"Agriculture is our CULTURE"

ವಿಜ್ಞಾನಿಗಳ ಪ್ರಕಾರ :: ವೈಜ್ಞಾನಿಕವಾಗಿ  ಅಡಿಕೆ ಮರಗಳ ನಡುವಿನ ಅಂತರ ಎಷ್ಟಿರಬೇಕು! 

  ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತಿದ್ದ ಅಡಿಕೆ ಬೆಳೆಯನ್ನು ಇದೀಗ ಬಯಲು ಸೀಮೆ ಬಾಗಗಳಲ್ಲಿಯೂ ಬೆಳೆಯಲಾಗುತ್ತಿದ್ದು,  ಈ ಅಡಿಕೆ ಬೆಳೆಯನ್ನು ಬೆಳೆಯುವಾಗ ಸಾಕಷ್ಟು ಮತದ ಕರ್ಚನ್ನು ಮಾಡಬೇಕಾಗುತ್ತದೆ. 

ಅಂತರದಲ್ಲಿ ಮೂರ್ನಾಲ್ಕು ವರ್ಷಗಳ ಕಾಲ ಅವುಗಳನ್ನು ಜೋಪಾನ ಮಾಡಿದರೆ ಮಾತ್ರ  ಮುಂದೆ ಅಡಿಕೆ ಮರಗಳು ಲಾಭವನ್ನು ತಂದು ಕೊಡುತ್ತವೆ.  ಆದರೆ ಅಡಿಕೆ ಮರಗಳನ್ನು ಬೆಳೆಯಲು ನಿರ್ಧರಿಸಿದರೆ ಮಾತ್ರ ಉತ್ತಮ ಫಸಲು ಬರುತ್ತದೆ ಎಂದರ್ಥವಲ್ಲ. 

ವೈಜ್ಞಾನಿಕವಾಗಿ ಅಡಿಕೆ ಮರಗಳನ್ನು ಬೆಳೆಯುವ ಬಗ್ಗೆ ಹಾಗೂ  ಅಡಿಕೆ ಕೃಷಿಯ ಸಂಪೂರ್ಣ ವಿವರಗಳನ್ನು ಅರಿತುಕೊಂಡು ಅಡಿಕೆ ಮರಗಳನ್ನು ಬೆಳೆದರೆ ಮಾತ್ರ ರೈತರಿಗೆ  ಉತ್ತಮ ಇಳುವರಿ ಸಿಗುತ್ತದೆ.  

ಆದ್ದರಿಂದ ಹೊಸದಾಗಿ ಅಡಿಕೆ ಮರಗಳನ್ನು ಬೆಳೆಯಲು ಇಚ್ಛಿಸುವ ರೈತರಿಗೆ ನಮ್ಮ ಕಡೆಯಿಂದ ಕೆಲವೊಂದು ಸಲಹೆಗಳಿದ್ದು,   ವೈಜ್ಞಾನಿಕವಾಗಿ ಕೃಷಿ ವಿಜ್ಞಾನಿಗಳು  ಸಹ ಇದೇ ಸಲಹೆಗಳನ್ನು ನೀಡುತ್ತಾರೆ ಆದ್ದರಿಂದ ರೈತರು ಅಡಿಕೆ ಬೆಳೆಯುವ ಯೋಚನೆಯಲ್ಲಿದ್ದರೆ ಈ ಸಲಹೆಗಳನ್ನು ಪಾಲಿಸಬಹುದು. 

ಅಡಿಕೆ ಸಸಿಗಳನ್ನು  ಎಷ್ಟು ಅಂತರದಲ್ಲಿ ನೆಡಬೇಕು? 

* ರೈತರಿಗೆ ಮೊಟ್ಟ ಮೊದಲು ಕಾಡುವ ಪ್ರಶ್ನೆಯೇ ಇದಾಗಿದ್ದು,   ಅಡಿಕೆ ಮರಗಳನ್ನು ಎಷ್ಟು ಅಂತರದಲ್ಲಿ ಬೆಳೆದರೆ ಒಳ್ಳೆಯದು ಎಂಬ ಪ್ರಶ್ನೆಯನ್ನು ಸಾಕಷ್ಟು ರೈತರು ಕೇಳುತ್ತಾರೆ.  

~ ಇದಕ್ಕೆ ಉತ್ತರವೆಂದರೆ ಅಡಿಕೆ ಮರಗಳನ್ನು 9 ಅಡಿಗಳ ಅಂತರದಲ್ಲಿ ಬೆಳೆದರೆ ಸೂಕ್ತ. 

* ಕಡಿಮೆ ಜಾಗವಿರುವವರು 9 ಅಡಿ ಅಂತರದಲ್ಲಿ ಮರಗಳನ್ನು ನೆಡಬಹುದು.   ಹೆಚ್ಚಿನ ಜಾಗ ಹೊಂದಿರುವವರು 10 ಅಡಿಗಳಷ್ಟು ಅಂತರದಲ್ಲಿ ಬೆಳೆದರೆ ಒಳ್ಳೆಯದು. 

ಅಡಿಕೆ ಮರಗಳನ್ನು ಕಡಿಮೆ  ಅಂತರದಲ್ಲಿ ಬೆಳೆದರೆ ಆಗುವ ತೊಂದರೆಗಳೇನು? 

