡಾಯವಲ್ಲ. ಇದು ಕೇವಲ ಸಾಲವನ್ನು ಪಡೆಯಲು ಇಚ್ಛಿಸುವ ಫಲಾನುಭವಿಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಲದ ಅವಶ್ಯಕತೆ ಇಲ್ಲದ ಫಲಾನುಭವಿಗಳಿಗೆ ಪೂರ್ತಿ ₹2000 ಹಣವು ಸಿಗಲಿದೆ.
ಬಾಕಿ ಹಣ ಮತ್ತು 27ನೇ ಕಂತಿನ ಬಗ್ಗೆ ಮಾಹಿತಿ:-
Remaining installment and 27th installment information :-
* ಕೆಲವು ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ 26ನೇ ಕಂತಿನ ಹಣವು ತಲುಪಿಲ್ಲ. ಅಂತಹ ಫಲಾನುಭವಿಗಳಿಗೆ 27ನೇ ಕಂತು ಬಿಡುಗಡೆಯಾದಾಗ ಹಿಂದಿನ ಬಾಕಿ ಹಣವನ್ನು ಸೇರಿಸಿ ಒಟ್ಟು ₹4,000 ಜಮೆಯಾಗುವ ಸಾಧ್ಯತೆ ಇದೆ.
• ಹಣಕಾಸು ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅನುದಾನ ವರ್ಗಾವಣೆಯಾದ ತಕ್ಷಣವೇ ಡಿಬಿಟಿ (Direct Benefit Transfer) ಮೂಲಕ ಫಲಾನುಭವಿಗಳ ಖಾತೆಗೆ ಹಣವು ಜಮೆಯಾಗಲಿದೆ.
ಅನ್ನಭಾಗ್ಯ ಯೋಜನೆ: ಉಚಿತ ದಿನಸಿ ಕಿಟ್:-
Anna bhagya – free grocery kit:-
* 5 ಕೆಜಿ ಉಚಿತ ಅಕ್ಕಿಯ ಬದಲಾಗಿ ಹಣವನ್ನು ನೀಡುವ ಬದಲು, ಈಗ ಬೇಳೆ, ಸಕ್ಕರೆ, ಎಣ್ಣೆ ಮತ್ತು ಉಪ್ಪು ಒಳಗೊಂಡ ‘ದಿನಸಿ ಕಿಟ್’ ಅನ್ನು ನೀಡಲು ಸರ್ಕಾರವು ಮುಂದಾಗಿದೆ.
• ಈ ಕಿಟ್ ಅನ್ನು ವಿತರಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ, ಮಾರ್ಚ್ ತಿಂಗಳಲ್ಲಿ ವಿತರಣೆ ಕಷ್ಟಸಾಧ್ಯವಾಗಿದೆ. ಇದು ಬಹುಶಃ ಏಪ್ರಿಲ್ ಅಥವಾ ಮೇ ತಿಂಗಳಿನಿಂದ ಜಾರಿಗೆ ಬರಬಹುದು.
ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಅಪ್ಡೇಟ್: ಆರ್ಥಿಕ ಸ್ವಾವಲಂಬನೆ ಮತ್ತು ಪೌಷ್ಟಿಕ ಭದ್ರತೆ:-
Gruhalakshmi & Anna Bhagya Update: Financial Independence and Nutritional Security:-
ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಬಲಗೊಳ್ಳಲು ಸಹಾಯವಾಗುತ್ತಿದೆ. ಪ್ರತಿ ತಿಂಗಳು ನೇರವಾಗಿ ಖಾತೆಗೆ ಹಣ ಬರುವುದರಿಂದ ಕುಟುಂಬದ ಖರ್ಚುಗಳನ್ನು ನಿಭಾಯಿಸಲು ಅನುಕೂಲವಾಗುತ್ತದೆ.
ಜೊತೆಗೆ, ಹೊಸದಾಗಿ ಶುರು ಆಗುತ್ತಿರುವ **’ಗೃಹಲಕ್ಷ್ಮಿ ಸಹಕಾರ ಸಂಘ‘**ಗಳ ಮೂಲಕ ಮಹಿಳೆಯರು ಕಡಿಮೆ ಬಡ್ಡಿಯಲ್ಲಿ ₹3 ಲಕ್ಷದವರೆಗೆ ಸಾಲ ತೆಗೆದುಕೊಂಡು ಸ್ವಂತ ಕೆಲಸಗಳನ್ನು ಆರಂಭಿಸಬಹುದು. ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಂತ ಕಾಲ ಮೇಲೆ ನಿಲ್ಲಲು ಸಾಧ್ಯವಾಗುತ್ತದೆ.
ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಜೊತೆಗೆ ಕೊಡುವ ‘ದಿನಸಿ ಕಿಟ್‘ (ತೊಗರಿಬೇಳೆ, ಎಣ್ಣೆ, ಸಕ್ಕರೆ, ಉಪ್ಪು) ಕುಟುಂಬದ ಪೌಷ್ಟಿಕಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ .ಈ ಹಿಂದೆ ದಿನಸಿ ವಸ್ತುಗಳಿಗೆ ತಿಂಗಳಿಗೆ ₹500 ರಿಂದ ₹1000 ಖರ್ಚು ಮಾಡುತ್ತಿದ್ದ ಬಡ ಕುಟುಂಬಗಳಿಗೆ ಈ ಕಿಟ್ನಿಂದ ಹಣ ಉಳಿತಾಯವಾಗುತ್ತದೆ ,
ಒಟ್ಟಿನಲ್ಲಿ, ಈ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನು ಉತ್ತಮಪಡಿಸಲು ಮತ್ತು ಹಸಿವು ಇಲ್ಲದ ಸಮಾಜವನ್ನು ಕಟ್ಟಲು ಸಹಾಯಕವಾಗಿವೆ.
The Gruhalakshmi scheme is greatly helping women improve their financial situation. Getting money directly in their bank accounts each month makes it easier to handle household costs.
Also, the new ‘Gruhalakshmi Cooperative Societies‘ let women borrow up to ₹3 lakh at low interest to start businesses. This helps women become financially independent.
The Anna Bhagya scheme’s ‘Grocery Kit’ (with pigeon peas/tur dal, oil, sugar, and salt) and rice helps families eat better.
Poor families used to spend ₹500 to ₹1000 monthly on these groceries, but now they can save this money. These schemes are really helping improve the lives of poor and middle-class families and create a society without hunger.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply