"Agriculture is our CULTURE"

Update on Gruhalakshmi :: e-KYC ಹೊಸ ನಿಯಮ ಮತ್ತು ಜಿಲ್ಲಾವಾರು ಹಣ ಜಮೆಯ ಲೈವ್ ಅಪ್ಡೇಟೆಡ್!!

ಗೃಹಲಕ್ಷ್ಮಿ ಫಲಾನುಭವಿಗಳ ಗಮನಕ್ಕೆ: e-KYC ಹೊಸ ನಿಯಮ ಮತ್ತು ಜಿಲ್ಲಾವಾರು ಹಣ ಜಮೆಯ ಲೈವ್ ಅಪ್ಡೇಟೆಡ್!!

New Update on Gruhalakshmi Scheme: e-KYC Fake News vs Ration Card e-KYC Facts!!

ಗೃಹಲಕ್ಷ್ಮಿ ಯೋಜನೆ: ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಒಂದು ಮಹತ್ವದ ಮತ್ತು ಆಶಯದಾಯಕ ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ರಾಜ್ಯದ ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿಗಳ ಧನಸಹಾಯವನ್ನು ಒದಗಿಸುವುದು. ಇದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಸರೆಯಾಗಲಿದೆ.

 ಗೃಹಲಕ್ಷ್ಮಿ ಯೋಜನೆಯ 26 ಮತ್ತು 27ನೇ ಕಂತುಗಳ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಮತ್ತು ಇತ್ತೀಚೆಗೆ ವ್ಯಾಪಕವಾಗಿ ಹರಡುತ್ತಿರುವ ಇ-ಕೆವೈಸಿ (e-KYC) ಕುರಿತಾದ ವದಂತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅದರ ಮುಖ್ಯ ಅಂಶಗಳು ಈ ರೀತಿ ಇವೆ:

ಗೃಹಲಕ್ಷ್ಮಿ ಇ-ಕೆವೈಸಿ ಬಗ್ಗೆ ವಿವರಣೆ:-

Gruha lakshmi e-kyc information:-

* ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ “ಗೃಹಲಕ್ಷ್ಮಿ ಯೋಜನೆಗೆ ಪ್ರತ್ಯೇಕವಾಗಿ ಇ-ಕೆವೈಸಿ ಮಾಡಿಸುವುದು ಕಡ್ಡಾಯ” ಎಂಬ ಮಾಹಿತಿಯು ಸತ್ಯಕ್ಕೆ ದೂರವಾದ ವದಂತಿ.

• ಸದ್ಯಕ್ಕೆ, ರೇಷನ್ ಕಾರ್ಡ್‌ಗೆ (ಪಡಿತರ ಚೀಟಿ) ಸಂಬಂಧಿಸಿದ ಇ-ಕೆವೈಸಿ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಈಗಾಗಲೇ ಲಿಂಕ್ ಮಾಡಲಾಗಿದ್ದರೆ,

ನೀವು ಯಾವುದೇ ಹೊಸ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಗತ್ಯವಿರುವುದಿಲ್ಲ.

ಹಣ ಜಮೆಯಾಗದಿದ್ದಲ್ಲಿ ಏನು ಮಾಡಬೇಕು?

What to do if money not credited to account?

* ಒಂದು ವೇಳೆ ನಿಮಗೆ 25 ಅಥವಾ 26ನೇ ಕಂತಿನ ಹಣವು ಇದುವರೆಗೆ ತಲುಪದಿದ್ದಲ್ಲಿ, ತಕ್ಷಣವೇ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು (Status) ಪರಿಶೀಲಿಸಿ.

• ನಿಮ್ಮ ಅರ್ಜಿಯ ಸ್ಥಿತಿಯಲ್ಲಿ ‘ಪುಶ್ ಟು ಡಿಬಿಟಿ’ (Push to DBT) ಎಂದು ತೋರಿಸುತ್ತಿದ್ದರೆ, ನಿಮ್ಮ ಹಣವು ಕೆಲವೇ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವ ನಿರೀಕ್ಷೆಯಿದೆ.

ಗೃಹಲಕ್ಷ್ಮಿ 26ನೇ ಕಂತಿನ ಅಪ್ಡೇಟ್ :-

Update on 26th installment:- 

 ಈಗಾಗಲೇ ಅಂದಾಜು ಶೇ 65% ರಿಂದ 70% ರಷ್ಟು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 26ನೇ ಕಂತಿನ ಹಣವು ಯಶಸ್ವಿಯಾಗಿ ಜಮೆಯಾಗಿದೆ.

* ಮಂಡ್ಯ, ಕೊಡಗು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳಿಗೂ ಹಣವನ್ನು ಜಮೆ ಮಾಡುವ ಕಾರ್ಯವು ಪ್ರಗತಿಯಲ್ಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯು ಹಂತಹಂತವಾಗಿ ಸಾಗುತ್ತಿದೆ.ಸದ್ಯಕ್ಕೆ, ರಾಜ್ಯದ 22 ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗಿದೆ.