* ಅಡಿಕೆ ಮರಗಳ ಮಧ್ಯೆ ಹೆಚ್ಚಿನ ಅಂತರವಿಲ್ಲದೆ ಇದ್ದಲ್ಲಿ ಸೂರ್ಯನ ಬಿಸಿಲು ನೆಲಕ್ಕೆ ತಾಕದೆ ಭೂಮಿಗೆ ಪೋಷಕಾಂಶಗಳ ಕೊರತೆ ಉಂಟಾಗಿ ಅದು ಮರಗಳಿಗೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ

ಇದರಿಂದ ಮರಗಳು ಚೆನ್ನಾಗಿ ಬೆಳೆಯುವುದಿಲ್ಲ ಹಾಗೂ ಫಸಲನ್ನು ಚೆನ್ನಾಗಿ ನೀಡುವುದಿಲ್ಲ. ರೋಗಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ.

~ ಮರಗಳ ಮಧ್ಯ ಕಡಿಮೆ ಅಂತರವಿದ್ದರೆ ಕೊಳೆರೋಗ ಎಲೆ ಚುಕ್ಕಿ ರೋಗ ಗಳಂತಹ ರೋಗಗಳು ಬಂದಾಗ ರೋಗಗಳನ್ನು ತಡೆಯುವುದು ಕಷ್ಟವಾಗುತ್ತದೆ.  ಅಲ್ಲದೆ ಬಹುಬೇಗ ಎಲ್ಲ ಮರಗಳಿಗೂ ಹೊರಡುವ ಸಾಧ್ಯತೆ ಇರುತ್ತದೆ. 

* ಮರಗಳ ಮಧ್ಯೆ ಅಂತರ ಕಡಿಮೆ ಇರುವುದರಿಂದ ಮಧ್ಯದಲ್ಲಿ ಬೇರೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಬಾಳೆ ಹಾಗೂ ಏಲಕ್ಕಿಗಳಂತಹ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. 

~ ತೋಟಗಳಲ್ಲಿ ಇತರೆ ಬೆಳೆಗಳ ಬಿತ್ತನೆ ಅಥವಾ ಮಲ್ಚಿಂಗ್ ಮಾಡಲು ಇತ್ಯಾದಿ ಕೆಲಸಗಳಿಗಾಗಿ ಟ್ರಾಕ್ಟರ್ ಅಥವಾ ಇತರೆ ಉಪಕರಣಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. 

* ಅಡಿಕೆ ಸಸಿಗಳ ಅಂತರ ಕಡಿಮೆ ಇದ್ದರೆ ಮರಗಳು ಸಮೃದ್ಧಿಯಾಗಿ ಬೆಳೆಯದೆ ಇಳುವರಿ ಕಡಿಮೆ ಬರುತ್ತದೆ. 

ಹಾಗಾದರೆ ಅಡಿಕೆ ಮರಗಳ ಅಂತರ ಹೆಚ್ಚಾಗಿರುವುದರಿಂದ ಏನು ಉಪಯೋಗ? 

~ ಟ್ರಾಕ್ಟರ್ ಹಾಗೂ ಇನ್ನಿತರ ಉಪಕರಣಗಳನ್ನು ಉಳುಮೆಗಾಗಿ ಸುಲಭವಾಗಿ ಬಳಸಬಹುದು. 

* ಅಡಿಕೆ ಮರಗಳಿಗೆ ರೋಗಗಳು ಬಂದರೆ ಸುಲಭವಾಗಿ ಕಂಟ್ರೋಲ್ ಮಾಡಬಹುದು. 

~ ಅಡಿಕೆ ಮರಗಳ ಮಧ್ಯೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಸುಲಭವಾಗುತ್ತದೆ ಉದಾಹರಣೆಗೆ ಏಲಕ್ಕಿ ಅಥವಾ ಬಾಳೆ ಬೆಳೆಗಳನ್ನು ಬೆಳೆಯಬಹುದು. 

* ಅಂತರ ಹೆಚ್ಚಾಗಿರುವುದರಿಂದ ಮರಗಳಿಗೆ ಸಾಕಷ್ಟು ನೀರು ಹಾಗೂ ಬಿಸಿಲು ಸಿಗುವುದರಿಂದ ಮರಗಳು ಚೆನ್ನಾಗಿ ಬೆಳೆದು ಚೆನ್ನಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವುದರಿಂದ ಉತ್ತಮ ಇಳುವರಿ ಸಿಗುತ್ತದೆ. 

ಆದ್ದರಿಂದ ಅಡಿಕೆ ಮರಗಳನ್ನು ಒಂಬತ್ತು ಅಡಿ ಅಥವಾ 10 ಅಡಿ ಅಂತರದಲ್ಲಿ ಬೆಳೆಯುವುದು ಸೂಕ್ತವಾಗಿದ್ದು,   ಇನ್ನು ಮುಂದೆ ರೈತರು ಅಡಿಕೆ ಸಸಿಗಳನ್ನು ನೀಡಲು ನಿರ್ಧರಿಸಿದರೆ ಈ ವೈಜ್ಞಾನಿಕ ರೀತಿಯಲ್ಲಿ  ಸಸಿಗಳನ್ನು ನೆಟ್ಟು ಉತ್ತಮ ತೋಟವನ್ನು ನಿರ್ಮಿಸಿ ಅಧಿಕ ಇಳುವರಿಯನ್ನು ಪಡೆದು ಲಾಭ ಪಡೆಯಿರಿ

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"