ಜಿಲ್ಲೆಗಳ ಪಟ್ಟಿ :-

List of Districts :-

1. ಬಾಗಲಕೋಟೆ

2. ಕೊಪ್ಪಳ

3. ಚಿಕ್ಕಬಳ್ಳಾಪುರ

4. ಬೆಂಗಳೂರು ನಗರ

5. ಬೆಂಗಳೂರು ಗ್ರಾಮಾಂತರ

6. ಬೆಂಗಳೂರು ದಕ್ಷಿಣ (ನಗರ ಭಾಗ)

7. ಮೈಸೂರು

8. ಕೋಲಾರ

9. ದಾವಣಗೆರೆ

10. ರಾಮನಗರ

11. ಉತ್ತರ ಕನ್ನಡ

12. ಕಲ್ಬುರ್ಗಿ (ಕಲಬುರಗಿ)

13. ತುಮಕೂರು

14. ಶಿವಮೊಗ್ಗ

15. ಹಾಸನ

16. ಗದಗ

17. ತುಮಕೂರು 

18. ಕೊಡಗು 

19. ರಾಯಚೂರು 

20. ಉಡುಪಿ 

21. ಯಾದಗಿರಿ 

22. ಮಂಡ್ಯ 

ನಮಗೆ ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, ಮಂಡ್ಯ ಹಾಗೂ ಉಡುಪಿ ಸೇರಿದಂತೆ ಇನ್ನಿತರ ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ತಲುಪಿಸಲಾಗಿದೆ.

ಈ ನಿರ್ದಿಷ್ಟ ಜಿಲ್ಲೆಗಳ ಫಲಾನುಭವಿಗಳು, ಅವರಿಗೆ ಹಣ ಸಂದಾಯವಾಗಿರುವ ಬಗ್ಗೆ ಖಚಿತಪಡಿಸಿ, ಸ್ಕ್ರೀನ್‌ಶಾಟ್‌ಗಳ ಮೂಲಕ ಮಾಹಿತಿಯನ್ನು ನಮಗೆ ಕಳುಹಿಸಿದ್ದಾರೆ.

Money Credited Status in Mandya

ಮಂಡ್ಯ 

Money Credited Status in Shivamogga

ಶಿವಮೊಗ್ಗ 

• ಮುಂದಿನ 3-4 ದಿನಗಳಲ್ಲಿ, ಬಾಕಿ ಉಳಿದಿರುವ ಎಲ್ಲ ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಣವು ತಲುಪುವ ಸಾಧ್ಯತೆಗಳಿವೆ.

ಪ್ರತಿ ತಿಂಗಳು ನೇರವಾಗಿ ಖಾತೆಗೆ ಬರುವ ₹2,000 ಹಣ ಮಹಿಳೆಯರಿಗೆ “ಆರ್ಥಿಕ ನಿರ್ಧಾರ“ಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದೆ. ಇದರಿಂದ ಸಣ್ಣಪುಟ್ಟ ಖರ್ಚುಗಳಿಗೆ ಬೇರೆಯವರ ಸಹಾಯ ಪಡೆಯುವುದು ತಪ್ಪಿದೆ.

ಮನೆಯ ಯಜಮಾನಿ ಎಂದು ಗುರುತಿಸುವುದರ ಮೂಲಕ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಮಹಿಳೆಯ ಗೌರವ ಹೆಚ್ಚಾಗಿದೆ. ಇದು ಪುರುಷ ಪ್ರಾಧಾನ್ಯ ಸಮಾಜದಲ್ಲಿ ಮಹಿಳೆಯ ಘನತೆಯನ್ನು ಕಾಪಾಡುವ ಒಂದು ಪ್ರಯತ್ನ. 

ಈ ಹಣದಿಂದ ಮಹಿಳೆಯರು ತಮ್ಮ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೊಡಲು ಸಾಧ್ಯವಾಗುತ್ತಿದೆ. ಇದು SDG-5 (ಹೆಣ್ಣು ಗಂಡು ಸಮಾನತೆ) ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ. DBT ಮೂಲಕ ಹಣ ವರ್ಗಾವಣೆ ಆಗುವುದರಿಂದ, ಹಳ್ಳಿಗಳ ಹೆಂಗಸರು ಬ್ಯಾಂಕ್ ಕೆಲಸಗಳು,

ATM ಬಳಕೆ ಮತ್ತು ಆಧಾರ್ ಲಿಂಕ್ ಮಾಡುವಂತಹ ಡಿಜಿಟಲ್ ಹಣಕಾಸಿನ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ತುಂಬಾ ಜನ ಹೆಂಗಸರ ಕೈಗೆ ದುಡ್ಡು ಸಿಗುವುದರಿಂದ ಹಳ್ಳಿಗಳಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿ, ಅಲ್ಲಿನ ಆರ್ಥಿಕ ಪರಿಸ್ಥಿತಿ ಚನ್ನಾಗಿದೆ.

The ₹2,000 given to women each month has allowed them to make their own financial choices. It has greatly decreased how much they rely on others for daily personal or family costs.

By seeing the woman as the ‘Head of the Family‘, the plan has raised her position in the family and community. This is a forward-thinking move that questions male-dominated traditions and supports women’s respect. 

Because the money is sent through DBT (Direct Benefit Transfer), women in rural areas are learning more about banking, using ATMs, and linking their Aadhaar cards. This has closed the technology gap and improved financial knowledge among women.

As many women have more money to spend, there is a greater need for products and services at the local level. This flow of money boosts local markets and makes the rural economy stronger.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"